Home Crime ತಲೆ ದಂಡ ತಪ್ಪಿಸಿಕೊಳ್ಳಲು ಸಚಿವರ ಮಾಸ್ಟರ್ ಪ್ಲ್ಯಾನ್..! ಪುಟ್ಟರಂಗಶೆಟ್ಟಿ ಬೆನ್ನಿಗೆ ನಿಂತ ಜಿ.ಟಿ.ದೇವೇಗೌಡರ ಪುತ್ರ..!

ತಲೆ ದಂಡ ತಪ್ಪಿಸಿಕೊಳ್ಳಲು ಸಚಿವರ ಮಾಸ್ಟರ್ ಪ್ಲ್ಯಾನ್..! ಪುಟ್ಟರಂಗಶೆಟ್ಟಿ ಬೆನ್ನಿಗೆ ನಿಂತ ಜಿ.ಟಿ.ದೇವೇಗೌಡರ ಪುತ್ರ..!

557
0
SHARE

ವಿಧಾನಸೌಧದ ಸಚಿವಾಲಯದಲ್ಲಿ ಸಿಕ್ಕ ಅಕ್ರಮ ಹಣದ ಪ್ರಕರಣದಿಂದ ತಮ್ಮ ತಲೆದಂಡವನ್ನು ತಪ್ಪಿಸಿಕೊಳ್ಳಲು ತಮ್ಮ ಸಮೂದಾಯದವರನ್ನು ಬಳಕೆ ಮಾಡಿಕೊಂಡು ಪ್ರಕರಣ ಸಮರ್ಥಿಸಿಕೊಳ್ಳಲು ಸಚಿವ ಸಿ.ಪುಟ್ಟರಂಗಶೆಟ್ಟಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಸಿ.ಪುಟ್ಟರಂಗಶೆಟ್ಟಿ ಪರವಾಗಿ ಅವರ ಸಮುದಾಯ ಉಪ್ಪಾರರು ಬ್ಯಾಟಿಂಗ್ ಆರಂಭಿಸಿದ್ದು, ಚಾಮರಾಜನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ವಾರ ವಿಧಾನಸೌಧಲ್ಲಿರುವ ಸಚಿವ ಸಿ.ಪುಟ್ಟರಂಗಶೆಟ್ಟಿರವರ ಕಛೇರಿಯ ಸಿಬ್ಬಂದಿ ಮೋಹನ್‍ರವರು ತಮ್ಮ ಬ್ಯಾಗ್‍ನಲ್ಲಿ 25 ಲಕ್ಷ 76 ಸಾವಿರ ರೂಪಾಯಿಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ಸಿಕ್ಕಿ ಬಿದ್ದಿದ್ದರು. ಪ್ರಕರಣವನ್ನು ವಿಧಾನಸೌಧ ಪೊಲೀಸರು ದಾಖಲಿಸಿ ಕೊಂಡಿದ್ದು, ಇದೀಗ ಸಚಿವ ಪುಟ್ಟರಂಗಶೆಟ್ಟಿ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಇನ್ನೂ ತಲೆ ದಂಡವನ್ನು ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿರುವ ಸಚಿವ ಪುಟ್ಟರಂಗಶೆಟ್ಟಿ ತಾವು ಪ್ರತಿನಿಧಿಸುವ ಚಾಮರಾಜನಗರ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯದವರಿಂದ ತಮ್ಮ ಪರವಾಗಿ ಹೋರಾಟ ನಡೆದ್ದಾರೆ. ಈಗಾಗಲೇ ಸಚಿವ ಪುಟ್ಟರಂಗಶೆಟ್ಟಿ ಪರವಾಗಿ ಉಪ್ಪಾರ ನಿಗಮ ಮಂಡಲಿಯ ಮಾಜಿ ಅಧ್ಯಕ್ಷ ಶಿವಕುಮಾರ್ ಕೊಳ್ಳೇಗಾಲದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.ಹಣವನ್ನು ಯಾರೋ ಬೇಕು ಅಂತಲೇ ಕೊಟ್ಟು ಕಳುಹಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಸಮಿಶ್ರ ಸರ್ಕಾರವನ್ನು ಅಭದ್ರಗೊಳಿಸಲು ವಿರೋಧ ಪಕ್ಷದವರು ಮಾಡುತ್ತಿರುವ ಸಂಚಾಗಿದೆ ಎಂದು ಆರೋಪಿಸಿದ್ದಾರೆ.

ಇತ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರವರ ಪುತ್ರ ಹಾಗೂ ಎಂ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರವರು ಕೂಡ ಸಚಿವರ ಬೆಂಬಲಕ್ಕೆ ನಿಂತು ಬ್ಯಾಟಿಂಗ್ ಮಾಡಿದ್ದು ಗಮನಿಸಿದರೆ ದೋಸ್ತಿ ಸರ್ಕಾರದ ಜನಪ್ರತಿನಿಧಿಗಳು ಪುಟ್ಟರಂಗಶೆಟ್ಟಿ ಪರವಾಗಿ ನಿಂತಿರುವುದು ಕಂಡು ಬರುತ್ತಿದೆ.ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ತನಕ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಿಕ್ಕಮಾದು, ನಗರಸಭೆಯ ಮಾಜಿ ಉಪಾಧ್ಯಕ್ಷ ಎಂ.ರಾಜಪ್ಪ ಸೇರಿದಂತೆ ಸಾವಿರಾರು ಮಂದಿ ಇದ್ದರು.

LEAVE A REPLY

Please enter your comment!
Please enter your name here