Home Crime ತಾಯಿಯ ದಿವ್ಯ ನಿರ್ಲಕ್ಷ್ಯಕ್ಕೆ ಬಾಲಕ ದುರ್ಮರಣ..! ಗ್ಯಾಸ್ ಸೋರಿಕೆಯಿಂದಾಗಿ ಅಂತ್ಯವಾಯ್ತು ಜೀವನ..!

ತಾಯಿಯ ದಿವ್ಯ ನಿರ್ಲಕ್ಷ್ಯಕ್ಕೆ ಬಾಲಕ ದುರ್ಮರಣ..! ಗ್ಯಾಸ್ ಸೋರಿಕೆಯಿಂದಾಗಿ ಅಂತ್ಯವಾಯ್ತು ಜೀವನ..!

1035
0
SHARE

ಪತಿಯಿಲ್ಲದ ಆಕೆ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ಅರಸಿ ಬೆಂಗಳೂರಿಗೆ ಬಂದಿದ್ದರು. ತನ್ನ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬೇಕು ಅಂತಾ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡು ಕಷ್ಟಪಟ್ಟು ದುಡಿಯುತ್ತಿದ್ದರು.

ಆದ್ರೆ ,ಮಾಡಿದ ಒಂದು ತಪ್ಪಿಗೆ ತನ್ನ ಮುದ್ದಾದ ಮಗುವನ್ನೇ ಕಳೆದುಕೊಂಡಿದ್ದಾರೆ ಆ ತಾಯಿ.ಹೀಗೆ ಕಣ್ಣೀರಿಡ್ತಿರೋ ಈಕೆಯ ಹೆಸರು ಕಲಾವತಿ. ದೂರದ ನೇಪಾಳದವಳಾದ ಕಲಾವತಿ ಗಂಡನನ್ನ ಕಳೆದುಕೊಂಡಿದ್ರು. ತನ್ನಿಬ್ಬರು ಮಕ್ಕಳೊಂದಿಗೆ ಎಚ್ ಎ ಎಲ್ ಬಳಿ ಜ್ಯೋತಿನಗರದಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸವಿದ್ದಾರೆ.

ಆದರೆ ನಿನ್ನೆ ತಂದ ಹೊಸ ಸಿಲಿಂಡರ್ ಮನೆಯಲ್ಲಿದ್ದ ಮನಗ ಸಾವು ತಂದಿದೆ.ಸಿಲಿಂಡರ್ ನಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ 13 ವರ್ಷದ ಹಿರಿಯ ಮಗ ಸಮೀರ್ ಸಾವನ್ನಪ್ಪಿದ್ದಾನೆ. 11 ವರ್ಷದ ಕಿರಿಯ ಮಗ ಅಸ್ವಸ್ಥನಾಗಿ ಸಾವು ಬದುಕಿನ ನಡುವೆ ಹೋರಾಡ್ತಿದ್ದಾನೆ‌.ಅಂದ ಹಾಗೆ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕಲಾವತಿ ಜೀವನಾಧಾರವಾಗಿ ಅಪಾರ್ಟ್ಮೆಂಟ್ ಒಂದರ ನಾಲ್ಕೈದು ಮನೆ ಕೆಲಸ ಮಾಡ್ತಿದ್ದರು.

ದಿನಾ ಬೆಳಿಗ್ಗೆ ಐದು ಗಂಟೆಗೆ ಕೆಲಸಕ್ಕೆ ಹೋಗಿ ಎಂಟು ಗಂಟೆಗೆ ಬಂದು ಮಕ್ಕಳನ್ನ ಶಾಲೆಗೆ ಕಳಿಸ್ತಿದ್ದರು. ಇವತ್ತೂ ಸಹ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಕಲಾವತಿ ಮರಳಿ ಬರುವಷ್ಟರಲ್ಲಿ ಒಬ್ಬ ಮಗ ಅಸುನೀಗಿದ್ದ, ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ.

ನಿನ್ನೆಯಷ್ಟೆ ತಂದಿಡಲಾಗಿದ್ದ ಹೊಸ ಸಿಲಿಂಡರ್ ಗೆ ಅಳವಡಿಸಿದ್ದ ಪೈಪ್ ನಿಂದ ಗ್ಯಾಸ್ ಲೀಕ್ ಆದ ಪರಿಣಾಮ ದುರಂತ ಸಂಭವಿಸಿಬಿಟ್ಟಿದೆ.ಘಟನೆ ನೆಡೆದ ತಕ್ಷಣ ಅಕ್ಕಪಕ್ಕದವರು ನೆರವಿಗೆ ಧಾವಿಸಿದ್ದರಾದ್ರೂ ಅಷ್ಟರಲ್ಲಿ ಸಮೀರ್ ಮೃತ ಪಟ್ಟಿದ್ದ.ಸದ್ಯ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here