Home Crime ತಾಯಿ ಇಲ್ಲದ ತಬ್ಬಲಿ ಪಾಲಿಗೆ ಗಂಡನೇ ವಿಲನ್..!? ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದೇ ಬಿಟ್ಟ...

ತಾಯಿ ಇಲ್ಲದ ತಬ್ಬಲಿ ಪಾಲಿಗೆ ಗಂಡನೇ ವಿಲನ್..!? ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದೇ ಬಿಟ್ಟ ಪಾಪಿ…?!

1539
0
SHARE

ಆಕೆ ತಾಯಿ ಇಲ್ಲದ ಮಗಳು, ನೂರಾರು ಆಸೆ ಕನಸುಗಳನ್ನು ಹೊತ್ತು, ಗಂಡನ ಮನೆಗೆ ಸುಖವಾಗಿ ಸಂಸಾರ ಮಾಡಲು ಬಂದವಳಿಗೆ ಮಸಣದ ದಾರಿ ತೋರಿಸಿದ್ದಾರೆ ನೀಚರು. ತಾಯಿ ಇಲ್ಲದವಳು ಎಂಬ ಕಾರಣಕ್ಕೆ ಹೆತ್ತಪ್ಪ ತಮ್ಮ ಕೈಲಾದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕಳಿಸಿದ್ರೆ, ಮದುವೆಯಾಗಿ ಸುಖವಾಗಿದ್ದದ್ದು 3 ತಿಂಗಳು ಮಾತ್ರ…ಅದಾದ ಮೇಲೆ ವರದಕ್ಷಿಣೆ ತರುವಂತೆ ಆಕೆಗೆ ಟಾರ್ಚರ್ ಕೊಟ್ಟು ಮೈಮೇಲೆ ಪೆಟ್ರೋಲ್ ಹಚ್ಚಿ ಅಮಾನುಷವಾಗಿ ಕೊಂದು ಹಾಕಿದ್ದಾರೆ.21ನೇ ಶತಮಾನದಲ್ಲೂ ವರದಕ್ಷಿಣೆ ಎಂಬ ಭೂತ ಹೆಣ್ಣು ಹೆತ್ತವರನ್ನು ಹೈರಾಣಾಗಿಸುತ್ತಿದೆ. ವರದಕ್ಷಿಣೆ ಕಿರುಕುಳಕ್ಕೆ ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಬಲಿಯಾಗ್ತಿದ್ದಾರೆ. ಸಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ನತದೃಷ್ಟ ಹೆಣ್ಣು ಮಗಳ ಕತೆಯೇ ಸಾಕ್ಷಿ…ಈ ಶವಾಗಾರದಲ್ಲಿ ಸುಟ್ಟು ಕರಕಲಾಗಿರುವ ಈಕೆ 22 ವರ್ಷದ ರೇಖಾ. ಶಿವಮೊಗ್ಗದ ಮಹಾಂತೇಶ್ ಎಂಬುವರ ಪುತ್ರಿ. ಮೂರು ವರ್ಷಗಳ ಹಿಂದಷ್ಟೆ ರೇಖಾಳನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಜ್ಜರಿಯ ಆನಂದ್ ಎಂಬುವನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಗೆ 40 ಸಾವಿರ ಹಣ, 20 ಗ್ರಾಂ ಬಂಗಾರ ವರದಕ್ಷಿಣೆ ಕೊಟ್ಟಿದ್ರೆ, ಇಷ್ಟೇ ಸಾಕೆಂದು ಹೇಳಿದ್ದ ಮದುಮಗ, ಮದುವೆಯಾದ 3 ತಿಂಗಳ ಬಳಿಕ 2 ಲಕ್ಷ ವರದಕ್ಷಿಣೆ ತರುವಂತೆ ಬೇತಾಳ ಥರ ಕಾಟ ಕೊಟ್ಟಿದ್ದಾನೆ…3 ವರ್ಷಗಳಿಂದ ಕಷ್ಟ ಸಹಿಸಿಕೊಂಡಿದ್ದ ರೇಖಾಳಿಗೆ ನಿನ್ನೆ ಮನೆಯವರೆಲ್ಲಾ ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕ್ಷಣಾರ್ಧದಲ್ಲೇ ಸುಟ್ಟು ಕರಕಲಾಗಿದ್ದರೂ ಇನ್ನೂ ಉಸಿರಾಡ್ತಿದ್ದ ರೇಖಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರೇಖಾ ಸಾವನ್ನಪ್ಪಿದ್ದಾಳೆ.
ಇನ್ನು, ತಿಂಗಳ ಹಿಂದಷ್ಟೆ ಮಗಳು ಮನೆಗೆ ಬಂದಾಗ ಗಂಡ ಕಿರುಕುಳ ನೀಡುವ ವಿಷಯವನ್ನ ರೇಖಾ ತನ್ನ ತಂದೆಗೆ ಹೇಳಿಕೊಂಡಿದ್ದಳು…ಆದರೆ, ನೀನೇ ಸುಧಾರಿಸಿಕೊಂಡು ಹೋಗಮ್ಮ ಅಂತ ತಂದೆ ಹೇಳಿದ್ರಂತೆ. ಆದರೆ, ಇಂದು ಮಗಳು ಬಾರದ ಲೋಕಕ್ಕೆ ಹೋಗಿದ್ದಾಳೆ. ಇದಕ್ಕೆಲ್ಲ ಅಳಿಯ ಹಾಗೂ ಮನೆಯವ್ರೇ ಕಾರಣ. ಹಿಂದೆ ಅಷ್ಟೊಂದು ಹಣ ಹಾಗೂ ಬಂಗಾರ ಕೊಟ್ಟಿದ್ದೆ. ಮತ್ತೆ ಕೊಡ್ತೇನೆ ಅಂತ ಹೇಳಿದ್ರೂ ಕೇಳದೆ ಈ ರೀತಿ ಕ್ರೂರವಾಗಿ ಪೆಟ್ರೋಲ್ ಹಾಕಿ ಸುಟ್ಟು ಹತ್ಯೆ ಮಾಡಿದ್ದಾರೆ. ಇಂತಹ ದುರ್ಗತಿ ಯಾರಿಗೂ ಬರಬಾರದರು…

ಇದಕ್ಕೆ ಕಾರಣರಾದ ಆನಂದ್ ಹಾಗೂ ಅವರ ಮನೆಯವರಿಗೆ ಗಲ್ಲು ಶಿಕ್ಷೆ ನೀಡಬೇಕು. ಅದಕ್ಕಾಗಿ ನಾನು ಹೋರಾಡುತ್ತೇನೆ ಅಂತ ರೇಖಾ ತಂದೆ ಮಹಾಂತೇಶ್ ಹೇಳಿದ್ದಾರೆ.ದಂಪತಿಗೆ ಒಂದು ವರ್ಷದ ಹೆಣ್ಣು ಮಗುವೂ ಇದ್ದು, ಅದು ತಂದೆಯ ಬಳಿಯೇ ಇದೆ. ಒಟ್ಟಿನಲ್ಲಿ, ಕೇವಲ 2 ಲಕ್ಷ ವರದಕ್ಷಿಣೆಗಾಗಿ ಹೆತ್ತವರನ್ನು ಬಿಟ್ಟು ಬಂದಿದ್ದ ಜೀವವನ್ನ ಅಮಾನುಷವಾಗಿ ಕೊಂದಿದ್ದಾರೆ. ಈ ಅಪ್ಪ-ಅಮ್ಮನ ಜಗಳದಲ್ಲಿ ಏನೂ ಅರಿಯದ ಕಂದಮ್ಮ ಬಡವಾಗಿದೆ…

LEAVE A REPLY

Please enter your comment!
Please enter your name here