Home District ತಾರಕಕ್ಕೇರಿದ ಹಾಲಿ,ಮಾಜಿ ಸಿಎಂಗಳ ವಾಕ್ಸಮರ..!! ಪದ ಬಳಕೆಯಲ್ಲಿ ಹಿಡಿತವಿರಲಿ ಎಂದು HDK ಎಚ್ಚರಿಕೆ..! ಹದ್ದು...

ತಾರಕಕ್ಕೇರಿದ ಹಾಲಿ,ಮಾಜಿ ಸಿಎಂಗಳ ವಾಕ್ಸಮರ..!! ಪದ ಬಳಕೆಯಲ್ಲಿ ಹಿಡಿತವಿರಲಿ ಎಂದು HDK ಎಚ್ಚರಿಕೆ..! ಹದ್ದು ಮೀರಿ ಮಾತನಾಡದಂತೆ ಯಡಿಯೂರಪ್ಪ ತಿರುಗೇಟು…

1467
0
SHARE

ರಾಜ್ಯ ರಾಜಕೀಯ ವಲಯದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ.. ಮುಖ್ಯಮಂತ್ರಿಗಳು ಮತ್ತು ಬಿಜೆಪಿ ನಡುವೆ ಅಕ್ಷರಷಃ ಕದನವೇ ನಡೆಯುತ್ತಿದೆ..ಸರ್ಕಾರಕ್ಕೆ ಧಕ್ಕೆ ಆಗುವ ಸುಳಿವು ಅರಿತ ಕುಮಾರಸ್ವಾಮಿ, ಇದೇ ತರ ಸರ್ಕಾರಕ್ಕೆ ಡಿಸ್ಟರ್ಬ್ ಮಾಡಿದ್ರೆ ಈ ರಾಜ್ಯದ ಜನಕ್ಕೆ ದಂಗೆ ಬಿಜೆಪಿ ವಿರುದ್ಧ ಏಳುವಂತೆ ನಾನೇ ಕರೆ ಕೊಡುತ್ತೇನೆ ಅಂತ ಬೆಂಕಿಯುಂಡೆಯಾಗಿದ್ದಾರೆ..

ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಲ್ಲಿದ್ದ ಬಿಜೆಪಿ ಮುಖಂಡರ ನಡುವೆ ಘರ್ಷಣೆಯೂ ನಡೆಯಿತು. ನಾಳೆ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನ ಭೇಟಿಯಾಗಿ ದೂರು ನೀಡಲು ಬಿಜೆಪಿ ನಿರ್ಧರಿಸಿದೆ.ಇಷ್ಟು ದಿನ ಆರೋಪ-ಪ್ರತ್ಯಾರೋಪ,ಹೇಳಿಕೆ-ಪ್ರತಿ ಹೇಳಿಕೆ,ತಂತ್ರ-ಪ್ರತಿ ತಂತ್ರ ಎಲ್ಲವೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿತ್ತು..

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಒಂದಲ್ಲಾ ಒಂದು ರಾಜಕೀಯ ಹೊಯ್ದಾಟ ನಡೆಯುತ್ತಲೇ ಇದೆ..ಆದ್ರೆ ಅದು ಈಗ ವಿಪರೀತಕ್ಕೆ,ವಿಕೋಪಕ್ಕೆ ಹೋಗುತ್ತಿರುವುದು ಸ್ಪಷ್ಟವಾಗಿದೆ..ಒಂದು ಕಡೆ ಕರ್ನಾಟಕದಲ್ಲಿ ಸರ್ಕಾರ ರಚಿಸಲೇಬೇಕೆಂಬ ಬಿಜೆಪಿ ಹಠ,ಇನ್ನೊಂದು ಕಡೆ ಸರ್ಕಾರ ಉಳಿಸಿಕೊಳ್ಳಬೇಕೆಂಬ ಕಾಂಗ್ರೆಸ್-ಜೆಡಿಎಸ್ ನವರ ಕಸರತ್ತಿನ ನಡುವೆ ಸಂಘರ್ಷಮಯ ವಾತಾವರಣವೂ ನಿರ್ಮಾಣವಾಗುತ್ತಿದೆ..

ಸರ್ಕಾರ ಉರುಳಿಸಬೇಕೆಂದು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿರುವುದು ಮುಖ್ಯಮಂತ್ರಿಗಳನ್ನು ಕೆರಳಿಸಿದೆ..ಇದ್ರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಂಕಿಯುಂಡೆಯಂತೆ ಧಗಧಗಿಸುತ್ತಿರುವಂತೆ ಗೋಚರವಾಗುತ್ತಿದ್ದಾರೆ.. ಅವರ ಹೇಳಿಕೆಗಳು ಕೂಡ ಬೆಂಕಿಯುಂಡೆಯಂತೆ ಹೊರಬೀಳುತ್ತಿವೆ..ಇದು ಸರ್ಕಾರ ರಚಿಸುವ ರಣೋತ್ಸಾಹದಲ್ಲಿರುವ ಕೇಸರಿ ಪಡೆಯನ್ನು ಕೆರಳುವಂತೆ ಮಾಡಿದೆ..

ಇದೇ ತರ ಸರ್ಕಾರ ನಡೆಸೋಕೆ ಡಿಸ್ಟರ್ಬ್ ಮಾಡಿದ್ರೆ ಈ ರಾಜ್ಯದ ಜನತೆಗೆ ದಂಗೆ ಏಳಲು ಕರೆ ಕೊಡುತ್ತೇನೆ ಅಂತ ಖುದ್ದು ಸಿಎಂ ಕುಮಾರಸ್ವಾಮಿಯವರೇ ಹೇಳಿಕೆ ನೀಡಿದ್ದಾರೆ..ಏನು ಅವರೊಬ್ಬರೇನಾ ರಾಜಕೀಯ ಮಾಡೋದು ಅಂತ ಕುಮಾರಸ್ವಾಮಿ ಕೆಂಡವಾಗಿದ್ದಾರೆ..ನಾಡಿನ ಜನತೆಗೆ ಬಿಜೆಪಿ ವಿರುದ್ಧ ದಂಗೆ ಏಳಿ ಅಂತ ಕರೆ ನೀಡಬೇಕಾಗುತ್ತದೆ ಎಂದು ಅವರು ನೇರವಾಗಿಯೇ ಎಚ್ಚರಿಸಿದರು..ಆದ್ರೆ ಮುಖ್ಯಮಂತ್ರಿಯವರಿಂದಲೇ ದಂಗೆ ಹೇಳಿಕೆ ಹೊರಬಿದ್ದಿದ್ದು ರಾಜ್ಯ ರಾಜಕೀಯ ವಲಯ ಇನ್ನಷ್ಟು ಕಾವೇರುವಂತೆ ಮಾಡಿದೆ..

ಮುಖ್ಯಮಂತ್ರಿ ದಂಗೆಯ ಮಾತು ಹೊರಬೀಳುತ್ತಿದ್ದಂತೆ ಅದಕ್ಕೆ ಪೂರಕವಾಗಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ನಿವಾಸದ ಬಳಿ ಸಂಘರ್ಷವೇ ನಡೆದು ಹೋಯಿತು..ದಿಢೀರ್ ಅಂತ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಯತ್ನ ಮಾಡಿದರು..ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರ ನಡುವೆ ತಳ್ಳಾಟವೂ ನಡೆಯಿತು..ರಾಜ್ಯ ರಾಜಕೀಯ ವಲಯದಲ್ಲಿ ಇಂತಹ ಭಯದ ವಾತಾವರಣ ನಿರ್ಮಾಣವಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಯಿತು..

ಅಲ್ಲೇ ಇದ್ದ ಶಾಸಕರು, ಮಾಜಿ ಸಚಿವರು, ಬಿಜೆಪಿ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದರು..ಈ ವೇಳೆ ಅಲ್ಲಿ ಕೆಲ ಕಾಲ ಬಿಗುವಿನ ವಾತಾವರಣವೇ ನೆಲೆಸಿತ್ತು..ಹಿಂದೆ ರಾಮಕೃಷ್ಣ ಹೆಗಡೆಯವರಿಗೂ ಇದೇ ರೀತಿ ಮಾಡಲಾಗಿತ್ತು..ಈಗ ಯಡಿಯೂರಪ್ಪನವರ ಮೇಲೂ ಅದೇ ರೀತಿ ಮಾಡಲು ಪ್ರಯತ್ನಿಸಲಾಗುತ್ತಿದೆ..ನಾವು ಇದಕ್ಕೆಲ್ಲ ಜಗ್ಗಲ್ಲ ಎಂದು ಶಾಸಕರು ಕೆಂಡವಾದರು..

ಬಳಿಕ ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಪಕ್ಷದ ಮುಖಂಡರು, ಯಡಿಯೂರಪ್ಪ ನಿವಾಸದ ಬಳಿ ಆದ ಘಟನೆ ಮತ್ತು ಕುಮಾರಸ್ವಾಮಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು..ಕಾರ್ಯಕರ್ತರನ್ನು ತಡೆಯದಿದ್ದರೆ ಅನಾಹುತವಾಗುತ್ತಿತ್ತು, ಯಡಿಯೂರಪ್ಪನವರ ಪ್ರಾಣ ತೆಗೆಯಲೂ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಆತಂಕ ವ್ಯಕ್ತಪಡಿಸಿದರು..ಮುಖ್ಯಮಂತ್ರಿಗಳೇ ದಂಗೆಯ ಹೇಳಿಕೆ ಕೊಟ್ಟಿರುವುದು ದೊಡ್ಡ ಅಪರಾಧ,ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಆರ್.ಅಶೋಕ್ ಆಗ್ರಹಿಸಿದರು..

LEAVE A REPLY

Please enter your comment!
Please enter your name here