Home Crime ತಾಳಿಕಟ್ಟುವ ವೇಳೆ …ವಧು ಸಿನಿಮೀಯ ರೀತಿ ಎಸ್ಕೇಪ್ …!!

ತಾಳಿಕಟ್ಟುವ ವೇಳೆ …ವಧು ಸಿನಿಮೀಯ ರೀತಿ ಎಸ್ಕೇಪ್ …!!

1914
0
SHARE

ಇಷ್ಟವಿಲ್ಲದಿರೋ ಮದುವೆ ಮಾಡೋಕ್ಕೆ ಹೆತ್ತವರು ಪ್ರಯತ್ನಿಸಿದ್ರೆ ಹೀಗೇ ಆಗೋದು. ಬಲವಂತವಾಗಿ ಮದುವೆಗೆ ಒಪ್ಪಿಸಿದ ಪರಿಣಾಮ ಮದುವೆ ದಿನವೇ ಮಗಳು ಗಾಯಬ್.ಇನ್ನೇನು ತಾಳಿ ಕಟ್ಟೋಕ್ಕೆ ಸಿದ್ದತೆ ನಡೆದಿತ್ತು ಅಷ್ಟರಲ್ಲಿ ವಧು ಕಲ್ಯಾಣಮಂಟಪದಿಂದ ನಾಪತ್ತೆಯಾಗಿಬಿಟ್ಟಿದ್ಲು.ಎಲ್ಲರಿಗೂ ಅರ್ಥವಾಗಿತ್ತು ಲವರ್ ಜೊತೆ ಎಸ್ಕೇಪ್ ಅಂತ. ನಂಜನಗೂಡಿನ ಹುಲ್ಲಹಳ್ಳಿಯ ಶ್ರೀ ಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ನಿಂತಿದೆ.

ಹೆಚ್.ಡಿ.ಕೋಟೆ ತಾಲೂಕಿನ ಕೃಷ್ಣನಾಯಕ ಹಾಗೂ ತಾಯಮ್ಮ ದಂಪತಿ ಪುತ್ರಿ ನಂದಿನಿ ಎಸ್ಕೇಪ್ ಆದ ವಧು.ಮಾರ್ಬಳ್ಳಿ ಗ್ರಾಮದ ಗೋವಿಂದನಾಯಕ ಹಾಗೂ ಚಂದ್ರಮ್ಮ ದಂಪತಿ ಪುತ್ರ ನಾರಾಯಣ ಜೊತೆ ಮದುವೆ ನಡೆಯಬೇಕಿತ್ತು.ರಾತ್ರಿಯೆಲ್ಲಾ ಮದುವೆ ಸಿದ್ದತೆಗಳು ನಡೆದಿವೆ. ನಂದಿನಿ ಕಲ್ಯಾಣಮಂಟಪಕ್ಕೂ ಸಹ ಬಂದಿದ್ದಾಳೆ. ಕೆಲವು ಶಾಸ್ತ್ರಗಳಲ್ಲೂ ಭಾಗವಹಿಸಿದ್ದಾಳೆ.ಬೆಳಗೆದ್ದು ನೋಡುವಲ್ಲಿ ನಾಪತ್ತೆಯಾಗಿದ್ದಾಳೆ.

ಇಂದು ಇಲ್ಲಿನ ಹುಲ್ಲಹಳ್ಳಿಯ ಶ್ರೀ ಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಂದಿನಿ ಹಾಗೂ ನಾರಾಯಣ್ ಎಂಬುವರ ಮದುವೆ ನಡೆಯಬೇಕಾಗಿತ್ತು. ರಾತ್ರಿಯೆಲ್ಲಾ ಸಿದ್ಧತೆ ಕೂಡ ನಡೆದಿತ್ತು. ಆದ್ರೆ, ಬೆಳಗಾಗುವಷ್ಟರಲ್ಲಿ ವಧು ನಂದಿನಿ ನಾಪತ್ತೆಯಾಗಿದ್ದಾಳೆ. 6ತಿಂಗಳ ಹಿಂದೆ ನಂದಿನಿ ಹಾಗೂ ನಾರಾಯಣ್ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ಸಂಧರ್ಭದಲ್ಲಿ ಮದುವೆ ಇಷ್ಟವಿಲ್ಲವೆಂದು ಪೋಷಕರಿಗೆ ನಂದಿನಿ ತಿಳಿಸಿದ್ದಳಂತೆ.

ಮಗಳ ಮಾತನ್ನ ಲೆಕ್ಕಿಸದ ಹೆತ್ತವರು ಬಲವಂತವಾಗಿ ಮದುವೆಗೆ ಒಪ್ಪಿಸಿದ್ದಾರೆ. 6 ತಿಂಗಳ ಕಾಲ ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದ ನಂದಿನಿ ಮದುವೆ ಸಮಯದಲ್ಲಿ ಕೈ ಕೊಟ್ಟಿದ್ದಾಳೆ. ಪ್ರೀಪ್ಲಾನ್ ಮಾಡಿಕೊಂಡಿದ್ದ ನಂದಿನಿ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ನಡೆದ ಘಟನೆಗೆ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ನಾರಾಯಣನ ಮನೆಯವರು ಗೌರವಕ್ಕೆ ಅಂಜಿ ಕುಳಿತಿದ್ದಾರೆ.

LEAVE A REPLY

Please enter your comment!
Please enter your name here