Home Crime ತಿರುಪತಿ ಚಿನ್ನ ಕೊಡ್ತಿನಿ ಅಂತ ಇಟ್ಟ ಪಂಗನಾಮ..! ಚಿನ್ನಕ್ಕಾಗಿ ಕಾದು ಕುಳಿತಿದ್ದವನಿಗೆ ಸಿಕ್ತು ತಿರುಪತಿ ಲಡ್ಡು..!

ತಿರುಪತಿ ಚಿನ್ನ ಕೊಡ್ತಿನಿ ಅಂತ ಇಟ್ಟ ಪಂಗನಾಮ..! ಚಿನ್ನಕ್ಕಾಗಿ ಕಾದು ಕುಳಿತಿದ್ದವನಿಗೆ ಸಿಕ್ತು ತಿರುಪತಿ ಲಡ್ಡು..!

408
0
SHARE

ಆತನ ಹೆಸರು ಹೇಳಿದ್ರೆ ಅವಳಿ ನಗರಗಳು ಒಂದು ಕ್ಷಣ ಬೆಚ್ಚಿ ಬೀಳುತ್ತೆ, ಆತ ಊರಲ್ಲೆಲ್ಲ ಚೀಟರ್ ಅಂತಾನೆ ಹೆಸರು ವಾಸಿಯಾಗಿದ್ದ. ಆತನ ಕಾಟಕ್ಕೆ ಬೇಸತ್ತು ಪೋಲಿಸ್ ಇಲಾಖೆ ಅವನನ್ನು ಗಡಿ ಪಾರು ಕೂಡಾ ಮಾಡಿದ್ದರು. ಆದರೆ ಆತ ಮಾತ್ರ ತನ್ನ ಕಾಯಕ ಬಿಡದೆ ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಬರೋಬ್ಬರಿ ನಾಮ ಹಾಕಿದ್ದಾನೆ.

ಈತನ ವೃತ್ತಿಯೇ ಕಳ್ಳತನ ಮಾಡೋದು, ಜನರಿಗೆ ವಂಚನೆ ಮಾಡೋದು, ಧಾರವಾಡದಲ್ಲಿರೋ ಈತ ಮಹಾರಾಷ್ಟ್ರ ಮೂಲದ ಅಶ್ವಿನ್ ಪಾಟೀಲ ಎಂಬುವವರಿಗೆ ತಿರುಪತಿ ತಿಮ್ಮಪ್ಪನ ಚಿನ್ನ ಕೋಡಿಸೋದಾಗಿ ನಂಬಿಸಿ 50 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿಯಾಗಿದ್ದಾನೆ. ಈ ಹಿಂದೆ ನಕಲಿ ನೋಟು ಜಾಲ, ವಂಚನೆ ಪ್ರಕರಣಗಳಲ್ಲಿ ಆರೋಪಿ ಮೋನ್ಯಾ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಗಡಿಪಾರಿಗೆ ಪೊಲೀಸ್ ಆಯುಕ್ತರು ಆದೇಶಿಸಿದ್ದರು.

ಆದ್ರೆ ಧಾರವಾಡದಲ್ಲೇ ತಲೆ ಮರೆಸಿಕೊಂಡಿದ್ದ ಈತ ತನ್ನ ಚಾಳಿಯನ್ನ ಮಾತ್ರ ಬಿಟ್ಟಿಲ್ಲ. ಇದೀಗ ಮೋನ್ಯಾ ವಿರುದ್ಧ ಅಶ್ವಿನ್ ಪಾಟೀಲ್ ಕುಟುಂಬಸ್ಥರು ಧಾರವಾಡದ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇನ್ನು ಇಷ್ಟೇಲ್ಲಾ ಘಟನೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಆರೋಪಿ ಮೋಹನ್ ನಡೆಸುತ್ತಿರುವ ಕೃತ್ಯ ಇದೇ ಮೊದಲೇನಲ್ಲ, ಹಲವು ಭಾರೀ ಈ ರೀತಿಯ ಕೃತ್ಯಗಳನ್ನು ಮಾಡಿದ್ರು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಅಲ್ಲದೇ, ಪೊಲೀಸ್ ಅಧಿಕಾರಿಗಳು ಉತ್ತರಿಸುವುದನ್ನ ನೋಡಿದ್ರೆ ವಂಚಕ ಮೊನ್ಯಾನ ಈ ದುಷ್ಕೃತ್ಯದಲ್ಲಿ ಪೋಲಿಸ್ ಅಧಿಕಾರಿಗಳು ಸಹ ಶಾಮೀಲಾಗಿರುವುದಾಗಿ ಹೇಳುವ ಸಾರ್ವಜನಿಕರ ಮಾತಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.ಒಟ್ಟಾರೆ ಇನ್ನಾದರೂ ಪೋಲಿಸರು ಗಾಡ ನಿದ್ರೆಯಿಂದ ಎದ್ದು ಈ ವಂಚಕನನ್ನು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಿ.

LEAVE A REPLY

Please enter your comment!
Please enter your name here