Home Health ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೋರೋನ ವೈರಸ್..!

ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೋರೋನ ವೈರಸ್..!

1197
0
SHARE

ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭಕ್ತಾದಿಗಳಿಗೆ ಬಂದ್ ಆಗಿದೆ.. ಇಂದು ಮಧ್ಯಾಹ್ನ ತುರ್ತು ಸಭೆ ನಡೆಸಿದ ಟಿಟಿಡಿ ಆಡಳಿತ ಮಂಡಳಿ ಕೋರೋನ ವೈರಸ್ ಎಲ್ಲೆಡೆ ತೀವ್ರವಾಗಿ ಹಬ್ಬು ತ್ತಿರುವುದರಿಂದ ಭಕ್ತಾದಿಗಳಿಗೆ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆಯ ಕ್ರಮವಾಗಿ ಇಂದು ಸಂಜೆ 6 ಗಂಟೆಯಿಂದ ಸಂಪೂರ್ಣವಾಗಿ ತಿರುಮಲ ತಿರುಪತಿ ದೇವಸ್ಥಾನವನ್ನು ಭಕ್ತಾದಿಗಳಿಗೆ ಬಂದ್ ಮಾಡಲು ನಿರ್ಧರಿಸಲಾಗಿದೆ.

ಆದರೆ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯುತ್ತವೆ .ಮಾರ್ಚ್ 31ರ ವರೆಗೆ ತಿರುಮಲ ದೇವಸ್ಥಾನವನ್ನು ಬಂದ್ ಮಾಡಲು ಆಂಧ್ರಪ್ರದೇಶ ಸರ್ಕಾರದ ಸೂಚನೆ ಮೇರೆಗೆ ಇಂದು ಟಿಟಿಡಿ ಈ ನಿರ್ಧಾರವನ್ನು ಕೈಗೊಂಡಿದೆ .ತಿರುಮಲ ಸಂಪರ್ಕಿಸುವ ಎರಡು ರಸ್ತೆಗಳು ಕೂಡ ಬಂದ್ ಆಗಿದೆ. ತಿರುಪತಿಯಲ್ಲಿ ಸೋಂಕಿತ ವ್ಯಕ್ತಿ ಪ್ರವೇಶಿಸಿರುವುದರಿಂದ ಆತ ವಾರಣಾಸಿ. ಒಡಿಶಾ. ಸುತ್ತಾಡಿ ಬಂದಿದ್ದ ಭಕ್ತ ಹೀಗೆ ಎರಡು ದಿನಗಳ ಹಿಂದೆ ತಿರುಮಲ ದೇವಸ್ಥಾನವನ್ನು ಪ್ರವೇಶಿಸಿದ್ದ ಇದರಿಂದ ಎಚ್ಚೆತ್ತುಕೊಂಡ ಆಂಧ್ರಪ್ರದೇಶ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ಇಂದು ಸಂಜೆ ಆರು ಗಂಟೆಯಿಂದ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ತಿರುಪತಿ ತಿರುಮಲದ ಇತಿಹಾಸದಲ್ಲಿ ಈ ರೀತಿ ಸಂಪೂರ್ಣವಾಗಿ ಭಕ್ತಾದಿಗಳಿಗೆ ಬಂದಾಗುತ್ತಿರುವುದು ಇದು ಎರಡನೇ ಬಾರಿ.

ಈ ಹಿಂದೆ ಸುಮಾರು ಐದು ನೂರು ವರ್ಷಗಳ ಹಿಂದೆ ಸಾಮೂಹಿಕ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಹನ್ನೆರಡು ವರ್ಷಗಳ ಕಾಲ ತಿರುಪತಿಯ ವೆಂಕಟೇಶ್ವರನ ದರ್ಶನವನ್ನು ಬಂದ್ ಮಾಡಲಾಗಿತ್ತು .ಈಗ ಕೋರೋನ ವೈರಸ್ ತೀವ್ರವಾಗಿರುವುದರಿಂದ ಎಲ್ಲೆಡೆ ದೇವಸ್ಥಾನಗಳನ್ನು ಬಂದ್ ಮಾಡಲಾಗುತ್ತಿದೆ ಇದೇ ರೀತಿ ಎರಡು ದಿನಗಳ ಹಿಂದೆ ಕರೋನಾ ವೈರಸ್ ಶಂಕಿತನೊಬ್ಬ ತಿರುಮಲ ತಿರುಪತಿ ದೇವಸ್ಥಾನವನ್ನು ಪ್ರವೇಶಿಸಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರಪ್ರದೇಶ ಸರ್ಕಾರ ಇಂದು ಸಂಜೆ ಆರು ಗಂಟೆಯಿಂದ ತಿರುಮಲ ವೆಂಕಟೇಶ್ವರನ ದೇವಸ್ಥಾನವನ್ನು ಸಂಪೂರ್ಣವಾಗಿ ಬಂದ್ ಮಾಡಲು ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈಗಾಗಲೇ ತಿರುಮಲ ಬೆಟ್ಟವನ್ನು ಪ್ರವೇಶಿಸಿರುವ ಭಕ್ತಾದಿಗಳನ್ನು ಅಲ್ಲಿನ ಆಡಳಿತ ಮಂಡಳಿ ವಾಪಸ್ ಕಳುಹಿಸುತ್ತಿದೆ,ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಭಕ್ತಾದಿಗಳು ಈಗ ತಿರುಮಲ ತಿರುಪತಿಯಿಂದ ವಾಪಸ್ಸಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here