Home Crime ತುಂಡುಡಿಗೆ ಬಟ್ಟೆ ಕಂಡು ಪೊಲೀಸಪ್ಪ ಕೆಂಡಾಮಂಡಲ, ಪೊಲೀಸರು ಬೈದಿದ್ದನ್ನು ಫೇಸ್ ಬುಕ್‌ನಲ್ಲಿ ಬರೆದುಕೊಂಡ ಮಹಿಳೆ ..

ತುಂಡುಡಿಗೆ ಬಟ್ಟೆ ಕಂಡು ಪೊಲೀಸಪ್ಪ ಕೆಂಡಾಮಂಡಲ, ಪೊಲೀಸರು ಬೈದಿದ್ದನ್ನು ಫೇಸ್ ಬುಕ್‌ನಲ್ಲಿ ಬರೆದುಕೊಂಡ ಮಹಿಳೆ ..

4478
0
SHARE

ಊಟ ತನ್ನಿಚ್ಛೆ.. ನೋಟ ಪರರಿಚ್ಛೆ ಅಂತಾರೆ.. ಹಾಗೇನೇ ತೋಡುವ ಬಟ್ಟೆನೂ ಅವರವರ ಇಚ್ಛೆ.. ಅದ್ರಲ್ಲೂ ಮಹಿಳೆಯರ ಉಡುಗೆ ತೊಡುಗೆ ಬಗ್ಗೆ ಹೀಯಾಳಿಸಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ.

ಸದ್ಯ, ಇಂಥದ್ದೇ ಒಂದು ಆರೋಪಕ್ಕೆ ಬೆಂಗಳೂರಿನ ಪೊಲೀಸ್ ಕಾನ್ಸ್ ಟೇಬಲ್ ಗಳಿಬ್ಬರು ಸಿಲಿಕಿದ್ದು, ಮಹಿಳೆಯ ಡ್ರೆಸ್ ಬಗ್ಗೆ ಮಾತನಾಡಿ ನ್ಯೂಸೆನ್ಸ್ ಕ್ರಿಯೇಟ್ ಮಾಡಿದ್ದಾರೆ.ಶಾರ್ಟ್ಸ್ ತೊಟ್ಟು ರಸ್ತೆಗೆ ಬಂದಿದ್ದೀರಲ್ಲಾ ನಿಮಗೆ ನಾಚಿಕೆ ಆಗಲ್ವಾ..? ಅಂಗಾಂಗ ಪ್ರದರ್ಶಿಸೋ ನಿಮಗೆ ಮರ್ಯಾದೆ ಇದೆಯಾ..? ಹೀಗೆಲ್ಲಾ ಒಬ್ಬ ಮಹಿಳೆಯನ್ನ ಕೇಳಿ ಅವಮಾನಿಸಿದ್ದು ಯಾರೋ ರೌಡೀನೋ ಅಥವಾ ಯಾರೋ ಬೀದಿ ಗೂಂಡಾನೋ ಅಲ್ಲ.. ಬದಲಿಗೆ ಜನರನ್ನ ಕಾಯೋ ಪೊಲೀಸರು.. ಹೌದು.. ಬೆಂಗಳೂರು ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಎದುರುಗಡೆ ಇಂಥದ್ದೊಂದು ಘಟನೆ ನಡೆದು ಹೋಗಿದೆ.

ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ರಜೆ ಇದ್ದ ಕಾರಣ ಸ್ನೇಹಿತರೊಟ್ಟಿಗೆ ಇದೇ ಲಸ್ಸಿ ಶಾಪ್ ಎದುರಲ್ಲಿ ಶಾರ್ಟ್ಸ್ ಹಾಕ್ಕೊಂದು ನಿಂತಿದ್ರಂತೆ.. ಆಗ ಅಲ್ಲಿಗೆ ಬಂದ ಇಬ್ಬರು ಪೊಲೀಸ್ ಪೇದೆಗಳು ಮಹಿಳಾ ಪ್ರಾಧ್ಯಪಕಿಯನ್ನ ನಿಮಗೆ ಮರ್ಯಾದೆ ಇಲ್ವಾ..? ಇಂಥಾ ಡ್ರೆಸ್ ಹಾಕ್ಕೊಂಡು ರಸ್ತೆಗೆ ಬರ್ತೀರಲ್ಲ ಅಂತ ಜೋರು ಮಾಡಿದ್ರಂತೆ.. ಹೀಗಂಥ ಸದ್ಯ ಮಹಿಳಾ ಪ್ರಾಧ್ಯಾಪಕಿಯೇ ಫೇಸ್ಬುಕ್ನಲ್ಲಿ ಆರೋಪ ಮಾಡಿದ್ದಾರೆ.

(ನಾನು ನನ್ನ ಪಾಡಿಗೆ ಲಸ್ಸಿ ಶಾಪ್ ಎದುರುಲ್ಲಿ ನಿಂತಿದ್ದೆ.. ಆಗ ಅಲ್ಲಿಗೆ ಬಂದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳಿಬ್ಬರು ಬಂದು ನಿಮಗೆ ಮಾನ ಇದೆಯಾ.? ಅಂಗಾಂಗ ಪ್ರದರ್ಶಿಸಿಕೊಂಡು ನಿಂತಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ ಅಂದ್ರು. ನನಗೆ ಕನ್ನಡ ಬರಲ್ಲ ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಮಾತಾಡಿ ಅಂದೆ. ಆದ್ರೆ, ಆ ಇಬ್ಬರು ಕಾನ್ಸ್‌ಟೇಬಲ್‍‌‌ಗಳು ಕನ್ನಡದಲ್ಲೇ ಬೈತಿದ್ರು.. ಜೋರಾದ ಧ್ವನಿಯಲ್ಲಿ ನನ್ನನ್ನ ಮನೆಗೆ ಹೋಗು ಅಂತ ಹೇಳಿದ್ರು.. ನನಗೆ ಕನ್ನಡ ಅರ್ಥ ಆಗಲ್ಲ. ಹಾಗಾಗಿ ಅಂಗಡಿಯವರಿಂದ ಪೊಲೀಸ್ರು ಏನಂದ್ರು ಅಂತ ಕೇಳಿ ತಿಳಿದುಕೊಂಡೆ. ನಿಜಕ್ಕೂ ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ.. ಬೆಂಗಳೂರು ಪೊಲೀಸರ ವರ್ತನೆಯನ್ನು ನಾನು ಖಂಡಿಸುತ್ತೇನೆ)  ಎಂದು ಮಹಿಳೆ ತಮ್ಮ ಫೇಸ್ ಬುಕ್ ವಾಲ್‌ನಲ್ಲಿ ಬರೆದುಕೊಂಡು ಅಳಲು ತೋಡಿಕೊಂಡಿದ್ದಾರೆ.

ಸದ್ಯ, ಹೀಗೊಂದು ಪೋಸ್ಟ್ಅನ್ನ ಪ್ರಾಧ್ಯಾಪಕಿ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಬೆಂಗಳೂರು ಸಿಟಿ ಪೊಲೀಸ್ರಿಗೂ ಟ್ಯಾಗ್ ಮಾಡಿದ್ದಾರೆ.. ಈ ಪೋಸ್ಟ್ ಗೆ ಉತ್ತರ ನೀಡಿರೋ ಪೊಲೀಸ್ರು ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂಬರ್ ಕೊಟ್ಟು ಇವರನ್ನು ಕಾಂಟ್ಯಾಕ್ಟ್ ಮಾಡಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ ಅಂತ ರಿಪ್ಲೇ ಮಾಡಿ ಕೈ ತೊಳೆದುಕೊಂಡಿದ್ದಾರೆ.. ದುರಂತ ಅಂದ್ರೆ, ಆ ಜಾಗ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತ ಕೆಂಗೇರಿ ಪೊಲೀಸ್ರು ಸುಮ್ಮನಾಗಿದ್ದಾರೆ.ನಿಜಕ್ಕೂ ಈ ಮಹಿಳೆಯ ಬಳಿ ಪೊಲೀಸ್ ಕಾನ್ಸ್ಟೆಬಲ್ಗಳು ಅದ್ಯಾಕೆ ಹಿಂಗೆ ನಡೆದುಕೊಂಡ್ರು ಅಂತ ಆಶ್ಚರ್ಯ ಆಗ್ತಿದೆ.. ಬುದ್ದಿ ಮಾತು ಹೇಳೋ ಭರದಲ್ಲಿ ಎಡವಟ್ಟು ಮಾಡ್ಕೊಂಡ್ರಾ ಗೊತ್ತಿಲ್ಲ.. ಅಂತೂ ಈ ಒಂದು ಪ್ರಕರಣ ಸಿಟಿ ಪೊಲೀಸ್ರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿರೋದಂತು ನಿಜ.

LEAVE A REPLY

Please enter your comment!
Please enter your name here