Home District ತುಮಕೂರಿನಲ್ಲಿ ತಂದೆ ಗೆಲುವಿಗಾಗಿ ಸಿಎಂ ಹೆಚ್ಡಿಕೆ ಕಸರತ್ತು..! ಕಾರ್ಯಕರ್ತರ ಜೊತೆ ಸೇರಿ ಜಯಸಾಧಿಸಲು ರಣತಂತ್ರ ರೂಪಿಸಿದ...

ತುಮಕೂರಿನಲ್ಲಿ ತಂದೆ ಗೆಲುವಿಗಾಗಿ ಸಿಎಂ ಹೆಚ್ಡಿಕೆ ಕಸರತ್ತು..! ಕಾರ್ಯಕರ್ತರ ಜೊತೆ ಸೇರಿ ಜಯಸಾಧಿಸಲು ರಣತಂತ್ರ ರೂಪಿಸಿದ HDK.! ಗೆಲುವಿಗಾಗಿ ಶಿರಾದ ಪಟ್ಟನಾಯಕನಹಳ್ಳಿ ಮಠದಲ್ಲಿ ವಿಶೇಷ ಹೋಮ..!

743
0
SHARE

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಪುತ್ರ ಸಿಎಂ‌ ಕುಮಾರಸ್ವಾಮಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮಠದಲ್ಲಿ ಇಡೀ ಕುಟುಂಬದ ಹೆಸರಿನಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ,ಹೋಮ ನೆರವೇರಿಸಿದ್ದಾರೆ‌.‌

ಬಳಿಕ ಚುನಾವಣೆಯ ಪ್ರಚಾರ ನಡೆಸಿ ತಂದೆಯ ಗೆಲುವಿಗೆ ಕಾರ್ಯಕರ್ತರನ್ನ ಭೇಟಿಯಾಗಿ ರಣತಂತ್ರ ರೂಪಿಸಿದ್ರು.ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು. ದೊಡ್ಡಗೌಡರ ಪರ ಅಖಾಡಕ್ಕೆ ಮಗ ಸಿಎಂ ಕುಮಾರಸ್ವಾಮಿ ಧುಮುಕಿದ್ದಾರೆ‌‌. ಪಟ್ಟನಾಯಕನಹಳ್ಳಿಗೆ ದೇವೇಗೌಡರೊಟ್ಟಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ. ನಂಜಾವಧೂತ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರಧಾನ ಲಲಿತ ಸಜಸ್ರನಾಮ ಹೋಮ,ಗಣ ಹೋಮದಲ್ಲಿ ಪಾಲ್ಗೊಂಡಿದ್ದರು.

ಅರ್ಚಕರು ಸಿಎಂ‌ ಕುಮಾರಸ್ವಾಮಿ ತಲೆಗೆ ಪೇಟ ಸುತ್ತಿ, ವಿವಿಧ ಪೂರ್ಣಾಹುತಿ ಸಾಮಾಗ್ರಿಗಳನ್ನ ಮುಟ್ಟಿಸಿ ನಮಸ್ಕರಿಸಿ ಬಳಿಕ ಪೂರ್ಣಹುತಿ ನೆರವೇರಿಸಿದರು. ಈ ವೇಳೆ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹೆಸರುಗಳನ್ನ ಹೇಳಿ ಸಂಕಲ್ಪ ಮಾಡಿದರು‌‌..ಲೋಕಕಲ್ಯಾಣಕ್ಕಾಗಿ ವಿಶೇಷ ಹೋಮ ಮಾಡಲಾಗಿದ್ದು, ನನ್ನ ಆರೋಗ್ಯ ಹಾಗೂ ದೇವೇಗೌಡರ ಆರೋಗ್ಯಕ್ಕೆ ಶ್ರೀಗಳು ಪ್ರಾರ್ಥನೆ ಸಿಲ್ಲಿಸಿದ್ದಾರೆ, ಇದು ಯಾವ ರಾಜಕೀಯಕ್ಕೂ ಮಾಡಿದ ಯಾಗ ಅಲ್ಲಾ ಅಂತಾ ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದರು‌..

ಮಂಡ್ಯ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಮಂಡ್ಯ ವಿಚಾರ ಬಿಟ್ಟಾಕಿ, ತಲೆಕಡೆಸಿಕೊಳ್ಳಬೇಡಿ, ಚುನಾವಣೆಯನ್ನ ಎದುರಿಸಲು ಶಕ್ತಿ ಇಲ್ಲದೇ ಇದ್ದವರು ಕುತಂತ್ರದಿಂದ ಅಧಿಕಾರಿಗಳ ವಿರುದ್ದ ದಬ್ಬಾಳಿಕೆ ನಡೆಸಿ ಒತ್ತಡ ಹಾಕುವ ಕೆಲಸ ಮಾಡ್ತಿದ್ದಾರೆ ಅಂತಾ ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ದ ಗುಡುಗಿದರು..

ಈಶ್ವರಪ್ಪ ಸಿಎಂರನ್ನ ಅಯೋಗ್ಯ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಯೋಗ್ಯರು, ಯಾರು ಅಯೋಗ್ಯರು ಅಂತಾ ಜನರಿಗೆ ಗೊತ್ತಿದೆ, ನಮ್ಮವರ ಮನೆಯಲ್ಲಿ ನೋಟು ಎಣಿಕೆ ಯಂತ್ರ ಯಾರಿಗೂ ಸಿಕ್ಕಿಲ್ಲಾ, ಆದರೇ ಈಶ್ವರಪ್ಪ ಮನೆಯಲ್ಲಿ ಎರಡು ನೋಟು ಎಣಿಸೋ ಯಂತ್ರ ಸಿಕ್ಕಿದ್ದು, ಯಾರು ಒಳ್ಳೆಯವರು ಅಂತಾ ಜನತೆ ಸರ್ಟಿಫಿಕೆಟ್ ಕೊಡ್ತಾರೆ ಅಂತಾ ಟಾಂಗ್ ನೀಡಿದರು‌‌..

ಪಟ್ಟನಾಯಕನಹಳ್ಳಿ, ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಿ ರಣತಂತ್ರ ಎಣೆದ ನಂತರ. ಸಿಎಂ ಕುಮಾರಸ್ವಾಮಿ ದೇವೇಗೌಡರ ಪರ ಚುನಾವಣೆಯ ಪ್ರಚಾರ ನಡೆಸಿದ್ರು‌. ಒಟ್ಟಾರೆಯಾಗಿ ತಂದೆಯ ಗೆಲುವಿಗೆ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ರು. ಮತ್ತೆ ಟೆಂಪಲ್ ರನ್ ಮಾಡಿ ಕುಟುಂಬಸ್ಥರ ಗೆಲುವಿಗಾಗಿ ದೇವರ ಮೊರೆಹೋಗಿದ್ದಾರೆ.

LEAVE A REPLY

Please enter your comment!
Please enter your name here