Home Crime ತುಮಕೂರಿನ ಖಾಸಗೀ ಶಾಲೆಯ ಸ್ಟಾಫ್‌ರೂಮ್‌ನಲ್ಲಿ ಶಿಕ್ಷಕಿಯೊಂದಿಗೆ ಮುಖ್ಯ ಶಿಕ್ಷಕ “ಕಾಮಪಾಠ”..!ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.!

ತುಮಕೂರಿನ ಖಾಸಗೀ ಶಾಲೆಯ ಸ್ಟಾಫ್‌ರೂಮ್‌ನಲ್ಲಿ ಶಿಕ್ಷಕಿಯೊಂದಿಗೆ ಮುಖ್ಯ ಶಿಕ್ಷಕ “ಕಾಮಪಾಠ”..!ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.!

2385
0
SHARE

ಪಾರ್ಕ್‌ನಲ್ಲಿ , ಥಿಯೇಟರ್‌ನಲ್ಲಿ, ಅಷ್ಟೇ ಯಾಕೆ ಸರ್ಕಾರಿ ಕಚೇರಿಗಳಲ್ಲಿ ಲವ್ವಿ-ಡವ್ವಿ ನಡೆಯೋದನ್ನು ನೋಡಿದ್ದೀವಿ, ಕೇಳಿದ್ದೀವಿ. ಈ ದೃಶ್ಯಗಳನ್ನು ನೋಡಿ, ಇದು ಮನೆಯಲ್ಲ, ಹೋಟಲ್ ಅಲ್ಲ, ಇನ್ನು ಅಪರಿಚಿತ ಕೋಣೆಯೂ ಅಲ್ಲ. ಇದೊಂದು ಪ್ರೌಡ ಶಾಲೆ. ತುಮಕೂರು ಜಿಲ್ಲೆಯ ಕ್ಯಾತಸಂದ್ರದ ಖಾಸಗಿ ಶಾಲೆಯೊಂದರಲ್ಲಿ ಅದು ಮುಖ್ಯ ಶಿಕ್ಷಕ ಮತ್ತು ಶಿಕ್ಷಕಿ ಇಬ್ಬರು ಸ್ಟಾಫ್ ರೂಂ ನಲ್ಲಿ ನಡೆಸಿದ ಚಕ್ಕಂದದ ದೃಶ್ಯ..!!

ಕಲ್ಪತರು ನಾಡು ತುಮಕೂರಿನಲ್ಲಿ ಕಾಮುಕ ಶಿಕ್ಷಕರ ಅಸಲಿಮುಖ ಬಯಲಾಗಿದೆ..ಜ್ನಾನ ದೇಗುಲ ಎಂದು ಕೈ ಮುಗಿದು ಒಳಗೆ ಬರೋ ವಿದ್ಯಾರ್ಥಿಗಳು ಇರೋ ಪವಿತ್ರ ಜಾಗದಲ್ಲಿ ತಮ್ಮ ಕಾಮುಕ ಚೇಷ್ಟೇಯಾಡಿ ಶಿಕ್ಷಕರಿಬ್ಬರು ಸಿಕ್ಕಿಬಿದಿದ್ದಾರೆ..ಏನೀ ಕಾಮುಕ ಶಿಕ್ಷಕರ ಕಥೆ,

ಶಾಲೆ ಅಂದಾಕ್ಷಣ, ಪುಟ್ಟ ಮಕ್ಕಳ ಕಲರವ, ಮುಗ್ದ ಮನಸ್ಸಿನ ವಿದ್ಯಾರ್ಥಿಗಳು, ಜ್ನಾನ ಭೋದಿಸೋ ಪವಿತ್ರ ಸ್ಥಳ ನಮ್ಮ ಕಣ್ಣ ಮುಂದೆ ಬರುತ್ತೆ..ಮಕ್ಕಳಿಗೆ ಜ್ನಾನದ ಅರಿವು ಮೂಡಿಸೋ ಶಿಕ್ಷಕರನ್ನ ದೇವರಿಗೆ ಹೋಲಿಕೆ ಮಾಡ್ತಾರೆ..ಆದರೇ ಇಲ್ಲಿ ಇರೋ ಇಬ್ಬರು ಶಿಕ್ಷಕರು ಇಡೀ ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದಾರೆ..ಕಲ್ಪತರು ನಾಡು, ಶೈಕ್ಷಣಿಕ ಜಿಲ್ಲೆ ಅಂತೆಲ್ಲಾ ಕರೆಯಲ್ಪಡುವ ತುಮಕೂರು ಈ ಘಟನೆಗೆ ಸಾಕ್ಷಿಯಾಗಿದ್ದು ಮಾತ್ರ ನಿಜಕ್ಕೂ ನಾಚಿಕೇಗೇಡಿನ ಸಂಗತಿ..ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಖಾಸಗಿ ಪ್ರೌಡಶಾಲೆಯ ಇಬ್ಬರು ಶಿಕ್ಷಕರು ಕಾಮಕ್ರೀಡೆಯಲ್ಲಿ ತೊಡಗಿರೋ ವಿಡಿಯೋ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆಲ ದಿನಗಳಿಂದ ವಾಟ್ಸ್ ಅಪ್ ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋನ ಸದ್ದು ಜೋರಾಗಿದೆ..ಇಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅನ್ನೋದು ಹೇಳೋದಾದ್ರೆ, ಇಬ್ಬರು ಶಿಕ್ಷಕರು ಶಾಲೆಯ ಕೋಣೆಯೊಂದರಲ್ಲಿ ತಬ್ಬಿ ಮುದ್ದಾಡಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ..

ಕೋಣೆಯ ಮೂಲೆಯಲ್ಲಿ ಇಟ್ಟಿದ್ದ ಮೊಬೈಲ್ ನಲ್ಲಿ ಈ ಇಬ್ಬರ ಸರಸ ಸಲ್ಲಾಪದ ದೃಶ್ಯಗಳು ಸದ್ದಿಲ್ಲದೇ ರೆಕಾರ್ಡ್ ಆಗಿದೆ..ಕ್ಯಾತ್ಸಂದ್ರ ಬಳಿಯ ಖಾಸಗಿ ಪ್ರೌಡಶಾಲೆಯ ಮುಖ್ಯಶಿಕ್ಷಕ ರೇಣುಕಾರಾಧ್ಯ ತನ್ನ ಸಹೋದ್ಯೋಗಿ ಶಿಕ್ಷಕಿಯ ಜೊತೆ ನಡೆಸಿದ ಸರಸ ಸಲ್ಲಾಪಗಳು ಎಂದು ಹೇಳಲಾಗ್ತಿದೆ..ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ..

LEAVE A REPLY

Please enter your comment!
Please enter your name here