Home District ತುಳಸಿಗೆ “ಪ್ರಸಾದ”..?! ಖರಾಬ್ ಸಿಂಗರ್‌ಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಕ್ಕಾದ್ರಾ ಗಪ್‌ಚಿಪ್..!?

ತುಳಸಿಗೆ “ಪ್ರಸಾದ”..?! ಖರಾಬ್ ಸಿಂಗರ್‌ಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಕ್ಕಾದ್ರಾ ಗಪ್‌ಚಿಪ್..!?

740
0
SHARE

ಇತ್ತೀಚೆಗೆ ಕನ್ನಡ ಸಿನಿಮಾದ ಹಾಡುಗಳನ್ನು ವಿಕೃತಿಯಾಗಿ ಹಾಡುತ್ತಿದ್ದ ತುಳಸಿ ಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಕುಪ್ರಸಿದ್ಧಿ ಪಡೆದಿದ್ದ. ಡಾ.ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಸಾಂಗ್‌ಗಳನ್ನು ಕೆಟ್ಟದಾಗಿ ಹಾಡುವ ಮೂಲಕ ಉತ್ತಮ ಹಾಡುಗಳಿಗೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದ್ದ…

ಕೆಟದಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕ್ವಾಟ್ಲೆ ಕೊಡ್ತಿದ್ದ ತುಳಸಿ ಇನ್ಮುಂದೆ ಹಾಡಲಿದರಲು ನಿರ್ಧರಿಸಿದ್ದಾನೆ.ತುಳಸಿ ಪ್ರಸಾದ್, ಕ್ವಾಟ್ಲೆ ಗಾಯಕ ಅಂತಲೇ ಫೇಮಸ್ ಆಗಿದ್ದವನು, ವಿಕ್ಷಿಪ್ತವಾಗಿ- ವಿಕೃತವಾಗಿ ಹಾಡಿ ಸೋಷಿಯಲ್ ಮೀಡಿಯಾದಲ್ಲಿ ಕುಖ್ಯಾತಿ ಪಡೆದುಕೊಂಡಿದ್ದ ಹುಡುಗ. ಈಗ ವಿಕ್ಷಿಪ್ತ ಗಾಯನಕ್ಕೂ ಒಂದಿಷ್ಟು ಜನ ಅಭಿಮಾನಿಗಳು ಹುಟ್ಟುಕೊಂಡಿದ್ರು ಅಂದ್ರೆ ನೀವು ನಂಬ್ಲೇ ಬೇಕು…

ಆದ್ರೆ ಈಗ ಕ್ವಾಟ್ಲೆ ಸಿಂಗರ್ ತುಳಸಿ ಹಾಡೋದಿಲ್ಲ ಅಂತ ಪ್ರತಿಜ್ಞೆ ಮಾಡಿದ್ದಾರೆ.ಹೌದು..ಕನ್ನಡ ಚಿತ್ರರಂಗದ ಉತ್ತಮ ಹಾಡುಗಳನ್ನು ಕೆಟ್ಟದಾಗಿ ಹಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಟ್ರೆಂಡ್ ಸೃಷ್ಟಿಸಿಕೊಂಡಿದ್ದ ತುಳಸಿ ಹಾಡುವ ಪರಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶಗೊಂಡಿದ್ರು. ಹಾಡುವುದನ್ನು ತುಳಸಿ ಪ್ರಸಾದ್ ನಿಲ್ಲಿಸುವಂತೆ ಜಾಲತಾಣಗಳಲ್ಲಿ ವಾರ್ನಿಂಗ್ ಮಾಡಿದ್ರು…

ಈಗ ದಿಢೀರ್ ಅಂತ ಹಾಡು ನಿಲ್ಲಿಸುವುದಾಗಿ ಸ್ವತಃ ತುಳಸಿ ಪ್ರಸಾದ್ ಹೇಳಿಕೊಂಡಿದ್ದಾನೆ. ಶಿವರಾಜ್ ಕುಮಾರ್ ಮತ್ತು ಶಿವಣ್ಣ ಅಭಿಮಾನಿಗಳಿಗೆ ಕ್ಷೆಮೆ ಕೇಳಿದ್ದಾನೆ. ವಿಚಿತ್ರವಾಗಿ ಹಾಡುವುದನ್ನ ನಿಲ್ಲಿಸುವುದಾಗಿ ಹೇಳಿ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.ತುಳಸಿಪ್ರದಾಸ್ ಹಾಡುತ್ತಿದ್ದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ…

ಅದರ ಜೊತೆಗೆ ತುಳಸಿ ಪ್ರಸಾದ್ ಕ್ಷಮೆ ಕೇಳಿರುವ ವಿಡಿಯೋ ಕೂಡ ಸದ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಾಜ್ ಅಭಿಮಾನಿಗಳು ಮತ್ತು ಶಿವಣ್ಣನ ಅಭಿಮಾನಿಗಳು ಇದರಿಂದ ಸಂತಸಗೊಂಡಿದ್ದು. ತುಳಸಿ ಪ್ರಸಾದ್ ನಿರ್ಧಾರಕ್ಕೆ ಸಂತಸ ಗೊಂಡಿದ್ದಾರೆ. ಇನ್ಯಾವತ್ತೂ ಕನ್ನಡ ಹಾಡುಗಳಿಗೆ ವಿಕೃತಿಯಾಗದಂತೆ ಮಾರ್ನಿಂಗ್ ನೀಡಿದ್ದಾರೆ…

ಅಷ್ಟಕ್ಕೂ ತುಳಸಿ ಪ್ರಸಾದ್ ಏನೂ ಪೂರ್ತಿಯಾಗಿ ಹಾಡೋದನ್ನ ನಿಲ್ಲಿಸ್ತಾ ಇಲ್ಲ. ಡಾ.ರಾಜ್ ಕುಮಾರ್ ಮತ್ತು ಶಿವಣ್ಣನವರ ಹಾಡುಗಳನ್ನು ಮಾತ್ರ ಹಾಡೋದಿಲ್ಲ ಅಂತ ಹೇಳಿಕೊಂಡಿದ್ದಾರೆ. ಸೋ ತುಳಸಿ ಮತ್ತಷ್ಟು ಹಾಡುಗಳನ್ನು ಹಾಡುವ ಮೂಲಕ ಕ್ವಾಟ್ಲೆ ಕೊಡ್ತಾನಾ, ಅಥವಾ ಸುಮ್ಮನಿರ‍್ತಾನಾ ಅನ್ನೋದನ್ನ ಕಾದು ನೋಡ್ಬೇಕಿದೆ…

LEAVE A REPLY

Please enter your comment!
Please enter your name here