ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ್ನು ಬೆಂಬಲಿಸಲು ಟಿಆರ್ ಎಸ್ ನಿರ್ಧರಿಸಿದೆ.ಇಂದುಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ತಮ್ಮ ಬೆಂಬಲ ಘೋಷಿಸಿದ್ರು.ಅಷ್ಟೇ ಅಲ್ಲ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪರ ಪ್ರಚಾರದ ಕೈಗೊಳ್ಳುವ ಭರವಸೆಯನ್ನೂ ನೀಡಿದ್ರು.
ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಠಕ್ಕರ್ ನೀಡಲು ತೃಣಮೂಲ ಕಾಂಗ್ರೆಸ್, ಟಿಆರ್ ಎಸ್ ನೇತೃತ್ವದಲ್ಲಿ ತೃತೀಯ ರಂಗ ರಚನೆಗೆ ಕಸರತ್ತು ನಡೆಯುತ್ತಿದೆ… ಇತ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಜೆಡಿಎಸ್ ವರಿಷ್ಠ ದೇವೇಗೌಡ್ರ ಸಾರಥ್ಯದಲ್ಲಿ ನಡೆದಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇಂದು ಬೆಂಗಳೂರಿಗೆ ಬಂದಿದ್ರು. ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೂ ಭೇಟಿ ಕೊಟ್ಟ ಚಂದ್ರಶೇಖರ್ ರಾವ್ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ್ನು ಬೆಂಬಲಿಸುವುದಾಗಿ ಹೇಳಿದ್ರು…
ಚಂದ್ರಶೇಖರರಾವ್ ಅವರ ಪ್ರಸ್ತಾಪವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಪ್ಪಿಕೊಂಡರು. ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ನಿರೀಕ್ಷೆ ಸಾಧ್ಯವಿಲ್ಲ. ನೆಲ ಜಲ ರಕ್ಷಣೆಗೆ ಪ್ರದೇಶಿಕ ಪಕ್ಷಗಳಒಗ್ಗೂಡುವಿಕೆ ಅಗತ್ಯ ಎಂದರು. ಕೆ.ಚಂದ್ರಶೇಖರ್ ರಾವ್ ಅವರೊಂದಿಗಿನ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸಹ ಪಾಲ್ಗೊಂಡಿದ್ರು.ಟಿಎಸ್ ಆರ್ ಬೆಂಬಲದಿಂದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸುಲಭವಾಗುತ್ತದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು..
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಆಂದೋಲನವನ್ನೇ ಪ್ರಾರಂಭಿಸಿರುವ ಚಿತ್ರನಟ ಪ್ರಕಾಶ್ ರೈ ಇಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರೊಂದಿಗೆ ದೇವೇಗೌಡರ ನಿವಾಸದಲ್ಲಿಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ರು. ತಾವು ಯಾವುದೇ ಪಕ್ಷದ ಬೆಂಬಲಿಗನಲ್ಲ. ರಾಷ್ಟ್ರಾಭಿವೃದ್ದಿಯ ದೃಷ್ಟಿಯಿಂದ ಸಮಾನ ಮನಸ್ಕ ರಾಜಕೀಯ ನಾಯಕರು ಒಂದಾಗಬೇಕೆಂದು ತಾವು ಬಯಸುವುದಾಗಿ ಪ್ರಕಾಶ್ ರೈ ಹೇಳಿದ್ರು.