Home Elections 2019 ತೇಜಸ್ವಿನಿ ಅನಂತಕುಮಾರ್‌ಗೆ ಮೋಸ ಮಾಡಿದ್ದಕ್ಕೆ ಬ್ರಾಹ್ಮಣರು ಗರಂ.! ಸಮಾಧಾನ ಪಡಿಸುವ ಜವಾಬ್ದಾರಿ R.ಅಶೋಕ್ ಹೆಗಲಿಗೆ..!?

ತೇಜಸ್ವಿನಿ ಅನಂತಕುಮಾರ್‌ಗೆ ಮೋಸ ಮಾಡಿದ್ದಕ್ಕೆ ಬ್ರಾಹ್ಮಣರು ಗರಂ.! ಸಮಾಧಾನ ಪಡಿಸುವ ಜವಾಬ್ದಾರಿ R.ಅಶೋಕ್ ಹೆಗಲಿಗೆ..!?

683
0
SHARE

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡದೇ ವಂಚಿಸಿರುವುದಕ್ಕೆ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ದ ತಿರುಗಿಬಿದ್ದಿದೆ.

ಪ್ರಸಕ್ತ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಕೂಡ ಬ್ರಾಹ್ಮಣನೇ ಆಗಿದ್ದರೂ, ಸಹ, ಬ್ರಾಹ್ಮಣ ಮಹಾಸಭಾ ಮತ್ತು ಬ್ರಾಹ್ಮಣರಿಗೆ ಅನಂತಕುಮಾರ್ ಅವರ ಕೊಡುಗೆ ಸಾಕಷ್ಟಿದೆ. ಹಾಗಾಗಿ ತೇಜಸ್ವಿನಿ ಅನಂತಕುಮಾರ್ ರನ್ನು ಬೆಂಬಲಿಸಬೇಕಾದುದು ಬೆಂಗಳೂರು ದಕ್ಷಿಣ ಕ್ಷೇತ್ರದ ಬ್ರಾಹ್ಮಣರ ಕರ್ತವ್ಯವಾಗಿದೆ ಎಂದು ಬ್ರಾಹ್ಮಣ ಸಮಾಜದ ಪ್ರಮುಖರು ಬಹಿರಂಗವಾಗೇ ಹೇಳುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ, ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರು ವಿವಿಧ ಮಠಾಧೀಶರು ಹಾಗೂ ಬ್ರಾಹ್ಮಣ ಸಮಾಜದ ಪ್ರಮುಖರನ್ನು ಭೇಟಿಯಾಗಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದರಾದರೂ ಅದು ಫಲ ನೀಡಿಲ್ಲ.

ಮತ್ತೊಬ್ಬ ಬ್ರಾಹ್ಮಣ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್, ಈ ವಿಷಯದಲ್ಲಿ ಬಿಲ್ ಕುಲ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿ ಕೈತೊಳೆದುಕೊಂಡಿದ್ದಾರೆ. ಹಾಗಾಗಿ ಬಿಜೆಪಿ ಹೈ ಕಮಾಂಡ್ ಕೋಪಿಸಿಕೊಂಡಿರುವ ಬ್ರಾಹ್ಮಣರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೆಗಲಿಗೇರಿಸಿದೆ.ಶುಕ್ರವಾರ ರಾತ್ರಿ ಆರ್. ಅಶೋಕ್ ಅವರು ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಮತ್ತಿತರರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.

ಮೊದಲಿನಿಂದಲೂ ಬಿಜೆಪಿಯ ಜತೆಗೆ ಗುರ್ತಿಸಿಕೊಂಡಿರುವ ಬ್ರಾಹ್ಮಣರು, ತಮ್ಮ ನಿಲುವು ಬದಲಿಸುವುದು ಬೇಡ ಎಂದ ಮನವಿ ಮಾಡಿದ್ದಾರೆ.ಪಕ್ಷದ ಮುಖ ನೋಡಿ, ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ತೇಜಸ್ವಿ ಸೂರ್ಯನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಶೋಕ್ ಮನವಿಗೆ ಬ್ರಾಹ್ಮಣ ಸಮಾಜ ಸ್ಪಂದಿಸುತ್ತದೋ ಅಥವಾ ತೇಜಸ್ವಿನಿಯವರ ಪರವಾಗಿಯೇ ತನ್ನ ಹಠ ಮುಂದುವರಿಸುತ್ತದೋ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

LEAVE A REPLY

Please enter your comment!
Please enter your name here