Home Cinema ಥ್ಯಾಂಕ್ ಗಾಡ್..‘ ಇರ್ಫಾನ್ ಖಾನ್’ ಬಂದರು ಮರಳಿ ಮನೆಗೆ…! “I AM BACK”…

ಥ್ಯಾಂಕ್ ಗಾಡ್..‘ ಇರ್ಫಾನ್ ಖಾನ್’ ಬಂದರು ಮರಳಿ ಮನೆಗೆ…! “I AM BACK”…

564
0
SHARE

ಇರ್ಫಾನ್ ಖಾನ್.. ಬಾಲಿವುಡ್‌ನ ಉತ್ತಮ ನಟ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ಬಿ- ಟೌನ್‌ನಲ್ಲಿ ಅವಕಾಶಗಳನ್ನು ಹೆಚ್ಚಿಸಿಕೊಂಡಿದ್ದ ಇರ್ಫಾನ್ ಖಾನ್ ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿದ್ರು.

ಕಳೆದ ವರ್ಷ ಮೆದುಳಿನ ಕ್ಯಾನ್ಸರ್ ಬಳಲಿದ್ದ ಇರ್ಫಾನ್ ಚಿಕಿತ್ಸೆಗಾಗಿ ಮುಂಬೈನ ಅಂಧೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ರು. ಆಗಾಗ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅನಾರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡ್ತಿದ್ದ ಇರ್ಫಾನ್ ಖಾನ್ ಸದ್ಯ , ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಯಸ್… ಇರ್ಫಾನ್ ಖಾನ್ ಕ್ಯಾನ್ಸರ್‌ನಿಂದ ಸಾವು ನೋವಿನ ಮಧ್ಯೆ ದಿನ ಕೆಲಕಾಲ ದೂಡಿದ್ರು.

ಉತ್ತಮ ಕಲಾವಿದ ಕ್ಯಾನ್ಸರ್ ಎದುರಾಗಿದೆ ಎಂಬ ಆತಂಕಕಾರಿ ವಿಚಾರ ಕೇಳಿ ಇಡೀ ಬಾಲಿವುಡ್‌ಗೆ ಬಾಲಿವುಡೇ ಆಶ್ಚರ್ಯ ಗೊಂಡಿತ್ತು. ನಟನಿಗೆ ಬಂದಿರುವ ಅಪಾಯಕಾರಿ ಖಾಯಿಲೆ ಶೀಘ್ರವಾಗಿ ಗುಣಮುಖವಾಗಲೆಂದು ದೇವರ ಮೊರೆ ಹೋಗಿದ್ರು. ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಇರ್ಫಾನ್‌ಗಾಗಿ ಪ್ರಾರ್ಥನೆ ಮಾಡಿದ್ದರು. ಈಗ ಇವರೆಲ್ಲರ ಸಹಾಯ, ಸಹಕಾರದ ಫಲ ಎನ್ನುವಂತೆ, ಇರ್ಫಾನ್ ಖಾನ್ ತಮ್ಮ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಿ ಮರಳಿ ಮುಂಬೈಗೆ ವಾಪಸ್ಸಾಗಿದ್ದಾರೆ.

ಹೌದು.. ಇರ್ಫಾನ್ ಗುಣಮುಖರಾಗಿ ಇದಿರುಗಿರುವುದನ್ನು ನೋಡಿ ಅಭಿಮಾನಿಗಳು ಸದ್ಯ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಚಿಕಿತ್ಸೆಯ ಮಧ್ಯದಲ್ಲೇ ಇರ್ಫಾನ್ ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ್ರು. ಕೆಲದಿನಗಳ ಕಾಲ ಕುಟುಂಬದವರೊಟ್ಟಿಗೆ ಅಮೂಲ್ಯ ಸಮಯ ಕಳೆದು ಚಿಕಿತ್ಸೆ ಪೂರ್ಣಗೊಳಿಸಲು ಮತ್ತೆ ಅಮೇರಿಕಾಗೆ ತೆರಳಿದ್ದ ಇರ್ಫಾನ್, ಈಗ ಎಲ್ಲಾ ಚಿಕಿತ್ಸೆ ಮುಗಿಸಿ ಸಂಪೂರ್ಣವಾಗಿ ಮುಂಬೈಗೆ ವಾಪಸ್ಸಾಗಿದ್ದಾರೆ.

ಇದರಿಂದ ಬಾಲಿವುಡ್‌ನಲ್ಲಿ ಸಂತಸ ಮನೆ ಮಾಡಿದೆ. ಇನ್ನೂ, ಕಳೆದ ವರ್ಷ ಕಾರವಾ ಚಿತ್ರದಲ್ಲಿ ಬಾಲಿವುಡ್‌ನಲ್ಲಿ ಇರ್ಫಾನ್ ಮೋಡಿಮಾಡಿದ್ರು. ನಂತ್ರ ಸಾಲು ಸಾಲು ಚಿತ್ರಗಳಿಗೆ ಬುಕ್ ಆಗಿದ್ರು. ಅದ್ಯಾವಾಗ ತೀವ್ರವಾದ ಕ್ಯಾನ್ಸರ್ ನಿಂದ ಬಳಲುತ್ತಿದ್ಧಾರೆಂದು ವಿಷಯ ತಿಳಿದ ಕೆಲ ನಿರ್ದೇಶಕರು. ಇರ್ಫಾನ್ ಜಾಗಕ್ಕೆ ಬೇರೆ ಕಲಾವಿದರನ್ನು ರಿಪ್ಲೇಸ್ ಮಾಡಿಕೊಂಡಿದ್ರು. ಅವರಿಲ್ಲದೆ ಚಿತ್ರವನ್ನು ಮಾಡಿ ಮುಗಿಸಿದ್ರು. ದುಲ್ಖರ್ ಸಲ್ಮಾನ್ ಮತ್ತು ಮಿಥಿಲಾ ಪಾಲ್ಕರ್ ತಾರಾಗಣದಲ್ಲಿ ಮೂಡಿಬಂದಿದ್ದ ಕರ್ವಾನ್‌ನಲ್ಲಿ ಅದ್ಭುತ ನಟನೆಯ ಗಮನಸೆಳೆದಿದ್ರು.

ಇದೀಗ ಮುಂಬೈನಿಂದ ಮರಳಿ ಬಂದಿರುವ ಇರ್ಫಾನ್ ಖಾನ್ ಕೈಯಲ್ಲಿ ಒಂದೆರಡು ಚಿತ್ರಗಳು ಇದ್ದು. ಸದ್ಯ ಹಿಂದಿ ಮೀಡಿಯಂ ಭಾಗ ೨ರ ಚಿತ್ರೀಕರಣದಲ್ಲಿ ಇರ್ಫಾನ್ ಪಾಲ್ಗೊಳ್ಳಲಿದ್ಧಾರೆ. ಅದೇನೇ ಇದ್ರು.. ಸದ್ಯ ಕ್ಯಾನ್ಸರ್ ಮಹಾಮಾರಿ ಕಾಯಿಲೆಯಿಂದ ಸುರಕ್ಷಿತವಾಗಿ ಗುಣಮುಖರಾಗಿ ಭಾರತಕ್ಕೆ ಹಿಂದಿರುವ ಇರ್ಫಾನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾ ನೀಡ್ಲಿ.. ಹಿಂದಿ ಮೀಡಿಯಂ ಚಿತ್ರದ ಮೂಲಕ ಮತ್ತೆ ಬಿ-ಟೌನ್ ಅಂಗಳದಲ್ಲಿ ತಮ್ಮ ಸಿನಿಮಾ ಜರ್ನಿಯ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿರುವ ಇರ್ಫಾನ್ ಅಭಿಮಾನಿಗಳನ್ನು ಇನ್ನಷ್ಟು ರಂಜಿಸಲಿ ಅನ್ನೋದೇ ನಮ್ಮ ಆಶಯ

LEAVE A REPLY

Please enter your comment!
Please enter your name here