Home District ದಂತ ವೈದ್ಯೆ,ಸಂಸಾರದ ಜೊತೆ ವೃತ್ತಿ ಮಾಡುತ್ತಲೇ ಮಿಸೆಸ್ ಇಂಡಿಯಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಆಫ್ ಸಾಧನೆಯ...

ದಂತ ವೈದ್ಯೆ,ಸಂಸಾರದ ಜೊತೆ ವೃತ್ತಿ ಮಾಡುತ್ತಲೇ ಮಿಸೆಸ್ ಇಂಡಿಯಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಆಫ್ ಸಾಧನೆಯ ಕಥೆ..

2890
0
SHARE

ವೈದ್ಯರಾದವರಿಗೆ ಮಾಡುವುದಕ್ಕೆ ಸಾಕಷ್ಟು ಕೆಲಸ-ಕಾರ್ಯಗಳಿರುತ್ತವೆ.ವೃತ್ತಿಯ ಜೊತೆ ಜೊತೆಗೆ ಸಂಸಾರವನ್ನೂ ಸಂಭಾಳಿಸಬೇಕು.ಆದರೆ ಹಾಸನದ ದಂತ ವೈದ್ಯೆಯೊಬ್ಬರು, ವೃತ್ತಿ ಮಾಡುತ್ತಲೇ ಮಿಸೆಸ್ ಇಂಡಿಯಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಆಫ್ ಸಾಧನೆ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.ಆ ಮೂಲಕ ಏನಾದ್ರೂ ಸಾಧಿಸಬೇಕು ಅನ್ನೋ ಛಲ ಇದ್ರೆ ಸಾಕು, ಏನೇ ಒತ್ತಡ ಇದ್ರೂ,ಗುರಿ ಮುಟ್ಟಬಹುದು ಎಂಬುದನ್ನು ಈ ದಂತ ವೈದ್ಯೆ ಸಾಬೀತು ಮಾಡಿದ್ದಾರೆ.

ನಗುಮೊಗದಲ್ಲಿ ಮಿನುಗುತ್ತಿರೋ, ಥಳುಕು-ಬಳುಕಿನ ಈ ಲೇಡಿಯ ಹೆಸರು ಡಾ.ಸೆಲ್ವಿಜಾನ್. ಕನ್ನಡತಿಯೇ ಆಗಿರುವ ಇವರು, ಸದ್ಯ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಜೆ.ಸಿ.ಪುರದಲ್ಲಿ ದಂತವ್ಯದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪತಿ ಹಾಗೂ ಇಬ್ಬರು ಮಕ್ಕಳ ಚಿಕ್ಕ ಸಂಸಾರದ ಸದಸ್ಯೆಯಾಗಿರೋ ಡಾ.ಸೆಲ್ವಿ, ಒತ್ತಡದ ಕೆಲಸದ ನಡುವೆ ಬಿಡುವು ಮಾಡಿಕೊಂಡು ಅಪೂರ್ವ ಸಾಧನೆ ಮಾಡಿ ನಾಡಿಗೆ ಕೀರ್ತಿ ತಂದಿರುವುದು ನಿಜಕ್ಕೂ ಅತಿಶಯದ ವಿಷಯವೇ ಸರಿ.

ಫೆಸ್ ಬುಕ್ ನಲ್ಲಿ ನೋಡಿದ ಫ್ಯಾಷನ್ ಸ್ಪರ್ಧೆ ನೋಡಿ ಆಕರ್ಷಿತರಾದ ಸೆಲ್ವಿ,ವೃತ್ತಿ ಜೊತೆಗೆ ಏನಾದ್ರೂ ಸಾಧಿಸಬೇಕು ಎಂಬ ಹಂಬಲದಲ್ಲಿ ಆರಂಭಿಸಿದ ಪ್ರಯತ್ನ ಇವರನ್ನ ಇದೀಗ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆವರೆಗೂ ಸರ್ಕಾರಿ ವೈದ್ಯೆ ಕಾಯಕ. ಮನೆಗೆ ಬಂದ್ರೆ ಇಬ್ಬರು ಮುದ್ದಾದ ಮಕ್ಕಳ ಸಲಹೋ ಹೊಣೆ. ಹೀಗೆ ಗಂಡ ಮಕ್ಕಳು, ಸಂಸಾರ ಅಂತಾ ಬ್ಯುಸಿಯ ನಡುವೆಯೂ ತಮ್ಮ ಹವ್ಯಾಸಕ್ಕೆಂದು ಆಯ್ಕೆಮಾಡಿ ಕೊಂಡ ಫ್ಯಾಶನ್ ಈಗ, ಮಿಸೆಸ್ ಇಂಡಿಯಾ ಐಯಾಮ್ ಪವರ್ ಫುಲ್ 2018  ಸ್ಪರ್ಧೆಯ ರನ್ನರ್  ಅಪ್ ಆಗಿ ಹೊರ ಹೊಮ್ಮಿಸಿದೆ.

ಈ ಮೂಲಕ ಜಿಲ್ಲೆಯ ಜೊತೆಗೆ ರಾಜ್ಯಕ್ಕೂ ಸೆಲ್ವಿ ಕೀರ್ತಿ ತಂದಿದ್ದಾರೆ. ಈ ಜನಪ್ರಿಯತೆಯಿಂದಲೇ ದಂತ್ಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅತೀವ ಆಸೆ ಇಟ್ಟುಕೊಂಡಿದ್ದಾರೆ.ಮಹಿಳೆಯರು ಅಂದ್ರೆ ಮದುವೆಯಾದ ಕೂಡಲೇ ಗಂಡ, ಮನೆ ಮಕ್ಕಳು ಸಂಸಾರದಲ್ಲಿ ಮುಳು ಹೋಗುವವರೇ ಹೆಚ್ಚು. ನಿತ್ಯದ ಜವಾಬ್ದಾರಿಗಳ ನಡುವೆಯೂ ಸಾಧನೆ ಶಿಖರ ಏರಿರುವ ಸೆಲ್ವಿ ಸಾಧನೆ ನಿಜಕ್ಕೂ ಅಭಿನಂದನೀಯ.

ಮೇ 25 ರಂದು ಗೋವಾದಲ್ಲಿ ನಡೆದ ಮಿಸೆಸ್ ಇಂಡಿಯಾ ಅವಾರ್ಡ್ ಫೈನಲ್ ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಸೆಲ್ವಿ, 20 ರಾಜ್ಯಗಳ 25ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಟಾಲೆಂಟ್ ರೌಂಡ್, ಫಿಟ್ ನೆಸ್ ರೌಂಡ್, ಸಿಂಗಿಂಗ್ ಡ್ಯಾನ್ಸಿಂಗ್ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಗಮನಸೆಳೆದ ಸೆಲ್ವಿ, ರನ್ನರ್ ಅಪ್ ಸಾಧನೆ ಮಾಡಿ ಗೆಲುವಿನ ನಗೆ ಬೀರಿದ್ದಾರೆ. ಕರ್ನಾಟಕದ ರಾಜ್ಯ ಪ್ರಾಣಿ, ಪಕ್ಷಿ, ಹೂ ಗಳನ್ನ ಒಳಗೊಂಡ ವಿಭಿನ್ನ ಡಿಸೈನ್ ನಿಂದ ರ್ಯಾಂಪ್ ವಾಕ್, ಡ್ಯಾನ್ಸ್ ಮೂಲಕ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಪತ್ನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪತ್ನಿ ಜಾನ್, ಸಾಕಷ್ಟು ಖುಷಿಯಾಗಿದ್ದಾರೆ.

ಈ ಸಾಧನೆಯಿಂದ ಮತ್ತಷ್ಟು ಉತ್ತೇಜಿತರಾಗಿರೋ ಡಾ.ಸೆಲ್ವಿ,  ನಾವು ಆರೋಗ್ಯವಾಗಿದ್ರೆ, ಎಲ್ಲವೂ ಚೆನ್ನಾಗಿರುತ್ತದೆ. ಹಾಗೆಯೇ ಸ್ವಚ್ಛ ವಾತಾವರಣವೂ ನಿರ್ಮಾಣವಾಗುತ್ತದೆ ಎನ್ನುವ ವೈದ್ಯೆ, ಆರೋಗ್ಯ ಕ್ಷೇತ್ರದಲ್ಲಿ ಇತರರಿಗೆ ಫ್ಯಾಷನ್ ಮೂಲಕವೇ ಅರಿವು ಮೂಡಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎನ್ನುತ್ತಿರುವ ಸೆಲ್ವೆ ಆಸೆ ಈಡೇರಲಿ ಅನ್ನೋದೇ ಎಲ್ಲರ ಹಾರೈಕೆಯಾಗಿದೆ.

LEAVE A REPLY

Please enter your comment!
Please enter your name here