Home Cinema ದರ್ಶನ್‌ಗೆ ” ಗಂಡುಗಲಿ ಮದಕರಿ ನಾಯಕ” ಸಿನಿಮಾದಲ್ಲಿ ನಾಯಕಿ ಯಾರು ಗೊತ್ತಾ..?! ಲೇಟ್ ಆದ್ರೂ ಲೇಟೆಸ್ಟ್...

ದರ್ಶನ್‌ಗೆ ” ಗಂಡುಗಲಿ ಮದಕರಿ ನಾಯಕ” ಸಿನಿಮಾದಲ್ಲಿ ನಾಯಕಿ ಯಾರು ಗೊತ್ತಾ..?! ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ತಿದ್ದಾರೆ ರಮ್ಯಾ..?!

824
0
SHARE

ರಮ್ಯಾ.. ಗಾಂಧಿನಗರದ ಒಂದ್ಕಾಲದ ಗೋಲ್ಡನ್ ಕ್ವೀನ್. ಇನ್ ಫ್ಯಾಕ್ಟ್ ಇವತ್ತಿಗೂ ರಮ್ಯಾ ಬೇಡಿಕೆ ಗಾಂಧಿನಗರದಲ್ಲಿ ಕಮ್ಮಿಯಾಗಿಲ್ಲ. ಸಿನಿಮಾ ಮಾಡಲು ರಮ್ಯಾ ಇವತ್ತಿಗೂ ಮುಂದಾದ್ರೆ, ಕಾಲ್ ಶೀಟ್‌ಗಾಗಿ ಕ್ಯೂ ನಿಲ್ಲುವರಿಗೂ ಇಲ್ಲಿ ಬರ ಇಲ್ಲ.ಪೊಲಿಟಿಕಲ್ ಕಣ ಸೇರಿದ್ಮೇಲೆ ರಮ್ಯಾ ಚಂದನವನದಿಂದ ಬಹುತೇಕ ಮಾಯಾನೇ ಆಗಿದ್ದರು. ಬರೀ ಬಣ್ಣದ ಬದುಕಿನಿಂದ ಅಷ್ಟೇ ಅಲ್ಲ ರಾಜಕೀಯ ರಣರಂಗದಲ್ಲೂ ರಮ್ಯಾ, ಪಬ್ಲಿಕ್‌ನಲ್ಲಿ ಕಂಡು ಬಂದಿದ್ದು ಕಮ್ಮಿನೇ.

ಬರೀ ಸೊಶಿಯಲ್ ಮೀಡಿಯಾದಲ್ಲೇ ತಮ್ಮ ಚಿಂತನೆ-ಯೋಜನೆ ಬಗ್ಗೆ ಮಾತನಾಡ್ತಿದ್ದ ರಮ್ಯಾ, ಇದೀಗ ಸೊಶಿಯಲ್ ಮೀಡಿಯಾದ ಜವಾಬ್ಧಾರಿಯನ್ನೂ ಕಳಚಿ ಇಟ್ಟಿದ್ದಾರೆ. ಸಾಕಪ್ಪ.. ಡಿಜಿಟಲ್ ಫ್ಲ್ಯಾಟ್‌ಫಾರ್ಮ್ ಸಹವಾಸ ಅಂದಿದ್ದಾರೆ. ಹೀಗಿರುವಾಗ್ಲೇ.. ಮತ್ತೊಂದು ಬ್ರೇಕಿಂಗ್ ನ್ಯೂಸ್ ರಮ್ಯಾ ದೆಹಲಿ ನಿವಾಸದಿಂದ ಹೊರ ಬಿದ್ದಿದೆ.ಯಸ್, ರಮ್ಯಾ.. ಮತ್ತೆ ಬಣ್ಣ ಹಚ್ಚುತ್ತಾರೆ. ಹೀಗೊಂದು ಸುದ್ದಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಹೌದು, ನಿಮಗೆ ಗೊತ್ತಿರಲಿ ರಮ್ಯಾ.. ಚಿತ್ರರಂಗಕ್ಕೆ ಮತ್ತೆ ಬಲಗಾಲಿಟ್ಟು ಬರ‍್ತಾರೆ ಅನ್ನುವ ಸುದ್ದಿ ಆಗಾಗ ಗಿರಕಿ ಹೊಡೆಯುತ್ತಾನೇ ಇದೆ. ಇದಕ್ಕೆ ಅನೇಕ ಸಲ ರೆಕ್ಕೆ ಪುಕ್ಕನೂ ಕಟ್ಟಲಾಗಿದೆ. ಆದ್ರೆ.. ಸುದ್ದಿಯಾದಂತೆ ರಮ್ಯಾ ಇನ್ನೂವರೆಗೂ ಬರಲಿಲ್ಲ. ಬಟ್, ಇದೀಗ.. ಕಾಲ ಕೂಡಿ ಬಂದಿದೆ. ಪದ್ಮಾವತಿಯ ಆಗಮನಕ್ಕೆ ಅಖಾಡ ಸಿದ್ಧವಾಗಿದೆ ಅನ್ನುವ ಸುದ್ದಿ ಎಲ್ಲಡೆ ಬಲವಾಗಿ ಕೇಳಿ ಬರ‍್ತಿದೆ.ಅಂದ ಹಾಗೇ, ರಮ್ಯಾ ಪುನರಾಗಮನವಾಗ್ತಿರುವ ಸಂತಸದ ವಿಚಾರದಲ್ಲೇ, ಇನ್ನೊಂದು ಖುಷಿಯ ಸಂಗತಿನೂ ಅಡಗಿದೆ.

ಹೌದು, ಮರಳಿ ಚಿತ್ರರಂಗಕ್ಕೆ ಬರುವ ಮನಸು ಮಾಡಿರುವ ರಮ್ಯಾ, ದರ್ಶನ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುವ ಮನಸು ಮಾಡಿದ್ದಾರೆ ಅನ್ನುವ ಸುದ್ದಿನೂ ಇದೇ ಹೊತ್ತಿನಲ್ಲಿ ಎಲ್ಲಡೆ ಗುಲ್ಲಾಗಿದೆ.ಹೌದು, ದರ್ಶನ್ ಮತ್ತು ರಮ್ಯಾ.. ಸ್ಯಾಂಡಲ್‌ವುಡ್‌ನ ಓನ್ ಆಪ್ ದಿ ಸ್ಪೆಷಲ್ ಜೋಡಿ.. ತಮ್ಮ ಸಿನಿಮಾಗಳಿಂದ ತಮ್ಮದೇ ಸ್ಥಾನವನ್ನ ಗಾಂಧಿನಗರದಲ್ಲಿ ಪಡೆದಿರುವ ಈ ಕ್ಯೂಟ್ ಕಫಲ್, ದತ್ತ ಸಿನಿಮಾದಲ್ಲಿ ಮಾಡಿದ್ದ ಮೋಡಿ ಇವತ್ತಿಗೂ ಅನೇಕರ ಮುಖದ ಸ್ಮೈಲ್‌ಗೆ ಕಾರಣ..

ಅವತ್ತು ಪ್ರೇಕ್ಷಕರನ್ನ ನಕ್ಕು ನಗಿಸಿ ಗೆಲುವಿನ ಕೇಕೆ ಹಾಕಿದ್ದ ಈ ಕಫಲ್ ಆಫ್ಟರ್ ದತ್ತ, ಮತ್ತೆ ಒಂದಾಗಲಿಲ್ಲ.. ಇವ್ರಿಬ್ಬರನ್ನ ಮತ್ತೊಮ್ಮೆ ಒಟ್ಟಿಗೆ ನೋಡಿ ಕಣ್ತುಂಬಿಕೊಳ್ಳಬೇಕೆನ್ನುವ ಪ್ರೇಕ್ಷಕರು ಆಶಯ, ಇವತ್ತಿನವರೆಗೂ ಆಸೆಯಾಗೇ ಉಳಿದಿತ್ತು.. ಇದಕ್ಕೆ ಪೂರಕವೆನ್ನುವಂತೆ, ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಜೊತೆ ರಮ್ಯಾ ಹೆಜ್ಜೆ ಹಾಕ್ತಾರೆ ಅಂತ ಹೇಳಲಾಗಿತ್ತಾದ್ರೂ, ಅದು ಸಾಧ್ಯವಾಗಿರಲಿಲ್ಲ..

ಇಷ್ಟೆಲ್ಲಾ ಆದ ಬಳಿಕ ಇದೀಗ.. ಭರ್ತಿ ೧೨ ವರ್ಷದ ಬಳಿಕ, ಜೋಡಿ ಒಂದಾಗುವ ಮನಸು ಮಾಡಿದೆ. ಇದಕ್ಕೆ ಗಂಡುಗಲಿ ಮದಕರಿನಾಯಕ ಸಿನಿಮಾ ವೇದಿಕೆಯಾಗಲಿದೆ. ಹೌದು. ಇತ್ತೀಚಿಗೆ ಭಾರೀ ಭಯಂಕರ ಸುದ್ದಿಯಾದಂತೆ ದರ್ಶನ್ ಗಂಡುಗಲಿ ಮದಕರಿನಾಯಕನಾಗ್ತಿದ್ದಾರೆ. ಇದೇ ಗಂಡುಗಲಿ ಮದಕರಿನಾಯಕನ ರಾಣಿಯಾಗಿ ರಮ್ಯಾ ಬರ‍್ತಿದ್ದಾರೆ.ನಿಮಗೆ ಗೊತ್ತಿರಲಿ, ಐತಿಹಾಸಿಕ ಪಾತ್ರಗಳಿಗೆ ರಮ್ಯಾ ಹೇಳಿ ಮಾಡಿಸಿದ ನಟಿ.

ಹಾಗಾಗೇ, ರಮ್ಯಾರನ್ನ ಒಪ್ಪಿಸುವ, ಮತ್ತೇ ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತೆರೆ ಮರೆಯಲ್ಲಿ ಮಾಡ್ತಿದ್ದಾರೆ ಅನ್ನುವದು ಅನೇಕರ ಸದ್ಯದ ವಾದ.ಒಂದ್ವೇಳೆ ರಮ್ಯಾ ನಿಜಕ್ಕೂ ಒಪ್ಪಿ, ಮತ್ತೆ ಕನ್ನಡ ಚಿತ್ರರಂಗವನ್ನ ಅಪ್ಪಿಕೊಂಡರೇ, ರಮ್ಯಾ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ಸಿಗುವದು ಮಾತ್ರ ಪಕ್ಕಾ.ಯಾಕಂದ್ರೆ ರಮ್ಯಾ ತೆರೆ ಮೇಲೆ ಮೋಡಿ ಮಾಡಿ ಭರ್ತಿ ಎರಡು ವರ್ಷಗಳೇ ಆಗಿವೆ.

ಹಾಗಾಗೇ, ಪದ್ಮಾವತಿಯನ್ನ ಮತ್ತೆ ಕಣ್ತುಂಬಿಕೊಳ್ಳಲು ಕಾಯ್ತಿರುವ ಫ್ಯಾನ್ಸ್‌ಗೀಗ ಇದೇ ಸುದ್ದಿ ಮರಳು ಗಾಡಿನಲ್ಲಿ ನೀರು ಸಿಕ್ಕಾಗ ಆಗುವಷ್ಟು ಖುಷಿಯನ್ನೇ ತಂದು ಕೊಟ್ಟಿದೆ. ನಿರೀಕ್ಷೆಯನ್ನ ಹೆಚ್ಚಿಸಿದೆ.ಅದೇನೆ ಇದ್ರೂ ಈ ಸುದ್ದಿಯಂತೆ ದರ್ಶನ್ ಮತ್ತು ರಮ್ಯಾ, ಒಟ್ಟಿಗೆ ಗಂಡು ಗಲಿ ಮದಕರಿನಾಯಕನಲ್ಲಿ ಕಾಣಿಸಿ ಕೊಂಡಿದ್ದೆ ಆದಲ್ಲಿ.. ಇವ್ರಿಬ್ಬರ ಅಭಿಮಾನಿಗಳಿಗೆ ಇದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ.. ರಮ್ಯಾ ಕಂಬ್ಯಾಕ್‌ಗೂ ಇದಕ್ಕಿಂತ ಇನ್ನೊಂದು ಸುವರ್ಣಾವಕಾಶ ಇಲ್ಲ.

LEAVE A REPLY

Please enter your comment!
Please enter your name here