Home Cinema ದರ್ಶನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ “ಕುರುಕ್ಷೇತ್ರ” ರಿಲೀಸ್ ಡೇಟ್ ಅನೌನ್ಸ್ ಮಾಡೋದು ಯಾವಾಗ ಗೊತ್ತಾ..?!...

ದರ್ಶನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ “ಕುರುಕ್ಷೇತ್ರ” ರಿಲೀಸ್ ಡೇಟ್ ಅನೌನ್ಸ್ ಮಾಡೋದು ಯಾವಾಗ ಗೊತ್ತಾ..?! ವ್ಹಾ..! ಕಾಲ ಕೂಡಿ ಬಂತು ನೋಡಲು ‘ಕುರುಕ್ಷೇತ್ರ’ದ ಕದನ..!

1138
0
SHARE

ಕುರುಕ್ಷೇತ್ರ.. ಸ್ಯಾಂಡಲ್‌ವುಡ್‌ನ ಮಹೋನ್ನತ ಸಿನಿಮಾ. ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿರುವ ಚಿತ್ರದ ಅಡ್ಡಾದಿಂದ ಲೇಟೆಸ್ಟ್ ಮಾಹಿತಿಯೊಂದು ಹೊರಬಿದ್ದಿದೆ. ಕುರುಕ್ಷೇತ್ರ, ದರ್ಶನ್ ದುರ್ಯೋಧನನಾಗಿ ಅಬ್ಬರಿಸಲು ಸಜ್ಜಾಗಿರುವ ಸಿನಿಮಾ. ಪೌರಾಣಿಕ ಚಿತ್ರ ಸೆಟ್ಟೇರಿದಾ ಗಿನಿಂದ್ಲೂ ಇಲ್ಲಿತನ್ಕ ಸುದ್ದಿ ಸದ್ದು ಮಾಡ್ತಾನೇ ಬರ್ತಿರು ಸಿನಿಮಾ.

ಇಷ್ಟು ದಿನ ಕುರುಕ್ಷೇತ್ರ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಡಿ-ಫ್ಯಾನ್ಸ್‌ಗೆ ಸಂತಸದ ಸುದ್ದಿವೊಂದನ್ನು ಮುನಿರತ್ನ ನೀಡಿದ್ದಾರೆ. ಆಡಿಯೋ ಬಿಡುಗಡೆಗೆ & ಚಿತ್ರ ರಿಲೀಸ್ ಡೇಟ್ ಅನೌನ್ಸ್ ಸದ್ಯದಲ್ಲೇ ನಿಕ್ಕಿಯಾಗಲಿದೆ ಎಂಬ ಗುಡ್ ನ್ಯೂಸ್‌ನ್ನು ನೀಡಿದ್ದಾರೆ ನಿರ್ಮಾಪಕ ಮುನಿರತ್ನ.

ಯಸ್.. ಇತ್ತೀಚೆಗಷ್ಟೇ ಮದಕರಿ ನಾಯಕ ವಿಷಯವಾಗಿ ಮುನಿರತ್ನ ಗರಂ ಆಗಿದ್ರು. ಇಬ್ಬರು ಸ್ಟಾರ್‌ಗಳ ಪರವಾಗಿ ಮಾತನಾಡಿದ್ರು. ಕುರುಕ್ಷೇತ್ರಕ್ಕು ಮುಂಚೆ ಯಜಮಾನ ಚಿತ್ರದ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಕೇಳಿಬರ್ತಿದ ಹಿನ್ನೆಲೆ ಮುನಿರತ್ನ ಮಾತನಾಡಿದ್ದಾರೆ. ಅದಕ್ಕೆಲ್ಲಾ ಬ್ರೇಕ್ ಹಾಕಿರುವ ಮುನಿರತ್ನ. ಕುರುಕ್ಷೇತ್ರ ಕದನ ನಡೆಯುವ ದಿನಾಂಕ ಸದ್ಯದಲ್ಲೇ ಫಿಕ್ಸ್ ಮಾಡುವ ಸಂತಸದ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಬಹುತೇಕ ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿದಿರುವ ಕಾರಣ ಮುನಿರತ್ನ ಅವರು ಕುರುಕ್ಷೇತ್ರ ಚಿತ್ರವನ್ನು ನೋಡಲಿದ್ದಾರಂತೆ, ಅಂದ್ರೆ, ನವೆಂಬರ್ ೫ರಂದು ಸಂಪೂರ್ಣ ಕೆಲಸ ಮುಗಿಯುತ್ತಂತೆ. ನವೆಂಬರ್ ೧೦ ೨ಡಿ ವರ್ಷನ್‌ನಲ್ಲಿ ಕುರುಕ್ಷೇತ್ರವನ್ನು ನೋಡಲಿದ್ದಷು, ಸೈಲೆಂಟ್ ಆಗಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡೋದಕ್ಕೆ ಮುನಿರತ್ನ ಪ್ಲಾನ್ ಮಾಡಿಕೊಳ್ತಿದ್ದಾರೆ.ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಸದ್ಯ ಕಂಪ್ಲೀಟ್ ಆಗಿದೆ. ದರ್ಶನ್ ಸೇರಿದಂತೆ ಡಬ್ಬಿಂಗ್ ಕಾರ್ಯಕೂಡ ಸಂಪೂರ್ಣ ಮುಗಿದಿದೆ.

ಸದ್ಯ ಗ್ರಾಫಿಕ್ಸ್ ಕೆಲಸ ಪ್ರಗತಿಯಲ್ಲಿ ನಡೆಯುತ್ತಿದ್ದು, ಪೌರಾಣಿಕ ಸಿನಿಮಾ ಆದ ಕಾರಣಕ್ಕೆ ಹೆಚ್ಚಿನ ಗ್ರಾಫಿಕ್ಸ್ ವರ್ಕ್ ಇದ್ದು, ಸದ್ಯದಲ್ಲೇ ಅದು ಕೂಡ ಕಂಪ್ಲೀಟ್ ಆಗಲಿದೆ. ಬಾಂಬೆ, ಹೈದರಾಬಾದ್, ಕೇರಳ ,ಚೆನ್ನೈ ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸಗಳು ಸಾಗ್ತಿದ್ದು, ಅಚ್ಚುಕಟ್ಟಾಗಿ ಸಿನಿಮಾ ತೆರೆಗೆ ತರಲಿದ್ದಾರೆ.

೧೦ರಂದು ಸಿನಿಮಾ ನೋಡಿದ ಮೇಲೆ ಮುನಿರತ್ನ ಅವರಿಗೆ ಸಿನಿಮಾ ತೃಪ್ತಿಯಾದ್ರೆ ಸಿನಿಮಾದ ಡೇಟ್ಸ್ ಅನೌನ್ಸ್ ಮಾಡಲಿದ್ದಾರಂತೆ. ಇಲ್ಲವಾದ್ರೆ ಇನ್ನಷ್ಟು ಸಿನಿಮಾದಲ್ಲಿ ಬದಲಾವಣೆಗಳನ್ನು ಮಾಡಿಸಿ ತದನಂತ್ರ ಚಿತ್ರ ಬಿಡುಗಡೆ ದಿನಾಂಕವನ್ನು ಮುನಿರತ್ನ ಅನೌನ್ಸ್ ಮಾಡಲಿದ್ದಾರೆ. ಚಿತ್ರ ನನಗೆ ಮೊದಲು ನಾನು ತೃಪ್ತಿಯಾಗಬೇಕು, ನಂತರ ಅಭಿಮಾನಿಗಳ ಮುಂದೆ ಸಿನಿಮಾ ಬರಲಿದೆ, ನನಗೆ ಇಷ್ಟವಾಗಿಲ್ಲ ಅಂದ್ರೆ ,ಫ್ಯಾನ್ಸ್ ಒಪ್ಪಿಕೊಳ್ತಾರಾ ಎನ್ನುವ ಬಲವಾದ ನಂಬಿಕೆ ಮುನಿರತ್ನ ಅವರಿಗಿದೆ.

ಇತ್ತೀಚೆಗಷ್ಟೇ ದರ್ಶನ್‌ಗೆ ಕಾರು ಆಕ್ಸಿಡೆಂಟ್‌ನಲ್ಲಿ ಕೈಗೆ ಶಸ್ತ್ರ ಚಿಕಿತ್ಸೆಯಾಗಿದೆ. ಇನ್ನು ಸದ್ಯದಲ್ಲೇ ಯಜಮಾನ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ದಚ್ಚು ಭಾಗಿಯಾಗಲಿದ್ದಾರೆ. ಇನ್ನು ಯಜಮಾನ ಸಿನಿಮಾದ ಡಬ್ಬಿಂಗ್ ಕಂಪ್ಲೀಟ್ ಮಾಡಿದ್ರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಯಜಮಾನ ಟೀಂ ಮಾಡುತ್ತೆ ಎಂಬ ಕಾರಣಕ್ಕೋ ಏನೋ. ನಿರ್ಮಾಪಕರು ಇಂತದ್ದೊಂದು ತೀರ್ಮಾನಕ್ಕೆ ಬಂದಿದ್ದು, ಸದ್ಯದಲ್ಲೇ ರಿವೀಲ್ ಮಾಡುವ ಮನಸ್ಸು ಮಾಡಿದ್ದಾರೆ.ಹೌದು, ಕುರುಕ್ಷೇತ್ರ .. ದರ್ಶನ್ ವೃತಿ ಬದುಕಿನಲ್ಲಿ ಬಹುದೊಡ್ಡ ಸ್ಪೆಷಲ್ ಸಿನಿಮಾ.

ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಕುರುಕ್ಷೇತ್ರದ ಆಡಿಯೋ ಅದ್ದೂರಿಯಾಗಿಯೇ ಬಿಡುಗಡೆಯಾಗಲಿದೆ. ಇದಕ್ಕೆ ತಯಾರಿಗಳು ಕೂಡ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಚಿತ್ರರಂಗದ ಎಲ್ಲಾ ಗಣ್ಯರನ್ನು ಕರೆತರುವ ಪ್ಲಾನ್ ಕೂಡ ಮಾಡಿಕೊಳ್ತಿದ್ದಾರೆನ್ನಲಾಗ್ತಿದೆ.ಇನ್ನು ಕುರುಕ್ಷೇತ್ರದಲ್ಲಿ ನಾಲ್ಕು ಹಾಡುಗಳ ಜೊತೆಯಲ್ಲಿ, ಒಟ್ಟು ೧೨ ಶ್ಲೋಕಗಳಿವೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಕುರುಕ್ಷೇತ್ರದ ಹಾಡುಗಳಿಗೆ , ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿಸಿದೆ.

ಅದಕ್ಕೂ ಮುಂಚೆ ಯಜಮಾನ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು, ಯಜಮಾನ ಮೊದಲ್ಲಾ- ಕುರುಕ್ಷೇತ್ರ ಮೊದಲು ತೆರೆಗೆ ಬರುತ್ತಾ ಎಂದು ಕಾತುರದಿಂದ ಕಾಯುವಂತೆ ಮಾಡಿದೆ.ಅದೇನೇ ಇದ್ರು. ಈ ಕುರುಕ್ಷೇತ್ರ ವಿಷಯ ಕೇಳಿ ಡಿ- ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ನವೆಂಬರ್ ೧೦ ಯಾವಾಗ ಆಗುತ್ತಪ್ಪಾ.. ನಿರ್ಮಾಪಕ ಮುನಿರತ್ನ ಯಾವಾಗ ಸಿನಿಮಾ ಡೇಟ್ ಅನೌನ್ಸ್ ಮಾಡ್ತಾರೆಂದು ತುದಿಗಾಲಿನಲ್ಲಿ ಕುಳಿತಿರೋದು ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here