Home Cinema ದರ್ಶನ್ ಏನಂದ್ರು ಸೋದರ ಅಭಿಯನ್ನ ಕಂಡು..! ಸುದೀಪ ಕಂಡoತೆ ಹೇಗಿದೆ ಗೊತ್ತಾ ಬೆಂಕಿ ಚೆಂಡು..!

ದರ್ಶನ್ ಏನಂದ್ರು ಸೋದರ ಅಭಿಯನ್ನ ಕಂಡು..! ಸುದೀಪ ಕಂಡoತೆ ಹೇಗಿದೆ ಗೊತ್ತಾ ಬೆಂಕಿ ಚೆಂಡು..!

1611
0
SHARE

ಎಲ್ಲರಿಗೂ ಗೊತ್ತಿರುವಂತೆ, ದರ್ಶನ್ ಅಂಬರೀಶ್ ಅವ್ರ ಇನ್ನೊಬ್ಬ ಮಗ. ಅಭಿಯ ಅಣ್ಣನೂ ಹೌದು. ಅಂಬರೀಶ್ ಮೇಲಿನ ಅಭಿಮಾನ, ಗೌರವಕ್ಕೆ..ಅಭಿ ಮೇಲಿನ ಪ್ರೀತಿಗೆ.. ಅಣ್ಣನಾಗಿ, ಅಮರ್ ಚಿತ್ರದಲ್ಲೊಂದು ವಿಶೇಷ ಪಾತ್ರವನ್ನೂ ನಿರ್ವಹಿಸಿದ್ದಾರೆ.

ದರ್ಶನ್. ಇಂಥ ದರ್ಶನ್, ಅಮರ್ ಟೀಸರ್ ಬಿಡುಗಡೆಯಾಗ್ತಿದ್ದಂತೆ.. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಶ್ ಅಮರ್ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಹಾರೈಸಿ ಅಂದಿದ್ದಾರೆ.

ಇನ್ನೂ ಅಮರ್ ಟೀಸರ್ ನೋಡುವ ಎಕ್ಸಾಯಟ್ಮೆಂಟ್, ಸುದೀಪರಲ್ಲೂ ಇತ್ತು. ಅದು ತುಸು ಹೆಚ್ಚೇ. ಹಾಗಾಗಿ, ಅಮರ್ ಚಿತ್ರದ ಖಡಕ್ ಪೋಸ್ಟರ್ ನೋಡಿಯೇ ಕಳೆದುಹೋಗಿದ್ದ ಸುದೀಪ, ಇದು.. ಕೈಯಾ ಅಥ್ವಾ ಕಬ್ಬಿಣಾನಾ ಅನ್ನುವ ಪ್ರಶ್ನೆಯನ್ನ ಕೇಳಿದ್ದರು. ಇನ್ನೂ ಟೀಸರ್ ಬಗ್ಗೆಯೂ ಸುದೀಪ ಅವ್ರದ್ದೂ ಸೇಮ್ ಥಾಟ್.

ಹೀಗೆ ಎಲ್ಲರ ಮನ ಗೆದ್ದ ಅಮರ್ ಟೀಸರ್‌ಗೆ ಯುಟ್ಯೂಬ್ ಕೂಡಾ ಥಂಡಾ ಹೊಡೆದಿದೆ. ಇದಕ್ಕೆ ಕೈ ಗನ್ನಡಿ ಅನ್ನುವಂತೆ.. ಟೀಸರ್ ಬಿಡುಗಡೆಯಾದ ನಾಲ್ಕೇ ನಾಲ್ಕು ಘಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನ ಅಮರ್ ಟೀಸರ್ ನೋಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಅಭಿಷೇಕ್‌ಗೆ ಉಘೇ ಉಘೇ ಅಂದಿದ್ದಾರೆ.

ಅಂದ ಹಾಗೇ, ನಾಗ್ ಶೇಖರ್ ನಿರ್ದೇಶನದ ಅಮರ್‌ಗೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಅಮರ್‌ನಲ್ಲಿ ನಾಯಕಿಯಾಗಿ ತಾನ್ಯ ಹೋಪ್ ಕಾಣಸಿಗಲಿದ್ದಾರೆ.ಸದ್ಯ ಅಮರ್ ಟೀಸರ್‌ಗೆ, ಎಲ್ಲಡೆ ಇನ್ನಿಲ್ಲದ ಪ್ರೀತಿ ಸಿಗ್ತಿದೆ. ಆದ್ರೆ ಟೀಸರ್ ಬಿಡುಗಡೆಗೂ ಮುನ್ನ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್‌ಗಿದ್ದ ಆತಂಕ ಅಷ್ಟಿಷ್ಟಲ್ಲ. ಹೌದು, ಟೀಸರ್‌ನ್ನ..

ಚಿತ್ರಪ್ರೇಮಿಗಳು ಕನ್ನಡದ ಕಲಾಭಿಮಾನಿಗಳೂ ಹೇಗೆ ಸ್ವೀಕರಿಸುತ್ತಾರೆ ಅನ್ನುವ ದುಗುಡದಲ್ಲೇ, ಸದ್ಯ ಮಲೆಶಿಯಾದಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಭಿ, ಅಲ್ಲಿಂದನೇ ತಮ್ಮ ತವಕ ಹಾಗೂ ತಲ್ಲಣದ ಕಥೆಯನ್ನ ಹೇಳಿದ್ದಾರೆ.ಅದೇನೆ ಇರ‍್ಲಿ, ಸದ್ಯ.. ಅಂಬಿ ಕಂಡಿದ್ದ ಕನಸಿನ ಮೊದಲ ದರ್ಶನವಾಗಿದೆ. ಅಂಬಿ ಪುತ್ರ ಅಭಿಷೇಕ್‌ನ ಆಗಮನವಾಗಿದೆ.

ಮೊದಲ ದರ್ಶನಕ್ಕೆ ಅಭಿಮಾನಿಗಳೂ ಪುಳಕಿತನೂ ಆಗಿದ್ದಾರೆ. ಕನ್ನಡ ಚಿತ್ರರಂಗದ ಹಿಂದೆಂದೂ ಯಾರಿಗೂ ಸಿಗದ ಸ್ವಾಗತ ಅಭಿಷೇಕ್‌ಗೆ ಸಿಕ್ಕಿದೆ. ನೀವ್ ಇನ್ನೂ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ. ಬಿಕೌಝ್ ಜ್ಯೂ ಅಂಬಿಯ ಖದರ್ ಮಿಸ್ ಮಾಡುವಂತಿಲ್ಲ.

LEAVE A REPLY

Please enter your comment!
Please enter your name here