Home Cinema ದರ್ಶನ್ ಗ್ಯಾಂಗ್ ಜೊತೆ ಆ ರಾತ್ರಿ ಕಾರಿನಲ್ಲಿ ಪ್ರಯಾಣ ಮಾಡ್ತಿದ್ದು, ಸ್ನೇಹಿತನಾ, ನಾಯಕಿನಾ..?! ದಿನಕ್ಕೊಂದು ದಿಕ್ಕಿನತ್ತ...

ದರ್ಶನ್ ಗ್ಯಾಂಗ್ ಜೊತೆ ಆ ರಾತ್ರಿ ಕಾರಿನಲ್ಲಿ ಪ್ರಯಾಣ ಮಾಡ್ತಿದ್ದು, ಸ್ನೇಹಿತನಾ, ನಾಯಕಿನಾ..?! ದಿನಕ್ಕೊಂದು ದಿಕ್ಕಿನತ್ತ ಹೋಗ್ತಿದೆಯಲ್ಲ ದಚ್ಚು ಆಕ್ಸಿಡೆಂಟ್ ಪ್ರಕರಣ..!!?

1022
0
SHARE

ದರ್ಶನ್ ಆರೋಗ್ಯವನ್ನ ಕನ್ನಡ ಚಿತ್ರರಂಗದ ಅನೇಕರು ವಿಚಾರಿಸುತ್ತಿರುವ ಬೆನ್ನಲ್ಲೇ, ದರ್ಶನ್ ಆಕ್ಸಿಡೆಂಟ್ ಪ್ರಕರಣ ದಿನಕ್ಕೊಂದು ತಿರುವನ್ನ ಪಡೆದುಕೊಳ್ತಿದೆ. ಹೌದು, ನಿಮಗೆ ಗೊತ್ತಿರಲಿ ಅಸಲಿಗೆ ಅಪಘಾತದ ಸುದ್ದಿ ಬೆಳಕಿಗೆ ಬಂದಾಗ ಕಾರಿನಲ್ಲಿದ್ದಿದ್ದು ನಾಲ್ಕು ಜನ ಮಾತ್ರ ಅಂಥನೇ ಎಲ್ಲ ಅಂದುಕೊಂಡಿದ್ದರು. ಆದ್ರೀಗ ಕಾರಿನಲ್ಲಿದ್ದಿದ್ದು ನಾಲ್ಕಲ್ಲ ಬದ್ಲಿಗೆ ಆರು ಜನ ಅನ್ನುವ ವಿಚಾರ ಬಹಿರಂಗಗೊಂಡಿದೆ.ಯಸ್, ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಪ್ರಕಾರ, ಅಪಘಾತವಾದಾಗ ಇದ್ದಿದ್ದು ಆರ ಜನವಾದ್ರೆ, ಮೈಸೂರು ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರ ರಾವ್ ಪ್ರಕಾರ ಐದು ಜನ.

ಇನ್ನು, ದರ್ಶನ್ ಕಾರು ಅಪಘಾತದ ಸುತ್ತ ಅನುಮಾನದ ಹುತ್ತ ಬೆನ್ನಲ್ಲೇ, ತನಿಖೆಯಲ್ಲಿ ಯಾವ ರಾಜಿ ಪ್ರಶ್ನೆನೂ ಇಲ್ಲ ಅನ್ನುವದನ್ನೂ ಮೈಸೂರು ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಅಪಘಾತವಾದಾಗ ಸ್ಥಳದಲ್ಲಿ ಪೊಲೀಸರು ಇದ್ದರು ಅನ್ನುವ ಸುದ್ದಿಯನ್ನೂ ತಳ್ಳಿ ಹಾಕಿರುವ ಸುಬ್ರಹ್ಮಣೈಶ್ವರ್ ರಾವ್ ಅವರು, ತನಿಖೆ ಹಂತದ ಮಾತಿಯನ್ನ ಬಹಿರಂಗಗೊಳಿಸಲು ಸಾಧ್ಯವಿಲ್ಲ ಅಂದಿದ್ದಾರೆ. ದರ್ಶನ್ ಹೇಳಿಕೆಯನ್ನೂ ಪಡೆದಿರುವ ವಿಚಾರವನ್ನೂ ತಿಳಿಸಿದ್ದಾರೆ.

ಇನ್ನೂ ದರ್ಶನ್ ಕಾರು ಅಪಘಾತವಾದಾಗ ಕಾರಿನಲ್ಲಿದ್ದಿದ್ದು, ಆರು ಜನ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ ಬೆನ್ನಲ್ಲೇ, ಅನೇಕ ರೀತಿಯ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ‍್ತಿವೆ. ಹೌದು, ದರ್ಶನ್ ಕಾರು ಆಕ್ಸಿಡೆಂಟ್‌ನಲ್ಲಿ ಕಾಣೆಯಾದ ಇಬ್ಬರು ವಿನಯ್ ಶಂಕರ್ ಹಾಗೂ ಪ್ರಕಾಶ್ ಅನ್ನುವ ಅನುಮಾನ ಅನೇಕರು ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕೇಳಿ ಬರ‍್ತಿರುವ ಇಬ್ಬರು ದರ್ಶನ್ ಸ್ನೇಹಿತರೇ ಅನ್ನೋದು ನಿಮಗೆ ಗೊತ್ತಿರಲಿ.ಅಂದ ಹಾಗೇ, ಬರೀ ವಿನಯ್ ಶಂಕರ್ ಹಾಗೂ ಪ್ರಕಾಶ್ ಹೆಸರುಗಳಷ್ಟೇ ಅಲ್ಲ, ಇನ್ನೂ ಅನೇಕರ ಹೆಸರುಗಳು ಕೇಳಿ ಬರ‍್ತಿವೆ. ಇಷ್ಟೇ ಅಲ್ಲ ಅಪಘಾತವಾದಾಗ ದರ್ಶನ್ ಕಾರಿನಲ್ಲಿ ನಾಯಕಿಯರಿದ್ದರಾ ಅನ್ನುವ ಅನುಮಾನನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ದರ್ಶನ್ ಮೌನ ಅನ್ನೋದನ್ನ ಪ್ರತೈಕವಾಗಿ ಇಲ್ಲಿ ಹೇಳಬೇಕಿಲ್ಲ

ಅಪಘಾತದ ಬಳಿಕ ಕಾಣೆಯಾದವರ‍್ಯಾರು, ಹೇಳ್ಬೀಡಿ ಚಕ್ರವರ್ತಿ..?:ಹೌದು, ಅಸಲಿಗೆ ಅಪಘಾತವಾದಾಗ.. ದರ್ಶನ್, ಪೊಲೀಸರಿಗೆ ಮಾಹಿತಿ ನೀಡಿದಿದ್ದರೆ, ಕಾರು ಮುಚ್ಚಿಡುವ ಪ್ರಯತ್ನ ಮಾಡದೇ ಇದ್ದರೆ, ಇನ್ನಿಬ್ಬರ ಹೆಸರನ್ನ ಮುಚ್ಚಿಡುವ ಪ್ರಯತ್ನ ಮಾಡದೇ ಇದ್ದರೆ, ಇಷ್ಟೆಲ್ಲಾ ಮಾತುಗಳು ಕೇಳಿ ಬರುತ್ತಿರಲಿಲ್ಲ. ಪ್ರಕರಣನೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ. ಬಟ್, ದರ್ಶನ್.. ಅದ್ಯಾಕೇ ಹೀಗೆ ಮಾಡಿದ್ರು. ಹೆಸರುಗಳನ್ನ ಮುಚ್ಚಿಟ್ಟರು ಅನ್ನೋದೇ ಇದೀಗ ಅನೇಕರನ್ನ ಕಾಡ್ತಿದೆ.

ಅಷ್ಟೇ ಅಲ್ಲ ದಿನಕ್ಕೊಂದು ತಿರುವನ್ನ ಪಡೆಯುತ್ತಿರುವ ಪ್ರಕರಣ ಅಭಿಮಾನಿಗಳ ಆತಂಕವನ್ನೂ ಹೆಚ್ಚಿಸಿದೆ. ಇದೆಲ್ಲದಕ್ಕೂ ಬ್ರೇಕ್ ಬೀಳೋದು ದರ್ಶನ್ ಮಾತನಾಡಿದಾಗ, ಮೌನ ಮುರಿದಾಗ.. ಆ ರಾತ್ರಿ ನಡೆದ ಘಟನೆಯನ್ನ ವಿವರಿಸಿದಾಗಲಷ್ಟೇ.ಅದೇನೆ ಇರ‍್ಲಿ, ಸದ್ಯ ಕನ್ನಡ ಚಿತ್ರರಂಗದ ಸಾರಥಿಯ ಆಕ್ಸಿಡೆಂಟ್ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಂತರವಷ್ಟೇ ಅಸಲಿ ಸತ್ಯವೇನು ಅನ್ನುವ ಸಂಗತಿ ಬಯಲಾಗಲಿದೆ. ದರ್ಶನ್ ಜೊತೆ ಕಾರಿನಲ್ಲಿದ್ದಿದ್ದು ಯಾರು ಅನ್ನುವ ವಿಚಾರನೂ ಗೊತ್ತಾಗಲಿದೆ. ಆದ್ರೆ ಅಲ್ಲಿವರೆಗೂ ಪ್ರಕರಣದಲ್ಲಿ ಇನ್ಯಾವ ಟ್ವಿಸ್ಟ್ ಎದುರಾಗಲಿದೆ ಅನ್ನೋದು ಸದ್ಯದ ಕೂತುಹಲದರ್ಶನ್…

ದರ್ಶನ್.. ಕನ್ನಡ ಚಿತ್ರರಂಗದ ಸಾರಥಿ. ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ರಾಂತಿ ತೆಗೆದುಕೊಳ್ತಿರುವ ದಾಸನ ಆರೋಗ್ಯಕ್ಕಾಗಿ ಕನ್ನಡ ಚಿತ್ರರಂಗ ಪ್ರಾರ್ಥನೆ ಮಾಡ್ತಿದೆ. ಅಭಿಮಾನಿಗಳು ಹರಕೆಯನ್ನೊತ್ತಿದ್ದಾರೆ. ಹೀಗಿರುವಾಗ ನಿನ್ನೆ ದರ್ಶನ್ ಆರೋಗ್ಯವನ್ನ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ವಿಚಾರಿಸಿದ್ದಾರೆ…

ಹೌದು, ನಿನ್ನೆ ಪಾಂಡವಪುರದಲ್ಲಿ ಶಿವಣ್ಣ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಸಂಜೆ ಬಳಿಕ ಬಿಡುವು ಮಾಡಿಕೊಂಡ ಶಿವಣ್ಣ, ಆಸ್ಪತ್ರೆಗೆ ತೆರಳಿ ದರ್ಶನ್‌ರನ್ನ ಭೇಟಿಯಾಗಿದ್ದಾರೆ. ಆರೋಗ್ಯ ವಿಚಾರಿಸಿದ್ದಾರೆ. ಬಳಿಕ.. ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿಯನ್ನೂ ನೀಡಿದ ಶಿವಣ್ಣ, ದರ್ಶನ್ ಗುಣಮುಖರಾಗ್ತಿದ್ದಾರೆ ಅಂದಿದ್ದಾರೆ…

LEAVE A REPLY

Please enter your comment!
Please enter your name here