Home Cinema ದರ್ಶನ್-ನಿಖಿಲ್ ಒಂದಾಗ್ತಾರಾ ಮಂಡ್ಯ ಫಲಿತಾಂಶದ ಬಳಿಕ..?

ದರ್ಶನ್-ನಿಖಿಲ್ ಒಂದಾಗ್ತಾರಾ ಮಂಡ್ಯ ಫಲಿತಾಂಶದ ಬಳಿಕ..?

933
0
SHARE

ದಿನದಿಂದ ದಿನಕ್ಕೆ ತನ್ನ ಹೈಪ್ ಹೆಚ್ಚಿಸಿಕೊಳ್ತಿರೋ ಕುರುಕ್ಷೇತ್ರ ಸಿನಿಮಾ ಅಡ್ಡಾದಿಂದ ಮತ್ತೊಂದು ಹಾಟ್ ನ್ಯೂಸ್ ಬಂದಿದೆ. ಇಷ್ಟು ದಿನ ಪಾಲಿಟಿಕ್ಸ್ ವಿಚಾರವಾಗಿ ನಾನೇ ಬೇರೆ, ನೀನೆ ಬೇರೆ ಅಂತಿದ್ದ ದರ್ಶನ್ ಹಾಗೂ ನಿಖಿಲ್ ಈಗ ಎಲ್ಲವನ್ನೂ ಮರೆತು ಒಟ್ಟಿಗೆ ಕುರುಕ್ಷೇತ್ರ ಸಿನಿಮಾ ಪ್ರಮೊಷನ್ ಮಾಡ್ತಾರಂತೆ.

ಮಂಡ್ಯ ರಾಜಕೀಯ ಬೆಳವಣಿಗೆಗಳ ವಿಷಯದಲ್ಲಿ ತೀರ ಪರ್ಸನಲ್ ಹಂತಕ್ಕೆ ಹೋಗಿದ್ದ ದರ್ಶನ್ ಹಾಗೂ ನಿಖಿಲ್ ಈಗ ಸಿನಿಮಾಗಾಗಿ ಮತ್ತೆ ಕೈ ಜೋಡಿಸಿರೋದು ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ. ಪೊಲಿಟಿಕಲ್ ವಿರೋಧದ ಮಧ್ಯೆಯೂ ಇಬ್ಬರು ಒಟ್ಟಿಗೆ ಕುರುಕ್ಷೇತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಸುದ್ಧಿಯನ್ನ ಈಗ ಸ್ವತಃ ನಿರ್ಮಾಪಕ ಮುನಿರತ್ನ ಆಚೆ ಹಾಕಿದಾರೆ. ಎಲೆಕ್ಷನ್ ಮುಗಿದಮೇಲೆ ಇನ್ಯಾವ ಜಿದ್ದಾಜಿದ್ದಿ ಎನ್ನುವ ಆಲೋಚನೆ ಈ ಇಬ್ಬರೂ ಸ್ಟಾರ್‌ಗಳಿಗೆ ಬಂದಿದ್ಯಾ ಅನ್ನೋದೆ ಎಲ್ಲರ ಕ್ವಾಷೆನ್.

ಇಬ್ಬರೂ ಒಂದಾಗಿ ಬಂದ್ರೆ ಮಾತ್ರ ಕುರುಕ್ಷೇತ್ರ ಚಿತ್ರದ ಪ್ರಮೊಷನ್ ಚೆನ್ನಾಗಿ ಆಗುತ್ತೆ ಎನ್ನುವ ಮಾಸ್ಟರ್‌ಪ್ಲಾನ್ ಮುನಿರತ್ನರದ್ದು. ನನಗೆ ದರ್ಶನ್-ನಿಖಿಲ್ ಇಬ್ಬರೂ ಇಕ್ವಲ್. ಹಾಗಾಗೀ ಇಬ್ಬರೂ ಪ್ರೀತಿಯಿಂದಲೇ ಸಿನಿಮಾದ ಪ್ರಚಾರದ ಕೆಲಸಗಳಿಗೆ ಒಟ್ಟಿಗೆ ಬರ‍್ತಾರೆ ಅಂತ ಮುನಿರತ್ನ ಅಭಯಹಸ್ತವನ್ನ ತೋರಿಸಿದ್ದಾರೆ. ಆಗಸ್ಟ್‌ನಲ್ಲಿ ತೆರೆಗೆ ಬರ‍್ತಿರೋ ಕುರುಕ್ಷೇತ್ರದ ಪ್ರಮೊಷನಲ್ ಆಕ್ಟಿವಿಟಿಗಳು ಒಂದು ತಿಂಗಳು ನಡೆಯುತ್ತಂತೆ. ಭಾರತೀಯ ಚಿತ್ರರಂಗವೇ ತಿರುಗಿನೋಡುವಂತಹ ಮಾರ್ಕೆಟಿಂಗ್ ಫಾರ್ಮೂಲಾವನ್ನ ನಿರ್ಮಾಪಕ ಮುನಿರತ್ನ ಈಗಾಗಲೇ ತಮ್ಮ ಮೈಂಡ್‌ನಲ್ಲಿ ಸೆಟ್ ಮಾಡಿಕೊಂಡಿದ್ದಾರೆ. ಮುಂಬೈ, ದೆಹಲಿ, ಬೆಂಗಳೂರು, ಚೆನೈ ಹಾಗೂ ಹೈದ್ರಾಬಾದ್‌ನಲ್ಲಿ ದೊಡ್ಡಮಟ್ಟದಲ್ಲಿ ಪ್ರಮೊಷನಲ್ ಮಿಡೀಯಾ ಸಂದರ್ಶನಗಳನ್ನ ನಿಗದಿಪಡಿಸಲಾಗಿದೆ.

ಅಂತೂ ಇಬ್ಬರನ್ನೂ ಒಟ್ಟಿಗೆ ಕರೆತರುತ್ತಿರುವ ಮುನಿರತ್ನ ಪ್ರಮೊಷನ್‌ನಲ್ಲಿ ಯಾವ ಕೊರತೆಯೂ ಇರಬಾರದು ಅಂತ ಯೋಜನೆ ಹಾಕಿಕೊಂಡಿದಾರೆ. ಆದರೆ ಈ ವಿಷಯಗಳ ಬಗ್ಗೆ ದರ್ಶನ್ ಆಗಲಿ, ನಿಖಿಲ್ ಆಗಲಿ ಯಾವ ಕ್ಲಾರಿಟಿಯನ್ನೂ ಕೊಟ್ಟಿಲ್ಲ. ಮುನಿರತ್ನ ಇಷ್ಟು ವಿಶ್ವಾಸದಲ್ಲಿರಬೇಕಾದ್ರೇ ಇಬ್ಬರೂ ಕೈಕೈ ಹಿಡಿದು ಪ್ರಮೊಷನ್ ಮಾಡಿದ್ರೂ ಶಾಕ್ ಬೇಡ. ಒಟ್ಟಿನಲ್ಲಿ ದುರ್ಯೋಧನನ ಜೊತೆಗೂಡಿ ಅಭಿಮನ್ಯು ಇಡುವ ಮುಂದಿನ ಸ್ಟೆಪ್ ಮೇಲೆ ಎಲ್ಲರ ಕಣ್ಣಿದೆ ಅನ್ನೋದಂತೂ ಸುಳ್ಳಲ್ಲ.

LEAVE A REPLY

Please enter your comment!
Please enter your name here