Home Cinema ದರ್ಶನ್ & ನಿಖಿಲ್ ಮುನಿಸಿನ ಕದನಕ್ಕೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತಾ..! “ಕುರುಕ್ಷೇತ್ರ”ದ ಕಣದಿಂದ ಸಿಹಿ ಸುದ್ದಿ...

ದರ್ಶನ್ & ನಿಖಿಲ್ ಮುನಿಸಿನ ಕದನಕ್ಕೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತಾ..! “ಕುರುಕ್ಷೇತ್ರ”ದ ಕಣದಿಂದ ಸಿಹಿ ಸುದ್ದಿ ಸಿಕ್ಕರು ಅಭಿಮಾನಿಗಳಿಗೆ ಯಾಕೆ ಹೆದರಿಕೆ..!

2657
0
SHARE

ಕುರುಕ್ಷೇತ್ರದ ಆಡಿಯೋ ಬಿಡುಗಡೆ ದಿನ ನಿಕ್ಕಿಯಾದ ಬೆನ್ನಲ್ಲೇ, ಗಾಂಧಿನಗರದಲ್ಲಿ.. ಅಭಿಮಾನಿಗಳ ವಲಯದಲ್ಲಿ ಚರ್ಚೆಯೊಂದು ಶುರುವಾಗಿದೆ. ಅದುವೇ ನಿಕಿಲ್ ಹಾಗೂ ದರ್ಶನ್ ನಡುವಿನ ಮುನಿಸಿನ ಕಥೆ. ಹೌದು, ದರ್ಶನ್, ನಿಕಿಲ್ ಕುಮಾರ್ ಸ್ವಾಮಿ ಪಾತ್ರದ ಬಗ್ಗೆ ಅಸಮಾಧಾನಗೊಂಡಿರುವ ವಿಚಾರ, ಹಿಂದೆ ಸುದ್ದಿಯಾಗಿತ್ತು…

ಇಷ್ಟೇ ಅಲ್ಲ ಹತ್ತು ನಿಮಿಷ ಇರಬೇಕಿದ್ದ ನಿಕಿಲ್‌ರ ಅಭಿಮನ್ಯುವಿನ ಪಾತ್ರ ಅರ್ಧ ಘಂಟೆವರೆಗೂ ವಿಸ್ತರಿಸಿದ್ದಕ್ಕೆ ಮುನಿಸಿಕೊಂಡಿದ್ದಾರೆ ಅನ್ನೋದು ಚರ್ಚೆಯಾಗಿತ್ತು. ಕುರುಕ್ಷೇತ್ರ ಐವತ್ತನೇ ಸಿನಿಮಾ ಎಂದು ಒಪ್ಪಿಕೊಳ್ಳಲು ಖುದ್ದು ಡಿ ಬಾಸ್ ತಯಾರಿಲ್ಲ ಅನ್ನುವ ಸುದ್ದಿನೂ ಇದೇ ವೇಳೆ ಕೇಳಿ ಬಂದಿತ್ತು.ಇದೆಲ್ಲದ್ರ ನಡುವೆ…

ಇದೇ ಮುಸುಕಿನ ಮುನಿಸಿನ ಗುದ್ದಾಟಕ್ಕೆ ತುಪ್ಪ ಸುರಿದ ನಿರ್ಮಾಪಕ ಮುನಿರತ್ನ, ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆ ವೇಳೆ, ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ನಿಕಿಲ್ ಕೂಡಾ ಅಭಿಮಾನಿಗಳ ಮುಂದೆ ಗುಡುಗಿದ್ದರು…

ಹಾಗಾಗೇ, ಕುರುಕ್ಷೇತ್ರ ಹಾಡುಗಳು ಬಿಡುಗಡೆಯಾಗುವ ಸಮಯದಲ್ಲಿ ನಿಕಿಲ್ ಹಾಗೂ ದರ್ಶನ್ ಮುಖಾಮುಖಿಯಾದ್ರೆ ಏನಾಗುತ್ತೆ, ಏನಾಗಬಹುದು ಅನ್ನುವ ಕೂತುಹಲ ಇದೀಗ ಗಾಂಧಿನಗರ ಹಾಗೂ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇಷ್ಟೇ ಅಲ್ಲ ದರ್ಶನ್ ಹಾಗೂ ನಿಕಿಲ್ ಒಟ್ಟಿಗೆ ವೇದಿಕೆ ಹಂಚಿಕೊಳ್ತಾರಾ, ಇಲ್ವಾ.. ಅನ್ನುವ ಚರ್ಚೆನೂ ಶುರುವಾಗಿದೆ. ಮುನಿಸಿನ ಗುದ್ದಾಟದ ಮತ್ತೊಂದು ಎಪಿಸೋಡು ಶುರುವಾಗುತ್ತಾ ಅನ್ನುವ ಆತಂಕನೂ ಅಭಿಮಾನಿಗಳನ್ನ ಇದೀಗ ಕಾಡ್ತಿದೆ…

LEAVE A REPLY

Please enter your comment!
Please enter your name here