Home Cinema ದರ್ಶನ್ ಮತ್ತು ರಾಕ್‌ಲೈನ್ ವೆಂಕಟೇಶ್ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದರ ಹಿಂದಿದ್ಯಾ “ಮದಕರಿ” ಚಿತ್ರದ ಲಿಂಕ್..?! ಇನ್ನು...

ದರ್ಶನ್ ಮತ್ತು ರಾಕ್‌ಲೈನ್ ವೆಂಕಟೇಶ್ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದರ ಹಿಂದಿದ್ಯಾ “ಮದಕರಿ” ಚಿತ್ರದ ಲಿಂಕ್..?! ಇನ್ನು ತಡ ಮಾಡೋದೇ ಬೇಡ ಎಂದು “ಹೊರಟಿದ್ದೇಲ್ಲಿಗೆ”ದಾಸ..!

2954
0
SHARE

ದರ್ಶನ್.. ಸ್ಯಾಂಡಲ್‌ವುಡ್‌ನ ಸಾರಥಿ.. ಸದ್ಯ ಕುರುಕ್ಷೇತ್ರದ ಕದನಕ್ಕೆ ಸಜ್ಜಾಗಿರುವ ದಾಸ. ಆ ಒಂದು ಶಕ್ತಿಪೀಠಕ್ಕೆ ಭೇಟಿಕೊಟ್ಟಿದ್ದಾರೆ. ದಚ್ಚು ಆ ಶಕ್ತಿಪೀಠಕ್ಕೆ ದಿಢೀರ್ ಭೇಟಿ ಕೊಟ್ಟಿರೋದು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಾಗೂ ಡಿ-ಫ್ಯಾನ್ಸ್‌ಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನ್ ಮಾಡಿದ್ರು ಅರ್ಥ ಪೂರ್ಣವಾಗಿ ಮಾಡುವ ನಟ. ಹೆಚ್ಚಾಗಿ ಪ್ರಾಣಿ ಪ್ರೀತಿಯ ಜೊತೆಗೆ ಆಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಡುವ ಬಾಕ್ಸಾಫೀಸ್ ಸುಲ್ತಾನಾ, ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿಕೊಟ್ಟಿದ್ದಾರೆ.

ಇಂದು ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆಯಲ್ಲಿ ಪಾಲ್ಗೊಂಡಿದ್ದಾರೆ.ಹೌದು.. ವಿಶ್ವ ವಿಖ್ಯಾತ ದಸರಾ ಮಯೋತ್ಸವದ ಸಂದರ್ಭದಲ್ಲಿ ಕೋಟೆ ನಾಡಿನಲ್ಲಿ ನಡೆಯುವ ಮುರುಘಾ ಶರಣ ಸಂಸ್ಕ್ರೃತಿ ಉತ್ಸವದ ಸೌಹಾರ್ಧ ನಡಿಗೆ, ಶರಣ ಕಾರ್ಯಕ್ರಮಕ್ಕೆ ದರ್ಶನ್ ಚಾಲನೆ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ರು. ಈ ವೇಳೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ಶ್ರೀನಿವಾಸ್ ಮೂರ್ತಿ ದಚ್ಚುಗೆ ಸಾಥ್ ನೀಡಿದ್ರು..

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಚ್ಚು, ನಗರದ ಗಾಂಧಿ ವೃತ್ತದಿಂದ ಮುರುಘಾಮಠದವರೆಗೂ ಕಾಲ್ನಡಿಗೆಯಲ್ಲಿ ಮಠಕ್ಕೆ ಆಗಮಿಸಿದ್ರು. ದರ್ಶನ್ ಆಗಮನದಿಂದ ಕಾರ್ಯಕ್ರಮದ ಈ ಭಾರಿ ರಂಗೇರಿತ್ತು.ಇನ್ನು ದರ್ಶನ್ ಮಠಕ್ಕೆ ಬರುತ್ತಿದ್ದಂತೆ ಮಠದ ಆನೆ ಗಜರಾಜನನ್ನ ಐರಾವತ ಭೇಟಿಮಾಡಿದ್ರು.

ಮಠದ ಆನೆ ನೋಡಿ ಖುಷಿ ಪಟ್ಟ ದರ್ಶನ್ ಮಾವುತರನ್ನು ಮಾತನಾಡಿಸಿ, ಆನೆಗೆ ಏನು ತಿಂಡಿ ಕೊಟ್ಟಿದ್ದೀರಾ ಎಂದು ವಿಚಾರಿಸಿದ್ರು. ಬಳಿಕ ಆನೆಯ ದಂತವನ್ನು ಕೈಯಿಂದ ಮುಟ್ಟಿ ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದೀರಾ ಎಂದು ಮಾವುತನಿಗೆ ಮೆಚ್ಚುಗೆಯನ್ನು ನೀಡಿದಿದ್ರು.ಇನ್ನು ದರ್ಶನ್ ರನ್ನು ನೋಡಲು ಮಠದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು.

ಈ ವೇಳೆ ದರ್ಶನ್ ಅಭಿಮಾನಿಯೊಬ್ಬರ ದರ್ಶನ್ ಮೇಲೆ ಗರಂ ಆದ್ರು. ಗಲಾಟೆ ಮಾಡಬಾರದು ಆವಾಗಿನಿಂದ ನಿನ್ನದೇ ಗಲಾಟೆ ಎಂದು ಖಡಕ್ ವಾರ್ನಿಂಗ್ ಕೊಟ್ರು.ಹೌದು, ಇನ್ನು ಡಾ. ಶಿವಮೂರ್ತಿ ಶಿವಾಚಾರ್ಯರ ಸ್ವಾಮೀಜಿಗಳನ್ನು ಭೇಟಿಮಾಡಿ. ಅವರ ಆಶೀರ್ವಾದ ಪಡೆದುಕೊಂಡ್ರು. ಇತ್ತಿಗೆಷ್ಟೇ ವಾಲ್ಮೀಕಿ ಜನಾಗಂಗದ ಪ್ರಸನ್ನಾನಂದ ಶ್ರೀಗಳು ದರ್ಶನ್ ವಿರುದ್ದ ಹರಿಹಾದ್ದಿದ್ರು. ಯಾವುದೇ ಕಾರಣಕ್ಕೂ ಮದಕರಿ ನಾಯಕರ ಸಿನಿಮಾ ಮಾಡಬಾರದೆಂದು ಗುಡುಗಿದ್ರು.

ಇಷ್ಟೆಲ್ಲಾ ಬೆಳವಣಿಗೆಗಳಾಗಿ ಒಂದು ವಾರ ಕಳೆಯುವುದರ ಒಳಗಾಗಿ ದರ್ಶನ್ ಮರುಘಾ ಶರಣರನ್ನು ಭೇಟಿ ಮಾಡಿರೋದು ಮತ್ತು ಶರಣ ಸಂಸ್ಕ್ರೃತಿ ಉತ್ಸವದ ಸೌಹಾರ್ಧ ನಡಿಗೆಯಲ್ಲಿ ಪಾಲ್ಗೋಂಡಿರೋದು ತೀವ್ರ ಸಂಚಲ ಸೃಷ್ಠಿಯಾಗುವಂತೆ ಮಾಡಿದೆ. ಈ ಭೇಟಿ ಹಿಂದೆ ಮದಕರಿ ನಾಯಕನ ಸಿನಿಮಾ ವಿಚಾರ ಇದ್ದಿರಬಹುದೆಂಬ ಅನುಮಾನ ಮೂಡುವಂತೆ ಮಾಡ್ತಿದೆ.ಈ ವೇಳೆ ಮಾಧ್ಯಮದರನ್ನು ಉದ್ದೇಶಿಸಿ ಮಾತನಾಡಿದ ದಚ್ಚು.

ಚಿತ್ರ ದುರ್ಗದಲ್ಲಿದ್ದು ಮದಕರಿ ನಾಯಕ ಚಿತ್ರದ ಬಗ್ಗೆ ಮಾತನಾಡುವುದು ಬೇಡ, ಚಿತ್ರದ ಬಗ್ಗೆ ಮಾತನಾಡಲು ಪ್ರತ್ಯೇಕ ವೇದಿಕೆ ಸೃಷ್ಟಿಸುತ್ತೇವೆ, ಚಿತ್ರದ ಬಗ್ಗೆ ಏನು ಮಾತನಾಡಲ್ಲ ಎಂದು ರಾಜ್ಯದ ಜನತೆಗೆ ದಸರಾ ಶುಭಾಷಯಗಳನ್ನು ಕೋರಿದ್ರು.ಇನ್ನು ರಾಕ್ ಲೈನ್ ವೆಂಕಟೇಶ್ ಚಿತ್ರದ ಬಗ್ಗೆ ಮಾತನಾಡಲು ನಿರಾಕರಿಸಿದ್ರು. ದಸರಾ ಆಚರಣೆ ಮಾಡಲು ಚಿತ್ರದುರ್ಗಕ್ಕೆ ಬಂದಿದ್ದೇವೆ. ದಸರಾ ಹಬ್ಬ ಮಾಡೋಣ, ಮುರುಘಾ ಶರಣರು ಜಾಗೃತಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಲು ಕರೆಸಿದ್ದಿದ್ದಾರೆ ಎಂದಷ್ಟೇ ಹೇಳಿದ್ರು.

ಇನ್ನು ಮದಕರಿ ನಾಯಕ ಚಿತ್ರದ ಬರಹಗಾರ ವೇಣು ಮಾತನಾಡಿ. ಆ ಜಾತಿ ಈ ಜಾತಿ ಮುಖ್ಯವಲ್ಲ.. ಮಾನವ ಜಾತಿ ಮುಖ್ಯವಾದದ್ದು ಮಾತು ಸರ್ವಕಾಲಿಕ ಸತ್ಯ. ನಿಮ್ಮೆಲ್ಲರ ಬೆಂಬಲದಿಂದ ಚಿತ್ರದುರ್ಗದ ಮದಕರಿ ನಾಯಕನ ಸಿನಿಮಾದ ಕಥೆಯನ್ನು ಕಟ್ಟುಕೋಡುವುದುದಾಗಿ ಹೇಳಿದ್ರು. ಈ ಮೂಲಕ ಸಾಕಷ್ಟು ದಿನಗಳಿಂದ ಇದ್ದ ಮದಕರಿ ನಾಯಕ ಸಿನಿಮಾದ ವಿವಾದಕ್ಕೆ ಸೂಕ್ಷ್ಮವಾಗಿ ಉತ್ತರ ನೀಡುವ ಪ್ರಯತ್ನ ಮಾಡಿದ್ರು. ನಾವು ಏನ್ ಮಾಡ್ತಿದ್ದೀವಿ ಎನ್ನುವುದು ನಿಮ್ಮಗೆಲ್ಲಾ ಗೊತ್ತಿದ್ದೆ.

ಅದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ, ಚಿತ್ರದುರ್ಗದ ಎಲ್ಲರ ಆರ್ಶೀವಾದ, ಮುರುಘಾಶರಣರ ಬೆಂಬಲವಿರಲಿ ಅಂದ್ರು ವೇಣು..ಮದಕರಿ ನಾಯಕ ಚಿತ್ರಕ್ಕೆ ಸಂಬಂಧಪಟ್ಟಂತೆ ಸ್ಟಾರ್ ನಟರ ನಡುವೆ ವಾದ- ವಿವಾದ ನಡೆಯುತ್ತಿರವುವಾಗಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮದಕರಿ ನಾಯಕ ಚಿತ್ರತಂಡ ಚಿತ್ರದುರ್ಗಕ್ಕೆಕ ಭೇಟಿಕೊಟ್ಟಿರೋದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಮದಕರಿ ನಾಯಕನ ಪಾತ್ರವನ್ನು ಯಾರು ಮಾಡಬೇಕು ಎಂಬ ವಿಷಯವಾಗಿ ರಾಜ್ಯದಾದ್ಯಂತ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವಾಗ್ಲೇ, ರಾಕ್‌ಲೈನ್ ಪ್ರೋಡಕ್ಷನ್‌ನಲ್ಲಿ ಕೋಟೆನಾಡಿನ ಪಾಳೇಗಾರ ವೀರಮದಕರಿ ನಾಯಕ ಚಿತ್ರ ಸೆಟ್ಟೇರಲು ಸಜ್ಜಾಗಿದೆ ಅನ್ನೋಕ್ಕೆ ಮುರುಘಾ ಮಠದಲ್ಲಿ ನಡೆದ ಇಂದಿನ ಶರಣ ಸಂಸ್ಕೃತಿ ಉತ್ಸವದ ಆರಂಭದ ವೇದಿಕೆಯಲ್ಲಿ ಉತ್ತರ ಸಿಕ್ಕಂತಾಗಿದೆ.ಅದೇನೇ ಇದ್ರು.. ದರ್ಶನ್ ಕೋಟೆಯ ನಾಡಿಗೆ ಭೇಟಿಕೊಟ್ಟಿರೋದು ಅಭಿಮಾನಿಗಳಲ್ಲಿ ಕೋಟಿ ಪ್ರಶ್ನೆಗಳನ್ನು ಹುಟ್ಟುಹಾಕ್ತಿದ್ದು, ಮದಕರಿನಾಯಕನ ಹವಾ ಮುಂದಿನ ದಿನಗಳಲ್ಲಿ ಜೋರಾಗುವ ಸೂಚನೆ ಸಿಕ್ಕಂತಾಗಿರೋದು ಮಾತ್ರ ಸುಳ್ಳಲ್ಲ..

 

LEAVE A REPLY

Please enter your comment!
Please enter your name here