Home Cinema ದರ್ಶನ್ ಹೆಸರಿನಲ್ಲಿ ಮಾಡಿದ್ದ್ಯಾರು HDKಗೆ ಅವಮಾನ..! ಸಿ.ಎಂ.ಗೆ ನಕಲಿ ದರ್ಶನ್ ಮಾಡಿದ್ದು ಅದೆಂಥಾ ಅವಹೇಳನ..!

ದರ್ಶನ್ ಹೆಸರಿನಲ್ಲಿ ಮಾಡಿದ್ದ್ಯಾರು HDKಗೆ ಅವಮಾನ..! ಸಿ.ಎಂ.ಗೆ ನಕಲಿ ದರ್ಶನ್ ಮಾಡಿದ್ದು ಅದೆಂಥಾ ಅವಹೇಳನ..!

704
0
SHARE

ಸೋಶಿಯಲ್ ಮೀಡಿಯಾಗಳೂ ಎಷ್ಟು ಉಪಯೋಗಕಾರಿನೋ ಅಷ್ಟೇ ಹಾರ್ಮ್ ಫುಲ್ ಕೂಡ..ನಾವು ಸುಮ್ಮನ್ನಿದ್ರು ಬೇರೆಯವರು ಕ್ರಿಯೇಟ್ ಮಾಡೋ ನ್ಯೂ ಸೆನ್ಸ್ ಅಸಲಿ ಖಾತೆದಾರರ ಹೆಸರಿಗೆ ಬಸಿ ಬಳಿಯುತ್ತೆ..ಅದ್ರಲ್ಲೂ ಫೇಸ್‌ಬುಕ್ ಬಂದಾಗಿನಿಂದ ನಕಲಿ ಅಂಕೌಂಟ್‌ಗಳ ಹಾವಳಿ ಹೆಚ್ಚಾಗಿದೆ…ಬೇರೆಯವರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವ್ರ ಹೆಸರಿಗೆ ಮಸಿ ಬಳಿಯೋ ಕೆಲಸ ಮಾಡಲಾಗುತ್ತಿದೆ..ನಟ-ನಟಿಯರು ಇದಕ್ಕೆ ಹೊರತಲ್ಲ..ಇದೀಗ ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ್‌ಗೂ ಫೇಕ್ ಅಕೌಂಟ್ ಬಿಸಿ ತಟ್ಟಿದೆ.

ಸ್ಯಾಂಡಲ್‌ವುಡ್ ಬಾಕ್ಸ್ ಆಪೀಸ್ ಸುಲ್ತಾನ..ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ ಹೆಸರಲ್ಲಿ ಕೆಲ ಪುಂಡರು ಫೇಖ್ ಅಕೌಂಟ್ ಕ್ರಿಯೇಟ್ ಮಾಡಿ ದಾಸನ ಹೆಸರಿಗೆ ಮಸಿ ಬಳಿಯೋ ಕೆಲಸಕ್ಕೆ ಕೈ ಹಾಕಿದ್ದಾರೆ..ದರ್ಶನ್ ತೂಗುದೀಪ ಎಂದು ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ..ದರ್ಶನ್ ಹೆಸರಲ್ಲಿ ಅವಹೇಳನ ಕಾರಿ ಪೋಸ್ಟ್ ಹಾಕಿದ್ದಾರೆ.

ಬರೀ ಪೋಸ್ಟ್ ಹಾಕೋದಲ್ಲ ಈ ಕಿಡಿ ಗೇಡಿಗಳು ಸಿಎಂ ಹೆಚ್‌ಡಿ ಕುಮಾರಸ್ವಾಮಿಯನ್ನ ಟಾರ್ಗೆಟ್ ಮಾಡಿದ್ದಾರೆ…ಎಸ್,,ಹೆಚ್‌ಡಿಕೆಎಯನ್ನು ಟಾರ್ಗೆಟ್ ಮಾಡಿರುವ ಪೋಸ್ಟ್ ಸಖತ್ ಚರ್ಚೆಗೆ ಗ್ರಾಸವಾಗಿದೆ…..ಹೆಚ್‌ಡಿಕೆ ಪೋಟೋ ಹಾಕಿ,,ಈ ಸಲ ಕಪ್ ನಮ್ದೆ, ಕಪ್ ನಮ್ದೆ ಅಂತಿದವ್ರು ಆ ಕಪ್ಪು ಇದು ಅಂತ ಹೇಳೋಕೆ ಏನಾಗಿತ್ರೋ ಎಂದು ಕ್ಯಾಪ್‌ಕ್ಷನ್ ಹಾಕಿ ಟ್ರೋಲ್ ಮಾಡಿದ್ದಾರೆ. ಇದು ಹೆಚ್‌ಡಿಕೆ ಅಭಿಮಾನಿಗಳ ಪಿತ್ತ ನೆತಿಗೇರಿಸುವಂತೆ ಮಾಡಿದೆ.. ದರ್ಶನ್ ಈ ರೀತಿ ಮಾಡ್ತಾರ ಎಂದು ಹುಡುಕಲು ಹೊರಟಾಗ ಗೊತಾಗಿದ್ದು ಇದು ದರ್ಶನ್ ಹೆಸರಲ್ಲಿರೋ ಫೇಕ್ ಅಕೌಂಟ್ ಎಂದು. ಬರೀ ಪೋಸ್ಟ್ ಅಲ್ಲ ಅವಹೇಳನಕಾರಿ ಕಮೆಂಟ್‌ನ್ನ ಸಿಎಂ ಮೇಲೆ ಮಾಡಲಾಗಿದೆ..

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹೆಚ್‌ಡಿಕೆ ಅಭಿಮಾನಿಗಳು ಸೀದಾ ಕಮೀಷನರ್ ಆಫೀಸ್ ಮೆಟ್ಟಿಲೇರಿದ್ದಾರೆ.. ಎಸ್..ಬೆಂಗಳೂರು ಜೆಡಿಎಸ್ ಪಕ್ಷದ ವೈಸ್ ಪ್ರೆಸಿಡೆಂಟ್ ಅರುಣ್ ಕುಮಾರ್ ಹಾಗು ಸಂಘಡಿಗರು ಇದಕ್ಕೆ ಅಂತ್ಯ ಹಾಡಲು ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಕಮೀಷನರ್ ಸುನೀಲ್ ಕುಮಾರ್‌ಗೆ ಬಳಿ ಹೋಗಿದ್ದಾರೆ,, ದೂರು ದಾಖಲಿಸಿದ್ದಾರೆ..ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ..ಕಮೀಷನರ್ ಸುನೀಲ್ ಕುಮಾರ್ ಕೂಡ ಬೇಗ ಆಕ್ಷನ್ ತೆಗೆದುಕೊಳ್ಳುದರ ಭರವಸೆ ನೀಡಿದ್ದಾರೆ.

ತಾವಾಯ್ತು ತಮ್ಮ ಸಿನಿಮಾ, ಪಾರ್ಮ್ ಹೌಸ್ ಆಯ್ತು ಅಂತ ಬ್ಯುಸಿಯಾಗಿರೋ ಚಾಲೆಂಜಿಂಗ್ ಸ್ಟಾರ್ ಹೆಸರಿಗೂ ಕೂಡ ಹೇಗೆ ಮಸಿ ಬಳಿಯೋ ಕೆಲಸ ಮಾಡಿದ್ದಾರೆ ಅಂತ…ಅದು ಡಿ ಬಾಸ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡೋ ಧೈರ್ಯ ಮಾಡಿದ್ದಾರೆ ಅಂದ ಮೇಲೆ ಉಳಿದವ್ರನ್ನ ಈ ಪುಂಡರು ಬಿಡ್ತಾರಾ…

LEAVE A REPLY

Please enter your comment!
Please enter your name here