Home Cinema ದರ್ಶನ್ 55ನೇ ಅವತಾರ ಯಾವುದು, ಬಲ್ಲಿರೇನು..! ಅವ್ರಿಗೆ ದರ್ಶನ್ ಪುತ್ರ ದಾಸನಾಗಿದ್ದಾನಂತೆ, ಹೌದೇನು..!

ದರ್ಶನ್ 55ನೇ ಅವತಾರ ಯಾವುದು, ಬಲ್ಲಿರೇನು..! ಅವ್ರಿಗೆ ದರ್ಶನ್ ಪುತ್ರ ದಾಸನಾಗಿದ್ದಾನಂತೆ, ಹೌದೇನು..!

659
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಕನ್ನಡ ಚಿತ್ರರಂಗದ ಆರಡಿ ಕಟೌಟ್. ಜೀವನದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಂದ್ರು ಅಭಿಮಾನಿಗಳ ಅಭಿಮಾನದಿಂದ ಫಿನಿಕ್ಸ್ ಪಕ್ಷಿಯಂತೆ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಲ್ಲುವ ನಯಾ ಯಜಮಾನ.

ಸದ್ಯ ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬಿಝೀಯಾಗಿರುವ ದಚ್ಚು, ಹೊಸ ಸಿನಿಮಾ ಮೂಲಕ ಪಾಶುಪಥಾಸ್ತ್ರ ಹಿಡಿಯಲು ಸಜ್ಜಾಗಿದ್ದಾರೆ.ಯಸ್.. ದರ್ಶನ್ ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳ ಬಿಡುಗಡೆಯನ್ನು ಎದುರು ನೋಡ್ತಿದ್ದಾರೆ. ಈಗೀರುವಾಗ್ಲೇ ರಾಬರ್ಟ್ ಹಾಗೂ ಗಂಡುಗಲಿ ಮದಕರಿ ನಾಯಕ ಚಿತ್ರಗಳಲ್ಲಿ ದಾಸ ನಟಿಸೋದಕ್ಕೆ ಅಣಿಯಾಗ್ತಿದ್ದಾರೆ.

ಆ ಚಿತ್ರಗಳ ಪ್ರೀ-ಪೋಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಈ ಗ್ಯಾಪ್‌ನಲ್ಲಿ ದಾಸ ಭಕ್ತಗಣಕ್ಕೊಂದು ಸಖತ್ ಥ್ರಿಲ್ ನೀಡುವ ಸುದ್ದಿ ಕೇಳಿಬಂದಿದ್ದು. ದರ್ಶನ್ ನಟಿಸಲಿರುವ ೫೫ನೇ ಸಿನಿಮಾದ ಟೈಟಲ್ ಫಿಕ್ಸ್ ಆಗಿದ್ದು. ಪಾಶುಪಥಾಸ್ತ್ರ ಎಂಬ ಕ್ಯಾಚಿ ಟೈಟಲ್ ಮೂಲಕ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸುತ್ತಿದೆ.

ಇನ್ನು ರಾರ್ಬಟ್ ಮತ್ತು ಗಂಡುಗಲಿ ಮದಕರಿ ನಾಯಕ ಚಿತ್ರಗಳ ನಂತ್ರ ಮತ್ತೊಂದು ಹೈ ಬಜೆಟ್ ಸಿನಿಮಾ ಇದಾಗಿರಲಿದ್ದು. ಪಾಶುಪಥಾಸ್ತ್ರ ಎಂಬ ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ದೊಡ್ಡ ಸಂಚಲ ಸೃಷ್ಟಿಸುತ್ತಿದೆ. ಅಲ್ಲದೆ ಈ ಚಿತ್ರಕ್ಕೆ ನವ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದು, ಹೊಸ ನಿರ್ಮಾಪಕನೂ ಗಾಂಧೀನಗರಕ್ಕೆ ಈ ಮೂಲಕ ಎಂಟ್ರಿಕೊಡಲಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದ್ದು.

ದರ್ಶನ್ ಹುಟ್ಟುಹಬ್ಬದಂದು ಚಿತ್ರದ ಸಂಪೂರ್ಣ ಮಾಹಿತಿ ಹೊರಬೀಳಲಿದೆ.ಹೌದು.. ದರ್ಶನ್ ಸದಾ ಸಿನಿಮಾ ಶೂಟಿಂಗ್ ಅಂತ ಒಂದಿಲ್ಲೊಂದು ಕೆಲಸಗಳಲ್ಲಿ ಬಿಝೀಯಾಗಿರುತ್ತಾರೆ. ಅವರನ್ನು ನೋಡಲು, ಭೇಟಿಯಾಗಲು ದೂರದ ಊರುಗಳಿಂದ ಡಿ- ಫ್ಯಾನ್ಸ್ ರಾಜರಾಜೇಶ್ವರಿ ನಗರದ ದಾಸನ ಮನೆಮುಂದೆ ಸದಾ ಜಮ್ಮಾಹಿಸುತ್ತಿತ್ತಾರೆ. ಈ ವೇಳೆ ದಾಸ ಇಲ್ಲದಿದ್ರು ಅವರನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ಆಗ ಚೋಟಾ ಚಾಲೆಂಜಿಂಗ್ ಸ್ಟಾರ್ ವಿನೀಶ್ ದಾಸನ ಭಕ್ತರನ್ನು ಬಂದು ಭೇಟಿ ಮಾಡ್ತಾರೆ. ಅವರು ತಂದಿರುವ ಗಿಫ್ಟ್‌ಗಳನ್ನು ಸ್ವೀಕರಿಸುತ್ತಾರೆ. ಅವರು ಅಲ್ಲಿಂದ ಹೋಗುವ ವರೆಗೂ ಅವರನ್ನು ನೋಡ್ತಾ ನಿಂತಿತ್ತಾರಂತೆ. ಸಹಾಯಕರನ್ನು ಕರೆದು ತಂದೆ ಮನೆಯಲ್ಲಿ ಇಲ್ಲ ಎಂದು ಸೂಚಿಸಲು ತಿಳಿಸುವ ವಿನೀಶ್ ನೋಡಿ ಅಭಿಮಾನಿಗಳು ಸಂತಸ ಪಡ್ತಿದ್ದಾರೆ.

ಅಪ್ಪ ಮನೆಯಲ್ಲಿಲ್ಲದಿದ್ರು ಅಪ್ಪನ ಗುಣವನ್ನು ಪರಿಪಾಲಿಸುತ್ತಿರುವ ಲಿಟಲ್ ಸ್ಟಾರ್ ಸ್ವಭಾವಕ್ಕೆ ದರ್ಶನ್ ಫ್ಯಾನ್ಸ್ ಫಿದಾ ಆಗಿದ್ದು. ನೆಚ್ಚಿನ ನಟನ ಜೊತೆಗೆ ವಿನೀಶ್‌ಗೂ ಸಹ ಫ್ಯಾನ್ಸ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಗುಣಕ್ಕೆ ಬೇಷ್ ಗಿರಿಯನ್ನು ನೀಡ್ತಿದ್ದಾರೆ.ಅಷ್ಟೇ ಅಲ್ಲದೆ, ವಿನೀಶ್ ಈಗಾಲ್ಲೇ ಚಕ್ರವರ್ತಿ ಮತ್ತು ಯಜಮಾನ ಚಿತ್ರಗಳಿಗೆ ಬಣ್ಣ ಹಚ್ಚಿದ್ದು. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಕಿಡ್ ಆಗಿರುವ ಜೊತೆಗೆ ಲಿಟಲ್ ಸ್ಟಾರ್ ಆಗಿ ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇದರ ಜೊತೆಗೆ ಮುಗ್ದ ನಗುವಿನ ಮತ್ತು ಅಭಿಮಾನಿಗಳ ಅಭಿಮಾನ ಎಂಥದ್ದು ಎಂಬುದನ್ನು ಚಿಕ್ಕವಯಸ್ಸಿನಲ್ಲೇ ಅರಿತಿರುವ ವಿನೀಶ್ ಗುಣಕ್ಕೆ ಏನ್ ಅನ್ನಬೇಕು ನೀವೇ ಹೇಳಿ.ಅದೇನೇ ಇದ್ರು. ಒಂದು ವರ್ಷಕಳೆದ್ರು ದರ್ಶನ್ ಸಿನಿಮಾ ರಿಲೀಸ್ ಆಗದೆ ಕಂಗಾಲಾಗಿದ್ದ ಅಭಿಮಾನಿಗಳು. ಡಿ- ಬಾಸ್ ಟೈಟಲ್ ಕೇಳು ಫುಲ್ ಖುಷ್ ಆಗಿದ್ದು. ತಂದೆಗೆ ತಕ್ಕ ಮಗನಾಗಿ ಬೆಳೆಯುತ್ತಿರುವ ವಿನೀಶ್ ಸ್ವಭಾವಕ್ಕೆ ಭಲೆ ಭಲೆ ಅಂತಿದ್ದಾರೆ.

ಮುಂದಿನ ವರ್ಷ ದಾಸ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕಣ್ತುಂಬಿಕೋಳ್ಳಲ್ಲು ಕಾತುರದಿಂದ ಕಾದುಕುಳಿತ್ತಿದ್ಧಾರೆ. ಹಾಗಾಗಿನೇ ಮುಂದಿನ ವರ್ಷ ಡಿ- ಬಾಸ್ ಪರ್ವ ಆಚರಿಸುವ ಪ್ಲಾನ್ ಮಾಡ್ತಿದ್ದಾರೆ ಅಭಿಮಾನಿಗಳು. ಅದೇ ಅಲ್ವ ಡಿ ಫಾರ್ ದರ್ಶನ್ ಹವಾ ಅಂದ್ರೆ..

LEAVE A REPLY

Please enter your comment!
Please enter your name here