Home Cinema ದರ್ಶನ್ V/S ಕುಮಾರಣ್ಣ..! ಇದು ದಶಕದ ಹಗೆತನ..! ಗೊತ್ತಾ..! 10 ವರ್ಷದಿಂದ ನಡೆಯುತ್ತಿದೆ ಇಬ್ಬರ...

ದರ್ಶನ್ V/S ಕುಮಾರಣ್ಣ..! ಇದು ದಶಕದ ಹಗೆತನ..! ಗೊತ್ತಾ..! 10 ವರ್ಷದಿಂದ ನಡೆಯುತ್ತಿದೆ ಇಬ್ಬರ ಕದನ..!

2730
0
SHARE

ದರ್ಶನ್.. ಕನ್ನಡ ಚಿತ್ರರಂಗದ ಛಾಲೆಂಜಿಂಗ್ ಸ್ಟಾರ್. ಸಿನಿಮಾವನ್ನೇ ಉಸಿರಾಗಿಸಿ.. ಅಭಿಮಾನಿಗಳನ್ನೇ ದೇವರನ್ನಾಗಿಸಿರುವ ನಟ ಅಂದ್ರೆ ಅದು ದರ್ಶನ್. ಇಂಥಾ ದರ್ಶನ್.. ಹೆಸರು ಕೇಳಿದ್ರೇ ಸಾಕು ಸಿ.ಎಂ.ಕುಮಾರಸ್ವಾಮಿ ರಕ್ತ ಕೊತ ಕೊತ ಕುದಿಯುತ್ತೆ.ಯಸ್, ಮಂಡ್ಯ ಅಖಾಡ ಧಗಧಗಿಸುತ್ತಿದೆ. ತೀವೃ ಕೂತುಹಲನೂ ಕೆರಳಿಸಿದೆ.

ಇದ್ರ ನಡುವೆ ದರ್ಶನ್ ವರ್ಸಸ್ ಕುಮಾರಸ್ವಾಮಿ ಅನ್ನುವ ವಾತಾವರಣನೂ ನಿರ್ಮಾಣವಾಗಿದೆ. ಹೌದು. ಇದು ಬರೀ ಸುಮಕ್ಕ ಹಾಗೂ ನಿಕಿಲ್ ನಡುವಿನ ಯುದ್ಧವಾಗಿ ಅಷ್ಟೇ ಇದೀಗ ಉಳಿದಿಲ್ಲ. ಇದು, ಕುಮಾರಣ್ಣ ಹಾಗೂ ದರ್ಶನ್ ನಡುವಿನ ಯುದ್ಧನೂ ಹೌದು. ಅಷ್ಟಕ್ಕೂ ಕುಮಾರಸ್ವಾಮಿ ಹಾಗೂ ದರ್ಶನ್ ಇಬ್ಬರದ್ದು, ಇದೆಂಥಾ ಹಗೆತನ.. ಇದೆಂಥಾ ಯುದ್ಧ.. ಇಂಥಹದ್ದೊಂದು ಪ್ರಶ್ನೆಗುತ್ತರ ಹುಡುಕಲು ಹೊರಟ್ರೆ ಹತ್ತು ವರ್ಷದ ಇತಿಹಾಸದ ಪುಟಗಳೂ ಕಣ್ಮುಂದೆ ಬಂದು ಹೋಗುತ್ವೆ. ಹೌದು, ನಿಮಗೆ ಗೊತ್ತಿರಲಿ, ದರ್ಶನ್ ಹಾಗೂ ದಳಪತಿ ನಡುವಿನ ಕದನ ಇಂದು ನಿನ್ನೆಯದಲ್ಲ. ಇದಕ್ಕೆ ಭರ್ತಿ ಒಂದು ದಶಕದ ಇತಿಹಾಸವಿದೆ.

ಯಸ್.. ಅದು, ೨೦೦೯ರ ಕಾಲ. ಆಗ.. ಲೋಕಸಭಾ ಚುನಾವಣೆಯಲ್ಲಿ ರೆಬೆಲ್ ಸ್ಟಾರ್ ಕಣಕ್ಕಿಳಿದಿದ್ದರು. ಅದು. ಮಂಡ್ಯದಿಂದ. ಇನ್ನೂ ಅಂಬರೀಶ್ ಪ್ರತಿಸ್ಪರ್ಧಿಯಾಗಿ ಅಂದು ಜೆಡಿಎಸ್‌ನಿಂದ ಚೆಲುವರಾಯಸ್ವಾಮಿ ಇದ್ದರು. ಆಗ, ದರ್ಶನ್ ಜೆಡಿಎಸ್ ವಿರುದ್ಧ ನಿಂತಿದ್ದರು. ಅಪ್ಪಾಜಿ ಮೇಲೀನ ಪ್ರೀತಿಗೆ ತುಂಬು ಪ್ರೀತಿಯಿಂದ ಅಂಬರೀಶ್ ಪರ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು. ವಿಪರ್ಯಾಸ ಅಂದ್ರೆ ಅಂಬರೀಶ್ ಗತ್ತು ಹಾಗೂ ದರ್ಶನ್ ಪ್ರಚಾರದ ತಾಖತ್ತಿನ ನಡುವೆಯೂ ಅಂದು ಅಂಬಿಗೆ ಸೋಲಾಗಿತ್ತು.ಇನ್ನೂ ಕಳೆದ ವಿಧಾನಸಭೆ ಚುನಾವಣೆಯಲ್ಲೂ ದರ್ಶನ್ ಒಲವಿದ್ದಿದ್ದು ಕಾಂಗ್ರೆಸ್ ಪರವೇ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಸಿದ್ಧರಾಮಯ್ಯ ಪರ ಮತಯಾಚಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತಿದ್ದ ಸಿದ್ದರಾಮಯ್ಯ ಪರ ಭರ್ಜರಿಯಾಗಿಯೇ ದರ್ಶನ್ ಮತಬೇಟೆಯಾಡಿದ್ದರು. ಇಲ್ಲೂ ಸಿದ್ದುಗೆ ಸೋಲಾಗಿತ್ತು. ಸಿದ್ದುಗೆ ಚುನಾವಣೆಯಲ್ಲಿ ಸೋಲಾಗಿದ್ದರೂ, ಸಿದ್ಧು ಪರ ದರ್ಶನ್ ಅವತ್ತು ನಿಂತ ಪರಿಗೆ ಅಂದು ಜೆ.ಡಿ.ಎಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ್ಲವೇ ಸೃಷ್ಠಿಯಾಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ನಾಗನಹಳ್ಳಿಯಲ್ಲಿ ಜೆ.ಡಿ.ಎಸ್ ಕಾರ್ಯಕರ್ತರಿಂದ ದರ್ಶನ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ ದರ್ಶನ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿನೂ ಅಂದು ನಡೆದಿತ್ತು.

ಸಿದ್ಧರಾಮಯ್ಯ ಜೊತೆಗಿನ ದರ್ಶನ್ ಆತ್ಮೀಯತೆ, ಅವತ್ತೂ ಹಾಗೂ ಇವತ್ತು ಕುಮಾರಣ್ಣಗೆ ಕರಗಿಸಿಕೊಳ್ಳಲಾಗ್ತಿಲ್ಲ ಅನ್ನುವದು ಇದೀಗ ಚರ್ಚೆಯಾಗ್ತಿರುವ ವಿಷಯ. ಇದೇ ಕಾರಣ ಸಿ.ಎಂ.ಕುಮಾರಸ್ವಾಮಿ ದರ್ಶನ್ ವಿರುದ್ಧ ಮೇಲಿಂದ ಮೇಲೇ ಹರಿಹಾಯ್ತಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.ಅಂದ ಹಾಗೇ ಇನ್ನೂ.. ದರ್ಶನ್.. ಕಾಂಗ್ರೆಸ್‌ನ ಹೊರ‍್ತು ಪಡಿಸಿದ್ರೆ, ಪ್ರಚಾರ ಮಾಡಿದ್ದು ಬಿ.ಜೆ.ಪಿ ಅಭ್ಯರ್ಥಿಗಳ ಪರ. ಹೌದು, ದರ್ಶನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಪರ ಪ್ರಚಾರ ಮಾಡಿದ್ದರು. ಬರೀ ಸಂದೇಶ್ ಸ್ವಾಮಿಯಷ್ಟೇ ಅಲ್ಲ ಪಿ.ಸಿ.ಮೋಹನ್ ಸೇರಿ ಇನ್ನುಳಿದ ಕೆಲ ಅಭ್ಯರ್ಥಿಗಳ ಪರನೂ ದರ್ಶನ ಪ್ರಚಾರ ಮಾಡಿದ್ದರು.

ಆದ್ರೆ ಒಂದೇ ಒಂದು ಬಾರಿಯೂ ಇಲ್ಲೀತನ್ಕ ದರ್ಶನ್ ಜೆ.ಡಿ.ಎಸ್ ಪರ ಮತಯಾಚನೆ ಮಾಡಿಲ್ಲ. ಪ್ರಚಾರ ಮಾಡಲಿಲ್ಲ. ಇದು ಕೂಡಾ ಸದ್ಯದ ದ್ವೇಶದ ರಾಜಕಾರಣಕ್ಕೆ ಇರುವ ಇನ್ನೊಂದು ಕಾರಣ.ಇನ್ನು, ಮೊನ್ನೆ ಸುಮಲತಾ ಪರ ದರ್ಶನ್ ಅಖಾಡಕ್ಕಿಳಿದಿದ್ದರಲ್ಲ, ಆಗ ದರ್ಶನ್ ಒಂದು ಮಾತನ್ನಾಡಿದ್ದರು. ನಾನು ಬೇಕಿದ್ದರೆ.. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡ್ತೀನಿ, ಮಂಡ್ಯದಲ್ಲಿ ನಿಕಿಲ್ ಪರ ಮಾಡಲ್ಲ ಅನ್ನುವ ಮಾತುಗಳನ್ನಾಡಿದ್ದರು. ಇದು ಕೂಡಾ ಕುಮಾರಣ್ಣನ ಕಣ್ಣು ಕೆಂಪಾಗಲು ಇನ್ನೊಂದು ಕಾರಣ.

ದರ್ಶನ್ ಆಡಿದ ಇದೇ ಮಾತು, ಕುಮಾರಣ್ಣನ ರಕ್ತ ಮತ್ತಷ್ಟು ಕುದಿಯುವಂತೆ ಮಾಡಿರೋದು ಸುಳ್ಳಲ್ಲ. ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಿದ್ದು ಸುಳ್ಳಲ್ಲ. ಹೌದು, ನಿಕಿಲ್ ಹಾಗೂ ದರ್ಶನ್ ಚಿತ್ರರಂಗದವರು. ಹೀಗಿದ್ದೂ.. ಚಿತ್ರರಂಗದವನಾಗಿ ಚಿತ್ರರಂಗದ ಸಹನಟನ ಪರ ನಿಲ್ಲದ ದರ್ಶನ್ ನಡೆ, ಸಹಜವಾಗಿಯೇ ಕುಮಾರಸ್ವಾಮಿಯವ್ರನ್ನ ಕೆರಳಿಸಿತ್ತು. ಇದ್ರ ನಡುವೆ ದರ್ಶನ್ ಹಾಗೂ ನಿಕಿಲ್ ನಡುವಿನ ಮುಸುಕಿನ ಗುದ್ಧಾಟ ಇದೇ ಕಥೆಯನ್ನ ಮತ್ತೊಂದು ಮಗ್ಗಲಿನತ್ತನೂ ಹೊರಳಿಸಿತ್ತು. ಕುಮಾರಣ್ಣ ಪಿತ್ತ ಮತ್ತಷ್ಟು ನೆತ್ತಿಗೇರುವಂತೆಯೂ ಮಾಡಿತ್ತು.ಇನ್ನೂ ದರ್ಶನ್ ಹಾಗೂ ಯಶ್ ವಿರುದ್ಧ ಮಂಡ್ಯದಲ್ಲಿ ತಿರುಗಿ ಬಿದ್ದಿರುವ ಅನೇಕರದ್ದು ಒಂದೇ ಪ್ರಶ್ನೆ. ಅದುವೇ.. ಮಂಡ್ಯಗಾಗಿ ದರ್ಶನ್ ಮಾಡಿದ್ದೇನು ಅನ್ನೋದು. ಇನ್ನೂ ಇದ್ರ ನಡುವೆ ನಿಮಗ್ಯಾಕರೀ ರಾಜಕೀಯ ಉಸಾಬರಿ ಅನ್ನುವ ಮಾತುಗಳನ್ನೂ ಆಡ್ತಿರುವ ಅನೇಕರು, ಮಂಡ್ಯ ಜನ ದಡ್ಡರಲ್ಲ ಬುದ್ದಿವಂತರು ಅಂಥನೂ ಅನ್ನುತ್ತಿದ್ದಾರೆ

ಮಂಡ್ಯದ ರಣರಂಗ ಮೇಲೀಗ, ಪೂರ್ತಿ ಭಾರತದ ಕಣ್ಣೇ ಇದೆ. ಹೀಗಿದ್ದಾಗ, ಒಂದು ದಶಕದ ಇತಿಹಾಸವನ್ನೊಂದಿರುವ ಕುಮಾರಸ್ವಾಮಿ ಹಾಗೂ ದರ್ಶನ್ ನಡುವಿನ ಕದನದಲ್ಲೀಗ, ವ್ಯಯಕ್ತಿಕ ನಿಂದನೆಗಳೂ ನಡೆಯುತ್ತಿವೆ. ಎಷ್ಟರ ಮಟ್ಟಿಗೆ ಅಂದ್ರೆ ದರ್ಶನ್ ವಿರುದ್ಧ ಜೆ,ಡಿ.ಎಸ್ ಪಾಳಯದಲ್ಲಿ ಕುಹುಕದ ಮಾತುಗಳೇ ಕೇಳಿ ಬರುತ್ತಿವೆ.ಹೌದು, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಿಂತಿರುವ ದರ್ಶನ್ ವಿರುದ್ಧ ಸಿಎಂ ಎಚ್‌ಡಿ ಕುಮಾರಸ್ವಾಮಿ ಇತ್ತೀಚಿಗೆ ಸಿಡಿದೆದ್ದಿದ್ದರು. ದರ್ಶನ್ ಅಭಿಮಾನಿ ಬಳಗವನ್ನೂ ಲೆಕ್ಕಿಸದ ಸಿಎಂ ಕುಮಾರಸ್ವಾಮಿ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು “ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು..? ಅದು ಸಿನಿಮಾಗೆ ಮಾತ್ರ.

ಜನರಿಗೆ ’ಡಿ ಬಾಸ್’ ಆಗೋಕೆ ಆಗಲ್ಲ. ರೈತರಿಗೆ ’ಡಿ ಬಾಸ್’ ಆಗೋಕೆ ಆಗಲ್ಲ. ಅವರದ್ದೇ ಅಭಿಮಾನಿ ಸಂಘಗಳು ಕೊಟ್ಟಿರ್ತಾರೆ, ಆರೂವರೆ ಕೋಟಿ ಜನ ಕೊಟ್ಟಿರೋದಾ ಅದು..? ಯಾರೋ ನಾಲ್ಕು ಜನ ಕೊಟ್ಟಿರ್ತಾರೆ ಬಿಡಿ” ಅನ್ನುವ ಕುಹುಕದ ಮಾತುಗಳನ್ನಾಡಿದ್ದರು.ಸಿ.ಎಂ ಆಡಿದ ಇದೇ ಮಾತು, ದರ್ಶನ್ ಭಕ್ತಗಣದ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಿದ್ದೂ ಉಗುಳು ನುಂಗಿಕೊಂಡೇ ದರ್ಶನ್ ಪ್ರತಿಕ್ರಿಯೆಗೆ ಅಭಿಮಾನಿ ಬಳಗ ಕಾದು ಕುಂತಾಗಲೇ, ದರ್ಶನ್.. ಸಿಎಂ ಹೇಳಿಕೆಗೆ ನಗುಮುಖದಿಂದಲೇ ಉತ್ತರ ನೀಡಿದ್ದರು. ಖ ಬಾಸ್.. ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದುಗಳೂ ಅಭಿಮಾನಿಗಳೂ ಕೊಟ್ಟ ಭಿಕ್ಷೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಅಷ್ಟೇ ಅಲ್ಲ ಅಂಬಿ ಅಪ್ಪಾಜಿ ಕೈ ನಮ್ಮ ಮೇಲೀಗ ಇಲ್ಲಾ, ಹಾಗಾಗೇ ಎಲ್ಲರೂ ಬಾಯಿಗೆ ಬಂದ ಹಾಗೇ ಮಾತನಾಡ್ತಿದ್ದಾರೆ ಅಂದಿದ್ದರು.ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ, ವಿಡಿಯೋ ಗಳಾಗಲಿ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿ ಕೊಡದೆ ಶಾಂತಿ ಕಾಪಾಡಿಕೊಂಡು ಆರಾಮಾಗಿರಬೇಕಾಗಿ ನಿಮ್ಮ ನಲ್ಮೆಯ ದಾಸನ ಕಳಕಳಿಯ ವಿನಂತಿ”ದರ್ಶನ್.. ಇಂಥಹದ್ದೊಂದು ಮನವಿಯನ್ನ ಮಾಡಿದ್ರೂ, ಅಭಿಮಾನಿಗಳ ರೋಶ, ಆವೇಶ ಮಾತ್ರ ತಣ್ಣಗಾಗ್ತಿಲ್ಲ.

ಅದೇನೆ ಇರ‍್ಲಿ.. ರಾಜಕೀಯ ಹಾಗೂ ಸಿನಿಮಾ ಎರಡು ಒಂದೇ ನಾಣ್ಯದ ಮುಖಗಳು. ಎರಡು ಕ್ಷೇತ್ರಕ್ಕೂ ಹಿಂದಿನಿಂದಲೂ ಸಂಬಂಧವಿದೆ. ಇಂಥ ಸಂಬಂಧ.. ಇದೀಗ ನಡೆಯುತ್ತಿರುವ ವ್ಯಯಕ್ತಿಕ ನಿಂದನೆಗಳಿಂದ ಹಳಸಿ ಹೋಗುತ್ತಿದೆ. ಇನ್ನೂ ವ್ಯಯಕ್ತಿಕವಾಗಿ ಇದ್ದ ಮೊದಲಿನ ಸಂಬಂಧನೂ ಎಕ್ಕುಟ್ಟಿ ಹೋಗುತ್ತಿದೆ. ಮೊನ್ನೆ ತನ್ಕ ಸ್ನೇಹಿತರಾಗಿದ್ದ ನಿಕಿಲ್ ಹಾಗೂ ಅಭಿಷೇಕ್ ಇದೀಗ ಅಕ್ಷರಶ ಬದ್ಧ ವೈರಿಗಳಂತೆ ಮಂಡ್ಯದ ಮಹಾಜನತೆಗೆ ಕಾಣುತ್ತಿದ್ದಾರೆ.

ಇನ್ನು, ಒಂದು ದಶಕದಿಂದ ದರ್ಶನ್ ಕಂಡ್ರೆ ಹಲ್ಲು ಹಲ್ಲು ಕಡಿಯುವ ಕುಮಾರಣ್ಣ, ಸುಮಲತಾ ಅವ್ರಿಗೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ದರ್ಶನ್ ವಿರುದ್ಧ ಸಮರನೇ ಸಾರಿದ್ದಾರೆ. ಅಲ್ಲಿಗೆ, ಮಂಡ್ಯ ರಣಕದನ ಪರ್ಸನಲ್ ಕದನವಾಗಿ ಮಾರ್ಪಾಡಾಗಿದೆ. ಇದೆಲ್ಲದ್ರ ನಡುವೆ.. ದರ್ಶನ್ ಇದೇ ಏಪ್ರಿಲ್ ೨ರಿಂದ ಸುಮಲತಾ ಪರ ಪ್ರಚಾರ ಮಾಡಲಿದ್ದಾರೆ. ಮುಂದೆ, ಇದು, ಇನ್ನೆಲ್ಲಿ ಹೋಗಿ ಮುಟ್ಟುತ್ತೆ, ಇನ್ಯಾವ ರೀತಿ ನಿಂದನೆಗಳನ್ನ ಮಾಡಲಾಗುತ್ತೆ, ರಾಜಕೀಯ ಕೆಸರೆರಚಾಟ ಇನ್ಯಾವ ಸುನಾಮಿಗೆ ಕಾರಣವಾಗುತ್ತೆ ಅನ್ನುವ ನೂರೆಂಟು ಪ್ರಶ್ನೆಗಳೂ, ಸದ್ಯ ಮಂಡ್ಯ ಮಣ್ಣಿನಲ್ಲಿ ಗಿರಕಿ ಹೊಡೆಯುತ್ತಿವೆ.

LEAVE A REPLY

Please enter your comment!
Please enter your name here