Home District ದಶಕದ ನಂತರ “ಕೈ”ಗೆ ಮೈಸೂರು ಪಾಲಿಕೆ..! ಕಾಂಗ್ರೆಸ್ ನ ಪುಷ್ಪಲತಾ ಮೇಯರ್ ಆಗಿ ಆಯ್ಕೆ..! HDD...

ದಶಕದ ನಂತರ “ಕೈ”ಗೆ ಮೈಸೂರು ಪಾಲಿಕೆ..! ಕಾಂಗ್ರೆಸ್ ನ ಪುಷ್ಪಲತಾ ಮೇಯರ್ ಆಗಿ ಆಯ್ಕೆ..! HDD ಮೇಲೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ G.T.ದೇವೇಗೌಡ..!

1930
0
SHARE

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ದೋಸ್ತಿಗಳು ಅಧಿಪತ್ಯ ಮೆರೆದಿದ್ದಾರೆ. ನಿರೀಕ್ಷೆಯಂತೆ ಕಾಂಗ್ರೆಸ್ ಮೇಯರ್ ಸ್ಥಾನ ಹಾಗೂ ಜೆಡಿಎಸ್ ಉಪ ಮೇಯರ್ ಗದ್ದುಗೆಗೇರಿದ್ದು, ಮೇಯರ್ ಪಟ್ಡಕ್ಕಾಗಿ ದೋಸ್ತಿಗಳ ನಡುವೆಯೇ ನಡೆದ ಜಟಾಪಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿದ್ದಾರೆ.

ಇನ್ನೂ ಪಾಲಿಕೆ ಅಧಿಕಾರ ಕೈತಪ್ಪಿದ್ದಕ್ಕೆ ಸಚಿವ ಜಿಟಿ ದೇವೇಗೌಡ, ವರಿಷ್ಠರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಮೈಸೂರಿನಲ್ಲಿ ತಮ್ಮ ಅಸ್ತಿತ್ವವನ್ನು ಪಣಕ್ಕಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಮೇಲುಗೈ ಸಾಧಿಸಿದ್ದಾರೆ. ವಿಧಾನ ಸೌಧದ ದೋಸ್ತಿಯನ್ನು ಪಾಲಿಕೆಯ ವರೆಗೂ ಕೊಂಡೊಯ್ದು, ಮೊದಲ ಅವಧಿಯಲ್ಲೇ ಕಾಂಗ್ರೆಸ್ ಮೇಯರ್ ಪಟ್ಟ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಿರೀಕ್ಷೆಯಂತೆ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಆಯ್ಕೆಯಾಗಿದ್ದು, ಉಪ ಮೇಯರ್ ಆಗಿ ಜೆಡಿಎಸ್ ನ ಶೆಫಿ ಅಹಮದ್ ಗೆಲುವು ಸಾಧಿಸಿದ್ದಾರೆ. ಪುಷ್ಟಲತಾ ಪರ 48 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ 24 ಮತಗಳು ಚಲಾವಣೆಯಾಗಿವೆ. ಕೈ ಮೇಲೆ ಎತ್ತುವ ಮೂಲಕ ಸದಸ್ಯರು ತಮ್ಮ ಮತ ಚಲಾಯಿಸಿದರು.
ಪಾಲಿಕೆಯಲ್ಲಿ ಮೈತ್ರಿ ಆಡಳಿತ ಖಚಿತವಾಗುತ್ತಿದ್ದ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಮೈಸೂರಿನಲ್ಲಿ ನಮ್ಮದೇನೂ ನಡೆದಿಲ್ಲ ಎಲ್ಲಾ ಹೈಕಮಾಂಡ್ ತೀರ್ಮಾನ.

ಆ ತೀರ್ಮಾನಕ್ಕೆ ನಾವು ತಲೆ ಬಾಗಿ, ಶಿರಸಾವಹಿಸಿದ್ದೇವೆ ಎಂದ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಾರಾ ಮಹೇಶ್ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ನಮ್ಮೆಲ್ಲರಿಗಿಂತ ದೊಡ್ಡವರು. ವರಿಷ್ಠರ ಮಾತಿನಂತೆ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡಲಾಗಿದೆ ಎಂದರು.

ಈ ನಡುವೆ ಪಾಲಿಕೆಗೆ ಆಗಮಿಸಿದ ಜೆಡಿಎಸ್ ಬಂಡಾಯ ನಾಯಕ ಸಂದೇಶ್ ನಾಗರಾಜ್ ಬಿಜೆಪಿ ಗುರುತಿಸಿಕೊಂಡು, ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಿದ್ರು..ಸಭಾಂಗಣಕ್ಕೆ ಆಗಮಿಸುವ ವೇಳೆಯಲ್ಲಿ ಮಾತನಾಡಿಸಲು ಬಂದ ಮಾಜಿ ಮೇಯರ್ ರವಿಕುಮಾರ್ ಗೆ ನನ್ನ ಜೊತೆ ಮಾತನಾಡಬೇಡ, ಮಾತನಾಡಿದ್ರೆ ನಿನ್ನನ್ನು ಪಕ್ಷದಿಂದಲೇ ಉಚ್ಚಾಟಿಸುತ್ತಾರೆ ಎಂದು ಛೇಡಿಸಿದ್ರು..
ಮಹಾನಗರ ಪಾಲಿಕೆಯ ಒಟ್ಟು 65 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯುವ ಕನಸು ವಿಧಾನಸೌಧದಂತೆ ನುಚ್ಚುನೂರಾಗಿದೆ.

LEAVE A REPLY

Please enter your comment!
Please enter your name here