Home Cinema ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ ದುರ್ಯೋಧನ..? 15 ದಿನದಲ್ಲಿ ಕುರುಕ್ಷೇತ್ರದ ಕದನಕ್ಕೆ ಲೂಟಿ ಆಗಿದ್ದೆಷ್ಟು ಹಣ..?

ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ ದುರ್ಯೋಧನ..? 15 ದಿನದಲ್ಲಿ ಕುರುಕ್ಷೇತ್ರದ ಕದನಕ್ಕೆ ಲೂಟಿ ಆಗಿದ್ದೆಷ್ಟು ಹಣ..?

1854
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನ ಗಾಂಧಿನಗರದಲ್ಲಿ ಬಾಕ್ಸ್‌ಆಫೀಸ್ ಸುಲ್ತಾನ ಅಂತ ಯಾಕೇ ಕರಿತಾರೆ ಎನ್ನುವುದಕ್ಕೆ ಹೊಸ ಪುಷ್ಟಿ ಕೊಟ್ಟಿದೆ ಈ ಹಾಟ್ ನ್ಯೂಸ್. ಈ ಕರುನಾಡ ದಾಸ ಮುಟ್ಟಿದೆಲ್ಲ ಚಿನ್ನವೇ ಬಿಡಿ ಎನ್ನುವ ಗೊಲ್ಡನ್ ಟೈಮ್ ಇದು. ಕುರುಕ್ಷೇತ್ರದ ಅಬ್ಬರ ಎಷ್ಟು ಜೋರಾಗಿದೆ ಎನ್ನುವ ಸಣ್ಣ ಸ್ಯಾಂಪಲ್ ಅಷ್ಟೇ.

ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯೊಂದನ್ನ ತನ್ನ ಬುಟ್ಟಿಗೆ ಹಾಕಿಕೊಂಡುಬಿಟ್ಟಿದೆ ಈ ಸೌಂಡ್ ಬ್ರೇಕಿಂಗ್ ಕುರುಕ್ಷೇತ್ರ. ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿತುಳುಕೋ ಹೊತ್ತಿನಲ್ಲೇ ಕುರುಕ್ಷೇತ್ರ ತನ್ನ ಬಾಕ್ಸ್‌ಆಫೀಸ್ ವ್ಯಾಪ್ತಿ ಎಂತದ್ದು ಅಂತ ಪ್ರೂವ್ ಮಾಡಿರೋ ಹಾಗಿದೆ.

ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಮಾಸ್ಟರ್‌ಪೀಸ್ ಮೈಥಾಲಾಜಿಕಲ್ ಸಿನಿಮಾ ಬಂದಿಲ್ಲ, ಮುಂದೆ ಬರಲ್ಲ ಎನ್ನುವ ಹೆಗ್ಗಳಿಕೆಯ ಜೊತೆಗೆ ಆಗಸ್ಟ್.೯ ಕ್ಕೆ ತೆರೆಗೆ ಅಪ್ಪಳಿಸಿದ ಕುರುಕ್ಷೇತ್ರದ ಎಂಟ್ರಿಗೆ ಗಲ್ಲಾಪೆಟ್ಟಿಗೆ ಪತುರಿಗಟ್ಟಿಹೋಗಿದೆಯಂತೆ. ಗಾಂಧಿನಗರದ ಮೂಲಗಳು ಹೇಳೊಪ್ರಕಾರ, ಕುರುಕ್ಷೇತ್ರದ ಇದುವರೆಗಿನ ಒಟ್ಟು ಕಲೆಕ್ಷನ್ ೯೭ ಕೋಟಿ. ಇದರಲ್ಲಿ ಆಶ್ಚರ್ಯಪಡಬೇಕಾದ ಸಂಗತಿಯೇನಪ್ಪಂದ್ರೆ, ಬಿಡುಗಡೆಗೂ ಮುಂಚೆಯೇ ತನ್ನ ಪ್ರೀ-ರಿಲೀಸ್ ಗಳಿಕೆಯಿಂದಲೇ ಎಲ್ಲರಿಗೂ ಜೋರ್ ಕಾ ಜಟ್ಕಾ ಕೊಟ್ಟಿದ್ದ ಕುರುಕ್ಷೇತ್ರ ಬರೋಬ್ಬರಿ ೨೨ ಕೋಟಿಯನ್ನ ಬಾಚಿಕೊಳ್ಳೊದ್ರಲ್ಲಿ ಸೈ ಎನಿಸಿಕೊಂಡಿತ್ತು. ಇಂಡಸ್ಟ್ರಿಯ ಘಟಾನುಘಟಿಗಳು ಮೂಗಮೇಲೆ ಬೆರಳಿಟ್ಟುಕೊಂಡಿದ್ದು ಈಗ ಹೊಸ ಹಿಸ್ಟರಿಯೇ ಬಿಡಿ.

ಕುರುಕ್ಷೇತ್ರ ಈ ಪಾಟಿ ಕಲೆಕ್ಷನ್ ಮಾಡೋದಕ್ಕೂ ಕೆಲವು ಕಾರಣಗಳಿವೆ. ಹೇಳಿಕೇಳಿ ಕುರುಕ್ಷೇತ್ರ ವಿಶ್ವದಾದ್ಯಂತ ೨ಡಿ ಹಾಗೂ ೩ಡಿಯಲ್ಲಿ ರಿಲೀಸ್ ಆಗಿದೆ. ಅದರಲ್ಲೂ ಚಿತ್ರಮಂದಿರಗಳ ಲೆಕ್ಕಚಾರ ಹಾಗೂ ಟಿಕೆಟ್ ಬೆಲೆಯಲ್ಲಿ ಏರಿಕೆಯಾದ ಅಂಶಗಳು ಟೋಟಲ್ ಬಾಕ್ಸ್‌ಆಫೀಸ್ ಗಳಿಕೆಗೆ ಪೂರಕವಾಗಿದೆ. ಸ್ಪೆಷಾಲ್ಲಾಗಿ ಮಲ್ಟಿಪ್ಲೆಕ್ಸ್ ಅಡಿಯನ್ಸ್‌ಗೂ ಕುರುಕ್ಷೇತ್ರ ದೊಡ್ಡಮಟ್ಟದಲ್ಲಿ ರೀಚ್ ಆಗಿದೆ. ಕುರುಕ್ಷೇತ್ರದ ಆಖಾಡದಲ್ಲಿ ರಿಪೀಟ್ ಅಡಿಯನ್ಸ್ ಹವಾ ಕೂಡ ಜೋರಾಗಿದ್ದು ಈ ನಯಾ ದಾಖಲೆಗೆ ನಾಂದಿಯಾಡಿದೆ.

ಈ ಅಂದಾಜಿನ ಲೆಕ್ಕಚಾರಗಳನ್ನ ನೋಡಿದ್ರೆ ಕುರುಕ್ಷೇತ್ರ ಮೊದಲ ದಿನವೇ ೧೦ ಕೋಟಿಗೂ ಹೆಚ್ಚಿನ ಬಿಜಿನೆಸ್ ಮಾಡಿತ್ತು. ಮೊದಲವಾರ ಕಳೆಯೊದ್ರೊಳಗೆ ೩೨ ಕೋಟಿಯನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು ಈ ಕುರುಕ್ಷೇತ್ರ. ವಿಶೇಷವಾಗಿ ವಿಕೇಂಡ್‌ಗಳ ಕಲೆಕ್ಷನ್ ನೋಡಿ ಗಾಂಧಿನಗರದ ಮಂದಿಯ ತಲೆತಿರುಗಿಬಿಟ್ಟಿದೆ. ಬೇರೆ ಭಾಷೆಯ ಕಲೆಕ್ಷನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬರದೇಹೋದ್ರೂ ಕನ್ನಡದಲ್ಲಿ ಸುಯೋಧನ ಗೆಲುವಿನ ನಗೆ ಬೀರಿರೋದು ಬಹುತೇಕ ಫಿಕ್ಸ್ ಎನ್ನಲೇಬೇಕು. ದಾಖಲೆಗಳ ಸರಮಾಲೆಯನ್ನೇ ಹಾಕಿಕೊಂಡ ಕುರುಕ್ಷೇತ್ರ ಭರ್ಜರಿ ಓಪನಿಂಗ್ ಪಡೆದುಕೊಳ್ಳೊ ಮೂಲಕ ತನ್ನ ನಾಗಾಲೋಟವನ್ನ ಮುಂದುವರೆಸಿದೆ. ಕನ್ನಡ ಚಿತ್ರರಂಗದಲ್ಲಿ ತನ್ನ ಇಂಟ್ರಡಕ್ಷನ್‌ನಿಂದಲೇ ಪ್ರೇಕ್ಷಕನ ಮನಸ್ಸಿನಲ್ಲಿ ಕೆಜಿಗಟ್ಟಲೆ ನಿರೀಕ್ಷೆಗಳನ್ನ ಕ್ರಿಯೆಟ್ ಮಾಡಿದ್ದ ಮುನಿರತ್ನ ಕುರುಕ್ಷೇತ್ರ ಈಗ ಈ ದಾಖಲೆಗಳ ಮೂಲಕ ಎಲ್ಲಾ ನಿರೀಕ್ಷೆಗಳನ್ನೂ ಉಳಿಸಿಕೊಳ್ಳೊದ್ರಲ್ಲಿ ಯಶಸ್ವಿಯಾಗಿದೆ.

ಇನ್ನು ನಿನ್ನೆ ಕೂಡ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಬೋರ್ಡ್ ದರ್ಶನ ಭಾಗ್ಯವನ್ನ ಕುರುಕ್ಷೇತ್ರ ಪಡೆದುಕೊಂಡಿದೆ. ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರದ ಒಟ್ಟು ಕಲೆಕ್ಷನ್ ಜಾಸ್ತಿಯಾಗಿರುವ ಕಾರಣ, ಕುರುಕ್ಷೇತ್ರ ಕೂಡ ಈ ದಿನಗಳಲ್ಲೇ ಭರ್ಜರಿ ಜಾತ್ರೆ ನಡೆಸಿಬಿಟ್ಟಿದೆ.೪೧೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಮುನಿರತ್ನ ಕುರುಕ್ಷೇತ್ರ ತನ್ನ ಬಜೆಟ್ಟನ್ನ ಮೀರಿ ಲಾಭ ಮಾಡಿರೋದು ಸದ್ಯದ ಮಟ್ಟಿಗಂತೂ ಚಿತ್ರರಂಗದ ಹೊಸ ಮೈಲಿಗಲ್ಲು ಅಂತ ಕಣ್ಣುಮುಚ್ಚಿಕೊಂಡು ಹೇಳಬಹುದು. ಆದರೆ ಈ ಕಲೆಕ್ಷನ್ ಗಾಸಿಪ್‌ಗಳ ಬಗ್ಗೆ ವಿತರಕ ರಾಕ್‌ಲೈನ್ ವೆಂಕಟೇಶ್ ಆಗಲಿ, ನಿರ್ಮಾಪಕ ಮುನಿರತ್ನ ಆಗಲಿ ಯಾವುದೇ ಕ್ಲಾರಿಟಿ ಕೊಟ್ಟಿಲ್ಲ. ಬಹುಶಃ ಟೋಟಲ್ ಕಲೆಕ್ಷನ್ ಎಷ್ಟಾಗಿದೆ ಅಂತ ದುಡ್ಡು ಎಣಿಸುತ್ತಿರಬಹುದೇನೂ..?

ಅದೇನೇ ಇರ‍್ಲಿ, ಕನ್ನಡದ ಚಿತ್ರಗಳು ಕಲೆಕ್ಷನ್ ಮಾಡೋದ್ರಲ್ಲಿ ಸ್ವಲ್ಪ ಹಿಂದೆ ಎನ್ನುವ ಬುದ್ಧಿವಂತರಿಗೆ ಮುಟ್ಟಿನೋಡ್ಕೊಳ್ಳೊ ಬಿಸಿಬಿಸಿ ಉತ್ತರ ಸಿಕ್ಕಿದೆ. ಎಲ್ಲವೂ ಕುರುಕ್ಷೇತ್ರದ ಕಲೆಕ್ಷನ್ ಹಂಗಾಮಾ ಎನ್ನಬಹುದೇನೂ…!

LEAVE A REPLY

Please enter your comment!
Please enter your name here