Home Cinema ದಾಖಲೆಯತ್ತ “ವಿಲನ್”, “ಕೆಜಿಎಫ್”, “ಕುರುಕ್ಷೇತ್ರ”, | ಯಶ್, ದರ್ಶನ್, ಸುದೀಪ & ಶಿವಣ್ಣ ಇವರಲ್ಲಿ ಯಾರು...

ದಾಖಲೆಯತ್ತ “ವಿಲನ್”, “ಕೆಜಿಎಫ್”, “ಕುರುಕ್ಷೇತ್ರ”, | ಯಶ್, ದರ್ಶನ್, ಸುದೀಪ & ಶಿವಣ್ಣ ಇವರಲ್ಲಿ ಯಾರು ಬರೆಯಲಿದ್ದಾರೆ 100 ಕೋಟಿಯ ದಾಖಲೆ..?!

2800
0
SHARE

ದಿ ವಿಲನ್.. ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ. ಟೀಸರ್‌ಗಳಿಂದ.. ಟಾಕ್ ಆಫ್ ದಿ ಟೌನ್ ಆಗಿದ್ದ ದಿ ವಿಲನ್ ಇನ್ನೇನು ಚಿತ್ರಮಂದಿರದ ಅಂಗಳಕ್ಕೆ ಬಲಗಾಲಿಟ್ಟು ಕಾಲಿಡಲಿದ್ದಾನೆ. ಹೀಗಿರುವಾಗ್ಲೇ.. ಇದೀಗ ಇದೇ ದಿ ವಿಲನ್, ನಯಾ ಇತಿಹಾಸವನ್ನ ಬರೆಯಲಿದ್ದಾನೆ ಅನ್ನುವ ಮಾತುಗಳು ಕೇಳಿ ಬರ‍್ತಿವೆ. ೮೦ವರ್ಷದ ಅಖಂಡ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾರು ಮಾಡದ ದಾಖಲೆಯನ್ನ ದಿ ವಿಲನ್ ಮಾಡಲಿದ್ದಾನೆ ಅನ್ನುವ ಭವಿಷ್ಯವಾಣಿನೂ ಕೇಳಿ ಬರ‍್ತಿವೆ.ಹೌದು, ದಿ ವಿಲನ್.. ನೂರು ಕೋಟಿಯನ್ನ ಕೊಳ್ಳೆ ಹೊಡೆಯಲಿದ್ದಾನೆ.

ಹೀಗೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣನೂ ಇದೆ. ಯಸ್, ನಿಮಗೆ ಗೊತ್ತಿರಲಿ ದಿ ವಿಲನ್ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿಯನ್ನ ಲೂಟಿ ಮಾಡುತ್ತಿದ್ದಾನೆ. ದಿ ವಿಲನ್ ಚಿತ್ರದ ವಿತರಣಾ ಹಕ್ಕು ನ ಭೂತೋ ನ ಭವಿಷ್ಯತಿ ಅನ್ನುವಂತೆ ಆಗ್ಲೇ ಮಾರಾಟವಾಗಿದೆ. ಭರ್ತಿ ೧೫ಕೋಟಿಗೆ ದಿ ವಿಲನ್ ಚಿತ್ರದ ಬಿ.ಕೆ.ಟಿ ವಿತರಣಾ ಹಕ್ಕು ಮಾರಾಟವಾಗಿದೆ.ಹೌದು, ಬರೋಬ್ಬರಿ ೧೫ಕೋಟಿಗೆ ದಿ ವಿಲನ್ ಚಿತ್ರದ ಡಿಸ್ಟ್ರಿಬ್ಯೂಶನ್ ರೈಟ್ಸ್ ಸೇಲಾಗಿದೆ.ನಂಬಲು ಕಷ್ಟ ಅನಿಸಿದ್ರೂ ನೀವ್ ಇದನ್ನ ನಂಬಲೇಬೇಕು. ಯಸ್ ಕೆ.ಎಸ್.ಕೆ ಶೋ ರೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿತರಕ ಜಾಕ್ ಮಂಜು, ದಿ ವಿಲನ್ ಚಿತ್ರದ ಬೆಂಗಳೂರು.

ಕೋಲಾರ ಹಾಗೂ ತುಮಕೂರು ಭಾಗದ ವಿತರಣೆಯನ್ನ ಆಗ್ಲೇ ಖರೀದಿ ಮಾಡಿದ್ದಾರೆ. ಅದೇನೆ ಇರ‍್ಲಿ. ಸದ್ಯ ದಿ ವಿಲನ್ ಅಕ್ಟೋಬರ್ ೧೮ಕ್ಕೆ ಬಿಡುಗಡೆಯಾಗಲಿದೆ. ಬಿಡುಗಡೆ ಬಳಿಕ, ದಿ ವಿಲನ್.. ನೂರು ಕೋಟಿ ಸರದಾರನಾಗ್ತಾನಾ.. ಹೊಸದೊಂದು ಇತಿಹಾಸ ಬರೆಯುತ್ತಾನಾ.. ಅಥ್ವಾ, ಇರುವ ಸುವರ್ಣಾವಕಾಶವನ್ನ, ಕೆ.ಜಿ.ಎಫ್ ಕೈಗೆ ಕೊಟ್ಟು ಸುಮ್ಮನಾಗ್ತಾನಾ.. ಉತ್ತರ, ಇದೇ ಆಯುಧ ಪೂಜೆಗೆ ಸಿಗಲಿದೆ.ಕೆ.ಜಿ.ಎಫ್.. ಕನ್ನಡ ಚಿತ್ರರಂಗದ ಮತ್ತೊಂದು ಮಹತ್ವಕಾಂಕ್ಷೆಯ ಸಿನಿಮಾ.ಕೆ.ಜಿ.ಎಫ್ ಮೂರು ತಿಂಗಳು, ಆರು ತಿಂಗಳು ಅಲ್ಲ ಭರ್ತಿ ಎರಡು ವರ್ಷದ ತಪಸ್ಸು.

ಉಗ್ರಂ ಮೂಲಕ ಹೊಸದೊಂದು ಅಲೆಯನ್ನ ಎಬ್ಬಿಸಿದ ನಿರ್ದೇಶಕ ಪ್ರಶಾಂತ್ ನೀಲ್, ಎರಡು ವರ್ಷ ಹಗಲಿರುಳು ಅನ್ನದೇ ತಮ್ಮ ತಂಡದೊಂದಿಗೆ ಇಲ್ಲಿ ಕಷ್ಟಪಟ್ಟಿದ್ದಾರೆ. ಬೆವರು ಸುರಿಸಿದ್ದಾರೆ.ಅಸಲಿಗೆ ಕೆ.ಜಿ.ಎಫ್ ಅನೌನ್ಸ್ ಆದಾಗ್ಲೇ, ಒಂದು ಕೂತುಹಲ ಅಭಿಮಾನಿಗಳಲ್ಲಿ ಹಾಗೂ ಗಾಂಧಿನಗರದಲ್ಲಿ ಮನೆ ಮಾಡಿತ್ತು. ಇದು, ಚಿತ್ರದ ಪ್ರತಿ ಪೋಸ್ಟರ್ ಹೊರ ಬಿದ್ದಾಗ್ಲೂ ಹೆಚ್ಚಾಗ್ತಾನೇ ಇತ್ತು. ಸಿನಿಮಾದಲ್ಲೇನೋ ಇದೇ, ಸಿನಿಮಾ ಅದ್ಯಾವದೋ ದಾಖಲೆ ಬರೆಯತ್ತೆ ಅಂತಾ ಎಲ್ಲ ಅಂದುಕೊಂಡಾಗ್ಲೇ ಕೆ.ಜಿ.ಎಫ್ ಬರೀ ಕನ್ನಡದಲ್ಲಷ್ಟೇ ಅಲ್ಲ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಬರ‍್ತಿದೆ ಅನ್ನುವ ಸುದ್ದಿ ಸದ್ದು ಮಾಡ್ತು.

ಎರಡು ಭಾಗದಲ್ಲಿ ಬರ‍್ತಿದೆ ಕೆ.ಜಿ.ಎಫ್ ಅನ್ನುವ ವಿಚಾರ ಅಭಿಮಾನಿಗಳಿಗೆ ಹುಚ್ಚು ಹಿಡಿಸಿತ್ತು. ಇದ್ದ ನಿರೀಕ್ಷೆಗಳು ಗಗನಕ್ಕೇರುವಂತೆ ಮಾಡ್ತು.ಹೌದು, ದಿ ವಿಲನ್ ಚಿತ್ರದಂತೆ ಕೆ.ಜಿ.ಎಫ್ ಕೂಡಾ, ತಮಿಳು ತೆಲುಗದಲ್ಲಿ ಬರ‍್ತಿದೆ. ಬರೀ ಇಷ್ಟೇ ಅಲ್ಲ ಇನ್ನು ಒಂದು ಹೆಜ್ಜೆ ಮುಂದಕ್ಕೋಗಿರುವ ಕೆ.ಜಿ.ಎಫ್ ಮಲಯಾಳಂನಲ್ಲೂ ಬರ‍್ತಿದೆ. ಅಲ್ಲಿಗೆ ನಾಲ್ಕು ಭಾಷೆಯಲ್ಲಿ ಬರ‍್ತಿರುವ ಕನ್ನಡ ಚಿತ್ರರಂಗದ ಕಾಸ್ಟ್ಲಿಯೆಸ್ಟ್ ಸಿನಿಮಾ ಅನ್ನುವ ಹೆಗ್ಗಳಿಕೆಯನ್ನೊಂದಿರುವ ಕೆ.ಜಿ.ಎಫ್, ಬಿಡುಗಡೆ ಬಳಿಕ ಮಾಡಬಹುದಾದ ದಾಖಲೆಗಳನ್ನ ಹಾಗೇ ಒಮ್ಮೇ ನೀವೆ ಊಹಿಸಿಕೊಳ್ಳಿ.ಇನ್ನು, ಕೆ.ಜಿ.ಎಫ್.. ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಲೂಟಿ ಮಾಡಲಿದೆ.

ಥೇಟ್ ದಿ ವಿಲನ್ ಶೈಲಿಯಂತೆ. ಹೇಳಲು ಸಾಧ್ಯವಿಲ್ಲ.. ದಿ ವಿಲನ್‌ಗಿಂತ ದೊಡ್ಡ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್‌ನ್ನ ಕೆ.ಜಿ.ಎಫ್ ಮಾಡಿದ್ರೂ ಮಾಡಬಹುದು. ಇನ್ನು, ಡಿಸ್ಟ್ರಿಬ್ಯೂಶನ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಡಬ್ಬಿಂಗ್ ರೈಟ್ಸ್, ಆಡಿಯೋ ರೈಟ್ಸ್ ಹಾಗೂ ಇನ್ನುಳಿದ ರೈಟ್ಸ್‌ಗಳಿಂದನೂ ಕೋಟಿ ಲೂಟಿ ಆಗುವ ಸಾಧ್ಯತೆಗಳನ್ನ ಇಲ್ಲಿ ತಳ್ಳಿ ಹಾಕುವಂತಿಲ್ಲ.ಕುರುಕ್ಷೇತ್ರದ ಕದನಕ್ಕೆ ಲೂಟಿಯಾಗುತ್ತಾ ೧೦೦ ಕೋಟಿ..!ದರ್ಶನ್ ೫೦ನೇ ಸಿನಿಮಾ ಮೇಲೂ ತುಂಬು ನಿರೀಕ್ಷೆ..!ಕುರುಕ್ಷೇತ್ರ.. ದರ್ಶನ್ ಅಭಿನಯದ ೫೦ನೇ ಸಿನಿಮಾ.

ಮುಹೂರ್ತದ ದಿನದಿಂದ ಹಿಡ್ದು ಇಲ್ಲೀತನ್ಕ ಸದ್ದು ಮಾಡ್ತಾನೇ ಬರ‍್ತಿರುವ ಕುರುಕ್ಷೇತ್ರನೂ ೧೦೦ ಕೋಟಿ ಲೂಟಿ ಮಾಡುತ್ತೆ, ಹೀಗೊಂದು ವಿಶ್ವಾಸ ಗಾಂಧಿನಗರಕ್ಕಿದೆ.ಹೌದು. ಕುರುಕ್ಷೇತ್ರ..ಸೆಂಚ್ಯೂರಿ ಕ್ಲಬ್ ಸೇರುತ್ತೆ ಅನ್ನಲು ಅನೇಕ ಕಾರಣಗಳಿವೆ. ಇದು, ದರ್ಶನ್ ವೃತ್ತಿಯ ೫೦ನೇ ಸಿನಿಮಾ ಅನ್ನೋದು ಒಂದಾದ್ರೆ, ಅನೇಕ ವರ್ಷಗಳ ನಂತರ ಬರ‍್ತಿರುವ ಹಿಸ್ಟೋರಿಕಲ್ ಸಿನಿಮಾ ಅನ್ನೋದು ಇನ್ನೊಂದು. ಇಷ್ಟೇ ಅಲ್ಲ ಕುರುಕ್ಷೇತ್ರ ಸಂಪೂರ್ಣ ರೀತಿಯಲ್ಲಿ ತ್ರೀಡಿ ಸ್ವರೂಪದಲ್ಲಿ ಸಿದ್ಧವಾಗ್ತಿರುವ ಕನ್ನಡದ ಮೊದಲ ಸಿನಿಮಾ.

ದಿ ವಿಲನ್, ಕುರುಕ್ಷೇತ್ರ ಹಾಗೂ ಕೆ.ಜಿ.ಎಫ್ ಮೂರು ಸಿನಿಮಾಗಳಲ್ಲಿ ಮೊದಲು ನೂರು ಕೋಟಿ ಲೂಟಿ ಮಾಡಿ, ದಾಖಲೆ ಬರೆಯುವ ಸಿನಿಮಾ ಯಾವದು ಅನ್ನುವ ಪ್ರಶ್ನೆ ಇದೀಗ ಗಾಂಧಿನಗರದ ಮಂದಿಯನ್ನ ಬಿಟ್ಟು ಬಿಡದಂಗೆ ಕಾಡ್ತಿದೆ. ಬರೀ ಗಾಂಧಿನಗರಕ್ಕಷ್ಟೇ ಅಲ್ಲ, ಹಿಂದಿ, ತಮಿಳು ಹಾಗೂ ತೆಲುಗು ಸಿನಿರಂಗಕ್ಕೂ ಇದೇ ಪ್ರಶ್ನೆ ಕಾಡ್ತಿದೆ. ಹಾಗಾಗೇ, ದಿ ವಿಲನ್. ಕೆ.ಜಿ.ಎಫ್ ಹಾಗೂ ಕುರುಕ್ಷೇತ್ರದ ಮೇಲೊಂದು ಕಣ್ಣ್ ಇಟ್ಟಿದೆ ಭಾರತೀಯ ಸಿನಿದುನಿಯಾ.ಅದೇನೆ ಇರ‍್ಲಿ, ದಿ ವಿಲನ್ ಕುರುಕ್ಷೇತ್ರ ಹಾಗೂ ಕೆ.ಜಿ.ಎಫ್.. ನಿರೀಕ್ಷೆಗಳನ್ನ ತಲುಪಲಿ, ನೂರು ಕೋಟಿ ಕೊಳ್ಳೆ ಹೊಡಯಲಿ. ವಷಾಂತ್ಯಕ್ಕೆ ಸಂಭ್ರಮದಿಂದ ಫುಲ್ ಸ್ಟಾಫ್ ಇಡಲಿ. ಹೊಸದೊಂದು ಕ್ರಾಂತಿಗೆ ಮೂರು ಸಿನಿಮಾಗಳು ಮುನ್ನುಡಿಯಾಗಲಿ ಅನ್ನೋದೇ ನಿಜವಾದ ಸಿನಿಪ್ರಿಯರ ಆಶಯ…

LEAVE A REPLY

Please enter your comment!
Please enter your name here