Home Cinema ದಾರಿ ಸರಿಯಾಗಿದೆ… ಏಕಾಂಗಿಯಲ್ಲ.. ಕಿಚ್ಚನ ಅಭಯ ಹಸ್ತ ವಿಜಿಗೆ..! “ಸುದೀಪ” ಚಿತ್ರರಂಗದ ನಿಜವಾದ “ಸಲಗ”.. ವಿಜಿಯ...

ದಾರಿ ಸರಿಯಾಗಿದೆ… ಏಕಾಂಗಿಯಲ್ಲ.. ಕಿಚ್ಚನ ಅಭಯ ಹಸ್ತ ವಿಜಿಗೆ..! “ಸುದೀಪ” ಚಿತ್ರರಂಗದ ನಿಜವಾದ “ಸಲಗ”.. ವಿಜಿಯ ಅಂತರಾಳ..!

2032
0
SHARE

ಸಲಗ.. ಸ್ಯಾಂಡಲ್‌ವುಡ್‌ನ ಭರವಸೆಯ ಸಿನಿಮಾ. ಇಷ್ಟು ದಿನ ಟೈಟಲ್ ಮತ್ತು ಪೋಸ್ಟರ್‌ಗಳ ಮೂಲಕ ಸದ್ದು & ಸುದ್ದಿ ಮಾಡ್ತಾ ಬಂದ ಬ್ಯ್ಲಾಕ್ ಕೋಬ್ರಾ ದುನಿಯಾ ವಿಜಿ ನಟನೆಯ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಬಂಡೇ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಚಿತ್ರತಂಡಕ್ಕೆ ಶುಭಕೋರಲು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ಸಂಸದ ಡಿ.ಕೆ ಸುರೇಶ್, ನಿರ್ದೇಶಕ ಎಂ.ಎಸ್.ರಮೇಶ್, ಎಸ್. ಮಹೇಂದರ್, ಸೇರಿದಂತೆ ಚಿತ್ರರಂಗದ ಸಾಕಷ್ಟು ನಿರ್ದೇಶಕ, ತಂತ್ರಜ್ಞರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ರು.

ಯಸ್… ಇಂದು ದುನಿಯಾ ವಿಜಿಗೆ ಚೊಚ್ಚಲ ನಿರ್ದೇಶನಕ್ಕೆ ಕಿಚ್ಚ ಸುದೀಪ್ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ರು. ಈ ವೇಳೆ ದುನಿಯಾ ವಿಜಿ ಬಗ್ಗೆ ಮಾತನಾಡಿದ ಕಿಚ್ಚ. ಹತ್ತುವರ್ಷಗಳ ಹಿಂದೆ ದುನಿಯಾ ವಿಜಿ ಜಿಮ್ ಇನ್‌ಸ್ಟರ್ಕ್ಟ್ರರ್ ಆದಾಗಿನಿಂದ ಇಲ್ಲಿವರೆಗೂ ಯಾವರೀತಿ ಕಷ್ಟ ಪಟ್ಟು ಚಿತ್ರರಂಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ಮೆಲುಕು ಹಾಕಿಕೊಂಡ್ರು. ಅಲ್ಲದೆ ಪ್ರತಿಯೊಬ್ಬ ಕಲಾವಿನಲ್ಲಿಯೂ ನಿರ್ದೇಶಕನಿರುತ್ತಾನೆ. ಆದ್ರೆ ಇಷ್ಟು ದಿನಗಳ ಬಳಿಕ ವಿಜಿ ಧೈರ್ಯ ಮಾಡಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ದುನಿಯಾ ವಿಜಿ ಏಕಾಂಗಿಯಲ್ಲ. ಅವರ ಸುತ್ತ ಮುತ್ತ ಉತ್ತಮ ಸ್ನೇಹಿತರ ಗುಂಪಿದೆ. ಒಳ್ಳೆಯ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡ್ತಾರೆ, ಒಳ್ಳೆದಾಗ್ಲಿ ಅಂದ್ರು..

ಇನ್ನು ಕೆ.ಪಿ ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ವಿಶೇಷ ಅಭಿಮಾನ ಇಟ್ಟು ಬಂದಿದ್ದ ಸಿದ್ದರಾಮಯ್ಯ. ದುನಿಯಾ ವಿಜಿ ಇಷ್ಟು ದಿನಗಳ ಕಾಲ ನಟನಾಗಿ ಯಶಸ್ವಿಯಾಗಿದ್ದಾರೆ. ಮುಂದೆ ಅವರ ನಿರ್ದೇಶನಕ್ಕೆ ಒಳ್ಳೆಯ ಯಶಸ್ಸು ಸಿಗಲಿ ಅಂದ್ರು.. ಅಲ್ಲದೆ ತಮ್ಮ ಬಾಲ್ಯದ ದಿನಗಳಲ್ಲಿ ಕದ್ದು ಮುಚ್ಚು ಮ್ಯಾಟ್ನಿ ಶೋಗೆ ಹೋಗ್ತಿದ್ದ ಸಂದರ್ಭ ನೆನೆದ ಸಿದ್ದರಾಮಯ್ಯ. ಒಳ್ಳೆಯ ಸಂದೇಶ ಇರುವ ಸಿನಿಮಾಗಳು ಬರಬೇಕು. ಈಗ ಸಲಗ ಸೆಟ್ಟೇರಿದೆ. ಆನೆ ನಡೆದಿದ್ದೇ ದಾರಿ ಅಂತ ಡೈ ಲಾಗ್ ಹೊಡೆಯುವುದರ ಜೊತೆಗೆ. ಇದು ಒಂಟಿ ಸಲಗ ಬೇರೆ. ಭಾರಿ ಡೇಂಜರ್ ಅಂತ ಹೇಳಿ ಹಾಸ್ಯ ಮಾಡಿದ್ರು..

ದುನಿಯಾ ವಿಜಯ್ ಚಿತ್ರದ ನಿರ್ದೇಶಕ. ಮೊದಲ ಭಾರಿಗೆ ನಿರ್ದೇಶನದ ಜೊತೆಗೆ ನಟನಾಗಿ ಮಿಂಚಲಿರುವ ವಿಜಯ್. ಚಿತ್ರದ ಸ್ಕ್ರಿಪ್ಟ್ ವರ್ಕ್‌ಕ್ಕಾಗಿ ಮೂರುತಿಂಗಳ ಕಾಲ ಶ್ರಮವಹಿಸಿದ್ದು. ಇಂದಿನಿಂದ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಮೊದಲ ದಿನದ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಿರ್ದೇಶಕರಾದ ಖುಷಿಯಲ್ಲಿ ಮಾತನಾಡಿದ ವಿಜಿ, ಸುದೀಪ್ ಕನ್ನಡ ಚಿತ್ರರಂಗದ ಸಲಗ ಎನ್ನುವ ಮಾತುಗಳನ್ನಾಡಿದರು.

ನಿನಗೂ ಬರುತ್ತೆ ಕಾಲ.. ಅಂದೇ ಸುದೀಪ ಹೇಳಿದ್ದರಂತೆ ಡಾಲಿಗೆ..!
ಯಸ್.. ಡಾಲಿ ಧನಂಜಯ್ ಸಲಗ ಚಿತ್ರದಲ್ಲಿ ಪೋಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗಾಗಲ್ಲೇ ಧನಂಜಯ್ ಲುಕ್ ರಿವೀಲ್ ಆಗಿದ್ದು. ಚಿತ್ರದಲ್ಲಿನ ಪಾತ್ರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಟಗರು ಚಿತ್ರದ ನಂತ್ರ ಚಿತ್ರರಂಗದಲ್ಲಿನ ನಸೀಬು ಬದಲಿಸಿಕೊಂಡಿರುವ ಡಾಲಿಗೆ. ಕಿಚ್ಚ ಸುದೀಪ್ ಸುಮಾರು ೫ ವರ್ಷಗಳ ಹಿಂದೆಯೇ ನಿಮ್ಮ ಕಾಲ ಬದಲಾಗುತ್ತೆ ಎಂದು ಭವಿಷ್ಯ ಹೇಳಿದ್ದರಂತೆ.

ಇನ್ನು ಇಡೀ ಟಗರು ಚಿತ್ರತಂಡವೇ ಸಲಗ ಚಿತ್ರದಲ್ಲಿ ಕೆಲಸ ಮಾಡ್ತಿದ್ದು. ಟಗರು ಚಿತ್ರದ ಡೈಲಾಗ್ ಮೂಲಕ ಮೋಡಿ ಮಾಡಿದ್ದ ಮಂಜು ಮಾಸ್ತಿ ಸಲಗ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಟಗರು ಚಿತ್ರಕ್ಕಿಂತ ಇನ್ನಷ್ಟು ರಾ ಸಬ್ಜೆಕ್ಟ್ ಸಲಗ ಮೂಲಕ ಹೇಳಹೊರಟಿದ್ದೇವೆನ್ನುವ ಮಾಸ್ತಿ, ಸಲಗ ಚಿತ್ರದ ಬಗ್ಗೆ ಹೇಳಿದ್ದಿಷ್ಟು..

ಇನ್ನು ಹೈ ಬಜೆಟ್ ಎಂಟಟೈನ್‌ಮೆಂಟ್ ಚಿತ್ರಕ್ಕೆ ಕೆಮಿಸ್ಟ್ರೀ ಆಫ್ ಕರಿಯಪ್ಪ ಖ್ಯಾತಿಯ ನಟಿ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದು. ಉಳಿದ ತಾರಾಬಳಗದಲ್ಲಿ ಕಾನ್‌ಸ್ಟೆಬಲ್ ಸರೋಜ, ಕಾಕ್ರೋಚ್, ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ಚರಣ್‌ರಾಜ್ ಮ್ಯೂಸಿಕ್, ಅಭಿ ಸಹ ನಿರ್ದೇಶನ, ಮಹೇನ್ ಸಿಂಹ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಸದ್ಯ ಒಂದೇ ಶೆಡ್ಯೂಲ್‌ನಲ್ಲಿ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀರಕರಣವನ್ನು ಮಾಡಲು ವಿಜಿ ಅಂಡ್ ಟೀಂ ಸಿದ್ದವಾಗಿದೆ.

ಅದೇನೇ ಇದ್ರು.. ಇಷ್ಟು ದಿನ ಉತ್ತಮ ಸ್ಟಂಟ್, ಹೀರೋ ಆಗಿ ನಟನೆಯ ಮೂಲಕ ಅಭಿಮಾನಿಗಳ ಮನತಣಿಸಿದ್ದ ದುನಿಯಾ ವಿಜಿಯ. ನೈಜಘಟನೆಯಾಧಾರಿತ ಸಲಗ ಮೂಲಕ ನಿರ್ದೇಶನದ ಸವಾರಿ ಶುರುಮಾಡಿದ್ದು, ನಿರ್ದೇಶನದ ಜರ್ನಿ ಯಾವರೀತಿ ಇರಲಿದೆ ಚಿತ್ರ ಬಿಡುಗಡೆಗೆವರೆಗೂ ಕಾದುನೋಡುವಂತೆ ಮಾಡಿದೆ..

LEAVE A REPLY

Please enter your comment!
Please enter your name here