Home District ದಾವಣಗೆರೆ ಲೋಕ ಸಂಗ್ರಾಮ:ಬಿಜೆಪಿ ಭದ್ರಕೋಟೆ ದಾವಣಗೆರೆಯಲ್ಲಿ ಮಾವ-ಅಳಿಯರ ನಡುವೆ ಜಿದ್ದಾ ಜಿದ್ದಿ…! ಲಿಂಗಾಯತರೇ ಅಧಿಕವಾಗಿರುವ ಕ್ಷೇತ್ರದಲ್ಲಿ...

ದಾವಣಗೆರೆ ಲೋಕ ಸಂಗ್ರಾಮ:ಬಿಜೆಪಿ ಭದ್ರಕೋಟೆ ದಾವಣಗೆರೆಯಲ್ಲಿ ಮಾವ-ಅಳಿಯರ ನಡುವೆ ಜಿದ್ದಾ ಜಿದ್ದಿ…! ಲಿಂಗಾಯತರೇ ಅಧಿಕವಾಗಿರುವ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯಮಾಲೆ…?

912
0
SHARE

ಕ್ಷೇತ್ರ : ದಾವಣಗೆರೆ ಲೋಕಸಭಾ ಕ್ಷೇತ್ರ.ಯಾರ್ ಯಾರ ನಡುವೆ ಪೈಪೋಟಿ : ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ..ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ:ಕಾಂಗ್ರೆಸ್ ಅಭ್ಯರ್ಥಿ;- ಮಲ್ಲಿಕಾರ್ಜುನ್ಬಿಜೆಪಿ : ಜಿ.ಎಂ. ಸಿದ್ದೇಶ್ವರ್ ಹಾಲಿ ಸಂಸದರು…

ಬಿಜೆಪಿಯಿಂದ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಗೆ ಈ ಬಾರಿಯೂ ಬಿಜೆಪಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ. ಆದರೆ, ಇನ್ನು ಅಧಿಕೃತ ಘೋಷಣೆಯಾಗಿಲ್ಲ. ಈ ಉದ್ದೇಶದಿಂದಲೇ ಸಂಸದ ಜಿ ಎಂ ಸಿದ್ದೇಶ್ವರ್ ಚುನಾವಣೆ ಕಾರ್ಯಚಟುವಟಿಕೆಗಳು ಈಗಾಗಲೇ ಆರಂಭವಾಗಿವೆ. ಈಗಾಗಲೇ ನಗರದಲ್ಲಿ ಬೈಕ್ ರಾಲಿ, ಪಕ್ಷದ ಚುನಾವಣೆ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಿದ್ದೇಶ್ವರ್ ಚಾಲನೆ ನೀಡಿದ್ದಾರೆ. ಅಲ್ಲದೆ, ಈಗಾಗಲೇ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಂದು ಸುತ್ತಿನ ಪ್ರವಾಸವನ್ನು ಮುಗಿಸಿದ್ದು, ಜಿಲ್ಲೆಯ ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ.

ಅಲ್ಲದೇ, ಜಿಲ್ಲೆಯ ಚನ್ನಗಿರಿಯಲ್ಲಿ ಮಾಡಾಳ ವಿರುಪಾಕ್ಷಪ್ಪ, ಹೊನ್ನಾಳಿಯಲ್ಲಿ ಎಂ ಪಿ ರೇಣುಕಾಚಾರ್ಯ, ಜಗಳೂರಿನಲ್ಲಿ ಎಸ್ ವಿ ರಾಮಚಂದ್ರಪ್ಪ, ಹರಪನಹಳ್ಳಿಯಲ್ಲಿ ಜಿ ಕರುಣಾಕರ ರೆಡ್ಡಿ, ಮಾಯಕೊಂಡ ಕ್ಷೇತ್ರದಲ್ಲಿ ಪ್ರೊ. ಲಿಂಗಣ್ಣ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಎ ರವೀಂದ್ರನಾಥ ಹೀಗೇ ಜಿಲ್ಲೆಯಲ್ಲಿ ಆರು ಜನರು ಬಿಜೆಪಿ ಶಾಸಕರೇ ಇದ್ದಾರೆ. ಇವರೆಲ್ಲ ಸಿದ್ದೇಶ್ವರ್ ಬೆನ್ನಿಗೆ ನಿಲ್ಲಲಿದ್ದಾರೆ. ಹೀಗಾಗಿ, ಸಿದ್ದೇಶ್ವರ್ ಗೆ ಗೆಲವುದು ಅಷ್ಟೇನು ಪ್ರಯಾಸವೇನಿಲ್ಲ. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ನಾನೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಕೆಲಸ ಮುಂದುವರಿಸಿದ್ದಾರೆ. ಬಿಜೆಪಿಯಿಂದ ಅದಿಕೃತ ಟಿಕೆಟ್ ಘೋಷಣೆಯಾಗಿಲ್ಲವಾದರೂ, ಸಿದ್ದೇಶ್ವರ್ ನೇ ಅಂತಿಮ ಎನ್ನಲಾಗುತ್ತಿದೆ. ಮುಖ್ಯವಾಗಿ ಸಿದ್ದೇಶ್ವರ್ ಬಿಟ್ಟರೆ ಬಿಜೆಪಿ ಪಾಳಯದಲ್ಲಿ ಮತ್ತೆ ಹೇಳಿಕೊಳ್ಳುವಂತಹ ಅಭ್ಯರ್ಥಿಗಳು ಇಲ್ಲ.

ಆದರೆ, ಸಿದ್ಧೇಶ್ವರ್ ಇದೇ ನನ್ನದು ಕೊನೆ ಚುನಾವಣೆ ಮುಂದಿನ ಚನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವುದಾಗಿ ಹೇಳಿದ್ದು, ತನ್ನ ಮಾತನಾಡುವ ಶಾಮನೂರು ಕುಟುಂಬಕ್ಕೆ ಭೀಮಸಮುದ್ರ ಭೀಮನ ಶಕ್ತಿ ಪ್ರದರ್ಶನ ತೋರಿಸುವುದಾಗಿ ಸವಾಲು ಹಾಕಿದ್ದಾರೆ ಸಿದ್ಧೇಶ್ಬರ್.ದಾವಣಗೆರೆ ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರ ನೋಡುವುದಾದರೆ ಲಿಂಗಾಯತರೇ ಪ್ರಬಲವಾಗಿದ್ದಾರೆ. ಹೀಗಾಗಿ ಎರಡು ಪಕ್ಷದಿಂದ ಲಿಂಗಾಯತ ಅಭ್ಯರ್ಥಿ ಸ್ಪರ್ಧೆ ಅನಿವಾರ್ಯ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚು. ಅಲ್ಲದೇ, ಇಲ್ಲಿ ಹಿಂದುಳಿದ ಹಾಗೂ ಎಸ್ಸಿ ಎಸ್ಟಿ ಸಮುದಾಯಗಳು ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿವೆ.ಎಸ್ ಎಸ್ ಮಲ್ಲಿಕಾರ್ಜುನ್ ಉಸ್ತುವಾರಿ ಸಚಿವರಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಿದ್ದಾರಾದ್ರೂ ನಗರಕ್ಕೆ ಮಾತ್ರ ಸೀಮಿತ ಎನ್ನುವಂತಿದ್ದಾರೆ..

ಇನ್ನು ಇದರ ನಡುವೆ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಬೆನ್ನಿಗಿರುವುದು ಸಿದ್ದೇಶ್ವರ್ ಹಿನ್ನೆಡೆಗೆ ಕಾರಣವಾಗಲಿದೆ.ಒಟ್ಟಿನಲ್ಲಿ, ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರ ಹಲವಾರು ಆಯಾಮಗಳಿಂದ ಕುತೂಹಲಕ್ಕೆ ಕಾರಣವಾಗಿದೆ.ಕಾಂಗ್ರೆಸ್ ನಿಂದ ಮಾಜಿ ಸಚಿವ ಎಚ್ ಎಮ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ  ಕುರುಬ ಸಮುದಾಯವೂ ಪ್ರಭಲವಾಗಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡುತ್ತಿದೆ. ಅದಕ್ಕಾಗಿ ಸಮುದಾಯದ ಕೆಲವು ಮುಖಂಡರು ಮಾಜಿ ಸಚಿವ ಎಚ್ ಎಂ ರೇವಣ್ಣ ಭೇಟಿಯಾಗಿದ್ದು, ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಕಾಂಗ್ರೆಸ್ ಜಿಲ್ಲಾ ಘಟಕ ಇದನ್ನು ನಿರಾಕರಿಸಿದ್ದು, ರೇವಣ್ಣ ಸ್ಪರ್ಧೆ ಕೇವಲ ಉಹಾಪೋಹ. ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎನ್ನುತ್ತಿವೆ.

ಇಷ್ಟೆ ಅಲ್ಲದೇ, ರಾಜ್ಯದಲ್ಲಿ ಮೈತ್ರಿ ಸ್ಪರ್ಧೆ ಏರ್ಪಡುತ್ತಿದ್ದರೆ, ದಾವಣಗೆರೆ ಜಿಲ್ಲೆಯನ್ನು ತಮಗೆ ನೀಡಬೇಕು ಎಂದು ಜೆಡಿಎಸ್ ಪಾಳಯ ಸ್ಪರ್ಧೆಗೆ ರೆಡಿಯಾಗಿ ನಿಂತಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಸ್ಪರ್ಧೆಗೆ ಸೂಕ್ತ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ, ಜೆಡಿಎಸ್ ಗೆ ಬಿಟ್ಟು ಕೊಡಿ ಎನ್ನುತ್ತಿದ್ದಾರೆ ಜೆಡಿಎಸ್ ಮುಖಂಡರು. ಆದರೆ, ಜಿಲ್ಲೆಯಲ್ಲಿ ಜೆಡಿಎಸ್ ಹೇಳಿಕೊಳ್ಳುವಷ್ಟು ಬಲವಾಗಿಲ್ಲ. ಇಲ್ಲವೇ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಯಾಗಿ ಅಭ್ಯರ್ಥಿ ಘೋಷಣೆಯಾದ ಬಳಿ ಎರಡು ಪಕ್ಷಗಳು ಉತ್ತಮವಾಗಿ ಪ್ರಚಾರ ಮಾಡಿದರೆ ಮೈತ್ರಿ ಅಭ್ಯರ್ಥಿಗೆ ಸಹಕಾರಿಯಾಗಲಿದೆ. ಇದೀಗ ಜಿಲ್ಲೆಯಲ್ಲಿ ನಾನೊಂದು ತೀರಾ ನೀನೊಂದು ತೀರಾ ಎನ್ನುವಂತಿರುವ ಜೆಡಿಎಸ್ ಕಾಂಗ್ರೆಸ್ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದೇ ಪ್ರಶ್ನೆ.ಇನ್ನು, ಕಳೇದ ದಾವಣಗೆರೆ ಜಿಲ್ಲೆಯಲ್ಲಿ ಮೂರು ಪಕ್ಷಗಳಿದ್ದರೂ, ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯಯೇ ಸೆಣಸಾಟ.

ವಿಧಾನಸಭೆ ಚುನಾವಣೆ ಫಲಿತಾಂಸ ಗಮನಿಸಿದರೆ ಕಾಂಗ್ರೆಸ್ ತನ್ನ ಪ್ರಭಾವ ಕಳೇದುಕೊಂಡಂತಿದೆ. ಆದರೆ, ಬಿಜೆಪಿ ಆರು ಶಾಸಕರು ಆಯ್ಕೆಯಾಗಿದ್ದು, ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಹೀಗಾಗಿ, ಕಾಂಗ್ರೆಸ್ ಗೆ ಈ ಲೋಕಸಭೆ ಚುನಾವಣೆ ಅಗ್ನಿ ಪರೀಕ್ಷೆ ಅಂತಲೇ ಹೇಳಲಾಗುತ್ತಿದೆ.ಹೌದು, ಕಳೆದ ವಿಧಾನಸಭೆ ಫಲಿತಾಂಶ ಗಮನಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕುಂದಿದೆ ಎನ್ನುವುದು ಸ್ಪಷ್ಟವಾದಂತಿದೆ. ಕಾರಣ, 2013ರ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಹರಿಹರ ಕ್ಷೇತ್ರದಲ್ಲಿ ಮಾತ್ರ ಎಚ್ ಎಸ್ ಶಿವಶಂಕರ ಜೆಡಿಎಸ್ ನಿಂದ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಗೆಲವು ಸಾಧಿಸಿರಲಿಲ್ಲ. ಆದರೆ, 2018ರ ವಿಧಾನಸಭಾ ಚುನಾವಣೇಯಲ್ಲಿ ಫಲಿತಾಂಶ ಉಲ್ಟಾ ಆಗಿತ್ತು.

ದಾವಣಗೆರೆ ಉತ್ತರ, ಹೊನ್ನಾಳಿ, ಜಗಳೂರು, ಚನ್ನಗಿರಿ, ಹರಪನಹಳ್ಳಿ ಹಾಗೂ ಮಾಯಕೊಂಡ ಕ್ಷೇತ್ರಗಳನ್ನು ಬಿಜೆಪಿ ತನ್ನ ಕೈವಶ ಮಾಡಿಕೊಂಡಿತು. ಉತ್ತಮ ಕೆಲಸ ಮಾಡಿದ್ದರೂ ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಬಿಜೆಪಿಯ ಎಸ್ ಎ ರವೀಂದ್ರನಾಥ ವಿರುದ್ಧ ಸೋಲು ಕಂಡಿದ್ದಾರೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲೂ ಎಸ್ ಎಸ್ ಮಲ್ಲಿಕಾರ್ಜುನ್ ಬಿಜೆಪಿಯ ಸಿದ್ದೇಶ್ವರ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಇಧು ಕ್ಷೇತ್ರದಲ್ಲಿ ಸದ್ಯದ ಮೈತ್ರಿ ಪರಿಸ್ಥಿತಿ.ಇಲ್ಲಿಯವರೆಗೂ ದಾವಣಗೆರೆಯ ಆ ಬಿಜೆಪಿ ಭದ್ರಕೋಟೆಗೆ ಕಾಲಿಡಲು ಕಾಂಗ್ರೆಸ್ ಎಷ್ಟೆ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ.

ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಒಂದು ವರ್ಷವಷ್ಟೇ ಸಂಸದರಾಗಿ ಆಯ್ಕೆಯಾಗಿದ್ದು, 1999ರಲ್ಲಿ ಜಿ ಎಂ ಸಿದ್ದೇಶ್ವರ್ ತಂದೆ ಜಿ ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಬಳಿಕ 2004 ರಿಂದ ಸ್ಪರ್ಧೇ ಮಾಡುತ್ತಿರುವ ಜಿ ಎಂ ಸಿದ್ದೇಶ್ವರ್ ಹಿಂದೆ ತಿರುಗಿ ನೋಡಿಯೇ ಇಲ್ಲ. ಈಗಾಗಲೇ ಸತತವಾಗಿ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಸಿದ್ದೇಶ್ವರ್ ಈ ಬಾರಿ ನಾಲ್ಕನೇ ಬಾರಿಗೆ ಸ್ಪರ್ಧಿಸಲು ರೆಡಿಯಾಗಿದ್ದಾರೆ.ಕಳೆದ ವಿಧಾನಸಭೆ ಫಲಿತಾಂಶ ಗಮನಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕುಂದಿದೆ ಎನ್ನುವುದು ಸ್ಪಷ್ಟವಾದಂತಿದೆ. ಕಾರಣ, 2013ರ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಹರಿಹರ ಕ್ಷೇತ್ರದಲ್ಲಿ ಮಾತ್ರ ಎಚ್ ಎಸ್ ಶಿವಶಂಕರ ಜೆಡಿಎಸ್ ನಿಂದ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಗೆಲವು ಸಾಧಿಸಿರಲಿಲ್ಲ.

ಆದರೆ, 2018ರ ವಿಧಾನಸಭಾ ಚುನಾವಣೇಯಲ್ಲಿ ಫಲಿತಾಂಶ ಉಲ್ಟಾ ಆಗಿತ್ತು. ದಾವಣಗೆರೆ ಉತ್ತರ, ಹೊನ್ನಾಳಿ, ಜಗಳೂರು, ಚನ್ನಗಿರಿ, ಹರಪನಹಳ್ಳಿ ಹಾಗೂ ಮಾಯಕೊಂಡ ಕ್ಷೇತ್ರಗಳನ್ನು ಬಿಜೆಪಿ ತನ್ನ ಕೈವಶ ಮಾಡಿಕೊಂಡಿತು. ಉತ್ತಮ ಕೆಲಸ ಮಾಡಿದ್ದರೂ ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಬಿಜೆಪಿಯ ಎಸ್ ಎ ರವೀಂದ್ರನಾಥ ವಿರುದ್ಧ ಸೋಲು ಕಂಡಿದ್ದಾರೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲೂ ಎಸ್ ಎಸ್ ಮಲ್ಲಿಕಾರ್ಜುನ್ ಬಿಜೆಪಿಯ ಸಿದ್ದೇಶ್ವರ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದಾರೆ. 2014 ಲೋಕಸಭೆ ಚುನಾವಣೆಯಲ್ಲಿ ಜಿ.ಎಂ ಸಿದ್ದೇಶ್ವರ್ 5,18,894  ಮತಗಳನ್ನು ಪಡೆದಿದ್ದು, ಎಸ್ ಎಸ್ ಮಲ್ಲಿಕಾರ್ಜುನ್ 5,01,287 ಮತಗಳನ್ನು ಪಡೆದು ಕೇವಲ 17 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.ಇದರಿಂದ ಸ್ವಾಭಾವಿಕವಾಗಿಯೇ ಎಸ್ ಎಸ್ ಮಲ್ಲಿಕಾರ್ಜುನ್ ಚಿಂತೆಗೀಡಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಹರಿಹರ ಕ್ಷೇತ್ರದಲ್ಲಿ ಎಸ್ ರಾಮಪ್ಪ ಕಾಂಗ್ರೆಸ್ ನ ಶಾಸಕರು. ಹೀಗಾಗಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲ ಕಡಿಮೆಯಿದೆ. ಇದನ್ನು ಅರಿತಿರುವ ಕಾಂಗ್ರೆಸ್ ನ ಶಾಸಕರು ವಿವಿಧ ಹಂತಗಳಲ್ಲಿ ಕಾರ್ಯಕರ್ತರ ಸಭೆ ಸಮಾಲೋಚನೆ ಹಾಗೂ ಕೇಂದ್ರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುವ ಮೂಲಕ ಚುನಾವಣೆಗೆ ರೆಡಿಯಾಗುತ್ತಿದೆ. ಆದರೆ, ಬಿಜೆಪಿ ಆರು ಕ್ಷೇತ್ರಗಳಲ್ಲಿ ಗೆದ್ದು ಬೀಗುತ್ತಿದ್ದು, ಇದೀಗ ಲೋಕಸಭೆ ಚುನಾವಣೆಯಲ್ಲೂ ಪಾರಮ್ಯ ಸಾಧಿಸಲು ಎಲ್ಲ ರೀತಿಯಿಂದಲೂ ಸಿದ್ಧತೆ ನಡೆಸಿದೆ.. ಈ ಬಾರಿ ಜಿಲ್ಲೆಯಲ್ಲಿ  ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಯಲ್ಲಿದೆ. ಕಾರಣ, ಹಿಂದೆ ಇದ್ದ ಒಂದು ಶಾಸಕ ಸ್ಥಾನವು ಕೈ ತಪ್ಪಿದ್ದು, ಸಂಘಟನೆ ಕೂಡ ಹೇಳಿಕೊಳ್ಳುವಂತಿಲ್ಲ. ಮಾತ್ರವಲ್ಲ, ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆಯೂ ಸರಿಯಿಲ್ಲ.

ಆದರೂ, ಈ ಬಾರಿ ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ. ಒಂದು ವೇಳೆ ಮೈತ್ರಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿ ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಕೈ ಜೋಡಿಸಿದರೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಬಹುದು ಎನ್ನಲಾಗುತ್ತಿದೆ.ಹಾಗಾದ್ರೆ ಈ ಕ್ಷೇತ್ರದಲ್ಲಿನ ಜಾತಿವಾರು ಮತದಾರರ ಸಂಖ್ಯಾವಾರು ನೋಡೋದಾದ್ರೆ, 2018 ರ ಮಾಹಿತಿಯಂತೆ.ಲಿಂಗಾಯತರು: 4 23 220.ಕುರುಬರು: 1 32 779.ಎಸ್ಸಿಗಳು: ಲಂಬಾಣಿ ಮಾದಿಗ ಚಲುವಾದಿ ಬೋವಿ ಸೇರಿದಂತೆ 3 34 214..ಎಸ್ಟಿ ಸಮುದಾಯ: 1 92 224 .ಮುಸ್ಲಿಂ ರು: 1 93 989.ಬ್ರಾಹ್ಮಣರು: 11 218.ಮಡಿವಾಳರು: 19770.ಉಪ್ಪಾರ: 40341.ಮರಾಠ: 34488.ಗೊಲ್ಲರು: 22252.ವಿಶ್ವಕರ್ಮ: 20829.ನೇಕಾರ: 14122.ರೆಡ್ಡಿ: 20020.ದೇವಾಂಗ: 11408.ಬಾರಿಕೇರರು: 29121.ವೈಶ್ಯ: 7655.ಸವಿತಾ ಸಮಾಜ: 5626.ಇತರೆ: 39550  .ಒಟ್ಟು ಮತದಾರರು: 15 76 677.ನಿರ್ಣಾಯಕರು: ಲಿಂಗಾಯತ — 4 23 220ಎಸ್ಟಿ ಎಸ್ಟಿ ಕುರುಬ ಮುಸ್ಲಿಂರು- 8 53 206… ಇದು 2018 ರ ಮತದಾರರ ಜನಗಣತಿಯ ಮಾಹಿತಿ.. ಹತ್ತಿರ ಹತ್ತಿರ 16 ಲಕ್ಷ ಮತದಾರರನ್ನ ಹೊಂದಿರೋ ಕ್ಷೇತ್ರ ದಾವಣಗೆರೆ ಲೋಕಸಭಾ ಕ್ಷೇತ್ರವಾಗಿದ್ದು, ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಬಿಜೆಪಿ ಸಂಸದ ಜಿಎಂ. ಸಿದ್ದೇಶ್ವರ್ ರನ್ನ ಸೋಲಿಸಲೇ ಬೇಕು ಅಂತ ಮೈತ್ರಿ ಪಡೆ ಕಸರತ್ತು ನಡೆಸಿದೆ… ಇತ್ತ ಮೈತ್ರಿ ಪಡೆಯ ಕನಸನ್ನ ನುಚ್ಚು ನೂರು ಮಾಡಿ ಮತ್ತೊಮ್ಮೆ ಗೆಲುವಿನ ಕನಸು ಕಾಣುತ್ತ ಇನ್ನಿಲ್ಲದ ತಂತ್ರಗಳನ್ನ ಹೆಣೆಯುತ್ತಿದೆ ಬಿಜೆಪಿ ವಲಯ… ಯಾರೆಲ್ಲ ಏನೇ ಕಸರತ್ತು ಮಾಡಿದ್ರೂ ಅಂತಿಮವಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅನ್ನೋದನ್ನ ಚುನಾವಣೆವರೆಗೂ ನಾವು ನೀವೆಲ್ಲ ಕಾಯಲೇಬೇಕಿದೆ…

LEAVE A REPLY

Please enter your comment!
Please enter your name here