Home Cinema “ದಿ ವಿಲನ್” ಅಸಮಾಧಾನದ ಹೊಗೆಯ ನಡುವೆ ಆಯ್ತಾ ಗಲ್ಲಾಪೆಟ್ಟಿಗೆ ಲೂಟಿ..! ಗೊತ್ತಾ, ಮೊದಲ ದಿನದ...

“ದಿ ವಿಲನ್” ಅಸಮಾಧಾನದ ಹೊಗೆಯ ನಡುವೆ ಆಯ್ತಾ ಗಲ್ಲಾಪೆಟ್ಟಿಗೆ ಲೂಟಿ..! ಗೊತ್ತಾ, ಮೊದಲ ದಿನದ ಆಟದಲ್ಲಿ ದಿ ವಿಲನ್ ಗಳಿಸಿದ್ದೆಷ್ಟು ಕೋಟಿ..!

676
0
SHARE

ದಿ ವಿಲನ್.. ನಿನ್ನೆಯಷ್ಟೇ ತೆರೆಗೆ ಬಂದ ಸಿನಿಮಾ.ಭರ್ತಿ ೫೫೦ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತನ್ನ ಆಟ ಶುರುಮಾಡಿದ ದಿ ವಿಲನ್, ಗಲ್ಲಾಪಟ್ಟಿಗೆಯನ್ನ ಲೂಟಿ ಮಾಡ್ತಿದ್ದಾನೆ. ಅದು ಕೋಟಿಗಳ ಲೆಕ್ಕದಲ್ಲಿ. ಹೌದು. ದಿ ವಿಲನ್ ಜ್ವರಕ್ಕೆ ಬಾಕ್ಸಾಪೀಸ್ ನಡುಗುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ದಿ ವಿಲನ್ ಹಾವಳಿಗೆ ಮೊದಲ ದಿನ ಭರ್ತಿ ೨೦ ಕೋಟಿ ೫೦ ಲಕ್ಷ ಲೂಟಿಯಾಗಿದೆ.

ಯಸ್, ೨೦ ಕೋಟಿ ೫೦ ಲಕ್ಷ ಹೀಗೊಂದು ಮೊತ್ತದ ಮಾಹಿತಿಯನ್ನ, ಚಿತ್ರತಂಡ ಖುದ್ದು ನೀಡಿದೆ. ನಿಮಗೆ ಗೊತ್ತಿರಲಿ.. ದಿ ವಿಲನ್, ಮೇಲೆ ಎಲ್ಲಿಲ್ಲದ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಇದಕ್ಕೆ ತಕ್ಕಂತೆ.. ಚಿತ್ರವನ್ನ, ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ನಿರ್ಧರಿಸಿದ್ದ ಪ್ರೇಮ್, ಚಿತ್ರದ ಟಿಕೇಟ್ ರೇಟ್‌ನ್ನೂ ಏರಿಸಿದ್ದರು. ಇದ್ರ ಹಿಂದೆ ನಾಲ್ಕು ದಿನದ ರಜೆಯನ್ನ ಎನ್‌ಕ್ಯಾಶ್ ಮಾಡಿಕೊಂಡು ಕ್ಯಾಶ್ ಏಣಿಸಿಕೊಳ್ಳೋ ಇರಾದೆ ಆಗಿತ್ತು.

ಇದೇ ಇರಾದೆಯಲ್ಲಿಗ ಪ್ರೇಮ್ ಗೆದ್ದಿದ್ದಾರೆ. ಮೊದಲ ದಿನ ಚಿತ್ರ ಎಲ್ಲಡೆ ಭರ್ಜರಿ ಹೌಸ್‌ಫುಲ್ ಪ್ರದರ್ಶನ ಕಂಡ ಫಲವೆನ್ನುವಂತೆ, ೨೦ ಕೋಟಿ ೫೦ ಲಕ್ಷ ನಿರ್ಮಾಪಕರ ಖಜಾನೆ ಸೇರಿಕೊಂಡಿದೆ.
ಸದ್ಯ, ೨೦ ಕೋಟಿ ೫೦ಲಕ್ಷ ಲೂಟಿ ಮಾಡಿರುವ ದಿ ವಿಲನ್, ಅನಾಯಾಸವಾಗಿ ೫೦ ಕೋಟಿಯ ಗಡಿಯನ್ನ ದಾಟ್ತಾನೇ ಅನ್ನುವ ಮಾತುಗಳು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರ‍್ತಿವೆ. ಬಟ್, ಇದು, ಸಾಧ್ಯನಾ ಅನ್ನುವ ಪ್ರಶ್ನೆನೂ ಇದೇ ವೇಳೆ ಇದೇ ಗಾಂಧಿನಗರದ ಗಲ್ಲಿಗಳಲ್ಲೂ ಕೇಳಿ ಬರ‍್ತಿದೆ.

ಹೌದು, ದಿ ವಿಲನ್‌ಗೆ ೫೦ ಕೋಟಿಯ ಗಡಿ ಸುಲಭನಾ ಅನ್ನುವ ಚರ್ಚೆ ಆರಂಭವಾಗಿದೆ. ಕಾರಣ.. ದಿ ವಿಲನ್ ಚಿತ್ರಕ್ಕೆ ಎದುರಾಗ್ತಿರುವ ಅಡ್ಡಿ ಆತಂಕಗಳು. ನಿಮಗೆ ಗೊತ್ತಿರಲಿ ದಿ ವಿಲನ್ ಬಿಡುಗಡೆಯಾಗಿದ್ದೇ ತಡ, ಅಸಮಾಧಾನ ಹೊಗೆಯಾಡುತ್ತಿದೆ. ಶಿವಣ್ಣ ಅಭಿಮಾನಿಗಳು ಪ್ರೇಮ್ ಮೇಲೆ ಮುನಿಸಿಕೊಂಡಿದ್ದಾರೆ. ಹಾಗಾಗಿನೇ.. ದಿ ವಿಲನ್ ಚಿತ್ರ ನೋಡುವವರ ಸಂಖ್ಯೆ ಕಮ್ಮಿಯಾಗುತ್ತೇ ಅನ್ನೋದು ಅನೇಕರ ವಾದ.

ಬಟ್, ಹೀಗೊಂದು ವಾದ ಮಾಡುವ ಮೊದಲು ಇದು.. ಪ್ರೇಮ್ ಸಿನಿಮಾ ಅನ್ನೋದು ಇಲ್ಲಿ ಮರೆಯುವ ಹಾಗಿಲ್ಲ.ಯಸ್, ಪ್ರೇಮ್‌ರದ್ದು.. ಸಿನಿಮಾ ಮಾರ್ಕೆಟಿಂಗ್‌ನಲ್ಲಿ ಎತ್ತಿದ ಕೈ. ಸಿನಿಮಾದ ಬಗ್ಗೆ ಕೂತುಹಲವನ್ನ ಮೊದಲಿಂದನೂ ಮೂಡಿಸುವ ಪ್ರೇಮ್‌ಗೆ, ಬಹುಶ ಇದೆಲ್ಲದ್ರ ಅರಿವು ಮೊದಲೇ ಇದ್ದಿದ್ದರಿಂದನೋ ಏನೋ.. ವಾರದ ಮೊದಲೇ ಟಿಕೇಟ್ ಬುಕ್ಕಿಂಗ್ ಶುರು ಮಾಡಿದ್ದರು. ಆಗ, ಸಿನಿಮಾ ನೋಡಲು ಕಾತುರದಿಂದ ಕುಂತಿದ್ದ ಭಕ್ತವೃಂದ ಮುಗಿ ಬಿದ್ದು ಟಿಕೇಟ್‌ಗಳನ್ನ ಬುಕ್ ಮಾಡಿಕೊಂಡಿತ್ತು.

ಇನ್ನೂ ಸದ್ಯ ಎದ್ದಿರುವ ವಿವಾದ ಇನ್ನೊಂದಷ್ಟು ಜನರನ್ನ ಚಿತ್ರಮಂದಿರದತ್ತ ಕರೆತರುತ್ತಿದೆ. ವಿವಾದವಾಗುವಂತದ್ದೇನಿದೆ ಸಿನಿಮಾದಲ್ಲಿ ಅನ್ನುವ ಮಾತುಗಳನ್ನಾಡ್ತಾನೇ ಚಿತ್ರಪ್ರೇಮಿಗಳು ಚಿತ್ರಮಂದಿರಗಳದೊಳಗೆ ಹೋಗ್ತಿದ್ದಾರೆ. ಇದ್ರ ಪರಿಣಾಮ ಚಿತ್ರ ಇವತ್ತು ಅನೇಕ ಕಡೆ ಹೌಸ್‌ಫುಲ್ ಆಗಿದೆ. ಹಾಗಾಗಿ, ೫೦ ಕೋಟಿಯ ಗಡಿಯನ್ನ ದಿ ವಿಲನ್ ಇನ್ನೊಂದೆರಡು ದಿನದಲ್ಲಿ ಮುಟ್ಟುತ್ತಾನೇ ಅನ್ನೋದು ಗಾಂಧಿನಗರದ ಪಂಡಿತರ ಲೆಕ್ಕಾಚಾರ.

ಇನ್ನೂ ದಿ ವಿಲನ್ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ದೆಹಲಿ, ಚೆನೈ, ಹೈದ್ರಾಬಾದ್, ಮುಂಬೈ, ಚಂದಿಗಡ್ ಸೇರಿ ಅನೇಕ ಕಡೆ ಬಿಡುಗಡೆಗೊಂಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಬಿಡುಗಡೆಗೊಂಡ ಈ ಸ್ಥಳಗಳಲ್ಲೂ ದಿ ವಿಲನ್ ನಿನ್ನೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಇವತ್ತು ಸ್ಥಿತಿ ಅಲ್ಲೂ ನಿನ್ನೆಯಂತೆನೇ ಇದೆ.ಇದೆಲ್ಲದ್ರ ನಡುವೆ ದಿ ವಿಲನ್ ಬಾಹುಬಲಿಯ ದಾಖಲೆಯನ್ನೂ ಮುರಿದಿದ್ದಾನೆ. ಇದು, ಕನ್ನಡ ಸಿನಿಪ್ರೇಮಿಗಳೂ ಹೆಮ್ಮೆ ಪಡಬೇಕಾದ ಸಂಗತಿ.

ಹೌದು, ನಿಮಗೆ ಗೊತ್ತಿರಲಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಂಗಳೂರು ಸೇರಿ ಬಾಹುಬಲಿ ಮೊದಲ ದಿನ ೩೪ ಲಕ್ಷ ಗಳಿಸಿತ್ತು. ಬಟ್, ದಿ ವಿಲನ್ ಇದೇ ಸೌಥ್ ಕೆನರಾ ಸೆಂಟರ್‌ನಲ್ಲಿ ಮೊದಲ ದಿನ ೪೮ಲಕ್ಷ ಗಳಿಸಿದೆ. ಈ ಮೂಲಕ ಬಾಹುಬಲಿಗೆ ಸೆಡ್ಡು ಹೊಡೆದು ನಿಂತಿದ್ದಾನೆ ದಿ ವಿಲನ್. ಬರೀ ಸೌಥ್ ಕೆನರಾ ಅಷ್ಟೇ ಅಲ್ಲ ರಾಜ್ಯದ ಇನ್ನುಳಿದ ಏರಿಯಾಗಳಲ್ಲೂ ದಿ ವಿಲನ್ ಆರ್ಭಟ ಲಕ್ಷ ಹಾಗೂ ಕೋಟಿಗಳ ಲೆಕ್ಕದಲ್ಲೇ ಇದೆ.

ಹಾಗಾಗೇ, ಕಂಪ್ಲೀಟ್ ಅಂಕಿ ಅಂಶಗಳ ಸಮೇತ ಎಲ್ಲವನ್ನೂ ಅಭಿಮಾನಿಗಳ ಮುಂದೆ ಸೋಮವಾರ ಇಡಲು ಚಿತ್ರತಂಡ ನಿರ್ಧರಿಸಿದೆ.ಅದೇನೆ ಇರ‍್ಲಿ, ಸದ್ಯ ದಿ ವಿಲನ್ ವಿವಾದದ ನಡುವೆ ಕೋಟಿಗಳನ್ನ ಲೂಟಿ ಮಾಡುತ್ತಾ ಮುಂದೆ ಸಾಗುತ್ತಿದ್ದಾನೆ. ಇದೇ ಕೋಟಿಗಳ ಆಟ.. ವಾರಾಂತ್ಯ ಕಳೆಯುವಷ್ಟರಲ್ಲಿ ೫೦ ಕೋಟಿಯ ಕೋಟೆಯನ್ನ ನಿಲ್ಲಿಸುತ್ತಾ ಕಾದು ನೋಡಬೇಕು…

LEAVE A REPLY

Please enter your comment!
Please enter your name here