Home Cinema “ದಿ ವಿಲನ್” ಚಿತ್ರದ 3 ವಿಭಿನ್ನ ಹಾಡುಗಳ ಮೂಲಕ ಎರ್ರಾಬಿರ್ರಿ ಕ್ರೇಜ್ ಹುಟ್ಟುಹಾಕಿರುವ ಚಿತ್ರದ ಅಫೀಷಿಯಲ್...

“ದಿ ವಿಲನ್” ಚಿತ್ರದ 3 ವಿಭಿನ್ನ ಹಾಡುಗಳ ಮೂಲಕ ಎರ್ರಾಬಿರ್ರಿ ಕ್ರೇಜ್ ಹುಟ್ಟುಹಾಕಿರುವ ಚಿತ್ರದ ಅಫೀಷಿಯಲ್ ಆಡಿಯೋ ರಿಲೀಸ್ ಯಾವಾಗ..? ಎಲ್ಲಿ..? ಎಂಬ ಎಲ್ಲಾ ಪ್ರಶ್ನೆಗೆ ಬ್ರೇಕ್ ಬಿದ್ದಿದೆ….

2071
0
SHARE

ಪ್ರೇಮ್ ಸಿನಿಮಾ ಅಂದ ತಕ್ಷಣ ಜನ ಎಕ್ಸ್‌ಪೆಕ್ಟ್ ಮಾಡೋದೆ ಸೂಪರ್ ಸಾಂಗ್ಸ್‌ಗಳನ್ನು. ಈಗಾಗಲ್ಲೇ ಮೂರು ವೈರೆಟಿ ಸಾಂಗ್ಸ್‌ಗಳನ್ನು ಗಾನಪ್ರಿಯರಿಗೆ ನೀಡಿರುವ ಪ್ರೇಮ್, ಇನ್ನುಳಿದ ಸಾಂಗ್‌ಗಳನ್ನು ಯಾವಾಗ ರಿಲೀಸ್ ಮಾಡ್ತಾರೆ ಎಂಬ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅಲ್ಲದೆ ಈ ಮೊದಲೇ ಪ್ರೇಮ್ ತಿಳಿಸಿದಂತೆ ಆಗಸ್ಟ್ ೧೭ಕ್ಕೆ ಹಾಡುಗಳು ರಿಲೀಸ್ ಆಗುತ್ತಾ ಇಲ್ವಾ ಎನ್ನುವ ಅನುಮಾನಗಳು ಸಹಜವಾಗಿಯೇ ಎಲ್ಲರನ್ನು ಕಾಡಿತ್ತು.

ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿರುವ ಪ್ರೇಮ್ ಆಗಸ್ಟ್ ೧೭ಕ್ಕೆ ದಿ ವಿಲನ್ ಹಾಡುಗಳ ಉತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ದಿ ವಿಲನ್ ಆಡಿಯೋ ಲಾಂಚ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ವೆಬ್‌ಸೈಟ್ ಮೂಲಕ ಡೇಟ್ ಮತ್ತು ಸ್ಥಳವನ್ನು ಅಭಿಮಾನಿಗಳಿಗೆ ತಿಳಿಸಿರುವ ಪ್ರೇಮ್ ಕರ್ನಾಟಕದಾಚೆಗೂ ದಿ ವಿಲನ್ ಕಂಪನ್ನು ಪಸರಿಸಲಿದ್ದಾರೆ. ಹೌದು.. ತಮ್ಮ ಮ್ಯೂಸಿಕ್ ಮೂಲಕವೇ ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರೋ ಪ್ರೇಮ್.

ದಿ ವಿಲನ್ ಇನ್ನುಳಿದ ಸಾಂಗ್‌ಗಳನ್ನು ದೂರದ ದುಬೈನಲ್ಲಿ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ. ಅದು ಲೀ ಮೆರಿಡಿಯನ್ ಏರ್‌ಪೋರ್ಟ್‌ನ ಸಭಾಂಗಣದಲ್ಲಿ ಅನ್ನೋದು ವಿಶೇಷ. ಈ ಮೂಲಕ ಲೀ ಮೆರಿಡಿಯನ್ ಏನ್ ಪೋರ್ಟ್‌ನಲ್ಲಿ ಆಡಿಯೋ ಲಾಂಚ್ ಮಾಡ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ದಿ ವಿಲನ್ ಚಿತ್ರ ಪಾತ್ರವಾಗ್ತಿದೆ.ಆಗಸ್ಟ್ ೧೭ರಂದು ಸಂಜೆ ೬:೩೦ ರಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ , ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಬಾಲಿವುಡ್ ಬೆಡಗಿ ಅಮಿ ಜಾಕ್ಸನ್, ಖ್ಯಾತ ಖಳನಟ ಮಿಥುನ್ ಚಕ್ರವರ್ತಿ, ಮುಖುಲ್ ದೇವ್, ಶ್ರೀಕಾಂತ್, ಲೂಸಿಯಾ ಬೆಡಗಿ ಶ್ರುತಿ ಹರಿಹರನ್, ರಾಧಿಕಾ ಚೇತನ್ ಸೇರಿದಂತೆ ಚಿತ್ರತಂಡದ ಪ್ರಮುಖರು ಆಡಿಯೋ ಬಿಡುಗಡೆಗೆ ಗೆಸ್ಟ್ ಆಗಿ ಆಗಮಿಸುತ್ತಿದ್ದಾರೆ.

ನಿರ್ದೇಶಕ ಪ್ರೇಮ್ ಮೂರು ಹಾಡುಗಳನ್ನು ಈಗಾಗಲ್ಲೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಪ್ರೇಮ್ ಸಿನಿಮಾ ರಿಲೀಸ್‌ಗೂ ಮೊದಲೇ ಅವ್ರ ಚಿತ್ರದ ಹಾಡುಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿಬಿಡುತ್ತೆ. ಈ ಹಾಡುಗಳಿಂದ್ಲೇ ಸಿನಿಮಾಗೆ ಸಿಕ್ಕಾಪಟ್ಟೆ ಹೈಪ್ ಸಿಗುತ್ತೆ. ಅದರಂತೆ ದಿ ವಿಲನ್ ಸಿನಿಮಾ ಆಡಿಯೋ ರೈಟ್ಸ್ ಕೂಡ ಈಗಾಗ್ಲೇ ದಾಖಲೆ ಮೊತ್ತಕ್ಕೆ ಆನಂದ್ ಆಡಿಯೋಗೆ ಸೇಲಾಗಿದ್ದು.

ಜನರಿಗೆ ಸಿನಿಮಾ ಮೇಲಿರೋ ನಿರೀಕ್ಷೆ ಹಾಡುಗಳ ಮೇಲಿರೋ ಎಕ್ಸ್ ಪೆಕ್ಟೇಷನ್‌ನ್ನು ಈಗಾಗಲ್ಲೇ ಅರ್ಧತಣಿಸಿರುವ ಪ್ರೇಮ್ ಇನ್ನುಳಿದ ಹಾಡುಗಳನ್ನು ಯಾವರೀತಿ ನೀಡ್ತಾರೆಂಬ ಕ್ಯೂರಿಯಾಸಿಟಿ ಎಲ್ಲರನ್ನು ಆಡಿಯೋ ರಿಲೀಸ್ ಸಮಯಕ್ಕಾಗಿ ಕಾದು ಕುಳಿಯುವಂತೆ ಮಾಡ್ತಿದೆ.ಹೌದು. ಆಗಸ್ಟ್ ೧೭ಕ್ಕೆ ದುಬೈನಲ್ಲಿ ಚಿತ್ರದ ಆಡಿಯೋವನ್ನು ಅದ್ದೂರಿಯಾಗಿ ಬಿಡುಗಡೆ ಮಾಡ್ತಿರುವ ಪ್ರೇಮ್, ಹಿಂದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ೧೦೦ ಪರ್ಸೆಂಟ್ ಪ್ರಯತ್ನ ಮಾಡ್ತೆನೆ ಅಂದ್ರಿದ್ರು.

ಆದ್ರೆ ಈ ಬಾರಿಯೂ ಪ್ರೇಮ್ ಮತ್ತೊಮ್ಮೆ ಮಾತು ತಪ್ಪಿದ್ದಾರೆ. ವರ ಮಹಾಲಕ್ಷ್ಮೀ ಹಬ್ಬಕ್ಕೆ ಶುರುವಾಗಬೇಕಿದ್ದ ದಿ ವಿಲನ್ ಕಾಳಗ ಮುಂದೂಡಲಾಗಿದೆ.ದಿ ವಿಲನ್ ಚಿತ್ರದ ಬಿಡುಗಡೆಯನ್ನ ಮತ್ತೊಮ್ಮೆ ಪೋಸ್ಟ್‌ಫೋನ್ ಮಾಡಲಾಗಿದೆ. ಸದ್ಯ.. ನಿಗಧಿಯಾಗಿರುವಂತೆ ಮತ್ತು ಪ್ರೇಮ್ ಅಂದುಕೊಂಡತೆ ಚಿತ್ರ, ಆಗಸ್ಟ್ ಬದಲು ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದೆ. ಹೌದು, ಸೆಪ್ಟೆಂಬರ್ ೧೩ಕ್ಕೆ ದಿ ವಿಲನ್ ಚಿತ್ರ ರಾಜ್ಯದ ಮೂಲೆ ಮೂಲೆಯಲ್ಲಿ ಹಾಗೂ ಕೆಲ ಹೊರದೇಶದಲ್ಲಿ ಬಿಡುಗಡೆಯಾಗಲಿದೆ.

ಇನ್ನು ವರಮಹಾಲಕ್ಷ್ಮೀ ಹಬ್ಬಕ್ಕೆ ಬರಬೇಕಿದ್ದ ದಿ ವಿಲನ್, ಸೆಪ್ಟೆಂಬರ್‌ಗೆ ಮುಂದೂಡಿದ್ದೇಕೆ.. ಹೀಗೊಂದು ಪ್ರಶ್ನೆಗುತ್ತರವೆನ್ನುವಂತೆ ಸೆನ್ಸಾರ್ ಮಂಡಳಿಯತ್ತ ಬೊಟ್ಟು ಮಾಡುತ್ತಾರೆ ಪ್ರೇಮ್. ಹೌದು, ದಿ ವಿಲನ್ ಇನ್ನು ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಿಲ್ಲ. ಎಲ್ಲ ಅಂದುಕೊಂಡತೆ ಆದ್ರೆ ಮುಂದಿನ ವಾರ ಅಂದ್ರೆ ಆಡಿಯೋ ಬಿಡುಗಡೆಗೂ ಮುನ್ನ ಸೆನ್ಸಾರ್ ಮಂಡಳಿ ಚಿತ್ರವನ್ನ ವೀಕ್ಷಿಸಲಿದೆ.

ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಚಿತ್ರದ ಆಡಿಯೋ ಹೊರಬೀಳಲಿದೆ. ಇದ್ರ ಬಳಿಕವೇ ದಿ ವಿಲನ್‌ಗಳ ದರ್ಶನ.ಒಟ್ನಲ್ಲಿ ದಿ ವಿಲನ್ ಕ್ರೇಜ್ ಅನ್ನ ಮೊದಲಿನಿಂದ ಹಾಗೆ ಉಳಿಸಿಕೊಂಡು ಬಂದಿರುವ ಪ್ರೇಮ್, ಉಳಿದ ಹಾಡುಗಳ ಮೂಲಕ ಯಾವರೀತಿ ಬ್ಯಾಗ್ ಮಾಡ್ತಾರೆ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here