Home Cinema “ದಿ ವಿಲನ್” ಚಿತ್ರ ನೋಡಲು ಕಾತುರರಾಗಿರುವ ಅಭಿಮಾನಿಗಳ ಕುತೂಹಲ ಹಿಮ್ಮಡಿಗೊಳಿಸಿದ ಸುದೀಪ್ ಆ ಒಂದು ಪೋಸ್ಟರ್..?!

“ದಿ ವಿಲನ್” ಚಿತ್ರ ನೋಡಲು ಕಾತುರರಾಗಿರುವ ಅಭಿಮಾನಿಗಳ ಕುತೂಹಲ ಹಿಮ್ಮಡಿಗೊಳಿಸಿದ ಸುದೀಪ್ ಆ ಒಂದು ಪೋಸ್ಟರ್..?!

434
0
SHARE

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿರೊ ದಿ ವಿಲನ್ ಚಿತ್ರದಿಂದ ಇಂಟ್ರಸ್ಟಿಂಗ್ ಸಂಘತಿಯೊಂದು ಹೊರಬಿದ್ದಿದೆ..ದಿನ ದಿಂದದಿನಕ್ಕೆ ಕುತೂಹಲ ಇಮ್ಮಡಿಗೊಳಿಸುತ್ತ ಅಭಿಮಾನಿಗಳ ನಿದ್ದೆ ಗೆಡಿಸಿರೊ ದಿ ವಿಲನ್ ಅಡ್ಡಾದಿಂದ ಈಗ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ..ವಿಶೇಷ ಅಂದ್ರೆ ಸ್ವತಹ ಕಿಚ್ಚ ಸುದೀಪೇ ಈ ವಿಶ್ಯವನ್ನು ಬಹಿರಂಗಪಡಿಸುವ ಮೂಲಕ ಅಭಿಮಾನಿಗಳ ಕ್ಯೂರಿಯಾಸಿಟಿನ್ನು ಮತ್ತಷ್ಟು ಹೆಚ್ಚಿಸದೆ..

ಯೆಸ್, ಮೋಸ್ಟ್ ಅವೈಟೆಡ್ ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ರಿವೀಲ್ ಮಾಡೊ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್‌ನ್ನು ಮತ್ತಷ್ಟು ಹೆಚ್ಚಿಸಿದೆ ದಿ ವಿಲನ್ ತಂಡ…ಸದ್ಯ ರಿವೀಲ್ ಆಗಿರೊ ಪೋಸ್ಟರ್ ಕಿಚ್ಚ ಸುದೀಪ್ ಪೋಸ್ಟರ್.. ಕಿಚ್ಚ ಇಲ್ಲಿ ಮತ್ತಷ್ಟು ಸ್ಟೈಲೀಶ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಈ ಫೋಸ್ಟರ್ ಬಗ್ಗೆ ಮಾಣಿಕ್ಯ ಒಂದಿಷ್ಟು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅಂದಹಾಗೆ ಈ ಫೋಟೊ ದಿ ವಿಲನ್ ಚಿತ್ರದ ಪ್ರಮುಖ ಸೀನ್ ಒಂದರ ಲುಕ್ ಅಂತೆ…

ಅದ್ರಲ್ಲೂ ಕಿಚ್ಚನ ಅಭಿಮಾನಿಗಳು ಪ್ರತಿಯೊಬ್ಬರು ಮಿಸ್ ಮಾಡದೆ ನೋಡಲೆ ಬೇಕಾದ ದೃಶ್ಯ ವಿದಾಗಿದ್ಯಂತೆ. ಅಷ್ಟೆಯಲ್ಲ ಕಿಚ್ಚನಿಗೂ ಸಹ ಈ ದೃಶ್ಯ ತುಂಬಾ ಇಷ್ಟವಾದ ದೃಶ್ಯವಾಗಿದ್ಯಂತೆ… ಮಾಣಿಕ್ಯನಿಗೆ ಇಷ್ಟವಾದ ಫೇವರಿಟ್ ಸೀನ್ ಬಗ್ಗೆ ಟ್ವಿಟ್ಟರ್‌ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದು ಹೀಗೆ.ಇದು ದಿ ವಿಲನ್ ಸಿನಿಮಾದಲ್ಲಿ ನನಗೆ ತುಂಬಾ ಇಷ್ಟವಾಗಿರೋ ಸೀನ್‌ಗಳಲ್ಲೊಂದು. ಯಾಕಂದ್ರೆ ಈ ಸೀನ್‌ನಲ್ಲಿ ನನ್ನ ಡೈಲಾಗ್ಸ್ ಕೆಲವು ಲೈನ್‌ಗಳಷ್ಟೇ..

ನನ್ನ ಪಾತ್ರವನ್ನು ಇಲ್ಲಿ ತುಂಬ ಸುಂದರವಾಗಿ ವಿವರಿಸಲಾಗಿದೆ..ಆದ್ರೆ ಆ ಕೆಲವೇ ಸಾಲುಗಳು ಇಡೀ ನನ್ನ ಪಾತ್ರವನ್ನ ವಿವರವಾಗಿ ಅರ್ಥ ಮಾಡಿಸುತ್ತೆ..ಜೊತೆಗೆ ಒಬ್ಬ ನಟನಿಗೆ ಡೈಲಾಗ್ ಡೆಲಿವರಿ ವಿಷಯದಲ್ಲಿ ಯಾವಾಗಲು ಚಾಲೆಂಜ್ ಆಗಿರುತ್ತೆ..ಹೀಗೆ ಸಿನಿಮಾದಿಂದ ಸದ್ಯ ರಿವೀಲ್ ಆಗಿರೊ ಕಿಚ್ಚನ ಪೋಸ್ಟರ್‌ನ ಹಿಂದಿನ ರಹಸ್ಯವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆಂಪು ಬಣ್ಣದ ಕಾಸ್ಟೂಮ್ ಧರಿಸಿ ರಗಡ್ ಲುಕ್‌ನಲ್ಲಿ ಕುಳಿತಿರೊ ಸುದೀಪನ ಈ ಫೋಟೊ ಚಿತ್ರಾಭಿಮಾನಿಗಳ ನಿದ್ದೆ ಗೆಡಿಸಿದೆ…ಇದುವೆರಗೂ ಚಿತ್ರದಲ್ಲಿ ವಿಲನ್ ಯಾರು ಅಂತ ಕಣ್ಣಿಗೆ ಎಣ್ಣೆಬಿಡ್ಕೊಂಡು ಕಾಯ್ತಿದ್ದ ಸಿನಿರಸಿಕರೀಗ ಕಿಚ್ಚನ ಫೇವರೆಟ್ ದೃಶ್ಯ ಯಾವಾಗ ಬರುತ್ತೆ..ಆ ಸೀನ್ ಹೇಗಿರುತ್ತೆ…ಅಂತ ಕಾಯುವಂತೆ ಮಾಡಿದೆ ಈ ಪೋಸ್ಟರ್..ಒಂದೆಡೆ ಕಿಚ್ಚನ ಈ ದೃಶ್ಯದ ಬಗ್ಗೆ ಕುತೂಹಲ ಹೆಚ್ಚಿಸಕೊಂಡ್ರೆ ಮತ್ತೊಂದೆಡೆ ನಿರ್ದೇಶಕ ಪ್ರೇಮ್ ಅಕ್ಟೋಬರ್ ಒಂದರಂದು ದಿ ವಿಲನ್ ಯಾರು ಅನ್ನೋದನ್ನ ಅನೌನ್ಸ್ ಮಾಡ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಗುಲ್ ಆಗಿದೆ..

ಸಿನಿಮಾ ರಿಲೀಸ್‌ಗೂ ಮೊದಲೆ ಚಿತ್ರದಿಂದ ಒಂದು ಪುಟ್ಟ ಟೀಸರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿರೊ ಚಿತ್ರತಂಡ ಅಂದೆ ವಿಲನ್ ಯಾರು ಅನ್ನೋ ಕುತೂಹಲಕ್ಕೆ ತೆರೆ ಎಳಿತಾರೆ ಪ್ರೇಮ್ ಅಂತ ಚಿತ್ರಾಭಿಮಾನಿಗಳು ಕಾತುರದಿಂದ ಕಾಯ್ತಿದ್ರು.ಆದ್ರೀಗ ಈ ಕುತೂಲಕ್ಕು ಬ್ರೇಕ್ ಹಾಕಿದ್ದಾರೆ ಸುದೀಪ್ ಅಂಡ್ ನಟಿ ರಕ್ಷಿತಾ..ಯೆಸ್, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರೊ ಸುದೀಪ ಮತ್ತು ರಕ್ಷಿತಾ ಯಾವುದೆ ಕಾರಣಕ್ಕು ದಿ ವಿಲನ್ ಯಾರು ಎಂಬುದು ಸಿನಿಮಾ ರಿಲೀಸ್‌ಗೂ ಮೊದಲೆ ಬಹಿರಂಗ ಪಡಿಸಲ್ಲ..

ಅದೇನೆ ಇದ್ರು ಸಿನಿಮಾ ನೋಡಿದ ಮೇಲೆಯೆ ದಿ ವಿಲನ್ ಯಾರು ಎಂಬುದು ಗೊತ್ತಾಗಲಿದೆ ಅಂತ ಹೇಳೊ ಮೂಲಕ ಅಭಿಮಾನಿಗಳಲ್ಲಿ ಮನೆಮಾಡಿದ್ದ ಕುತೂಹಲಕ್ಕೂ ತೆರೆ ಎಳೆಯಲಾಗಿದೆ.ಸುಮಾರು ವರ್ಷದಿಂದ ದಿ ವಿಲನ್ ಇವತ್ತು ದರ್ಶನ್ ನೀಡ್ತಾನೆ ನಾಳೆ ರಿಲೀಸ್ ಆಗುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯ್ತಿದ್ದ ಚಿತ್ರಾಭಿಮಾನಿಗಳಿಗೆ ಕೊನೆಗೂ ಚಿತ್ರದ ರಿಲೀಸ್ ಡೇಟ್‌ನ್ನು ರಿವೀಲ್ ಮಾಡುವ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳ ಮನತಣಿಸಿದೆ..ಅಂದಹಾಗೆ ಮೋಸ್ಟ್ ಅವೈಟೆಡ್ ದಿ ವಿಲನ್ ಮುಂದಿನ ತಿಂಗಳು ೧೮ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ..

LEAVE A REPLY

Please enter your comment!
Please enter your name here