Home Cinema “ದಿ ವಿಲನ್” ಟಿಕೆಟ್ ಬೆಲೆ ಕೇಳಿದ್ರೆ ನೀವು ಶಾಕ್..?! ಇನ್ನೂ ಗಗನಕ್ಕೇರುವ ನಿರೀಕ್ಷೆ..!! “ಯಾರ್ರೀ, ಬಾಲ್ಕನಿ...

“ದಿ ವಿಲನ್” ಟಿಕೆಟ್ ಬೆಲೆ ಕೇಳಿದ್ರೆ ನೀವು ಶಾಕ್..?! ಇನ್ನೂ ಗಗನಕ್ಕೇರುವ ನಿರೀಕ್ಷೆ..!! “ಯಾರ್ರೀ, ಬಾಲ್ಕನಿ 400 ರುಪಾಯ್ ಅಂತಿದಾನೆ ವಿಲನ್”

267
0
SHARE

ಯಾರ್ರೀ, ಬಾಲ್ಕನಿ ೪೦೦ ರುಪಾಯ್ ಅಂತಿದಾನೆ ವಿಲನ್:ಯಸ್, ದಿ ವಿಲನ್ .. ಇನ್ನೇನು ೯ ದಿನದಲ್ಲಿ ಬರಲಿದೆ. ಟಿಕೆಟ್ ಕೂಡ ಭರ್ತಿಯಾಗಿ ಸೆಲಾಗ್ತಿದೆ. ಈಗಾಗಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಹೀಗಿರುವಾಗ್ಲೇ ಪ್ರೇಮ್ ದಿ ವಿಲನ್ ಚಿತ್ರದ ಟಿಕೇಟ್ ಬೆಲೆ ಗಗನಕ್ಕೇರಿದೆ. ೪೦೦, ೫೦೦ ಹಾಗೂ ೧೦೦೦ ರುಪಾಯಿಗಳಿಗೆ ಟಿಕೇಟ್ ಭರ್ಜರಿಯಾಗಿ ಸೇಲಾಗ್ತಿದೆ.

ಫಾಸ್ಟ್ ಮೂವೀಂಗ್‌ನಲ್ಲಿ ಟೀಕೆಟ್‌ಗಳು ಸೇಲ್ ಆಗ್ತಿದೆ.ಹೌದು, ಮಲ್ಟಿಪ್ಲೆಕ್ಸ್‌ಗಳಲ್ಲಿ ವಿಲನ್ ಅಬ್ಬರಕ್ಕೆ ವೇದಿಕೆ ಸಜ್ಜಾಗಿದೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾದ ದಿನದಿಂದ್ಲೇ ರಾಮ ರಾವಣರ ಕದನ ಕಣ್ತುಂಬಿಕೊಳ್ಳೊದಕ್ಕೆ ಅಭಿಮಾನಿಗಳು ಕಾತುರದಿಂದ ತಮ್ಮ ಶೋ ಟೈಮಿಂಗ್‌ನ್ನು ಬುಕ್ ಮಾಡಿಕೊಳ್ತಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ಚಿತ್ರ ನೋಡಲು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಸದಾ ಗಿಮಿಕ್‌ಗಳ ಮೂಲಕವೇ ಚಿತ್ರದ ಬಗ್ಗೆ ಬಿಟ್ಟಿ ಪ್ರಜಾರ ಗಿಟ್ಟಿಸಿಕೊಳ್ಳುವ ಪ್ರೇಮ್ ಮಾಡ್ತಿರುವ ಈ ಪ್ಲಾನ್‌ಯಿಂದ ಈಗಾಗಲ್ಲೇ ಕೋಟಿ ಕೋಟಿ ರೂ ಗಲ್ಲಾಪೆಟ್ಟಿಗೆ ಸೇರ‍್ತಿದೆ.ಒಂದೊಂದೇ ಬಾಣವನ್ನು ಬಿಟ್ಟು. ಕುತೂಹಲವನ್ನು ಮತ್ತಷ್ಟು ಇಮ್ಮುಡಿಗೊಳಿಸುತ್ತಿರುವ ಪ್ರೇಮ್, ೪ ಟೀಸರ್ ಮೂಲಕ ೬ ಹಾಡುಗಳ ಮೇಕಿಂಗ್ ಮೂಲಕ ಹೊಸದೊಂದು ಮೇನಿಯಾ ಹುಟ್ಟು ಹಾಕಿದಾರೆ ಪ್ರೇಮ್.

ಇನ್ನು ಚಿತ್ರದಲ್ಲಿ ಇನ್ಯಾವ ಸಪ್ರೈಸ್ ಎಲಿಮೆಂಟ್‌ಗಳನ್ನು ಇಟ್ಟಿತ್ತಾರೆ ಅನ್ನೊದು ಅಭಿಮಾನಿಗಳ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಅದೇನೇ ಇರ‍್ಲಿ, ಸದ್ಯ ದಿ ವಿಲನ್ ದರ್ಶನಕ್ಕೆ ಇನ್ನೇನು ೯ ದಿನಗಳಷ್ಟೇ ಇವೆ. ಇದೇ ಹತ್ತು ದಿನ ತಳ್ಳುವುದು ಕಷ್ಟ ಅನ್ನುತ್ತಿರುವ ಅಭಿಮಾನಿಗಳ ಮುಂದೀಗ, ಸಾಂಗ್ ಮೇಕಿಂಗ್ ಬಂದಿದೆ.

ಅಲ್ಲಿಗೆ ಕೂತುಹಲ ಇಮ್ಮಡಿಗೊಂಡಿದೆ. ಸೋ, ಇನ್ನೇಕೆ ತಡ, ನಿಮ್ಮ ಟಿಕೇಟ್‌ನ್ನು ನಾಳೆನೇ ಬುಕ್ ಮಾಡಿ. ಅಕ್ಟೋಬರ್ ೧೮ರಂದು ನಡೆಯಲಿರುವ ದಿ ವಿಲನ್ ಉತ್ಸವದಲ್ಲಿ ಭಾಗಿಯಾಗಲು ಸಿದ್ಧರಾಗಿ.

LEAVE A REPLY

Please enter your comment!
Please enter your name here