Home Cinema “ದಿ ವಿಲನ್” ನೋಡುವ ಮುನ್ನ ಮಾಡ್ಕೊಳ್ಳಿ ಜೇಬು ಗಟ್ಟಿ..!? ಮಲ್ಟಿಪ್ಲೆಕ್ಸ್ನಲ್ಲಿ ರಾಮ,ರಾವಣರ ದರ್ಶವಾಗಲಿದೆ ತುಟ್ಟಿ..! ಗೊತ್ತೇ....

“ದಿ ವಿಲನ್” ನೋಡುವ ಮುನ್ನ ಮಾಡ್ಕೊಳ್ಳಿ ಜೇಬು ಗಟ್ಟಿ..!? ಮಲ್ಟಿಪ್ಲೆಕ್ಸ್ನಲ್ಲಿ ರಾಮ,ರಾವಣರ ದರ್ಶವಾಗಲಿದೆ ತುಟ್ಟಿ..! ಗೊತ್ತೇ. ದಿ ವಿಲನ್ಗಾಗಿ ಪ್ರೇಮ್ ಹಿಡಿದಿದ್ದಾರೆ 3 ಪಟ್ಟು..!

3255
0
SHARE

ದಿ ವಿಲನ್.. ಎಲ್ಲರ ಚಿತ್ತವನ್ನ ಕದ್ದಿರುವ ಸಿನಿಮಾ. ಬಿಡುಗಡೆಗೂ ಮುನ್ನವೇ ಅನೇಕ ದಾಖಲೆಗಳ ಸರದಾರನಾಗ್ತಿರುವ ಸಿನಿಮಾ. ವಿಪರೀತ ನಿರೀಕ್ಷೆಯನ್ನೊತ್ತೇ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿರುವ ದಿ ವಿಲನ್ ನೋಡುವ ಕಾತುರತೆ ಹಾಗೂ ಆತುರತೆ ನಿಮ್ಮಲ್ಲಿ ಇದ್ದರೆ, ಮೊದಲು ನೀವು ನಿಮ್ಮ ಜೇಬನ್ನ ಗಟ್ಟಿಗೊಳಿಸಿಕೊಳ್ಳಬೇಕು..

ಯಸ್, ದಿ ವಿಲನ್.. ಇನ್ನೇನು ಹತ್ತು ದಿನದಲ್ಲಿ ಬರಲಿದ್ದಾನೆ. ನಾಳೆನಿಂದ ಅಡ್ವಾನ್ಸ್ ಬುಕ್ಕಿಂಗ್ ಕೂಡಾ ಶುರುವಾಗಲಿದೆ. ಹೀಗಿರುವಾಗ್ಲೇ ಪ್ರೇಮ್ ದಿ ವಿಲನ್ ಚಿತ್ರದ ಟಿಕೇಟ್ ಬೆಲೆ ೪೦೦, ೫೦೦ ಹಾಗೂ ೧೦೦೦ಕ್ಕೇರಿಸುವ ಉಮೇದಿಯಲ್ಲಿದ್ದಾರೆ.ಹೌದು, ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಮ ರಾವಣರ ಕದನ ಕಣ್ತುಂಬಿಕೊಳ್ಳೋಕೆ, ೪೦೦, ೫೦೦ ಹಾಗೂ ೧೦೦೦ದರ ಫಿಕ್ಸ್ ಮಾಡಬೇಕೆಂದು ಪ್ರೇಮ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಮನವಿ ಮಾಡಿಕೊಳ್ತಿದ್ದಾರೆ.

ಪ್ರೇಮ್ ಮಾಡ್ತಿರುವ ಮನವಿ ಹಿಂದೆ ಕೋಟಿ ಲೂಟಿ ಮಾಡುವ ಉದ್ದೇಶವಿರುವದನ್ನ ಇಲ್ಲಿ ಪ್ರತೈಕವಾಗಿ ಹೇಳಬೇಕಿಲ್ಲ.ನಿಮಗೆ ಗೊತ್ತಿರಲಿ, ದಿ ವಿಲನ್ ಕಣಕ್ಕಿಳಿದ ದಿನದಿಂದ ನಾಲ್ಕು ದಿನ ಸರ್ಕಾರಿ ರಜೆಗಳಿದ್ದಾವೆ. ಹಾಗಾಗೇ, ಲಾಂಗ್ ವೀಕೆಂಡ್‌ನಲ್ಲಿ.. ಎಷ್ಟಾಗುತ್ತೋ ಅಷ್ಟು ಕೋಟಿ ಲೂಟಿ ಮಾಡುವ ಇರಾದೆಯಲ್ಲಿ ಪ್ರೇಮ್ ಇದ್ದಂಗಿದೆ. ಕಾರಣ, ಇದು ಹೇಳಿ ಕೇಳಿ ಚಕ್ರವರ್ತಿದ್ವಯರ ಸಮಾಗಮದ ಸಿನಿಮಾ.

ಇನ್ನೂ ಚಿತ್ರದ ಮೇಲೆ ನಿರೀಕ್ಷೆ ವಿಪರೀತವಿದೆ. ಹಾಗಾಗೇ, ದೊಡ್ಡ ಮಟ್ಟದಲ್ಲಿ ಚಿತ್ರಪ್ರೇಮಿಗಳು ಚಿತ್ರಮಂದಿರಗಳಿಗೆ ನುಗ್ಗೋದು ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ರಜೆ ಇರುವದರಿಂದ ಸಿನಿಮಾ ನೋಡಲು ಬರುವವರ ಸಂಖ್ಯೆ ಹೆಚ್ಚೇ ಇರುತ್ತೆ. ಇದೆಲ್ಲಾ ಕಾರಣದಿಂದ.. ಪ್ರೇಮ್, ದರ ಏರಿಸುವಂತಹ ಐಡಿಯಾ ಮಾಡಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಸದ್ಯ ಕೇಳಿ ಬರ‍್ತಿರುವ ಮಾತು
ಇನ್ನೂ ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ಏರಿಸುವ ಚಿಂತನಯೆನ್ನೂ ಮಾಡ್ತಿರುವ ಪ್ರೇಮ್, ಇದೇ ವೇಳೆ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ತೊಡೆನೂ ತಟ್ಟಿದ್ದಾರೆ.

ಯಸ್, ನಿಮಗೆ ಗೊತ್ತಿರಲಿ. ಕಾಲ ಮೊದಲಿನಂತಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆ ಈಗ ದೊಡ್ಡದಾಗಿದೆ. ಸಿನಿಮಾಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆ ಮಲ್ಟಿಪ್ಲೆಕ್ಸ್‌ಗಳು, ನಿರ್ಮಾಪಕರ ಜೇಬಿಗೆ ಕತ್ತರಿ ಹಾಕ್ತಿವೆ. ಪ್ರದರ್ಶನದ ಅರ್ಧ ಹಣವನ್ನು ಮಲ್ಟಿಪ್ಲೆಕ್ಸ್ ಮಾಲೀಕರು ಜೇಬಿಗೆ ಇಳಿಸಿಕೊಳ್ತಿದ್ದಾರೆ. ಇಂತಹ ಧೋರಣೆಯನ್ನು ‘ದಿ ವಿಲನ್ ಚಿತ್ರತಂಡ ಪ್ರಶ್ನಿಸಿದೆ.

ಕನ್ನಡ ಚಿತ್ರರಂಗ -ನಿರ್ಮಾಪಕರ ಉಳಿವಿಗೆ ಹೊಸದೊಂದು ಮಾರ್ಗ ಹುಡುಕಿದೆ.ಹೌದು, ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಒಂದು ಕಡೆ ಪ್ರಯೋಗಾತ್ಮಕ ಸಿನಿಮಾಗಳೂ ಬರ್ತಿವೆ. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿನಿಮಾಗಳು ನಿರ್ಮಾಣವಾಗ್ತಿವೆ. ಗಲ್ಲಾ ಪೆಟ್ಟಿಗೆಯಲ್ಲೂ ಗಣನೀಯವಾಗಿ ಸದ್ದು ಮಾಡ್ತಿವೆ. ಆದರೆ, ಮಲ್ಟಿಪ್ಲೆಕ್ಸ್‌ನಿಂದ ಬರುವ ಲಾಭ ಮಾತ್ರ ನಿರ್ಮಾಪಕರ ಕೈ ಸೇರುತ್ತಿಲ್ಲ.

ಯಾಕೆಂದ್ರೆ, ಪ್ರದರ್ಶನದಿಂದ ಬರೋ ಹಣವನ್ನು ನಿರ್ಮಾಪಕರು- ಮಲ್ಟಿಪ್ಲೆಕ್ಸ್ ಮಾಲೀಕರು ಸಮನಾಗಿ ಹಂಚಿಕೊಳ್ತಿದ್ದಾರೆ. ಅಂದರೆ ೫೦:೫೦ ಅನುಪಾತದಲ್ಲಿ ಹಂಚಿಕೆ ನಡೀತಿದೆ. ಆದರೆ, ಇದರಿಂದ ನಿರ್ಮಾಪರಿಗೆ ಹೆಚ್ಚಿನ ಹೊಡೆತ ಬೀಳುತ್ತಿದೆ.ಮಲ್ಟಿಪ್ಲೆಕ್ಸ್‌ನವರ ಈ ಧೋರಣೆಯನ್ನು ಪ್ರಶ್ನಿಸಿ ‘ದಿ ವಿಲನ್ ಚಿತ್ರತಂಡ ಕಳೆದ ವಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿತ್ತು. ನಿರ್ಮಾಪಕರಿಗೆ ಹೆಚ್ಚಿನ ಷೇರು ಬರಬೇಕು ಅಂತಾ ವಾದಿಸಿತ್ತು.

ಕೋಟಿಗಟ್ಟಲೆ ಹಣ ಹೂಡಿ ಸಿನಿಮಾ ನಿರ್ಮಿಸೋ ನಿರ್ಮಾಪಕರಿಗೆ ಇದರಿಂದ ಮೋಸವಾಗ್ತಿದೆ. ಹೀಗಾಗಿ, ಹೆಚ್ಚಿನ ಷೇರು ನಿರ್ಮಾಪಕರಿಗೆ ಸಿಗಬೇಕು ಅಂತಾ ಮನವರಿಕೆ ಮಾಡಿಸಿತ್ತು. ಈ ಮನವಿ ಸಂಬಂಧವಾಗಿ ವಾಣಿಜ್ಯ ಮಂಡಳಿ ಸಭೆಯನ್ನೂ ನಡೆಸಿತ್ತು.ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ ಆಗ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದಕ್ಕೆ ಪರಿಹಾರವನ್ನ ನೀಡುತ್ತೆ ಅನ್ನುವ ಭರವಸೆಯಲ್ಲಿದ್ದಾರೆ. ಹಾಗಾಗೇ, ವಾಣಿಜ್ಯ ಮಂಡಳಿಯಲ್ಲಿ ಮನವಿ ಸಲ್ಲಿಸಿದ ಬಳಿಕ, ಕನ್ನಡ ಕಲಾಭಿಮಾನಿಗಳ ಮುಂದೆ ಇದೇ ವಿಚಾರವನ್ನ ಹಂಚಿಕೊಂಡಿದ್ದರು ಪ್ರೇಮ್…

LEAVE A REPLY

Please enter your comment!
Please enter your name here