Home Crime ದೀಪಾವಳಿ ಹಬ್ಬದಂದೇ ಜನಾರ್ದನ ರೆಡ್ಡಿಗೆ ಸಂಕಷ್ಟ..! ಏನಿದು ಆಂಬಿಡೆಂಟ್ ಹಣ ದ್ವಿಗುಣ ಪ್ರಕರಣ..?

ದೀಪಾವಳಿ ಹಬ್ಬದಂದೇ ಜನಾರ್ದನ ರೆಡ್ಡಿಗೆ ಸಂಕಷ್ಟ..! ಏನಿದು ಆಂಬಿಡೆಂಟ್ ಹಣ ದ್ವಿಗುಣ ಪ್ರಕರಣ..?

389
0
SHARE

ಬಿಜೆಪಿ ನಾಯಕ ಜನಾರ್ದನ ರೆಡ್ಡಿಗೆ ಸಿಸಿಬಿ ಪೊಲೀಸರಿಂದ ಮತ್ತೆ ಸಂಕಷ್ಟ ಎದುರಾಗಿದೆ. ಆಂಬಿಡೆಂಟ್ ಚಿಟ್​ಫಂಡ್​ ವಂಚನೆ ಪ್ರಕರಣದಲ್ಲಿ ಈಗ ರೆಡ್ಡಿಯ ಹೆಸರು ತಳುಕು ಹಾಕಿಕೊಂಡಿದ್ದು, ಸಿಸಿಬಿ ಪೊಲೀಸರು, ಜನಾರ್ದನ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಣ ದ್ವಿಗುಣ ಮಾಡೋ ಕಂಪನಿಯೊಂದು ಗ್ರಾಹರಿಗೆ ವಂಚಿಸಿದ್ದು, ಪ್ರಕರಣ ಮುಚ್ಚಿಹಾಕಲು ಜನಾರ್ದನ ರೆಡ್ಡಿ ಕೋಟಿ ಕೋಟಿ ಡೀಲಿಂಗ್ ನಡೆಸಿರೋದು ಬಹಿರಂಗವಾಗಿದೆ.

ಬಳ್ಳಾರಿ ಗಣಿಧಣಿ ಜನಾರ್ದನ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದಾರೆ… ಅಷ್ಟೇ ಅಲ್ಲ ದೀಪಾವಳಿ ಹಬ್ಬದಂದೇ ಬಂಧನ ಭೀತಿ ಎದುರಿಸುತ್ತಿದ್ದಾರೆ… ಸಾವಿರಾರು ಕೋಟಿ ಮೌಲ್ಯದ ಬಳ್ಳಾರಿ ಸಂಪತ್ತು ತಿಂದು ತೇಗಿ ಜೈಲಿಗೆ ಹೋಗಿ ಬಂದಿದ್ದ ರೆಡ್ಡಿ ಮತ್ತೊಂದು ಡೀಲ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ… ಒಮ್ಮೆ ಕೆಟ್ಟರೂ ಈ ಡೀಲ್ ರೆಡ್ಡಿಗೆ ಬುದ್ಧಿ ಬಂದಿಲ್ಲ ಅಂತಾಯ್ತು…

2017 ರಲ್ಲಿ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿ ಈ ಕಂಪನಿಯ ಕಚೇರಿಯಿದ್ದು, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿತ್ತು. ಪ್ರತಿ ಗ್ರಾಹಕರಿಂದ ಕನಿಷ್ಠ ಹೂಡಿಕೆ ಒಂದು ಲಕ್ಷ ರೂ. ಪಡೆಯುತ್ತಿತ್ತು. 1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ. ನಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿತ್ತು.

ಆದ್ರೆ ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಮಾಡಿತ್ತು. ಈ ಸಂಬಂಧ ಕಂಪನಿ ಮಾಲಿಕ ಫರೀದ್ ಸೇರಿದಂತೆ ಹಲವರ ಮೇಲೆ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನ ಸಿಸಿಬಿ ಪೊಲೀಸ್ರಿಗೆ ವರ್ಗಾಯಿಸಲಾಗಿತ್ತು… ಇಡಿಯಲ್ಲೂ ಈ ಪ್ರಕರಣ ದಾಖಲಾಗಿತ್ತು..

ಈ ಸಂಬಂಧ ಕಳೆದ ಜನವರಿಯಲ್ಲಿ ಇಡಿ ಪೊಲೀಸರು ದಾಳಿ ನಡೆಸಿ ಕೆಲ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. ಈ ಕೇಸ್ ಮುಚ್ಚಿಹಾಕಲು ಕಂಪನಿ ಮಾಲೀಕ ಫರೀದ್ ಹಲವರ ಹಿಂದೆ ಸುತ್ತಿದ್ದರು. ಈ ವೇಳೆ ಜನಾರ್ದನ ರೆಡ್ಡಿ ಪಿಎ ಆಗಿದ್ದ ಅಲಿಖಾನ್, ಆಂಬಿಡೆಂಟ್ ಮಾಲೀಕ ಫರೀದ್​ಗೆ ಜನಾರ್ದನ ರೆಡ್ಡಿಯನ್ನು ಬೆಂಗಳೂರಿನ ತಾಜ್ ವೆಸ್ಟ್ ಆ್ಯಂಡ್ ಹೋಟೆಲ್​ನಲ್ಲಿ ಭೇಟಿ ಮಾಡಿಸಿದ್ದ.

ಬಿಲ್ಡರ್ ಬ್ರಿಜೇಶ್, ಬೆಂಗಳೂರಿನ ಅಂಬಿಕಾ ಜ್ಯುಯಲರ್ಸ್ ರಮೇಶ್ ಕೊಠಾರಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಜನಾರ್ದನ ರೆಡ್ಡಿ ಆಂಬಿಡೆಂಟ್ ಕೇಸು ಮುಚ್ಚಿ ಹಾಕಲು ಕೋಟಿ ಡೀಲ್ ಕುದುರಿಸುತ್ತಾರೆ… ಆಗ ಜನಾರ್ದನ ರೆಡ್ಡಿ ಈ ಪ್ರಕರಣದಿಂದ ನಿಮ್ಮನ್ನ ಬಚಾವ್ ಮಾಡುವುದಾಗಿ ಹೇಳಿ 25 ಕೋಟಿ ಡೀಲ್ ಮಾಡ್ತಾರೆ. ತಾಜ್ ವೆಸ್ಟ್ ಆ್ಯಂಡ್ ನಲ್ಲಿ ಫರೀದ್ ರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಸೇರಿ 25 ಕೋಟಿ ಡೀಲ್‍ಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಇದೇ ವೇಳೆ ಡೀಲ್ ಹಣವನ್ನು ಬ್ಲಾಕ್ ಮನಿಯಾಗಿ ನೀಡುವಂತೆ ರೆಡ್ಡಿ ಬೇಡಿಕೆ ಇಟ್ಟಿದ್ದರು. ಆದರೆ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮಾತ್ರ ಬ್ಲಾಕ್ ಇಲ್ಲ ವೈಟ್ ಹಣವಾಗಿ ನೀಡಿದ್ದರು. ಹೀಗಾಗಿ ರೆಡ್ಡಿ ಸೂಚನೆ ಮೇರೆಗೆ ಅಂಬಿಕಾ ಜ್ಯುಯಲರ್ಸ್ ನ ಮಾಲಿಕ ರಮೇಶ್ ಕೊಠಾರಿ ಅಕೌಂಟ್ ಗೆ 20 ಕೋಟಿ ವೈಟ್ ನಲ್ಲಿ ವರ್ಗಾವಣೆ ಮಾಡ್ತಾರೆ ಫರೀದ್.ಫರೀದ್ ವರ್ಗಾವಣೆ ಮಾಡಿದ 20 ಕೋಟಿ ಹಣದಲ್ಲಿ ರಮೇಶ್ ಕೊಠಾರಿ ತನ್ನ 10 ಪರ್ಸೆಂಟ್ ಕಮಿಷನ್ ಹಿಡಿದುಕೊಂಡು ಉಳಿದ 18 ಕೋಟಿಯನ್ನು ರೆಡ್ಡಿಗೆ ಬ್ಲಾಕ್ ನಲ್ಲಿ ನೀಡುತ್ತಾರೆ..

ಈ ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸ್ರು ರಮೇಶ್ ಕೊಠಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಫೋಟಕ ಡೀಲ್ ಕೇಸ್ ಬಹಿರಂಗವಾಯ್ತು.ಈ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿ ಆಪ್ತ ರಮೇಶ್, ಸಿಸಿಬಿ ಎದುರು ಹಾಜರಾಗಿ ನನಗೂ ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್​ಗೂ ಯಾವುದೇ ಸಂಬಂಧವಿಲ್ಲ. ಗಾಲಿ ರೆಡ್ಡಿ ಹೇಳಿದಕ್ಕೆ ನಾನು ನನ್ನ ಅಕೌಂಟ್​ಗೆ ಹಣವನ್ನು ಟ್ರಾನ್ಸ್​ಫರ್ ಮಾಡಲು ಒಪ್ಪಿದೆ. ಈ ಪ್ರಕರಣದ ಡೀಲ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ… ಸದ್ಯ ಹಣ ಟ್ರಾನ್ಸಫರ್ ದಾಖಲೆ ಹೊಂದಿರುವ ಸಿಸಿಬಿ ಅಧಿಕಾರಿಗಳು ಅದರಂತೆ ಈ ಪ್ರಕರಣದಲ್ಲಿ ಗಾಲಿ ರೆಡ್ಡಿಯನ್ನು ಬಂಧಿಸಲು ಪ್ಲಾನ್ ಮಾಡಿದ್ದಾರೆ..

LEAVE A REPLY

Please enter your comment!
Please enter your name here