Home Cinema ದುಃಖ ಉಕ್ಕಿತು ’ಡಿ ಬಾಸ್’ ಮನಸ್ಸಿನಾಳದ ವ್ಯಥೆಯ ಸುತ್ತಾ. . ! ಮೈಸೂರು ಹುಡುಗನ ಕಣ್ಣೀರ...

ದುಃಖ ಉಕ್ಕಿತು ’ಡಿ ಬಾಸ್’ ಮನಸ್ಸಿನಾಳದ ವ್ಯಥೆಯ ಸುತ್ತಾ. . ! ಮೈಸೂರು ಹುಡುಗನ ಕಣ್ಣೀರ ಕಥೆಯೇನು ಗೊತ್ತಾ . ! ರಿವೀಲ್ ಆಯ್ತು ದರ್ಶನ್‌ಗೆ ಕಾಡ್ತಿರೊ ಆ ನೋವು..!

1633
0
SHARE

ದರ್ಶನ್‌ಗೆ ಕಾಡ್ತಿರೊ ಆ ನೋವು ಯಾವುದು ಅಂತ ಈಗ ರಿವೀಲ್ ಆಗಿದೆ. ಇವತ್ತು ಡಿ ಬಾಸ್ ಗಳಿಸಿರೋ ಯಶಸ್ಸು ಕೂಡ ಈ ನೋವಿನ ಮುಂದೆ ಲೆಕ್ಕಕ್ಕೆ ಇಲ್ಲವಂತೆ.

ದರ್ಶನ್ ಮನದಾಳದ ಆ ವೇದನೆ ಎಲ್ಲರಿಗೂ ಮಾರ್ಗದರ್ಶನವಾಗುತ್ತೆ. ಇಂತಹ ಸೀರಿಯಸ್ ಮ್ಯಾಟರ್‌ನ ಈಗ ದರ್ಶನ್ ಬಿಚ್ಚಿಟ್ಟ ಕಾರಣವಾದ್ರೂ ಏನು? ಹೌದು. ದರ್ಶನ್ ಮೈಸೂರಿನ ಸಂಪತ್ತು ಅಂತ ಕೆಲವರಿಗೆ ಇನ್ನೂ ಗೊತ್ತೇಇಲ್ಲ. ಮೈಸೂರಿಗೂ ದರ್ಶನ್‌ಗೂ ಬಿಡಿಸಲಾರದ ನಂಟು. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನನಾಗುವ ಹಿಂದೆ ಕಣ್ಣುಗಳನ್ನ ಒದ್ದೆಗೊಳಿಸುವ ಎಷ್ಟೋ ’ಆಫ್ ದಿ ರೆಕಾರ್ಡ್’ ಸ್ಟೋರಿಗಳಿವೆ.

ಆಗಾಗ ಸಭೆ ಸಮಾರಂಭಗಳಲ್ಲಿ ತಾವು ಪಟ್ಟಪಾಡುಗಳನ್ನ ಇನ್‌ಡೈರೆಕ್ಟ್ ಆಗಿ ಬಿಚ್ಚಿಡುವ ದರ್ಶನ್ ಮನಸ್ಸು ನೋವಿನ ಸಾಗರ. ದರ್ಶನ್ ಸಂಘರ್ಷದ ನೆನಪುಗಳು ಅಪಾರ.ಮೊನ್ನೆ ತಾನೇ ಮೈಸೂರಿನ ಸುತ್ತೂರು ಜಾತ್ರೆಯ ಭಜನಾಮೇಳಕ್ಕೆ ದರ್ಶನ್ ಆಗಮಿಸಿ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿಬಿಟ್ರು. ಈ ಕಾರ್ಯಕ್ರಮ ದರ್ಶನ್‌ಗೆ ಹೊಸತೇನಲ್ಲ. ಕಾರ್ಯಕ್ರಮದಲ್ಲಿ ದರ್ಶನ್ ಮಾತನಾಡಿದ್ದು ಒಬ್ಬ ಸ್ಟಾರ್ ನಟ ಎನ್ನುವ ಹಮ್ಮುಬಿಮ್ಮಿನಲ್ಲಿ ಅಲ್ಲ. ಬದಲಾಗಿ ಚಾಲೆಂಜಿಂಗ್ ಸ್ಟಾರ್ ಆಗುವುದಕ್ಕಿಂತ ಮುಂಚಿನ ಕಾಮನ್‌ಮ್ಯಾನ್ ದರ್ಶನ್ ಆಗಿ.

ಒಂದು ಕ್ಷಣ ಮೈಸೂರಿನ ಅಭಿಮಾನಿಗಳ ಪ್ರೀತಿಯ ಹರ್ಷೋದ್ಗಾರದ ಮುಂದೆ ದರ್ಶನ್ ಮೂಕವಿಸ್ಮಿತರಾಗಿಬಿಟ್ರು. ನಂತರ ತಮ್ಮ ಖಡಕ್ ಸ್ಟೈಲ್‌ನಲ್ಲೇ ಮಾತು ಶುರು ಮಾಡಿದ ದರ್ಶನ್ ’ಎಲ್ರೂ ಸ್ವಲ್ಪ ಸುಮ್ಮನೇ ಇರ್‌ಬೇಕಣ್ಣ, ನಾವು ಮಾತನಾಡೋದು ಕೇಳಿಸಬೇಕಲ್ವಾ?’ ಎಂದು ಅಭಿಮಾನಿಗಳಿಗೆ ತಮಾಷೆಯ ಮನವಿ ಮಾಡಿಕೊಂಡ್ರು. ’ಸುತ್ತೂರನ್ನ ನಾನು ನಿನ್ನೆ ಮೊನ್ನೆಯಿಂದ ನೋಡ್ತಿಲ್ಲ. ಬೇಜಾರು ಏನಪ್ಪ ಅಂದ್ರೇ ನಾವೇನೊ ಸಣ್ಣ ಪುಟ್ಟ ಸಿನಿಮಾಗಳಲ್ಲಿ ಆಕ್ಟ್ ಮಾಡ್ತೀವಿ. ಆದರೆ ಇವತ್ತು ನನ್ನನ್ನ ಈ ಸ್ಥಾನದಲ್ಲಿ ತಂದು ಕೂರಿಸಿದ್ದೀರಾ.

ಮುಂಚೆ ನಾನು ಒಬ್ಬ ಕಾಮನ್‌ಮ್ಯಾನ್ ಆಗಿ ಜಾತ್ರೆಯನ್ನ ಎಂಜಾಯ್ ಮಾಡ್ತೀದ್ದೆ. ಈಗ ನೀವು ಜಾತ್ರೆಯ ಅಸಲಿ ಮಜಾನ ಅನುಭವಿಸೋಕೆ ಬಿಡ್ತೀರಾ’ ಎಂದು ಜೋಕ್ ಮಾಡಿದ್ರು ಡಿ ಬಾಸ್. ನಂತರ ಮಾತು ಮುಂದುವರೆಸಿದ ದರ್ಶನ್ ’ ನಾನೂ ಕೂಡ ಒಬ್ಬ ಜೆಎಸ್‌ಎಸ್ ಸ್ಟೂಡೆಂಟ್. ನಾನು ಜೆಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಮಾಡಿದೆ. ಆದರೆ ನನ್ನ ಅರ್ಹತೆಗೆ ಆರು ತಿಂಗಳಲ್ಲೇ ವಾಪಸ್ ಬಂದುಬಿಟ್ಟೆ. ನನಗೆ ಯಾಕೋ ವಿದ್ಯೆ ತಲೆಗೆ ಹತ್ತಲಿಲ್ಲ.

ನನ್ನ ತಂದೆಗೆ ಹುಷಾರಿಲ್ಲದಿರುವ ಸಂದರ್ಭದಲ್ಲಿ ನಾನು ಫೈನಾಶಿಯಲಿ ತುಂಬಾ ಪ್ರಾಬ್ಲಮ್ ಎದುರಿಸಿದ್ದೇನೆ. ಆಗ ಇದೇ ಜೆಎಸ್‌ಎಸ್ ಆಸ್ಪತ್ರೆ ತುಂಬಾ ಸಹಾಯ ಮಾಡಿದೆ’ ಎಂದು ತಮ್ಮ ತಂದೆ ಶ್ರೀನಿವಾಸ್ ತೂಗುದೀಪ್‌ರನ್ನ ನೆನಪಿಸಿಕೊಂಡು ಸ್ವಲ್ಪ ಭಾವುಕರಾದ್ರು.ಇನ್ನು ವಿದ್ಯಾರ್ಥಿಗಳನ್ನ ಉದ್ದೇಶಿಸಿ ದರ್ಶನ್ ಕೆಲವು ಕಿವಿಮಾತುಗಳನ್ನೂ ಹೇಳಿದ್ರು. ’ಎಲ್ಲರೂ ಚೆನ್ನಾಗಿ ಓದಿ ಉತ್ತಮ ಫ್ಯೂಚರನ್ನ ನಿರ್ಮಿಸಿಕೊಳ್ಳಿ. ಯಾಕಂದ್ರೆ ಸರಿಯಾಗಿ ಓದದೇ ನಾನು ಪಟ್ಟ ಕಷ್ಟಗಳು ಚೆನ್ನಾಗಿ ಗೊತ್ತು. ನಿಮ್ಮ ಒಂದು ಡಿಗ್ರಿ ಒಂದು ಕೋಟಿಗೆ ಸಮಾನ.

ಆದ್ದರಿಂದ ಎಲ್ಲರಿಗೂ ನನ್ನ ಮನವಿ ಇಷ್ಟೇ. ವಿದ್ಯೆ ಇಲ್ಲದ ಕಷ್ಟ ಯಾರಿಗೂ ಬೇಡ’ ಎಂದು ದರ್ಶನ್ ತಮ್ಮ ಅನುಭವವನ್ನೇ ವಿದ್ಯಾರ್ಥಿಗಳ ಮುಂದೆ ತೆರೆದಿಟ್ರು. ಇಂದು ಸಕ್ಸಸ್‌ನ ತುತ್ತಾತುದಿಯಲ್ಲಿದ್ರು ದರ್ಶನ್ ವಿದ್ಯಾಭ್ಯಾಸಕ್ಕೆ ಎಷ್ಟೂ ಮಹತ್ವ ಕೊಡ್ತಾರೆ ಎನ್ನುವುದರ ಸಣ್ಣ ಎಕ್ಸಾಂಪಲ್ ಇದು. . !ಅಂತೂ ಸುತ್ತೂರು ಮಠದ ಈ ಜಾತ್ರಾಮಹೋತ್ಸವ ದರ್ಶನ್ ಜೀವನದ ಕೆಲವು ಇಂಟ್ರೆಸ್ಟಿಂಗ್ ಘಟನೆಗಳನ್ನ ಮತ್ತೆ ಓಪನ್ ಮಾಡಿಸಿದೆ. ಇಂದು ಎಲ್ಲರಿಗೂ ದರ್ಶನ್ ಸಿನಿಮಾಲೈಫ್‌ನ ಅಬ್ಬರ ದೊಡ್ಡದಾಗಿ ಕಾಣಿಸಬಹುದು.

ಆದರೆ ಈ ಸೆಲ್ಫ್ ಮೇಡ್ ಸ್ಟಾರ್‌ನ ಸ್ಟ್ರಗಲ್ ಕೆಲವೊಂದು ಅಪರೂಪದ ಕ್ಷಣಗಳಲ್ಲಿ ಮಾತ್ರ ರಿವೀಲ್ ಆಗುತ್ತೆ. ತಾನು ನಡೆದುಬಂದ ಹಾದಿಯನ್ನ ಸುಲಭವಾಗಿ ಮರೆಯದ ದರ್ಶನ್ ಈಗಲೂ ಸ್ಯಾಂಡಲ್‌ವುಡ್‌ನ ’ಡೌನ್ ಟು ಅರ್ಥ್’ ಸ್ಟಾರ್‌ಗಳಲ್ಲಿ ಒಬ್ಬರು. ಮಾತುಮಾತಿಗೂ ನಾವು ಚಿಕ್ಕಪುಟ್ಟ ಕಲಾವಿದರು ಎನ್ನುವ ಡಿಬಾಸ್ ದೊಡ್ಡಗುಣವನ್ನೇ ಅಭಿಮಾನಿಗಳು ತುಂಬಾ ಲೈಕ್ ಮಾಡೋದು ಅನಿಸುತ್ತೆ. ಯಶಸ್ಸು ಹಾಗೂ ಸಿಂಪ್ಲಿಸಿಟಿಗಳ ನಡುವಿನ ವ್ಯತ್ಯಾಸ ಏನು ಅಂತ ತಿಳಿಸೋ ದರ್ಶನ್ ಜೀವನ ನಿಜಕ್ಕೂ ಸರಳತೆಯ ನಿದರ್ಶನ. . !

LEAVE A REPLY

Please enter your comment!
Please enter your name here