Home Cinema ದುಡ್ಡಿಗಾಗಿ ಮಾಡಿದ್ರು ಖಳನಾಯಕ ವಜ್ರಮುನಿ ಬಾಮೈದನ ಕಿಡ್ನಾಪ್..!! ಕೊನೆಗೆ ಪೊಲೀಸರಿಗೆ ಅವರೇ ಸುಳಿವು ಕೊಟ್ಟು ಸಿಕ್ಕಾಕ್ಕೊಂಡಿದ್ದು...

ದುಡ್ಡಿಗಾಗಿ ಮಾಡಿದ್ರು ಖಳನಾಯಕ ವಜ್ರಮುನಿ ಬಾಮೈದನ ಕಿಡ್ನಾಪ್..!! ಕೊನೆಗೆ ಪೊಲೀಸರಿಗೆ ಅವರೇ ಸುಳಿವು ಕೊಟ್ಟು ಸಿಕ್ಕಾಕ್ಕೊಂಡಿದ್ದು ಹೇಗೆ ಗೊತ್ತಾ..?!

3917
0
SHARE


ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತಾರೆ… ಆದರೆ, ಸಾಲ ಅನ್ನೋ ಶೂಲ ವ್ಯಕ್ತಿಯನ್ನ ಬೆನ್ನತ್ತಿದಾಗ ನಿಯತ್ತಿನಲ್ಲೂ ಮೋಸಮಾಡೋ ಮನಸ್ಥಿತಿ ಹುಟ್ಟಿಕೊಳ್ಳುತ್ತೆ… ಯಸ್, ಮೈತುಂಬಾ ಸಾಲ ಮಾಡ್ಕೊಂಡ ಇಂಟಿರಿಯಲ್ ಡಿಸೈನರ್ ಒಬ್ಬ ಸಾಲತೀರಿಸೋಕೆ ಆಯ್ದುಕೊಂಡ ಕೆಲಸ ಕಿಡ್ನಾಪ್…ಹಿಂಗೇ ಗೊತ್ತಿಲ್ಲದ ಕಿಡ್ನಾಪ್ ಗೆ ಕೈ ಹಾಕಿದ ತಪ್ಪಿಗೆ ಕೈಗೆ ಕೋಳ ಬಿದ್ದಿದೆ ಬಗಲ್ ಮೇ ದುಷ್ಮನ್ ಗೆ…

ಯಾರನ್ನಾ ನಂಬೋದೂ ಈ ಬೆಂಗಳೂರಲ್ಲಿ…ಎರಡು ವರ್ಷದಿಂದ ಪರಿಚಯಸ್ಥನಲ್ವಾ ಅಂತಾ ನಂಬಿ ಹೋಗಿದ್ದಕ್ಕೆ ಇವತ್ತು ವಜ್ರುಮುನಿ ಭಾಮೈದ ಸಾವಿನ ದವಡೆಗೆ ಸಿಕ್ಕಿ ನಲುಗಿದ್ರು..

ಇಂಗ್ಲೀಷ್ ಫಿಲ್ಮ್ ರೇಂಜ್ ಗೆ ಪ್ಲಾನ್ ಮಾಡಿ ರಾತ್ರೋ ರಾತ್ರಿ ಕೋಟ್ಯಾಧೀಶನಾಗಿ ಬಿಡೋಣಾ ಅಂತಾ ಪ್ಲಾನ್ ಮಾಡಿದ್ದ ಈ ಹೈವಾನ್, ಕೊನೆಗೆ ತಲೆ ಇಲ್ದೇ ಕಿಡ್ನಾಪ್ ಮಾಡೋದಕ್ಕೆ ಹೋಗಿ ಪೊಲೀಸ್ರ ಕೈಗ ತಗಲಾಕಿಕೊಂಡಿದ್ದಾನೆ..

ಇವ್ರೇ ಶಿವಕುಮಾರ್…ಖಳನಟ ವಜ್ರಮುನಿ ಅವರ ಭಾಮೈದ…ಬನ್ನೇರುಘಟ್ಟ ರೋಡ್ ನಲ್ಲಿ ಇವರದೊಂದು ಫ್ಲಾಟ್ ಇದೆ. ಈ ಫ್ಲಾಟ್ ಗೆ ಇಂಟಿರಿಯರ್ ಡೆಕೋರೇಷನ್ ಮಾಡಿದ್ದು ಈ ಸತ್ಯವೇಲಾಚಾರಿ. ತುಂಬಾ ಚೆನ್ನಾಗಿ ಡೆಕೋರೇಷನ್ ಮಾಡಿದ್ರಿಂದ 2 ವರ್ಷದಿಂದ ವಜ್ರಮುನಿ ಫ್ಯಾಮಲಿ ಜೊತೆ ಒಳ್ಳೆ ಕಾಂಟಾಕ್ಟ್ ನಲ್ಲಿದ್ದ. ಮೊನ್ನೆ ಶಿವಕುಮಾರ್ ಅವರು ಫ್ಲಾಟ್ ಮಾರಿದ್ರಿಂದ 75 ಲಕ್ಷ ರೂಪಾಯಿ ದುಡ್ಡು ಬಂದಿತ್ತು..ಅದೇ ಟೈಮ್ ಗೆ ಇನ್ನೋವಾ ಗಾಡಿ ತಗೊಂಡು ಶೋಕಿ ಮಾಡ್ತಿದ್ದ ಸತ್ಯನಿಗೆ ಇ.ಎಮ್.ಐ ಕಟ್ಟೋದಕ್ಕೂ ದುಡ್ಡು ಗತಿ ಇರ್ಲಿಲ್ಲ…ಸೋ ಶಿವಕುಮಾರ್ ದುಡ್ಡು ಮೇಲೆ ಸತ್ಯನ ಕಣ್ಣು ಬಿತ್ತು. ಅದಕ್ಕೆ ಮಾಡಿದ್ದ ಡಬ್ಬಾ ಪ್ಲಾನೇ ಶಿವಕುಮಾರ್ ಕಿಡ್ನಾಪ್…

ಇದೀಗ ಕಿಡ್ನಾಪ್ ನ ಅಸಲಿಯತ್ತೇನು ಅನ್ನೋದನ್ನ ನೋಡೋದಾದ್ರೆ. ಈ ಸತ್ಯವೇಲಾಚಾರಿ ಗೆ ಮೈ ತುಂಬಾ ಸಾಲ. ಯಾರ್ಯಾರು ದುಡ್ಡು ಕೊಡ್ತಾರೆ ಅವರತ್ರ ಎಲ್ಲಾ ಕೈ ಚಾಚಿದ್ದ. ಸಾಲ ಮಾಡಿಕೊಂಡಿದ್ದ ಸತ್ಯ ಸಾಲತೀರಿಸೋಕೆ ಶಿವಕುಮಾರ್ ಬಳಿ ಹಣವನ್ನ ಸಾಲವಾಗಿ ಕೇಳಿದ್ದ. ಯಾವಾಗ ಸಾಲ ಕೊಡೋಕೆ ಉದ್ಯಮಿ ಶಿವಕುಮಾರ್ ಒಪ್ಪೋದಿಲ್ವೋ ಆಗ್ಲೇ, ಸತ್ಯ ಆತನನ್ನ ಕಿಡ್ನಾಪ್ ಮಾಡೋಕೆ ಪ್ಲಾನ್ ರೂಪಿಸಿದ್ದ. ಅದರಂತೆ ತನ್ನ ಸಂಗಡಿಗರಾದ ಯಶ್ವಂತ್, ವಿನೋದ್ ಕುಮಾರ್, ಸಂಜಯ್ ರೆಡ್ಡಿ, ಶೇಖರ್ ಹಾಗೂ ಸಂಜಯ್ ಜೊತೆ ಸೇರಿ ಶಿವಕುಮಾರ್ ನನ್ನ ಕಿಡ್ನಾಪ್ ಮಾಡೋಕೆ ಸ್ಕೆಚ್ ರೂಪಿಸಿದ್ದ. ಸತ್ಯ ಕಳೆದ ಭಾನುವಾರ ಶಿವಕುಮಾರ್ ನನ್ನ ಅವರದೇ ಕಾರಿನಲ್ಲಿ ಕರೆದುಕೊಂಡು ಜೆಪಿನಗರಕ್ಕೆ ಹೋಗಿದ್ದ. ಇದೇ ವೇಳೆ ಬೇರೊಂದು ಕಾರಿನಲ್ಲಿ ಚೇಸ್ ಮಾಡಿಕೊಂಡು ಬಂದ ಸತ್ಯನ ಸಂಗಡಿಗರು ಆತನನ್ನ ಅಲ್ಲೇ ಬಿಟ್ಟು ಶಿವಕುಮಾರನನ್ನ ಅಪಹರಿಸಿ ಕೋಲಾರದ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದಿದ್ದರು. 1 ಕೋಟಿ ರೂಪಾಯಿ ದುಡ್ಡು ಕೊಡ್ಲಿಲ್ಲ ಅಂದ್ರೆ ಮುಗ್ಸೇ ಬಿಡೋದಾಗಿ ಬೆದರಿಸಿದ್ರು…

ಕೊನೆಗೆ ಶಿವಕುಮಾರ್ ಹೆಂಡ್ತಿ ದಾರಿ ಕಾಣದೇ ಪೊಲೀಸ್ ಸ್ಟೇಷನ್ ಗೆ ಕಂಪ್ಲೆಂಟ್ ಕೊಟ್ರು…ದಡ್ಡ ಶಿಕಾಮಣಿಗಳು..ಶಿವಕುಮಾರ್ ಮತ್ತೆ ಇವರ ಫೋನ್ ಗಳನ್ನ ಆನ್ ನಲ್ಲೇ ಇಟ್ಟು ಊರು ತುಂಬಾ ತಿರುಗಾಡ್ತಿದ್ರು…

ಪೊಲೀಸ್ರು ಸೀದಾ ಅವರ ಫೋನ್ ಲೋಕೇಷನ್ ಫಾಲೋ ಮಾಡ್ಕೊಂಡೋಗಿ ಶ್ರೀನಿವಾಸಪುರದಲ್ಲಿ ಅಡ್ಡ ಹಾಕಿದ್ರು… ಅಲ್ಲೂ ಕೂಡಾ ಪೊಲೀಸ್ರನ್ನಾ ನೋಡಿ ದೌಲತ್ ಮಾಡಿ ಪೊಲೀಸ್ರ ಗಾಡಿಗೆ ಗುದ್ದಿ ಬೀಳಿಸಿದ್ರು… ಕೊನೆಗೆ ಕೆಚ್ಚದೆಯ ಕಾನ್ಸಟೇಬಲ್ ಚೇಸ್ ಮಾಡಿ ಕಿಡ್ನಾಪರ್ಸ್ ನ್ನಾ ಹಿಡ್ದಾಕಿದ್ರು…

ಆರೋಪಿ ಸತ್ಯಚಾರಿಗೆ ಲಾಠಿ ಹಿಡಿದು ವಿಚಾರಣೆ ಮಾಡಿದಾಗ ಕಿಡ್ನಾಪ್ ಹಿಂದಿರೋ ಅಸಲೀ ಸತ್ಯವನ್ನ ಬಾಯ್ಬಿಟ್ಟಿದ್ದ. ಮಾಡಿರೋ ಸಾಲವನ್ನ ತೀರಿಸೋಕೆ ಸತ್ಯ ಸೈಲೆಂಟಾಗೇ ಅಪಹರಣದ ಸ್ಕೆಚ್ ಹಾಕಿದ್ದ ಅಂತ ಹೇಳಿದ್ದ. ಅಷ್ಟೇ, ಪೊಲೀಸ್ರು ನೀಯತ್ತಿನ ನಾಟಕವಾಡಿ ಹಣ ಲೂಟಿ ಮಾಡೋಕೆ ಬಂದಿದ್ದ ಸತ್ಯನ ಬಾಯಿಂದ ಸತ್ಯವನ್ನೇ ಹೇಳಿಸಿ ಜೈಲಿಗಟ್ಟಿದ್ದಾರೆ. ಸತ್ಯದಾ ಹಾದಿ ಬಿಟ್ಟು ಸುಳ್ಳಿನಾ ಗಿಡನೆಡೋಕೆ ಹೋದವ್ನು ಇದೀಗ ಆಗಿದ್ದು ಜೈಲುಹಕ್ಕಿ…

 

LEAVE A REPLY

Please enter your comment!
Please enter your name here