Home Cinema ದುನಿಯಾ ವಿಜಯ್‌ಗೆ ಕೀರ್ತಿಗೌಡ ಎಷ್ಟನೇ ಹೆಂಡ್ತಿ ಗೊತ್ತಾ..?! ‘ವಿಜಿ’ ವರ್ಷಕ್ಕೆ ಒಬ್ಬ ಹುಡುಗಿಯನ್ನ ಮದುವೆಯಾಗ್ತಾರಾ..?! ‘ಜಂಗ್ಲಿ’...

ದುನಿಯಾ ವಿಜಯ್‌ಗೆ ಕೀರ್ತಿಗೌಡ ಎಷ್ಟನೇ ಹೆಂಡ್ತಿ ಗೊತ್ತಾ..?! ‘ವಿಜಿ’ ವರ್ಷಕ್ಕೆ ಒಬ್ಬ ಹುಡುಗಿಯನ್ನ ಮದುವೆಯಾಗ್ತಾರಾ..?! ‘ಜಂಗ್ಲಿ’ ವರ್ತನೆಗೆ ಮೊದಲ ಪತ್ನಿ ಏನ್ ಹೇಳ್ತಾರೆ..?

584
0
SHARE

ಜೀವನದಲ್ಲಿ ಒಬ್ಳನ್ನಾ ಕಟ್ಕೊಂಡ್ ಸಂಸಾರ ಮಾಡೋದೇ ಕಷ್ಟ ಅಂತದ್ರಲ್ಲಿ ನಮ್ಮ ಸ್ಟಾರ್ ನಟ ದುನಿಯಾ ವಿಜಯ್‌ ಇಬ್ರು ಹೆಂಡತೀರ್ನಾ ಕೆಟ್ಕೊಂಡು ಪೇಚಿಗೆ ಸಿಲುಕಿದಿದಾನೆ. ವಿಜಯ್‌ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ರೂ ತನ್ನ ಹೆಂಡತಿಯರಿಂದ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ. ನಿನ್ನೆ ರಾತ್ರಿ ಜೈಲಿನಿಂದ ಹೊರ ಬರ್ತಿದ್ದಾಗೆ ವಿಜಯ್ ಮೊದಲ ಪತ್ನಿ ನಾಗರತ್ನ ವಿಜಿ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.ನಟ ದುನಿಯಾ ವಿಜಯ್ ಬಾಳಿನಲ್ಲಿ ಮತ್ತೆ ಬಿರುಗಾಳಿ ಎದ್ದಿದೆ….

ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸೆಷನ್ಸ್ ಕೋರ್ಟ್ ದುನಿಯಾ ವಿಜಯ್ ಸೇರಿದಂತೆ ನಾಲ್ವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ವಿಜಿ ಬಿಡುಗಡೆಗೊಂಡ ಬಳಿಕ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಬಗ್ಗೆ ಹಾಗೂ ಮೊದಲ ಪತ್ನಿ ನಾಗರತ್ನ ವಿರುದ್ಧ ಆರೋಪಿಸಿದ್ದರು.ಇಂದು ಚಂಡನ ಮೊದಲ ಹೆಂಡ್ತಿ ನಾಗರತ್ನ ಸರದಿ.. ಹೌದು, ನಾಗರತ್ನ ಇಂದು ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ವಿಜಿ ಮತ್ತವರ ಎರಡನೇ ಹೆಂಡ್ತಿ ಕೀರ್ತಿಗೌಡ ವಿರುದ್ಧ ವಾಗ್ದಾಳಿ ನಡೆಸಿದ್ರು…

ಚಿನ್ನದ ಮೊಟ್ಟೆ ಇಡೋ ಕೋಳಿ ನೋಡ್ಕೊಂಡು ನಾನು ಬಂದಿಲ್ಲ. ಅದನ್ನು ನೋಡಿ ಬಂದವರು ಇನ್ನೊಬ್ಬರು. ವಿಜಿ, ಕೀರ್ತಿಗೌಡನ ಮದುವೇನೇ ಆಗಿಲ್ಲ. ಸುಳ್ಳು ಹೇಳಿಕೊಂಡು ನನ್ನ ಗಂಡನ ಜೊತೆಗಿದ್ದಾರೆ ಕೀರ್ತಿ. ಮೊದಲಿಗೆ ಕೀರ್ತಿ ನಾಯಂಡನ ಹಳ್ಳಿ ಸ್ಲಂನಲ್ಲಿ ವಾಸವಾಗಿದ್ಲು. ವಿಜಿಯವರ ಹಣ,ಆಸ್ತಿ, ಹೆಸರನ್ನು ನೋಡಿ ಕೀರ್ತಿ ವಿಜಿಯವರ ಹಿಂದೆ ಬಂದಿದ್ದಾರೆಂದು ಕೀರ್ತಿ ವಿರುದ್ದ ನಾಗರತ್ನ ಕಿಡಿ ಕಾರಿದ್ರು.ಗಂಡ ವಿಜಯ್ ನ ಮದುವೆ ವೃತಾಂತ್ತ ಬಿಚ್ಚಿಟ್ಟ ನಾಗರತ್ನ, ಕೀರ್ತಿ ಗೌಡ ವಿಜಿಯ 2ನೇ ಪತ್ನಿ ಅಲ್ಲ.

ಕೀರ್ತಿ ಗೌಡ ವಿಜಿಯ 5ನೇ ಪತ್ನಿ ಎಂಬ ಸ್ಫೋಟಕ ಮಾಹಿತಿ ನೀಡಿದ್ರು… ದುನಿಯಾ ವಿಜಯ್ ಗೆ ಈ ರೀತಿಯ ಸಂಬಂಧಗಳು ಹೊಸದಲ್ಲ. ನನ್ನ ಮದುವೆಗೂ ಮುಂಚೆಯೇ ಅವರಿಗೆ ಇನ್ನೊಂದು ಮದುವೆಯಾಗಿತ್ತು. ನಂತರ ಶುಭ ಪೂಂಜಾ ಬಂದರು, ಬಳಿಕ ಜಯಮ್ಮನ ಮಗ ಸಿನಿಮಾದ ಹೀರೋಯಿನ್ ಭಾರತಿ.. ಈಗ ಕೀರ್ತಿ ಗೌಡ.. ಹೀಗೆ ವರ್ಷಕ್ಕೆ ಒಂದೊಂದು ಮದುವೆ ಆಗೋದು ವಿಜಿಗೆ ಕರಗತವಾಗಿದೆ ಎಂದು ವ್ಯಂಗ್ಯವಾಡಿದರು.ಒಳ್ಳೆ ಫ್ಯಾಮಿಲಿ ಯಿಂದ ಬಂದ ಹೆಣ್ಣು ಮಗಳಾಗಿದ್ರೆ, ೧೦ ಜನ ಮಕ್ಕಳಿರುವ ಪರವಾಗ್ಲಿಲ್ಲ ಅವರನ್ನು ಮದುವೆ ಯಾಗುತ್ತೀನೆ ಅಂತ ಕೀರ್ತಿ ಹೇಳುತ್ತಿರಲಿಲ್ಲ.

ಅವಳು ನಾಯಂಡಳ್ಳಿ ಸ್ಲಂ ನಿಂದ ಬಂದವಳು ಅವಳ ವಿಚಾರಗಳೆಲ್ಲಾ ನನಗೆ ತಿಳಿದಿದೆ. ಇವಳ ಬಾಯ್ ಫ್ರೆಂಡ್ಸ್ ಲಿಸ್ಟ್ ಬಗ್ಗೆ ನನಗೆ ತಿಳಿದಿದೆ ಎಂದು ಕೀರ್ತಿ ಜಾತಕವನ್ನ ನಾಗರತ್ನ ಬಿಚ್ಚಿಟ್ಟರು..ಕೀರ್ತಿ ಗೌಡ ಬಂದ ಮೇಲೆ ವಿಜಿಯ ಯಾವ ಸಿನಿಮಾ ಹಿಟ್ ಆಗಿದೆ. ವಿಜಿ ಜೊತೆ ಯಾವ ಒಡಂಬಡಿಕೆಯೂ ಮಾಡಿಕೊಂಡಿಲ್ಲ. ನಾನು ಯಾವ ಕಾರಣಕ್ಕೂ ಡೈವೋರ್ಸ್ ನೀಡಲ್ಲ. ನಾನು ಕೂಡಾ ಸಂಸಾರ ನಡೆಸಲು ಬಂದವಳು ಎಂದು ನಾಗರತ್ನ ತಿರುಗೇಟು ನೀಡಿದ್ದಾರೆ.

ಏತನ್ಮಧ್ಯೆ ವಿಜಿ ಬಾಡಿಗೆ ಮನೆಯಲ್ಲಿರೋದು ಕೇವಲ ನಾಟಕ ಮತ್ತು ಸಿಂಪಥಿ ಪಡೆಯಲು ಅಂತಾ ನಾಗರತ್ನ ಕಿಡಿಕಾರಿದ್ದಾರೆ.. 2009ರಲ್ಲಿ ದುನಿಯಾ ಋಣ ಎಂಬ ಹೆಸರಿನ ಮನೆಯನ್ನು ನನ್ನ ಹೆಸರಿಗೆ ಬರೆದಿದ್ದರು. ಅವರ ಮಕ್ಕಳಿಗೆ ಅವರು ಆಸ್ತಿ ಬರೆದಿರುವುದರಲ್ಲಿ ವಿಶೇಷ ಏನಿದೆ? ಕತ್ರಿಗುಪ್ಪೆ ಸೇರಿದಂತೆ ಹಲವೆಡೆ ವಿಜಯ್ ಗೆ ಸಂಬಂಧಿಸಿದ ಮನೆಗಳಿವೆ. ಅವುಗಳೆಲ್ಲ ಏನಾಯ್ತು. ಯಾರ ಅನುಕಂಪ ಗಿಟ್ಟಿಸಲು ಅವರು ಬಾಡಿಗೆ ಮನೆಯಲ್ಲಿದ್ದಾರೆ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here