Home Cinema ದುನಿಯಾ ವಿಜಯ್‌ಗೆ ಬಿಗ್ ರಿಲೀಫ್..?! ದುನಿಯಾ ವಿಜಿ & ಟೀಂ ಗೆ ಷರತ್ತು ಬದ್ದ ಜಾಮೀನು…

ದುನಿಯಾ ವಿಜಯ್‌ಗೆ ಬಿಗ್ ರಿಲೀಫ್..?! ದುನಿಯಾ ವಿಜಿ & ಟೀಂ ಗೆ ಷರತ್ತು ಬದ್ದ ಜಾಮೀನು…

505
0
SHARE

ಜಿಮ್ ಟ್ರೈನರ್ ಮಾರುತಿಗೌಡ ಕಿಡ್ನಾಪ್ ಅಂಡ್ ಅಸಾಲ್ಟ್ ಕೇಸ್ ನಲ್ಲಿ ಜೈಲು ಪಾಲಾಗಿದ್ದ ನಟ ದುನಿಯಾ ವಿಜಿ ಅಂಡ್ ಟೀಂ ಗೆ ಕೊನೆಗೂ ಬೇಲ್ ಸಿಕ್ಕಿದೆ. ಜಾಮೀನು ನೀಡೋ ಮುನ್ನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ದುನಿಯಾ ವಿಜಿಗೆ ಮತ್ತೆ ಇಂತಹ ಪ್ರಕರಣಗಳು ಪುನರಾವರ್ತನೆ ಯಾಗದಂತೆ ಎಚ್ಚರಿಕೆ ನೀಡಿದ್ದಾರೆ.ಜಿಮ್ ಟ್ರೈನರ್ ಮಾರುತಿಗೌಡ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದ ದುನಿಯಾ ವಿಜಿ ಅಂಡ್ ಟೀಂ ಗೆ ಕೊನೆಗೂ ಬೇಲ್ ಮಂಜೂರಾಗಿದೆ.

ಎರಡು ದಿನಗಳ ಹಿಂದೆ ಆರೋಪಿಗಳ ಪರ ವಕೀಲ ಶಿವಕುಮಾರ್ ಹಾಗೂ ಸರ್ಕಾರಿ ಅಭಿಯೋಜಕರು ಮಂಡಿಸಿದ್ದ ವಾದ ಪ್ರತಿವಾದ ಆಲಿಸಿದ್ದ 69 ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರು ಇಂದಿಗೆ ತೀರ್ಪ ಕಾಯ್ದಿರಿಸಿದ್ರು.ಇಂದು ಮಧ್ಯಾಹ್ನ 3.10 ರ ಸುಮಾರಿಗೆ ಪ್ರಕರಣದ ತೀರ್ಪು ಒದಲು ಶುರು ಮಾಡಿದ ನ್ಯಾ. ರಾಮಲಿಂಗೇಗೌಡರು ಆರೋಪಿಗಳ ಪರ ವಕೀಲ ಶಿವಕುಮಾರ್ ಮಂಡಿಸಿದ್ದ ವಾದ ಹಾಗೂ ಸರ್ಕಾರಿ ಪರ ವಕೀಲ ಆಕೇಷ ವ್ಯಕ್ತಪಡಿಸಿ ಮಂಡಿಸಿದ್ದ ಪ್ರತಿ ವಾದವನ್ನ ಅವಲೋಕಿಸಿದ್ರು. ನಂತರ ತೀರ್ಪು ಓದಲು ಶುರು ಮಾಡೋ ಮುನ್ನ ದುನಿಯಾ ವಿಜಿಗೆ ಬುದ್ದಿ ಪಾಠ ಹೇಳಿದ ನ್ಯಾಯಾಧೀಶರು ವಿಜಿ ಪರ ವಕೀಲರಿಗೆ ಒಬ್ಬ ನಟನಾದವನು ಪಬ್ಲಿಕ್ ಗೆ ರೋಲ್ ಮಾಡಲ್ ತರನೇ ಇರಬೇಕು,

ಅದನ್ನ ಬಿಟ್ಟು ಪದೇ ಪದೇ ಪುಂಡಾಟ ಪ್ರದರ್ಶನ ಮಾಡ್ಬಾರ್ದು. ಇಂತಹ ಪುಂಡಾಟಗಳು ಇಂದಿಗೆ ಕೊನೆಯಾಗ್ಬೇಕು. ಮತ್ತೆ ಈ ರೀತಿಯ ಪುಂಡಾಟಿಕೆ ಪ್ರದರ್ಶನವಾದ್ರೆ ಕೋರ್ಟ್ ಸಹಿಸೋದಿಲ್ಲ.ಎಂದು ವಿಜಿ ಪರ ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾ. ರಾಮಲಿಂಗೇಗೌಡ ಒಂದು ಲಕ್ಷ ಬಾಂಡ್ ಹಾಗೂ ಎರಡು ಶುರೂಟಿ ನೀಡಬೇಕೆಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಮತ್ತೊಂದೆಡೆ ಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ದೊರಕಿದ ಬೆನ್ನಲ್ಲೇ ವಿಜಯ್ ಪರ ವಕೀಲರು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಧಾವಿಸಿ ನ್ಯಾ.ಮಹೇಶ್ ಬಾಬು ಅವರಿಂದ ಆದೇಶ ಪ್ರತಿಗೆ ಸಹಿ ಹಾಕಿಸಿ ಪರಪ್ಪನ ಅಗ್ರಹಾರ ಜೈಲಿನತ್ತ ಧಾವಿಸಿದ್ದು, ಬಿಡುಗಡೆ ಪ್ರಕಿಯೆಯನ್ನ ಪೂರ್ಣಗೊಳಿಸಿದ್ದು, 8 ದಿನಗಳ ಸೆರೆವಾಸ ಅನುಭವಿಸಿದ ದುನಿಯಾ ವಿಜಿ ಅಂಡ್ ಟೀಂ ಕೊನೆಗೂ ಹೊರ ಬಂದಿದ್ದಾರೆ.

ಮತ್ತೊಂದೆಡೆ ನೆಚ್ಚಿನ ನಾಯಕ ಬೇಲ್ ನಿಂದ ಹೊರ ಬರ್ತಿದ್ದಾಗೆ, ಹೊಸಕೆರೆಹಳ್ಳಿಯ ನಿವಾಸದ ಮುಂದೆ ಜಮಾಯಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಕೆಟ್ಟ ಮೇಲೆ ಬುದ್ದಿ ಅಂತ ಅನ್ನೋಹಾಗೆ ಪದೇ ಪದೇ ಒಂದಲ್ಲಾ ಒಂದಪು ಅವಾಂತರಗಳನ್ನ ಸೃಷ್ಟಿಸಿ, ಪೊಲೀಸ್ರ ಕೆಂಗಣ್ಣಿಗೆ ಗುರಿಯಾಗ್ತಿದ್ದ ದುನಿಯಾ ವಿಜಿ ಜೈಲ್ ನಿಂದ ಹೊರ ಬಂದ್ಮೆಲಾದ್ರು ಬದಲಾಗ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

LEAVE A REPLY

Please enter your comment!
Please enter your name here