Home Cinema ದುನಿಯಾ ವಿಜಯ್ ನ ಮನೆಯಿಂದ ಹೊರಹಾಕಿತಾ ಚಿತ್ರರಂಗ?! ವಿಜಿ ವಿರುದ್ಧ ಚಿತ್ರರಂಗದ ಅಸಮಾಧಾನ ಈಗ ಬಹಿರಂಗ!?...

ದುನಿಯಾ ವಿಜಯ್ ನ ಮನೆಯಿಂದ ಹೊರಹಾಕಿತಾ ಚಿತ್ರರಂಗ?! ವಿಜಿ ವಿರುದ್ಧ ಚಿತ್ರರಂಗದ ಅಸಮಾಧಾನ ಈಗ ಬಹಿರಂಗ!? ಈ ಮಟ್ಟಕ್ಕಿಳಿಯಿತಲ್ಲ ಚಿತ್ರರಂಗದಲ್ಲಿ ವಿಜಿಯ ಲೆವೆಲ್..!!?

2544
0
SHARE

ಕನ್ನಡದಲ್ಲೊಂದು ಗಾದೆ ಇದೆ. ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅಂತ. ವಿಚಿತ್ರ ಅಂದ್ರೆ ಈ ಮಾತು  ದುನಿಯಾ ವಿಜಯ್ ಅಭಿನಯದ ತಾಕತ್ ಚಿತ್ರದಲ್ಲಿ ಹಾಡಿನ ರೂಪದಲ್ಲಿಯೂ ಇದೆ. ಆದ್ರೆ ವಿಪರ್ಯಾಸ ಅಂದ್ರೆ ಈಗ ವಿಜಿಗೆ ಬಂದಿರೋದು ಅದೇ ಹಳ್ಳಕ್ ಬಿದ್ರೆ ಆಳಿಗೊಂದ್ ಕಲ್ಲು ಅನ್ನೋ ಪರಿಸ್ಥಿತಿ.ಈಗ ಹಳ್ಳಕ್ಕೆ ಬಿದ್ದಿರೋದು ತೋಳ ಅಲ್ಲ ದುನಿಯಾ ವಿಜಯ್ ಎಂಬ ಕರಿಚಿರತೆ. ಈಗ ದುನಿಯಾ ವಿಜಯ್ ಜೈಲಿನಲ್ಲಿರುವಾಗ ಕಲ್ಲು ಹೊಡೆಯುವವರು ಹಳ್ಳದಲ್ಲಿ ಬಿದ್ದ ಚಿರತೆಯನ್ನು ಗುರಿ ಆಗಿಸಿಕೊಂಡಿಲ್ಲವಾದರೂ, ತೆರೆ ಮರೆಯಲ್ಲೇ ದುನಿಯಾ ವಿಜಯ್ ಗೆ ಬಂದ ಪರಿಸ್ಥಿತಿ ನೋಡಿ ಆನಂದಿಸುತ್ತಿದ್ದಾರೆ. ಪಾನಿಪೂರಿ ಕಿಟ್ಟಿ ಸಂಬಂಧಿಕನಿಗೆ ಡಿಕ್ಕಿ ಪುರಿ ಕೊಟ್ಟು ಜೈಲು ಸೇರಿರುವ ವಿಜಿ ಅವರ ಸುದ್ದಿ ಈಗ ಎಲ್ಲರಿಗೂ  ಮಾತನಾಡುವ ವಿಷಯಕ್ಕೆ ಮಸಾಲಾ ಹಾಕಿದ ಹಾಗಿದೆ.

ಚಿತ್ರರಂಗದ ಯಾರೂ ನೇರವಾಗಿ ವಿಜಯ್ ವಿರುದ್ಧ ಮಾತನಾಡದಿದ್ದರೂ ಯಾರೂ ನೇರವಾಗಿ ಅವರನ್ನು ಬೆಂಬಲಿಸುತ್ತಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.ಪಾನಿಪೂರಿ ಕಿಟ್ಟಿಯ ಜೊತೆಗಿನ ಕಿರಿಕ್ ನಿಂದಾಗಿ, ಈಗ “ಬೇಲ್” ಪುರಿ, “ಸೇವ್” ಪುರಿ ಯಾವಾಗ ಸಿಗುತ್ತೋ ಅಂತ ಕಾಯ್ತಾ ಇದ್ದ ದುನಿಯಾ ವಿಜಯ್ ಅವರ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ಸರಣಿ ವಿಚಾರಣೆ ನಡೆಸಿತು. ಸದ್ಯಕ್ಕೆ ವಿಜಯ್ ಅವರಿಗೆ ರೌಡಿ ಶೀಟರ್ ಪಟ್ಟ ಕಟ್ಟುವ ಯೋಚನೆ ಇಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ, ವಿಜಯ್ ಅವರ ಸಂಕಷ್ಟದ ಈ ಸಮಯದಲ್ಲಿ ಚಿತ್ರರಂಗದ ಯಾರೂ ಕೂಡಾ ವಿಜಿಯ ಬಗ್ಗೆ ಮಾತೇ ಆಡುತ್ತಿಲ್ಲ ಅನ್ನೋದು ವಿಚಿತ್ರ. ಹಾಗಾಗಿ ಈಗ ವಿಜಯ್ ಸಾಮಾನ್ಯ ಖೈದಿ ಆಗಿದ್ದಾರೆಯೇ ಹೊರತು, ಸೆಲೆಬ್ರಿಟಿ ಖೈದಿ ಆಗಿಲ್ಲ.

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಥೇಟು ದುನಿಯಾ ಚಿತ್ರದ ಅಮಾಯಕ ನಾಯಕನಂತೆ ಎಲ್ಲರಿಗೂ ಕೈ ಎತ್ತಿ ಸಲಾಮು ಹೊಡೆಯುತ್ತಿದ್ದ ವಿಜಿ, ನಂತರ ಅನೇಕ ಸಂದರ್ಭದಲ್ಲಿ ಯಾರ್ಯಾರ ಮೇಲೋ ಕೈ ಎತ್ತೋಕೆ ಶುರು ಮಾಡಿದ್ದು ಎಲ್ಲರಿಗೂ ಗೊತ್ತು. ವಿಜಯ್ ಮುಂಗೋಪಿ ಅನ್ನೋದು ಎಲ್ಲರಿಗೂ ಗೊತ್ತು, ನಿರ್ಮಾಪಕ, ವಿತರಕ ಜಯಣ್ಣ ಅವರ ಜೊತೆ ಕಿರಿಕ್ ಆದಾಗಲೂ, ತಮ್ಮ ಆಪ್ತ ಪತ್ರಕರ್ತರೊಬ್ಬರ ಬಳಿ ಸರ್, ಜಯಣ್ಣನ್ ಆಫೀಸ್ ಗೆ ನುಗ್ಗಿ ಅವನಿಗೆ ಹೊಡೆದ್ಬಿಡ್ಲಾ, ಆಮೇಲೆ ಆಗಿದ್ದಾಗ್ಲಿ ಅಂತ ಕೇಳಿದ್ದರು. ಆದರೆ ಆ ಪತ್ರಕರ್ತರಿಂದ ಸಿಕ್ಕ ಸಲಹೆಯಂತೆ ಆ ನಿರ್ಧಾರವನ್ನು ಕೈ ಬಿಟ್ಟಿದ್ದರು. ಹೀಗೆ ದುನಿಯಾ ವಿಜಯ್ ಎಲ್ಲದಕ್ಕೂ ದಂಡಂ ದಶಗುಣಂ ಅನ್ನೋದೇ ಪರಿಹಾರ ಎಂದುಕೊಂಡದ್ದರಿಂದ ಇಂದು ಈ ಪರಿಸ್ಥಿತಿಯಲ್ಲಿದ್ದಾರೆ.

ದೊಡ್ಡವರನ್ನು ಎದುರು ಹಾಕಿಕೊಂಡ ಕಾರಣಕ್ಕೆ ಎಲ್ಲರಿಂದ ದೂರವಾಗಿದ್ದಾರೆ ಅಂತಿವೆ ಕೆಲವು ಮೂಲಗಳು.ವಿಜಯ್ ಅವರಿಗೆ ಯಾರೂ ಸಪೋರ್ಟ್ ಮಾಡುತ್ತಿಲ್ಲ ಅಂದ್ರೆ ಅದು ಚಿತ್ರರಂಗದ ತಪ್ಪಲ್ಲ. ಸ್ಯಾಂಡಲ್ ವುಡ್ ನ ಕರಿಚಿರತೆಗೆ ಆಗಾಗ ಕಾಲಿನ ಜೊತೆ ಕೈ ಕೂಡಾ ಕೆರೆಯುತ್ತಿರುತ್ತೆ. ಇದರ ಲೇಟೆಸ್ಟ್ ಉದಾಹರಣೆ ಎಂಬಂತೆ ಈಗ ವಿಜಿ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾರೆ ಅಷ್ಟೇ.ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ  ದುನಿಯಾ ವಿಜಯ್ ಸಂಕಷ್ಟ ಇಲ್ಲಿಗೇ ಮುಗಿಯೋದಿಲ್ಲ. ಶನಿವಾರ ನಡೆಸಿದ ಹಲ್ಲೆ ಪ್ರಕರಣದಿಂದ ದುನಿಯಾ ವಿಜಯ್ ಪೊಲೀಸರ ವಶದಲ್ಲಿರೋದು ನೋಡಿ, ಈಗ ಅವರ ಮೇಲೆ ಮತ್ತೊಂದು ಕೊಂಚ ಹಳೆಯ ಕೇಸು ದಾಖಲಾಗಿದೆ.

ನಿವೃತ್ತ ಯೋಧ ವೆಂಕಟೇಶ್ ಎನ್ನುವವರು ಈಗ ವಿಜಯ್ ಅವರ ಮೇಲೆ ಈಗ ಕೇಸು ದಾಖಲಿಸಿದ್ದಾರೆ. ಅದು ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಿದ್ದು.ವಿಜಯ್ ಅವರ ಬಾವಮೈದ ವೆಂಕಟೇಶ್ ಅವರ ಬಳಿ ಸಾಲ ಮಾಡಿದ್ದರು. ಈ ಬಗ್ಗೆ ಹಣಕಾಸಿನ ವಿಷಯಕ್ಕೆ ಮನಸ್ತಾಪ ಆಗಿ ವಿಜಿ ಆಪ್ತ ಪ್ರಸಾದ್, ವೆಂಕಟೇಶ್ ಅವರ ಕಡೆಯವರ ಮಳಿಗೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿ ಈಗ ಸಿಸಿಟಿವಿಯಿಂದ ಬಯಲಾಗಿದೆ. ಈ ಪ್ರಸಾದ್ ಅನ್ನೋ ವ್ಯಕ್ತಿ ಅಂಗಡಿಯಲ್ಲಿದ್ದವನ ಮೇಲೆ ಏಕಾ ಏಕಿ ಹಲ್ಲೆ ನಡೆಸಿ ಕೈ, ಕಾಲುಗಳಿಂದ ದೌರ್ಜನ್ಯ ನಡೆಸಿದ್ದು ಈಗ ಬಯಲಿಗೆ ಬಂದಿದೆ. ತಮ್ಮವರ ಮೇಲಾದ ಹಲ್ಲೆಯನ್ನು ವಿಜಯ್ ಅವರಿಗೆ ತಿಳಿಸಲು ಹೋದ ನಿವೃತ್ತ ಯೋಧ ವೆಂಕಟೇಶ್ ಅವರಿಗೂ ವಿಜಯ್ ತಮ್ಮ ಕಾಲಿನ ರುಚಿ ತೋರಿಸಲು ಹೋಗಿದ್ದಾರೆ.

ಹಾಗಾಗಿ ಈಗ ಕೇಸುಗಳ ಸುಳಿಯಲ್ಲಿ ಸಿಕ್ಕಿ ನರಳುತ್ತಿದ್ದಾನೆ ಈ ಜಂಗ್ಲಿ.ಒಟ್ಟಿನಲ್ಲಿ  ವಿಜಿ ಅವರ ಈ ಅವಾಂತರ ಸೃಷ್ಠಿಸೋ ಅವತಾರಗಳೇ ಅವರಿಗೆ ಮುಳ್ಳಾದವೇ ಅನ್ನೋದು ಈಗ ಎಲ್ಲರನ್ನೂ ಕಾಡುತ್ತಿರೋ ಪ್ರಶ್ನೆ. ಹಾಗಾಗಿಯೇ ದಿನಾ ಸಾಯೋನಿಗೆ ಅಳೋರ್ಯಾರು ಎನ್ನುವಂತೆ ಕೈ ಕಟ್ಟಿ ಕೂತಿದ್ಯಾ ಚಿತ್ರರಂಗ ಎಂಬ ಅನಿಸಿಕೆ ಮೂಡಿದರೆ ಅದರಲ್ಲಿ ತಪ್ಪೇನಿಲ್ಲ.ದರ್ಶನ್ ಅವರ ಆಸ್ಪತ್ರೆಯ ಸಪ್ಪೆ ಊಟಕ್ಕೆ ಚಿತ್ರರಂಗದ ಗೆಳೆಯರು ಉಪ್ಪು ಹಾಕಿದ್ದಾರೆ. ಆದರೆ ವಿಜಯ್ ಅವರ ಗಾಯದ ಮೇಲೆ ಉಪ್ಪು ಸವರುತ್ತಿದ್ದಾರೆ. ಅಂದರೆ ಯಾರೂ ವಿಜಯ್ ವಿಷಯಕ್ಕೆ ಸೊಪ್ಪು ಹಾಕುತ್ತಿಲ್ಲ ಅನ್ನೋದು ಇಲ್ಲಿ ಗಮನಾರ್ಹ ವಿಷಯ.ದುನಿಯಾ ವಿಜಯ್ ಅವರ ಸಂಕಷ್ಟಗಳು ಕೇವಲ ಈ ಕೇಸ್ ಗೆ ಮಾತ್ರ ಸೀಮಿತವಾಗಿಲ್ಲ.

ಅವರ ಕೌಟುಂಬಿಕ ಜಗಳಕ್ಕೆ ಹೋದರೆ ಅದು ಇನ್ನೊಂದು ದೊಡ್ಡ ಪುರಾಣವೇ ಆಗುತ್ತದೆ. ಈ ವಿಷಯದಲ್ಲೂ ಸ್ಯಾಂಡಲ್ ವುಡ್ ಹಲವು ಬಾರಿ ಅವರಿಗೆ ಬೆಂಗಾವಲಾಗಿ ನಿಂತಿತ್ತು. ಆದರೆ ವಿಜಯ್ ಅದನ್ನು ಯಾವಾದ ನಿತ್ಯದ ಕದನ ಮಾಡಿಕೊಂಡರೋ ಆಗ ಸಿನಿಮಾ ಮಂದಿ, ಅವರ ಮನೆ ವಿಷ್ಯ ಬಿಟ್ಟಾಕಿ ಅಂತ ಸುಮ್ಮನಾದ್ರು. ಇಷ್ಟೆಲ್ಲಾ ಆದ್ರೂ, ದುನಿಯಾ ವಿಜಯ್ ಮತ್ತೆ ಮೊದಲ ಹೆಂಡತಿಯನ್ನು ಬಿಟ್ಟು, ಅವರಿಗೆ ಡಿವೋರ್ಸ್ ಅನ್ನೂ ಕೊಡದೆ, ಈಗ ಕೀರ್ತಿ ಎಂಬುವವರನ್ನು ಮದುವೆ ಆಗಿ ಬೇರೆ ಮನೆ ಮಾಡಿ ಸಂಸಾರ ಮಾಡುತ್ತಿದ್ದಾರೆ. ಇದು ಕರಿ ಚಿರತೆಯ ಕರಾಳ ಚರಿತ್ರೆ. ಹಾಗಾಗಿಯೇ ಚಿತ್ರರಂಗದ ಯಾರೂ ಕೂಡ ಇಂಥ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳೋದು ಕಷ್ಟ ಎಂಬ ಕಾರಣಕ್ಕೇ ಇವರನ್ನು ದೂರ ಇಟ್ಟಿದ್ದರೆ ತಪ್ಪಿಲ್ಲ.ದುನಿಯಾ ವಿಜಯ್ ಜೈಲು ಸೇರಿದ ಮೇಲೆ ಅವರ ಇಬ್ಬರು ಪತ್ನಿಯರ ವಿಷಯವೂ ಮತ್ತೆ ಬೀದಿಗೆ ಬಂದಿದೆ.

ಒಬ್ಬರನ್ನೊಬ್ಬರು ದೂಷಣೆ ಮಾಡಿ ಮತ್ತೆ ಜಗಳ ಆಡಲು ಆರಂಭಿಸಿದ್ದಾರೆ ಅವರಿಬ್ಬರೂ. ಹಾಗಾಗಿ ಇಬ್ಬರು ಹೆಂಡಿರ ಈ ಮುದ್ದಿನ ಜಯಮ್ಮನ ಮಗನಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಇಂದು ವಿಜಿ ಅವರ ಮೊದಲ ಪತ್ನಿ ಜೈಲಿನಲ್ಲಿರೋ ವಿಜಿಗೆ ಊಟ ತೆಗೆದುಕೊಂಡು ಹೋಗಿದ್ದರು. ಗಂಡ ಜೈಲಿಗೆ ಹೋದ ದಿನ ಅಲ್ಲೆಲ್ಲೋ ಜಗಳ ಆಡಿಕೊಂಡು ಕೂತಿದ್ದವಳು, ಈಗ ಮೂರು ದಿನ ಆದಮೇಲೆ ಊಟ ತಗೊಂಡ್ ಬಂದಿದಾಳೆ ಎಂಬ ಸಿಟ್ಟಿಗೋ ಏನೋ ವಿಜಯ್ ನನಗೆ ಆ ಊಟ ಬೇಡ ಅಂತ ವಾಪಸ್ ಕಳಿಸಿದ್ದಾರೆ. ಹಾಗಾಗಿ ಮೊದಲ ಪತ್ನಿ ನಾಗರತ್ನ ಜೈಲಿನಿಂದ ಕಣ್ಣೀರು ಹಾಕಿಕೊಂಡು ಮನೆಯ ದಾರಿ ಹಿಡಿದಿದ್ದಾರೆ.ಜಂಗ್ಲಿ ಕೆಲಸ ಮಾಡಿರೋ ದುನಿಯಾ ವಿಜಯ್ ಅವರಿಗೆ ಈಗ ಯಾರು ಸಪೋರ್ಟ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸೊನ್ನೆ.

ಇಂಥಹ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಯಾರೂ ಕೂಡ ವಿಜಯ್ ಅವರಿಗೆ ಬೆಂಬಲ ಕೊಡೋಕೆ ಹಿಂಜರಿಯೋದು ಸಹಜ. ಈ ಹಿಂದೆ ನಟ ದರ್ಶನ್ ಕೌಟುಂಬಿಕ ಕಲಹದ ವಿಚಾರಕ್ಕೆ ಸಿಲುಕಿದಾಗ ವಿಜಯ್ ಸೇರಿದಂತೆ ಹಲವರು ದರ್ಶನ್ ಅವರ ಬೆನ್ನಿಗೆ ನಿಂತಿದ್ದರು. ಆದರೆ ಅದೇ ವಿಜಯ್ ತಮ್ ಪತ್ನಿಯೊಂದಿಗೆ ಕಿರಿಕ್ ಮಾಡಿಕೊಂಡಾಗ ಯಾರೂ ವಿಜಯ್ ಸಹಾಯಕ್ಕೆ ಬಂದಿರಲಿಲ್ಲ. ಇದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡು, ನೋಡಿದ್ರಾ ಬಾಸ್, ನಾನು ಆವಾಗ ದರ್ಶನ್ ಗೆ ಎಷ್ಟು ಸಪೋರ್ಟ್ ಮಾಡಿದ್ದೆ.

ಆದ್ರೆ ಈವಾಗ ನಾನು ಕಷ್ಟದಲ್ಲಿದ್ದೀನಿ ಅಂದ್ರೆ ಅವ್ರು ನನ್ ಫೋನೇ ತೆಗೆಯಲ್ಲ ಅಂತ ಗೋಳಾಡಿದ್ದರು ವಿಜಯ್.ಅಷ್ಟೇ ಅಲ್ಲದೆ ವಿಜಯ್ ಅವರ ವಿಚಿತ್ರ ಬುದ್ಧಿ ತಿಳಿದಿರೋ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಮೇಲೆ ಎಷ್ಟೇ ಪ್ರೀತಿ ತೋರಿಸಿದರೂ, ಇಂಥ ಕ್ರಿಮಿನಲ್ ಕೇಸುಗಳಲ್ಲಿ ತಲೆ ಹಾಕೋದು ಕಷ್ಟ. ಅಲ್ಲದೆ ಇಂಥವರನ್ನು ಸಪೋರ್ಟ್ ಮಾಡಿದರೆ ಅವರಿಗೂ ಕೆಟ್ಟ ಹೆಸರು ಬರೋ ಅಪಾಯ ಇರೋದ್ರಿಂದ ಈಗ ಬ್ಲ್ಯಾಕ್ ಕೋಬ್ರಾ ಏಕಾಂಗಿ ಪರಿಸ್ಥಿತಿಯಲ್ಲಿದೆ. ಸದ್ಯಕ್ಕೆ ವಾಣಿಜ್ಯ ಮಂಡಳಿ ಮಾತ್ರ ವಿಜಯ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಪಾನಿ ಪುರಿ ಕಿಟ್ಟಿ ಇಟ್ಟ, ಬೇಡಿಕೆಯನ್ನು ಸಾರಾ ಸಗಟಾಗಿ ನಿರಾಕರಿಸಿದೆ. ಇದೊಂದೇ ದುನಿಯಾ ವಿಜಯ್ ಪಾಲಿಗಿನ ಸಮಾಧಾನ.

LEAVE A REPLY

Please enter your comment!
Please enter your name here