Home Cinema ದುನಿಯಾ ವಿಜಿಗೆ ಜೈಲೇ ಗತಿ..!! ಕರಿಚಿರತೆ ಜಾಮೀನು ಅರ್ಜಿ ವಜಾ..!! ಜಂಗ್ಲಿಗೆ ರಾಗಿ ಮುದ್ದೆ ತಿಳಿಸಾರು...

ದುನಿಯಾ ವಿಜಿಗೆ ಜೈಲೇ ಗತಿ..!! ಕರಿಚಿರತೆ ಜಾಮೀನು ಅರ್ಜಿ ವಜಾ..!! ಜಂಗ್ಲಿಗೆ ರಾಗಿ ಮುದ್ದೆ ತಿಳಿಸಾರು ಫಿಕ್ಸ್..!!

346
0
SHARE

ಜಿಮ್ ತರಬೇತುದಾರನ ಮೇಲೆ ಹಲ್ಲೆ, ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರೋ ನಟ ದುನಿಯಾ ವಿಜಿಗೆ ಸದ್ಯಕ್ಕೆ ಜೈಲೇಗತಿಯಾಗಿದೆ. ದುನಿಯಾ ವಿಜಯ್ ಮತ್ತು ತಂಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ.ಹಲ್ಲೆಗೊಳಗಾದ ಮಾರುತಿ ರಾವ್ ಇನ್ನೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಆಧಾರದ ಮೇಲೆ ಆರೋಪಿಗಳಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ.

ಇದರಿಂದ ದುನಿಯಾ ವಿಜಿ ಮತ್ತು ತಂಡ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.ಇನ್ನು ಜಾಮೀನಿಗಾಗಿ ದುನಿಯಾ ವಿಜಿ ಸೆಷನ್ಸ್ ಕೋರ್ಟ್ ಮೊರೆ ಹೋಗಬೇಕಾಗಿದೆ.ಕೋರ್ಟ್ ಆದೇಶ ಬಗ್ಗೆ ಪ್ರತಿಕ್ರಿಯಿಸಿರೋ ದುನಿಯಾ ವಿಜಿ ಪರ ವಕೀಲರು , ಕೋರ್ಟ್ ಆದೇಶದ ಪ್ರತಿ ಬಂದ ಬಳಿಕ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಜಾಮೀನು ಅರ್ಜಿ ತಿರಸ್ಕಾರ ವಿಷಯ ತಿಳಿಯುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದುನಿಯಾ ವಿಜಿ ಕಣ್ಣೀರಿಟ್ಟಿದ್ದಾರೆ.ಸೆಪ್ಟಂಬರ್ 22ರಂದು ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ದೇಹಧಾರ್ಡ್ಯ ಸ್ಪರ್ಧೆ ಸಂದರ್ಭದಲ್ಲಿ ಜಿಮ್ ತರಬೇತುದಾರ ಮಾರುತಿಗೌಡ ಮೇಲೆ ದುನಿಯಾ ವಿಜಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹಲ್ಲೆ ನಡೆಸಿದ ಬಳಿಕ ಕಾರಿನಲ್ಲಿ ಕಿಡ್ನ್ಯಾಪ್ ಕೂಡ ಮಾಡಲಾಗಿತ್ತು ಎಂದು ಮಾರುತಿಗೌಡ ಆರೋಪಿಸಿದ್ದರು.

ಸೆಪ್ಟಂಬರ್ 24ರಂದು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.ಅಂದು ವಾದ ಮಂಡಿಸಿದ ವಿಜಿ ಪರ ವಕೀಲರು, ನಟ ವಿಜಯ್‌ ಸೇರಿ ನಾಲ್ವರು ಆರೋಪಿಗಳ ಮೇಲಿನ ಆರೋಪಗಳು ಜಾಮೀನಿಗೆ ಅರ್ಹವಾಗಿದ್ದವು.ಆದರೆ, ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿಲ್ಲ. ಹೀಗಿದ್ದರೂ ಜಾಮೀನು ಸಿಗಬಾರದು ಎಂಬ ಉದ್ದೇಶದಿಂದ ಐಪಿಸಿ 326 ನಂತರ ಸೇರಿಸಲಾಗಿದೆ.

ತನಿಖೆಗೆ ಸಹಕರಿಸಲಿದ್ದು, ಜಾಮೀನು ಮುಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಆರೋಪಿಗಳು ಮಾರಕಾಸ್ತ್ರ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂಬ ಗಾಯಾಳುವಿನ ಹೇಳಿಕೆ ಆಧರಿಸಿ 326 ಸೇರಿಸಲಾಗಿದೆ. ಗಾಯಾಳು ತುಟಿಭಾಗ ಒಡೆದಿದೆ, ಮಾತನಾಡಲು ಆಗುತ್ತಿಲ್ಲ . ಜತೆಗೆ ಅಲ್ಲದೆ ಆರೋಪಿ ಚಿತ್ರ ನಟನಾಗಿರುವುದರಿಂದ ಜಾಮೀನು ನೀಡಿದರೆ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ.ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here