Home Cinema ದುನಿಯಾ ವಿಜಿಗೆ ವಾರ್ನಿಂಗ್ ಕೊಟ್ಟ DCP ಅಣ್ಣಮಲೈ..!? ವಿಜಿಯಿಂದ 5 ಲಕ್ಷ ಶ್ಯೂರಿಟಿ ಬರೆಸಿಕೊಂಡ ಅಣ್ಣಮಲೈ…ಕೈ...

ದುನಿಯಾ ವಿಜಿಗೆ ವಾರ್ನಿಂಗ್ ಕೊಟ್ಟ DCP ಅಣ್ಣಮಲೈ..!? ವಿಜಿಯಿಂದ 5 ಲಕ್ಷ ಶ್ಯೂರಿಟಿ ಬರೆಸಿಕೊಂಡ ಅಣ್ಣಮಲೈ…ಕೈ ಮುಗಿದ ’ಕರಿಚಿರತೆ’…

622
0
SHARE

ಇಂದು ಸಿಆರ್‌ಪಿಸಿ ಸೆಕ್ಷನ್ ೧೦೭ ದಾಖಲಾಗಿದ್ದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಿ, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಮಲೈ ಮುಂದೆ ಹಾಜರಾದ್ರು. ಸಮಾಜದ ಶಾಂತಿಗೆ ಭಂಗ ತಂದ ವಿಚಾರವಾಗಿ ಅಣ್ಣಮಲೈ ದುನಿಯಾ ವಿಜಿಗೆ ಖಡಕ್ ವಾರ್ನಿಂಗ್ ಕೊಟ್ಟಿದಾರೆ. ಇನ್ನೊಂದು ಬಾರಿ ಶಾಂತಿ ಕದಡುವಂತಹ ಕೆಲಸ ಮಾಡಿದ್ರೆ ಕಾನೂನು ಕ್ರಮ ಜರುಗಿಸುವುದಾಗಿ ಅಣ್ಣಮಲೈ ಹೇಳಿದ್ದಾರೆ.

ಇನ್ನು ವಿಚಾರಣೆಗೆ ಬಂದಿದ್ದ ದುನಿಯಾ ವಿಜಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಟ್ಟಿದಾರೆ. ದುನಿಯಾ ವಿಜಿ ಈಗ ’ಈ ಪಾಪಿ ಜನರ ಹಾಳು ದುನಿಯಾ’ ಅನ್ನೋ ಎಮೊಷನಲ್ ಸಾಂಗ್ ಹಾಡುವ ಪರಿಸ್ಥಿತಿ ಬಂದಿದೆ. ಮಾರುತಿಗೌಡ ಮೇಲಿನ ಹಲ್ಲೆ, ಮಾಸ್ತಿಗುಡಿ ದುರಂತ, ನಾಗರತ್ನ ನಾಪತ್ತೆ ಹೀಗೆ ಹಲವು ಕಾರಣಗಳಿಂದ ದುನಿಯಾ ವಿಜಿಗೆ ನೆಮ್ಮದಿ ಇಲ್ಲದಂತಾಗಿದೆ.

ಇದರ ಮಧ್ಯೆ ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಸ್ವಾಸ್ತ್ಯವನ್ನ ಹಾಳು ಮಾಡಿದ ಹಿನ್ನೆಲೆಯಲ್ಲಿ ವಿಜಿ ಮೇಲೆ ಸಿಆರ್‌ಪಿಸಿ ಸೆಕ್ಷನ್ ೧೦೭ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ದುನಿಯಾ ವಿಜಿಗೆ ನೋಟಿಸ್ ನೀಡಲಾಗಿತ್ತು. ಹಾಗಾಗೀ ಇಂದು ಬೆಳಿಗ್ಗೆ ೧೦;೩೦ಕ್ಕೆ ಸರಿಯಾಗಿ ಸೌತ್‌ಎಂಡ್ ಸರ್ಕಲ್ ಬಳಿಯಿರುವ ಡಿಸಿಪಿ ಕಚೇರಿಗೆ ಕುಟುಂಬ ಸಮೇತರಾಗಿ ಹಾಜರಾದ್ರು.

ನೋಟಿಸ್ ಪ್ರಕಾರ ಬಾಂಡ್ ನೀಡಿ ಮುಚ್ಚಳಿಕೆ ಬರೆದುಕೊಟ್ಟು ಹೊರಬಂದ ದುನಿಯಾ ವಿಜಿ ಮಾಧ್ಯಮಾದವರ ಬಳಿ ಮಾತನಾಡಿದ್ರು.ಈ ವಿಚಾರವಾಗಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಮಲೈ ದುನಿಯಾ ವಿಜಿಯಿಂದ ೫ ಲಕ್ಷ ಶ್ಯೂರಿಟಿಯನ್ನ ಬರೆಸಿಕೊಂಡಿದ್ದಾರೆ. ಇನ್ನು ಮುಂದೆ ಸಾಮಾಜಿಕ ಸುವ್ಯವಸ್ಥೆಯನ್ನ ಕೆಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ವಾರ್ನಿಂಗ್ ಕೊಟ್ಟಿದಾರೆ.

ಇನ್ನು ವಿಜಿ ಪತ್ನಿ ನಾಗರತ್ನ ನಾಪತ್ತೆಯಾಗಿ ಬಹಳ ದಿನಗಳೇ ಕಳೆದಿವೆ. ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿದ್ರೂ ನಾಗರತ್ನಗೆ ಬಂಧನದ ಭೀತಿ ತಪ್ಪಿದಲ್ಲ. ಒಟ್ಟಾರೆಯಾಗಿ ಈ ಎಲ್ಲ ಪ್ರಕರಣಗಳು ಯಾವಾಗ ಕಾನೂನಾತ್ಮಕವಾಗಿ ಸುಖಾಂತ್ಯ ಕಾಣುತ್ತೆ ಎನ್ನುವ ಯಕ್ಷಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. . !

LEAVE A REPLY

Please enter your comment!
Please enter your name here