Home Cinema ದುನಿಯಾ ವಿಜಿ ಕೌಟುಂಬಿಕ ಕಲಹ ಮತ್ತೆ ಬೀದಿಗೆ..! ಚಪ್ಪಲಿಯಿಂದ ಮನಬಂದಂತೆ ಕೀರ್ತಿಗೌಡಗೆ ಥಳಿಸಿದ್ದ ಮೊದಲ ಪತ್ನಿ...

ದುನಿಯಾ ವಿಜಿ ಕೌಟುಂಬಿಕ ಕಲಹ ಮತ್ತೆ ಬೀದಿಗೆ..! ಚಪ್ಪಲಿಯಿಂದ ಮನಬಂದಂತೆ ಕೀರ್ತಿಗೌಡಗೆ ಥಳಿಸಿದ್ದ ಮೊದಲ ಪತ್ನಿ ನಾಗರತ್ನ..!?

484
0
SHARE

ನಟ ದುನಿಯಾ ವಿಜಿ ಕೌಟುಂಬಿಕ ಕಲಹ ಮತ್ತೆ ಬಟಾಬಯಲಾಗಿದೆ. ವಿಜಿ 2ನೇ ಪತ್ನಿ ಮೇಲೆ ಮೊದಲ ಪತ್ನಿ ನಾಗರತ್ನ ದೌರ್ಜನ್ಯ ವೆಸಗಿರೋದು ತಡವಾಗಿ ಬೆಳಕಿಗೆ ಬಂದಿದೆ.ಜಿಮ್ ಟ್ರೈನರ್ ಮೇಲೆ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾಗ ಸೆಪ್ಟಂಬರ್ 23 ರಂದು ಹೈಡ್ರಾಮಾ ನಡೆದಿದೆ.

ಅಂದು ಕತ್ರಿಗುಪ್ಪೆಯಲ್ಲಿರೋ ದುನಿಯಾ ವಿಜಿ ಮನೆಯಲ್ಲಿ ಎರಡನೇ ಪತ್ನಿ ಕೀರ್ತಿಗೌಡ ಅವರು ವಿಜಿ ಅವರ ತಂದೆ ತಾಯಿ- ಸಂಬಂಧಿ ಜೊತೆ ಮಾತನಾಡುತ್ತಿದ್ದರು. ಏಕಾಏಕಿ ಮನೆಗೆ ಪ್ರವೇಶಿಸಿದ ನಾಗರತ್ನ, ಬಾಗಿಲು ಮುಂಭಾಗದಲ್ಲಿ ಬಿಡಲಾಗಿದ್ದ ಚಪ್ಪಲಿಯನ್ನು ಎತ್ತುಕೊಂಡು ಮನೆ ಪ್ರವೇಶಿಸಿದ್ದಾರೆ.

ಸೋಫಾದಲ್ಲಿ ಕುಳಿತಿದ್ದ ಕೀರ್ತಿಗೌಡ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹೈಡ್ರಾಮಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯನ್ನು ಕೀರ್ತಿ ಗೌಡ ನಿನ್ನೆ ಗಿರಿನಗರ ಪೊಲೀಸರಿಗೆ ನೀಡಿದ್ದಾರೆ.ನಟ ದುನಿಯಾ ವಿಜಯ್ ಪತ್ನಿಯರ ಸಂಘರ್ಷ ಮತ್ತೆ ಸದ್ದು ಮಾಡಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ. ಅಮ್ಮ ನಡೆಸಿರೋ ಹಲ್ಲೆ ಕೃತ್ಯಕ್ಕೆ ಮಗಳು ಮೋನಿಕಾ ಸಪೋರ್ಟ್ ಮಾಡಿರೋದು ಸಹ ಸ್ಪಷ್ಟವಾಗಿ ದೃಶ್ಯದ ಮೂಲಕ ತಿಳಿದುಬಂದಿದೆ.

ಸಿಸಿಟಿವಿ ಫೂಟೇಜ್ ನಲ್ಲಿ ನಾಗರತ್ನ ಕೃತ್ಯ ಬಯಲಾಗಿದ್ದು, ವಿಜಿ ಸ್ನೇಹಿತ ನೀನಾಸಂ ಮಂಜು ಹಲ್ಲೆ ವೇಳೆ ಸ್ಥಳದಲ್ಲಿದ್ದು, ಪ್ರತ್ಯಕ್ಷದರ್ಶಿಯಾಗಿದ್ದಾರೆ. ನಾಗರತ್ನ ಹಾಗೂ ಮೋನಿಕಾ ರ ಹೈಡ್ರಾಮ ಬಯಲಾಗುತ್ತಿದ್ದಂತೆ ನಟ ವಿಜಯ್ ಮೊದಲ ಮಡದಿ ವಿರುದ್ಧ ಕೆಂಡಕಾರಿದ್ದಾರೆ. ನಾಗರತ್ನ ಮಾಡಿರೋ ಕೆಲಸ ಎಂಥದ್ದು ಎಂದು ಎಲ್ಲರಿಗೂ ಗೊತ್ತಾಗಿದೆ. ಇದರಿಂದ ನಮಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮಗೆ ಕೂಡಲೇ ನ್ಯಾಯ ಕೊಡಿಸಿ ನನಗೆ ತುಂಬಾ ಕೆಲಸ ಇದೆ ಎಂದು ಸಹ ಮಾಧ್ಯಮಗಳ ಮೂಲಕ ಮನವಿ ಮಾಡಿದ್ರು. ನಾಗರತ್ನ ಮಾತಾಡಿರೋದು ನಾಯಿ ತರ, ಬೇಕಂತಲೇ ನನ್ನ ಇಮೇಜ್ ಡ್ಯಾಮೇಜ್ ಡ್ಯಾಮೇಜ್ ಮಾಡಲು ಮುಂದಾಗಿದ್ದಾಳೆ ಎಂದು ಗರಂ ಆಗಿದ್ದಾರೆ. ಮೋನಿಕಾ ವಿರುದ್ಧವೂ ಅಸಮಾಧಾನ ಹೊರಹಾಕಿದ ಕರಿಚಿರತೆ, ನೂಲಿನಂತೆ ಸೀರೆ, ತಾಯಿಯಂತೆ ಮಕ್ಕಳು ಅಂತ ಕಿಡಿಕಾರಿದ್ದಾರೆ.

ಕೀರ್ತಿಗೌಡಳ ಮೇಲೆ ವಿಜಯ್ ಮೊದಲ ಪತ್ನಿ ನಾಗರತ್ನ ಹಲ್ಲೆ ನಡೆಸಿರುವ ಪ್ರಕರಣ ಈಗ ಮತ್ತಷ್ಟು ಹೊಸ ತಿರುವು ಪಡೆದುಕೊಳ್ಳುತ್ತಿದೆ ..ತನ್ನ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದ ನಾಗರತ್ನ ಪರ ಈಗ ವಕೀಲೆ ಮೀರಾ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.. ಮದುವೆಯಾಗದೇ ಕೀರ್ತಿಯನ್ನು ಹೆಂಡತಿ ಅನ್ನೋದು ಎಷ್ಟು ಸರಿ.. ಗಂಡ ಬೇರೊಬ್ಬಳ ಜೊತೆ ಓಡಾಡ್ತಿದ್ರೆ ಯಾರು ಸಹಿಸಿಕೊಳ್ತಾರೆ ..

ವಯಸ್ಸಿಗೆ ಬಂದ ಮಕ್ಕಳನ್ನು ಮುಂದಿಟ್ಕೊಂಡು ವಿಜಿ-ಕೀರ್ತಿ ಜೊತೆಗಿದ್ದಾರೆ ಎಂದು ವಿಜಿ ವಿರುದ್ಧ ನಾಗರತ್ನ ಪರ ವಕೀಲೆ ಮೀರಾ ರಾಘವೇಂದ್ರ ಆರೋಪ ಮಾಡಿದ್ದಾರೆ…ಸಿಸಿಟಿವಿ ಮೂಲಕ ನಾಗರತ್ನನೇ ಬಂದು ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ನಾಗರತ್ನ ಮನೆ ಮುಂದೆ ವಿಜಿ ಅಭಿಮಾನಿಗಳು ಜಮಾಯಿಸಿದ್ದಾರೆ.

ಅತ್ತ ನಾಗರತ್ನ ತಂದೆ ರುದ್ರಪ್ಪ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಈಗಷ್ಟೇ ಬಂದೆ ನನಗೆ ಯಾವ ವಿಚಾರವೂ ಗೊತ್ತಿಲ್ಲ, ನಾನು ಹಳ್ಳಿಯಿಂದ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೀರ್ತಿಗೌಡ ಬಗ್ಗೆ ದೂರು ನೀಡಿರೋ ವಿಚಾರ ಗೊತ್ತಿಲ್ಲ ಈ ಬಗ್ಗೆ ಅವರು ಮಾತನಾಡಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here