Home Cinema ದುರ್ಯೋಧನ ದರ್ಶನ್ ರಣಕೇಕೆಗೆ ಕಾರಣ ಮೈತ್ರಿ ಸರ್ಕಾರದ ಪತನ..? ಅಧಿಕಾರವಿದ್ದಾಗ ಕುಮಾರಣ್ಣನ ಪುತ್ರ ಬೇಕಿದ್ದ ಮುನಿರತ್ನಗೆ..?...

ದುರ್ಯೋಧನ ದರ್ಶನ್ ರಣಕೇಕೆಗೆ ಕಾರಣ ಮೈತ್ರಿ ಸರ್ಕಾರದ ಪತನ..? ಅಧಿಕಾರವಿದ್ದಾಗ ಕುಮಾರಣ್ಣನ ಪುತ್ರ ಬೇಕಿದ್ದ ಮುನಿರತ್ನಗೆ..? ಕುರುಕ್ಷೇತ್ರದ ಕಣದಿಂದ ನಿಖಿಲ್ ಕಣ್ಮರೆಯಾಗಿದ್ದಾರೇಕೆ ಇಂದು..! ಚಕ್ರವ್ಯೂಹ…!

3054
0
SHARE

ಕುರುಕ್ಷೇತ್ರದ ಅಂಗಳದಲ್ಲಿ ರಾಜಕೀಯ ವಾಸನೆಯೂ ವರ್ಕೌಟ್ ಆಗ್ತಿರೋದು ಅಕ್ಷರಶಃ ಸತ್ಯ. ಇದು ಮೆಲ್ನೋಟಕ್ಕೆ ಕಾಣದೇಹೋದ್ರೂ ಒಳಗೊಳಗೆ ಸಿಡಿಯುತ್ತಿರೋ ಕಾಣದ ಬೆಂಕಿ. ಕುರುಕ್ಷೇತ್ರ ಟೀಮ್‌ನಲ್ಲಿ ರಾಜಕೀಯ ವೈಮನಸ್ಸುಗಳು ಸಕತ್ತಾಗೆ ಪ್ರದರ್ಶನಗೊಳ್ತಿವೆ. ಇದಕ್ಕೆ ಯಾವ ಸಾಕ್ಷಿಯ ಅವಶ್ಯಕತೆಯೂ ಇಲ್ಲ. ಯಾಕಂದ್ರೆ ಕುರುಕ್ಷೇತ್ರದ ಪ್ರಚಾರಕಾರ್ಯಗಳಲ್ಲಿ ಯಾರಿದ್ದಾರೆ ಯಾರಿಲ್ಲ ಅಂತ ಒಮ್ಮೆ ಕಣ್ಣಾಡಿಸಿದ್ರೆ ಸಾಕು, ಒಳಸತ್ಯಗಳು ತಾನಾಗೇ ಆಚೆ ಬರುತ್ತೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಮೂಡಿಸಿದ ಕುರುಕ್ಷೇತ್ರ ಈಗ ನಿಜವಾಗಿಯೂ ರಣರಂಗದ ಫೀಲ್ ಕೊಡ್ತಿದೆ. ತಂತ್ರ-ಪ್ರತಿತಂತ್ರದ ಹೊಸಹೊಸ ಪೊಲಿಟಿಕಲ್ ಕಲರ್‌ಗಳ ಅನಾವರಣಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿಹೋಗಿದೆ.

ದರ್ಶನ್ ಹಾಗೂ ನಿಖಿಲ್ ನಡುವಿನ ಮನಸ್ತಾಪವನ್ನ ಎತ್ತಿ ತೋರಿಸಿತ್ತು. ಮಂಡ್ಯ ಲೋಕಸಭಾ ಎಲೆಕ್ಷನ್ ಟೈಮ್‌ನಲ್ಲಿ ನಡೆದ ಕೆಲವು ಕೋಳಿ ಜಗಳಗಳೇ ಕುರುಕ್ಷೇತ್ರ ಸಿನಿಮಾಗೆ ನೇರವಾಗಿ ಹೊಡೆತಕೊಟ್ಟಿತ್ತು. ನಿರ್ಮಾಪಕ ಮುನಿರತ್ನ ರಾಜರಾಜೇಶ್ವರಿ ನಗರದ ಶಾಸಕರಾಗಿಯೂ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಮಾಜಿ ಸಿಎಂ ಕುಮಾರಸ್ವಾಮಿಗೂ ಸ್ವಲ್ಪ ಆಪ್ತರೇ. ಹಾಗಾಗೀ ಕುರುಕ್ಷೇತ್ರದಲ್ಲಿ ದುರ್ಯೋಧನನಿಗಿಂತ ಅಭಿಮನ್ಯು ಹೈಲೆಟ್ ಆಗಿಹೋದ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಹರಿದಾಡ್ತು. ಮುನಿರತ್ನ ದರ್ಶನ್‌ರನ್ನ ಮರೆತುಬಿಟ್ಟಿದ್ದಾರೆ ಅಂತ ಟಾಕ್ ಶುರುವಾಯ್ತು. ಕುರುಕ್ಷೇತ್ರದಲ್ಲಿ ದುರ್ಯೋಧನ ಮುಖ್ಯನಾ? ಅಥವಾ ಅಭಿಮನ್ಯು ಪಾತ್ರದಲ್ಲಿ ನಟಿಸಿರೋ ಸಿಎಂ ಮಗ ಮುಖ್ಯನಾ ಅಂತ ಡಿ ಬಾಸ್ ಅಭಿಮಾನಿಗಳು ರೊಚ್ಚಿಗೆದ್ರು.

ಆದರೆ ಮುನಿರತ್ನ ಮಾತ್ರ ಯುವರಾಜ ನಿಖಿಲ್ ಗುಣಗಾನದಲ್ಲೇ ಬಹಳ ಬಿಜಿಯಾಗಿಬಿಟ್ಟಿದ್ರು ಅನಿಸುತ್ತೆ. ಇದಕ್ಕೆಲ್ಲಾ ಪೂರಕವಾಗಿ ಒಂದು ಸ್ಟೆಪ್ ಮುಂದೆ ಹೋಗಿ ನಿಖಿಲ್ ನಟನೆಯನ್ನ ವರನಟ.ಡಾ.ರಾಜ್‌ಕುಮಾರ್‌ಗೆ ಹೋಲಿಸಿಬಿಟ್ಟಿದ್ರು ಮಿಸ್ಟರ್.ಮುನಿರತ್ನ.ಆಗ ಮೈತ್ರಿಸರ್ಕಾರವಿತ್ತು. ಸೋ, ಮುನಿರತ್ನ ಹಾಗೂ ಎಚ್.ಡಿ.ಕುಮಾರಸ್ವಾಮಿಯ ಫ್ರೆಂಡ್‌ಶಿಪ್ ಚೆನ್ನಾಗಿತ್ತು. ಹಾಗಾಗೀ ಕುರುಕ್ಷೇತ್ರದಲ್ಲಿ ನಿಖಿಲ್ ಪಾತ್ರವನ್ನ ಹೈಲೆಟ್ ಮಾಡಬೇಕು ಎನ್ನುವ ಆಸೆ ಮುನಿರತ್ನ ಮನಸ್ಸಿನಲ್ಲಿ ಮನೆ ಮಾಡಿತ್ತು ಅನ್ಸುತ್ತೆ. ಆದರೆ ಟೈಮ್ ಒಂದೇ ರೀತಿ ಇರಬೇಕಲ್ಲ. ಚುನಾವಣೆ ಮುಗಿತು. ಸುಮಲತಾ ಭಾರೀ ಅಂತರದಲ್ಲೇ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿ ಮಂಡ್ಯಜನರಿಗೆ ಹತ್ತಿರವಾಗಿಹೋದ್ರು. ನಂತರದ ದಿನಗಳಲ್ಲಿ ದರ್ಶನ್ ಹಾಗೂ ನಿಖಿಲ್ ನಡುವಿನ ಬಿಸಿ ಕೂಡ ಕಮ್ಮಿಯಾಗಿತ್ತು. ಆದರೆ ಯಾವಾಗ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅತೃಪ್ತರ ಬಣ ಸೇರಿಕೊಂಡ್ರೋ ಆಗಿನಿಂದ ನಿಖಿಲ್‌ಗೂ, ಮುನಿರತ್ನಗೂ ಆಗಿಬರಲಿಲ್ಲ.

ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಮುಖ ತಿರುಗಿಕೊಂಡುಬಿಟ್ರು. ದೋಸ್ತಿ ಸರ್ಕಾರ ಬಿದ್ದಮೇಲಂತೂ ಇಬ್ಬರೂ ಪರಿಚಯವೇ ಇಲ್ವೇನೋ ಎನ್ನುವಂತೆ ಡಿವೈಡ್ ಆಗಿಬಿಟ್ರು. ಇದಕ್ಕೆ ಸಾಕ್ಷಿ ಅನ್ನುವಂತೆ ನಿಕಿಲ್ ಕುರುಕ್ಷೇತ್ರದ ಕಣದಿಂದ ಸದ್ಯಕ್ಕೆ ಕಂಪ್ಲೀಟಾಗಿ ಕಣ್ಮರೆಯಾಗಿದ್ದಾರೆ. ಹೌದು, ಕುರುಕ್ಷೇತ್ರ ಇನ್ನೇನೂ ಬಿಡುಗಡೆಯಾಗ್ತಿದೆ. ಚಿತ್ರದ ಪ್ರಚಾರ ಕಾರ್ಯಗಳೂ ಭರದಿಂದ ಸಾಗಿವೆ. ಆದ್ರೆ ಹೀಗೆ ನಡೆಯುತ್ತಿರುವ ಪ್ರಚಾರದ ವೇದಿಕೆಯನ್ನೊಮ್ಮೆ ಗಮನಿಸಿ ಅಲ್ಲಿ ನಿಕಿಲ್ ಇಲ್ವೇ ಇಲ್ಲ. ಹೌದು, ಅಸಲಿಗೆ ಕುರುಕ್ಷೇತ್ರದ ಆಡಿಯೋ ಬಿಡುಗಡೆಯ ಹಿಂದೆ ಮುಂದೆ ನಿಕಿಲ್ ಹಾಗೂ ದರ್ಶನ್ ವೇದಿಕೆ ಹಂಚಿಕೊಳ್ತಾರಾ ಎಂಬ ಕೂತುಹಲವಿತ್ತು. ಇದಕ್ಕೆ ಉತ್ತರವೆನ್ನುವಂತೆ ನಿಕಿಲ್ ಆಡಿಯೋ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಇನ್ನು, ಇತ್ತೀಚಿಗಷ್ಟೇ ಕುರುಕ್ಷೇತ್ರದ ಮತ್ತೊಂದು ಟ್ರೇಲರ್ ಬಿಡುಗಡೆಯಾಯ್ತಲ್ಲ.. ಅದ್ರ ಸಮಾರಂಭ ಪಕ್ಕದ ಹೈದ್ರಾಬಾದ್‌ನಲ್ಲಿ ಇಟ್ಟುಕೊಳ್ಳಲಾಗಿತ್ತು. ದರ್ಶನ್ ಸೇರಿ ಹಿಂದಿಯ ಸೋನು ಸೂದ್ ಚಿತ್ರತಂಡ ಹೈದ್ರಾಬಾದ್‌ನಲ್ಲಿ ಬೀಡು ಬಿಟ್ಟಿತ್ತು. ರಾಜಕೀಯದ ರಂಪ ರಾಮಾಯಾಣದ ನಡುವೆಯೂ ಮುನಿರತ್ನ ಹೈದ್ರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ದುರ್ಬಿನ್ ಹಾಕಿ ಹುಡುಕಿದ್ರೂ ತೆಲುಗು ನಾಡಿನಲ್ಲಿ ನಿಕಿಲ್ ಕುಮಾರಸ್ವಾಮಿ ಕಾಣಿಸಲಿಲ್ಲ.ಇದೆಲ್ಲದ್ರ ನಡುವೆ, ಸದ್ಯಕ್ಕೆ ಇನ್ನೊಂದು ಸುದ್ದಿಯೂ ಸ್ಫೋಟಗೊಂಡಿದೆ. ಸ್ಫೋಟಗೊಂಡಿರುವ ಇದೇ ಸುದ್ದಿ ರಾಜಕೀಯ ಉದ್ದೇಶ ಏನೆಲ್ಲಾ ಮಾಡಿಸುತ್ತೆ ಅನ್ನುವದಕ್ಕೂ ಸಾಕ್ಷಿಯಂತಿದೆ. ಹೌದು. ಅಸಲಿಗೆ ಕುರುಕ್ಷೇತ್ರದ ಹೊಸ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದು, ಸಂಭ್ರಮದ ವಿಷಯವೇ. ಬಟ್, ನಿಕಿಲ್ ವಿಚಾರಕ್ಕೆ ಬಂದ್ರೆ ಇಲ್ಲೂ ಒಂದು ಟ್ವಿಸ್ಟ್ ಇದೆ. ಹೌದು. ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಕಿಲ್ ತಮ್ಮ ಪಾತ್ರಕ್ಕೆ ಡಬ್ ಮಾಡಿಲ್ಲ.

ಕುರುಕ್ಷೇತ್ರ ಚಿತ್ರದ ಟ್ರೈಲರ್ ನಲ್ಲಿ ನಿಖಿಲ್ ಕುಮಾರ್ ಅವರ ಧ್ವನಿ ಇಲ್ಲ. ಆದರೆ, ಅದಕ್ಕೂ ಮುಂಚೆ ನಿಖಿಲ್ ಹುಟ್ಟುಹಬ್ಬಕ್ಕೆ ಬಂದಿದ್ದ ಟೀಸರ್ ನಲ್ಲಿ ”ತಾತ…..ಈ ಯುದ್ಧ ಸ್ವಾಭಿಮಾನದ ಸಂಕೇತ” ಎಂಬ ಡೈಲಾಗ್ ಹೇಳಿದ್ದರು. ಇದರಲ್ಲಿ ನಿಖಿಲ್ ವಾಯ್ಸ್ ಇತ್ತು. ಸೋ, ಆಗ ಡಬ್ ಮಾಡಿದ್ರಾ, ಈಗ ಟ್ರೈಲರ್ ನಲ್ಲಿ ಯಾಕಿಲ್ಲ? ಎಂಬ ಪ್ರಶ್ನೆ ಇದೀಗ ಅನೇಕರಿಗೆ ಕಾಡ್ತಿದೆ. ಇನ್ನು ಪೌರಾಣಿಕ ಸಿನಿಮಾದಲ್ಲಿ ಸಂಭಾಷಣೆ ಸ್ವಲ್ಪ ಚಾಲೆಂಜಿಂಗ್ ಆಗಿರುವ ಕಾರಣ ನಿಖಿಲ್ ಅವರಿಂದ ಡಬ್ ಮಾಡಿಸದೆ ಇರಬಹುದು ಎಂದು ನೋಡಿದ್ರೆ, ಅಂದು ಮುನಿರತ್ನ ಹೇಳಿದ್ದು ಸುಳ್ಳಾ ಎಂದು ಎನಿಸಿದೇ ಇರಲ್ಲ. ”ಡಾ, ರಾಜ್ ಕುಮಾರ್ ಅವರಷ್ಟೇ ಕನ್ನಡ ಭಾಷೆಯ ಮೇಲೆ ನಿಖಿಲ್ ಹಿಡಿತ ಹೊಂದಿದ್ದಾರೆ” ಎಂದು ಮುನಿರತ್ನ ಹಿಂದೆ ಹೇಳಿದ್ದರು. ರಾಜ್ ಅವರಷ್ಟು ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ ಎಂದು ಗೊತ್ತಿದ್ದರೂ ನಿಕಿಲ್ ಅವ್ರಿಂದ ಪಾತ್ರಕ್ಕೆ ಡಬ್ ಯಾಕೆ ಮಾಡಿಸಿಲ್ಲ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ನಡುವೆಯೇ, ರಾಜಕೀಯದ ಸ್ಥಾನಗಳೂ ಪಲ್ಲಟವಾದ್ರೆ ಏನೆಲ್ಲಾ ಆಗುತ್ತೆ ಅನ್ನುವದಕ್ಕೂ ಇದು ಬೆಸ್ಟ್ ಎಕ್ಸಾಂಪಲ್ ಅನ್ನೋದು ಅನೇಕರ ಅಭಿಮತ.

ಕೊಳಕು ರಾಜಕಾರಣದ ಫಲವಾಗಿ ಇದೀಗ ಮೈತ್ರಿ ಸರ್ಕಾರ ಪತನಗೊಂಡಿದೆ. ಇನ್ನು ನಿಕಿಲ್‌ರಿಂದ ಮುನಿರತ್ನಗೆ ಯಾವ ಪ್ರಯೋಜನನೂ ಇಲ್ಲ. ಸಿಂಪಲ್ಲಾಗಿ ಹೇಳಬೇಕಂದ್ರೆ ಮುನಿರತ್ನ ಉದ್ಧೇಶ ಇಡೇರಿದೆ. ಹಾಗಾಗೇ, ಚಿತ್ರದ ಪ್ರಚಾರಕ್ಕೆ ದರ್ಶನ್ ಅನಿವಾರ್ಯ ಎಂಬ ಸತ್ಯದ ಅರಿವಾಗಿದೆ. ಹಾಗಾಗೇ, ಅಂದು ಅಭಿಮನ್ಯು ಅನ್ನುತ್ತಿದ್ದ ಮುನಿರತ್ನ ಇದೀಗ ದುರ್ಯೋಧನ ಅನ್ನುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಕುರುಕ್ಷೇತ್ರಕ್ಕೆ ನಿಜವಾದ ಕಳೆ ಈಗ ಬಂದಿದೆ. ಇದು ದರ್ಶನ್ ಸಿನಿಮಾ ಅನ್ನುವ ಭಾವಕ್ಕೂ ಕಾರಣವಾಗಿದೆ. ಹಾಗಾಗೇ, ದರ್ಶನ್ ಅಭಿಮಾನಿಗಳೂ ಇದೀಗ ನಿರಾಳರಾಗಿದ್ದಾರೆ. ದರ್ಶನ್ ಕೂಡಾ ಇನ್ನಷ್ಟು ಹುಮ್ಮಸ್ಸಿನಿಂದ ಪ್ರಚಾರ ಮಾಡುತ್ತಿದ್ದಾರೆ.ಅದೇನೇ ಇರ‍್ಲಿ, ಇಷ್ಟು ದಿನಗಳ ಕಾಲ ನಿಖಿಲ್‌ರನ್ನ ಹಾಡಿಹೊಗಳಿದ್ದ ಮುನಿರತ್ನ ಈಗ ಸಡನ್ನಾಗಿ ತಮ್ಮ ದಾರಿಯನ್ನ ಬದಲಾಯಿಸಿ ದರ್ಶನ್‌ರತ್ತ ಮುಖ ಮಾಡಿರೋದು ಸದ್ಯಕ್ಕೆ ಚಿತ್ರದ ದೃಷ್ಟಿಕೋನದಿಂದ ಒಳ್ಳೆದೇ.

ಯಾಕಂದ್ರೆ ಒಂದು ಪ್ಯಾನ್ ಇಂಡಿಯಾ ಅಪ್ರೋಚ್ ಇರೋ ಇಂತಹ ಚಿತ್ರಗಳು ಪ್ರೇಕ್ಷಕನಿಗೆ ತಲುಪಬೇಕಾದ್ರೆ ಅದರಲ್ಲಿ ಆಕ್ಟ್ ಮಾಡಿರೊ ಸ್ಟಾರ್‌ಗಳ ಸರ್ಪೋಟ್ ಬಹಳನೇ ಮುಖ್ಯ. ಸಿನಿಮಾದ ಪ್ರಮೊಷನ್ ನೆಟ್ಟಗೆ ಮಾಡದೇ ಹೋದ್ರೆ ಎಂತಹ ಬಿಗ್‌ಬ್ಯಾನರ್ ಚಿತ್ರಗಳು ಸಕ್ಸಸ್ ಆಗಲ್ಲ ಅನ್ನೋದು ಗಾಂಧಿನಗರದ ಹಳೇ ಫಾರ್ಮುಲಾನೇ. ಅದರಲ್ಲೂ ಐದು ಭಾಷೆಗಳಲ್ಲಿ ತೆರೆಕಾಣಲಿರೋ ಕುರುಕ್ಷೇತ್ರಕ್ಕೆ ಇನ್ನಷ್ಟು ಪ್ರಚಾರದ ಗ್ರಿಪ್ ಸಿಗಬೇಕಿದೆ. ಇಲ್ಲದೇ ಹೋದ್ರೆ ಹೀಗೆ ಬಂದು ಹಾಗೆಹೋಗೊ ಚಿತ್ರಗಳ ಲಿಸ್ಟ್‌ಗೆ ಸೇರಿಕೊಳ್ಳೊದು ಫಿಕ್ಸ್. ನಿಜಹೇಳಬೇಕಾದ್ರೆ, ದರ್ಶನ್ ಭಾಗವಹಿಸುವಿಕೆಯಿಂದಲೇ ಈಗ ಅಭಿಮಾನಿಗಳಲ್ಲಿ ಒಂದು ಪಾಸಿಟಿವ್ ಸ್ಪಾರ್ಕ್ ಕ್ರಿಯೆಟ್ ಆಗಿದೆ. ಕುರುಕ್ಷೇತ್ರ ಚಿತ್ರ ದರ್ಶನ್ ಅಭಿನಯದ ೫೦ನೇ ಸಿನಿಮಾ ಎನ್ನುವ ಫೀಲ್ ಬಂದಿದೆ. ಅಂತೂ ವರಮಹಾಲಕ್ಷ್ಮೀ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ದರ್ಶನ್ ಕೊಡ್ತಿರೋ ಸ್ಪೆಷಲ್ ಗಿಫ್ಟ್ ಇದಾಗಬಹುದೇನೋ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ವಿಚಾರಗಳಲ್ಲಿ ಮುನಿರತ್ನ ತೆರೆಯ ಮರೆಯಲ್ಲೇ ಪಿತೂರಿಗಳನ್ನು ಮಾಡಿದ್ದಾರೆಂಬ ಮಾತುಗಳು ಕೇಳಿಬಂದಿತ್ತು. ಹಾಗಾಗಿನೇ ಬುಕ್ ಮೈ ಶೋ ಪೇಜ್‌ನಲ್ಲಿ ಕೂಡ ಅಭಿಮನ್ಯೂವಿನ ಪ್ರತಾಪ ರಾರಾಜಿಸುವಂತೆ ಮಾಡಿದ್ರು. ಅಲ್ಲದೆ ಬುಕ್ ಮೈ ಶೋದ ಪೇಜ್‌ನಲ್ಲಿ ಅಭಿಮನ್ಯೂ ಪರಾಕ್ರಮದ್ದೇ ಪುಕಾರು ಹಬ್ಬಿಸಿದ್ರು. ದರ್ಶನ್ ಹೈಲೆಟ್ ಮಾಡಬೇಕಾದ ಕಡೆಯಲ್ಲೆಲ್ಲಾ ನಿಖಿಲ್ ಫೋಟೋಗಳನ್ನು ರಾರಾಜಿಸುವಂತೆ ಮಾಡಿದ್ರು. ಬುಕ್ ಮೈ ಶೋದಲ್ಲಿ ಚಿತ್ರ ರಿಲೀಸ್ ಆಗೋದಕ್ಕೆ ೮ ತಿಂಗಳ ಮುನ್ನವೇ ನಿಖಿಲ್ ಫೋಟೋ ಹಾಕಿದ್ರು. ಕುರುಕ್ಷೇತ್ರ ದುರ್ಯೋರ್ಧನ ಮಯವಾಗಿರುತ್ತೆ ಅಂತ ನಿರೀಕ್ಷೆ ಮಾಡಿದ್ದವರ ಭರವಸೆಗೆ ಆಸೆ ತಣ್ಣಿರು ಎರೆಚಿದ್ರು. ಎಲ್ಲಾ ಪಾತ್ರಗಳು ಪರಿಚಯವಾದ ಬಳಿಕ ದುಯೋರ್ಧನ ಕೊನೆಯ ಪೋಟೋದಲ್ಲಿ ದರ್ಶನ್ ಫೋಟೋ ಬರುವಂತೆ ಮಾಡಿದ್ರು. ಈ ಮೂಲಕ ಡಿ-ಭಕ್ತರ ಕಣ್ಣು ಕೆಂಪಾಗಿಸಿದ್ರು.

ಪ್ರತಿಯೊಂದು ಪೋಸ್ಟರ್‌ನಲ್ಲಿಯೂ ನಿಖಿಲ್ ರಾರಾಜಿಸುವಂತೆ ಮಾಡಿದ್ರು. ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಯುವರಾಜನಿಂಗೆ ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದ್ರು ಮುನಿರತ್ನ. ನಿಮ್ಗೇ ಗೊತ್ತಿರ‍್ಲಿ.. ಮುನಿರತ್ನ ಹೀಗೆ ಮಾಡೋದಕ್ಕೆ ಒಂದು ಬಲವಾದ ಕಾರಣವಿತ್ತು. ಮುನಿರತ್ನ ಕಾಂಗ್ರೇಸ್‌ನ ಎಂ.ಎಲ್.ಎ ಆಗಿದ್ರು. ಇನ್ನು ನಿಖಿಲ್ ಸಿ.ಎಂ ಪುತ್ರ. ಇವರ ಎದುರು ಮುನಿಸಿಕೊಳ್ಳೊದಕ್ಕೂ ಸಾಧ್ಯವಿಲ್ಲ. ಹೋಗಿ ಹೋಗಿ ಸಮ್ಮಿಶ್ರ ಸರ್ಕಾರದಲ್ಲಿ ಸಿಲುಕಿ ಹೇಳಿದ್ದಕ್ಕೆಲ್ಲಾ ಒಪ್ಪಿಕೊಳ್ಳುವಂಥಾ ಪರಿಸ್ಥಿತಿ ಮುನಿರತ್ನಗೆ ಎದುರಾಗಿದ್ದು. ಅದರ ಎಫೆಕ್ಟ್ ಆಗಿದ್ದು ಮಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ. ಇದಕ್ಕೆ ಸಾಕ್ಷಿ ಅನ್ನುವಂತೆ ಮುನಿರತ್ನ ಸೀತಾರಾಮ ಕಲ್ಯಾಣ ಸಿನಿಮಾದ ಟೀಸರ್ ಲಾಂಚ್ ವೇದಿಕೆಯಲ್ಲಿ ಬಹಿರಂಗ ಪಡಿಸಿದ್ರು. ಹೌದು ಸಿ.ಎಂ ಸ್ವಕ್ಷೇತ್ರವಾಗಿರುವ ರಾಮನಗರದಲ್ಲಿನ ಅದ್ದೂರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಜಮಾಯಿಸಿದ್ದ ಸಮಯದಲ್ಲಿ.

ಚಿತ್ರ ಆಡಿಯೋ ಟೀಸರ್ ಲಾಂಚ್‌ಗೆ ಅತಿಥಿಯಾಗಿ ಹೋಗಿದ್ದ ಮುನಿರತ್ನ. ವೇದಿಕೆ ಮೇಲೆ ನಿಖಿಲ್ ಕುಮಾರಸ್ವಾಮಿಯನ್ನು ಹಾಡಿಹೋಗಳಿದ್ರು. ಮುನಿರತ್ನ ಕುರುಕ್ಷೇತ್ರದಲ್ಲಿ ನಿಖಿಲ್ ಪಾತ್ರದ ಬಗ್ಗೆ ಬಾಯಿಗೆ ಬಂದಂತೆ ಎಕ್ಸೈಟ್ ಮೆಂಟ್‌ನಲ್ಲಿ ಮಾತನಾಡಿ. ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರಕ್ಕಿಂತ ಅಭಿಮನ್ಯು ಪರಾಕ್ರಮವೇ ಹೆಚ್ಚು ಸದ್ದು ಮಾಡುತ್ತೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ರು. ನಿಖಿಲ್‌ರನ್ನು ಅಟ್ಟಕ್ಕೇರಿಸಿದ್ರು. ಈಗ ಕರ್ನಾಟಕದ ರಾಜಕೀಯ ಬದಲಾಗಿದೆ. ಅಂದು ಸಿ.ಎಂ ಆಗಿದ್ದ ಕುಮಾರಸ್ವಾಮಿ ಈಗ ಮಾಜಿ ಸಿಎಂ ಆಗಿದ್ಧಾರೆ. ಅವರ ಆಜ್ಞೆ ಪರಿಪಾಲಿಸುತ್ತಾ. ಅಪ್ಪ – ಮಗನ ಕೈ ಗೊಂಬೆಯಾಗಿದ್ದ ಮುನಿರತ್ನ ಈಗ ಕಾಂಗ್ರೇಸ್‌ನಿಂದ ಅತೃಪ್ತ ಶಾಸಕರಾಗಿ ಮುಂಬೈ ನಲ್ಲಿ ಬೀಡು ಬಿಟ್ಟಿದ್ದು. ರಾಜಕೀಯದಲ್ಲಾದ ಮೇಜರ್ ಬದಲಾವಣೆಯ ಬಳಿಕ ತಮ್ಮ ಅಸಲಿ ಆಟ ಶುರು ಮಾಡಿದ್ದಾರ‍್ದೆ. ನಿಖಿಲ್‌ರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದ ಮುನಿರತ್ನ. ದರ್ಶನ್ ದುರ್ಯೋಧನ ಅಸಲಿ ಟ್ರೇಲರ್ ಬಿಡುಗಡೆ ಮಾಡಿದ್ದು. ಡಿ ಬಾಸ್ ಆರ್ಭಟ ಕಂಡು ಫ್ಯಾನ್ಸ್ ಫೀದಾ ಆಗಿದ್ದಾರೆ.

ಸದ್ಯ ಮುನಿರತ್ನ ಕುರುಕ್ಷೇತ್ರದ ತುಂಬೆಲ್ಲಾ ದುರ್ಯೋಧನ ಪರಾಕ್ರಮ ಜೋರಾಗಿದೆ. ಹಾಗಾಗಿನೇ ದುರ್ಯೋಧನ ಆರ್ಭಟ ಟ್ರೇಲರ್‌ನಲ್ಲಿ ಕಣ್ಣು ಕೋರೈಸುವಂತೆ ಮಾಡ್ತಿದ್ದು. ದಚ್ಚು ಜೊತೆಗೆ ಸಹ ನಟರಾದ ರವಿಚಂದ್ರ, ಅರ್ಜುನ್ ಸರ್ಜಾ, ಸೋನು ಸೂದ್, ರವಿಶಂಕರ್, ಅಂಬರೀಷ್, ಸ್ನೇಹ , ಹರಿಪ್ರಿಯಾ, ಶ್ರೀನಿವಾಸ್ ಮೂರ್ತಿ, ಮೇಘನರಾಜ್ ಕೂಡ ಪುಟ್ಟ ಟ್ರೇಲರ್‌ನಲ್ಲಿ ಆವರಿಸಿಕೊಂಡಿದ್ದಾರೆ. ನಿಖಿಲ್‌ಗೆ ಮೊದಲು ಕೊಟ್ಟಿದ್ದ ಪ್ರಾಮುಖ್ಯ ಕಡಿಮೆಯಾಗಿದ್ದು. ಎಲ್ಲಾ ನಟರಿಗೆ ನೀಡಿರುವ ಪ್ರಾಮುಖ್ಯತೆಯನ್ನು ನಿಖಿಲ್‌ಗೆ ಮುನಿರತ್ನ ನೀಡಿದ್ದಾರೆ. ಮೊದಲ ಟ್ರೇಲರ್ ನೋಡಿ ಬೇಸರಿಸಿಕೊಂಡಿದ್ದ ಅಭಿಮಾನಿಗಳು. ದಚ್ಚು ಅಬ್ಬರ ವಿರುವ ಟ್ರೇಲರ್ ಕಂಡು ಅಬ್ಬರಿಸಿ ಬೋಬ್ಬಿರಿಯುತ್ತಿದ್ದಾರೆ. ಇದು ನಿಜವಾದ ದರ್ಶನ್ ೫೦ ಸಿನಿಮಾ. ಇದು ದುರ್ಯೋಧನನಾಗಿ ನಟಿಸುತ್ತಿರುವ ದರ್ಶನ್ ಸಿನಿಮಾ ಎಂಬ ಫೀಲ್ ಸಿಗುವಂತೆ ಮಾಡಿದ್ದಾರೆ.

ಈ ಮೂಲಕ ದರ್ಶನ್‌ಗೆ ಕುರುಕ್ಷೇತ್ರ ಚಿತ್ರದಲ್ಲಿ ಸಿಗಬೇಕಾದ ನಿಜವಾದ ಸ್ಥಾನವನ್ನು ನೀಡಿದ್ದಾರೆ ಮುನಿರತ್ನ. ಅದೇನೆ ಇರ‍್ಲಿ, ಮುಸುಕಿನ ಗುದ್ದಾಟದಿಂದ ನಲುಗಿದ್ದ ಕುರುಕ್ಷೇತ್ರದ ಹಾಡುಗಳು ಮತ್ತು ಸಿನಿಮಾ ಟ್ರೇಲರ್ ಕೂಡ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಈ ಮೂಲಕ.. ಅಭಿಮಾನಿಗಳ ಮತ್ತೊಂದು ಅಭಿಮಾನೋತ್ಸವನೂ ನಡೆಯಲಿದೆ ಎನ್ನುವ ಮಾತುಗಳು ಡಿ-ಭಕ್ತ ಗಣದಲ್ಲಿ ಕೇಳಿ ಬರ್ತಿದ್ದು. ವರಮಹಾಲಕ್ಷ್ಮಿ ಹಬ್ಬದಂದು ದುಯೋರ್ಧನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದು. ಅಭಿಮಾನಿಗಳು ದಚ್ಚು ಗಾಂಭೀರ್ಯ ನೋಡಿ ಕಾಲರ್ ಮೇಲೆ ಮಾಡಲು ಕಾದುಕುಳಿತಿದ್ದಾರೆ

LEAVE A REPLY

Please enter your comment!
Please enter your name here