Home District ದೆವ್ವ-ಭೂತ ಇಲ್ಲ ಎನ್ನುವವರಿಗೆ ಇದು ಶಾಕಿಂಗ್ ನ್ಯೂಸ್..?! ಬರ್ತ್‌ಡೇ ಬಾಯ್ ದೇಹದಿಂದ ಪ್ರೇತಾತ್ಮ ಹೊರಬರುವ ವಿಡಿಯೋ...

ದೆವ್ವ-ಭೂತ ಇಲ್ಲ ಎನ್ನುವವರಿಗೆ ಇದು ಶಾಕಿಂಗ್ ನ್ಯೂಸ್..?! ಬರ್ತ್‌ಡೇ ಬಾಯ್ ದೇಹದಿಂದ ಪ್ರೇತಾತ್ಮ ಹೊರಬರುವ ವಿಡಿಯೋ ವೈರಲ್…

2667
0
SHARE

ಇದೊಂದು ವಿಚಿತ್ರವಾದ್ರೂ ನಂಬಲೇಬೇಕಾದ ಸ್ಟೋರಿ . ದೇವ್ವ ಪ್ರೇತಾತ್ಮ ಇಲ್ಲ ಎಂದು ಹೇಳುವವರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೊಂದು ವಿಚಿತ್ರವಾದ ಘಟನೆಯೊಂದು ಸಾಕ್ಷಿಯಾಗಿದೆ. ಹೌದು ನಗರದ ಜನರನ್ನು ಹೆದರುವಂತೆ ಮಾಡಿದ ಭೂತ ಚೇಷ್ಟೆಯ ವಿಡಿಯೋವೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ…

ಯುವಕನ ಮೈಯಿಂದ ದೆವ್ವ ಹೊರಬರುವ ವಿಡಿಯೋ ಪ್ರಜಾಟಿವಿಗೆ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಬರ್ತಡೇ ಪಾರ್ಟಿ ಮಾಡಿಕೊಳ್ಳುತ್ತ ಡ್ಯಾನ್ಸ್ ಮಾಡುತ್ತಿದ್ದರು ಯುವಕರು.ಹೇ ಜೀವಾ ಎಲ್ಲಿ ಹೋದಿ ಎನ್ನುವ ಕನ್ನಡ ಹಾಡಿಗೊಂದು ಮೂರು ಜನ ಸ್ನೇಹಿತರು ಸೇರಿಕೊಂಡು ತಮ್ಮದೇಯಾದ ಗುಂಗಿನಲ್ಲಿ ನೃತ್ಯವನ್ನು ಮಾಡ್ತಾ ಇದ್ದರು…

ನೃತ್ಯ ಮಾಡುವ ಸಮಯದಲ್ಲಿ ಬರ್ತಡೇ ಬಾಯ್ ಹೇಹದಿಂದ ಪ್ರೇತಾತ್ಮವೊಂದು ಹೊರಬಂದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.ಪ್ರತಾಪ ಎಂಬ ಯುವಕನ ಮೈಯ್ಯಿಂದ ವಿಚಿತ್ರ ಬೆಳಕೊಂದು ಹೊರಬಿದ್ದ ಚಿತ್ರವೂ ವಿಡಿಯೋದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.ಇನ್ನೂ ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರತಾಪ ಕೂಡಾ ಸಾವನ್ನಪಿದ್ದಾನೆ.

ಈ ಒಂದು ಹೃದಯ ವಿದ್ರಾವಕ ವಿಡಿಯೋ ಮೊಬೈಲ್ ನ ಕ್ಯಾಮರಾದಲ್ಲಿ ಸೆರೆಯಾಗಿದೆ.ಡ್ಯಾನ್ಸ್ ಮಾಡುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗುತ್ತಿತ್ತು.ಇದೇ ವೇಳೆ ದೆವ್ವದ ಆಟ ಮೊಬೈಲ್ ನಲ್ಲೂ ಸೆರೆಯಾಗಿತ್ತು ವಿಡಿಯೋದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.ಇನ್ನೂ ಆಗ ಅದು ಯಾರ ಗಮನಕ್ಕೂ ಬಂದಿರಲಿಲ್ಲ.ನಿನ್ನೆ ಸ್ನೇಹಿತನ ನೆನಪಾಗಿ ವೀಡಿಯೋ ನೋಡುವಾಗ ಪ್ರತಾಪನ ದೇಹದಿಂದ ಪ್ರೇತಾತ್ಮವೊಂದು ಹೋಗಿದ್ದು ಬೆಳಕಿಗೆ ಬಂದಿದೆ.

ಇನ್ನೂ ಮುಖ್ಯವಾಗಿ ಭೂತದ ಈ ದೃಶ್ಯ ನೋಡಿ ಮೃತನ ಸ್ನೇಹಿತರು ಹೈರಾಣಾಗಿದ್ದು ವಿಡಿಯೋದಲ್ಲಿನ ಯುವಕನ ಮೈಮೇಲಿಂದ ಹೋಗುತ್ತಿರುವ ಒಂದು ಪ್ರೇತಾತ್ಮ ಚರ್ಚೆಗೆ ಗ್ರಾಸವಾಗಿದ್ದು ಎಲ್ಲರೂ ಚಿಂತಾಕ್ರಾಂತರಾಗಿದ್ದಾರೆ. ಇನ್ನೂ ಮುಖ್ಯವಾಗಿ ಪ್ರತಾಪ ನಿಧನರಾದ ನಂತರ ಅವನ ಆತ್ಮ ಮತ್ತೊಂದು ಬಾಲಕನ ಮೈಮೇಲೆ ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

LEAVE A REPLY

Please enter your comment!
Please enter your name here