Home Crime “ದೇವರು ಕೊಟ್ರೂ ಪೂಜಾರಿ ಕೊಡಲ್ಲಾ”, ಸರ್ಕಾರ ಸವಲತ್ತು ಕೊಟ್ರೂ ವಿಕಲಚೇತನ ನಿರ್ದೇಶಕ ವಿಕಲಚೇತನರ ಕೋಟಿ ಕೋಟಿ...

“ದೇವರು ಕೊಟ್ರೂ ಪೂಜಾರಿ ಕೊಡಲ್ಲಾ”, ಸರ್ಕಾರ ಸವಲತ್ತು ಕೊಟ್ರೂ ವಿಕಲಚೇತನ ನಿರ್ದೇಶಕ ವಿಕಲಚೇತನರ ಕೋಟಿ ಕೋಟಿ ಲೂಟಿ..!?

815
0
SHARE

ವಿಕಲಚೇತನ ಇಲಾಖೆ ವಿಕಲಚೇತನರ ಬದುಕನ್ನ ಹಸನಾಗಿಸಬೇಕಾದ ಕೆಲಸ ಮಾಡಬೇಕಿತ್ತು. ಆದ್ರೆ ವಿಕಲಚೇತನ ಇಲಾಖೆಯೇ ಈಗ ವೈಕಲ್ಯದಿಂದ ಬಳಲುತ್ತಿದೆ. ಇದಕ್ಕೆ ಕಾರಣ ವಿಕಲಚೇತನ ಇಲಾಖೆಯ ನಿರ್ದೇಶಕರಾದ ಸಿದ್ದರಾಜು ಅವರಿಂದ.

ಸಿದ್ದರಾಜು ಅವರು ಈ ಇಲಾಖೆಯ ನಿರ್ದೇಶಕರಾದ ಬಳಿಕ ಇಲ್ಲಿ ಸಮಸ್ಯೆಗಳು ಜಾಸ್ತಿಯಾಗ್ತಿವೆ ಅಂತ ಜನ ಆರೋಪಿಸ್ತಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಇಲಾಖೆಯಿಂದ ಸಿಗಬೇಕಾದ ಅನುದಾನ ಸಿಗ್ತಿಲ್ಲ.

ಅಲ್ಲದೆ ಅಂಗವಿಕರಿಗೆ ನೀಡುವ ವಾಹನಗಳ ವಿತರಣೆಯಲ್ಲೂ ಸಿದ್ದರಾಜು ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಅಂತ ವಿಕಲಚೇತನರು ಆರೋಪಿಸ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಇಲಾಖೆಗೆ ದೂರು ನೀಡಿದ್ರು ಉಪಯೋಗವಾಗಿಲ್ಲ.

ಅಲ್ಲದೆ ಸಿದ್ದರಾಜು ಅವರು ತಮ್ಮ ಅಕ್ರಮಗಳ ಬಗ್ಗೆ ಪ್ರಶ್ನಿಸಿದ್ದ ತಮ್ಮ ಕಚೇರಿಯ ನೌಕರರಿಗೆ ಕಿರುಕುಳ ನೀಡ್ತಿದ್ದಾರೆ ಅನ್ನೋ ಆರೋಪ ಎದುರಿಸ್ತಿದ್ದಾರೆ. ಹೀಗಾಗಿ ಸಿದ್ದರಾಜು ಅವರನ್ನ ವಿಕಲಚೇತನ ಇಲಾಖೆಯಿಂದ ಬೇರೆ ಇಲಾಖೆಗೆ ಟ್ರಾನ್ಸ್ ಫರ್ ಮಾಡಿ ಅಂಗವಿಕಲ ಬದುಕಲ್ಲಿ ನಗು ಮೂಡಿಸಬೇಕು ಅಂತ ಅಂಗವಿಕರು ಮನವಿ ಮಾಡಿಕೊಳ್ತಿದ್ದಾರೆ.

LEAVE A REPLY

Please enter your comment!
Please enter your name here