Home Cinema “ದೇವರ ಕೊಂಡ” ಪಕ್ಕ ನಿಂತು “ರಶ್ಮಿಕಾ” ನಕ್ಕಳಲ್ಲ ಮತ್ತೆ..! “ಕನ್ನಡ”ದಲ್ಲೂ ನೋಡಬಹುದು ಇಬ್ಬರ “ಪ್ರೇಮ”ಕಥೆ..!

“ದೇವರ ಕೊಂಡ” ಪಕ್ಕ ನಿಂತು “ರಶ್ಮಿಕಾ” ನಕ್ಕಳಲ್ಲ ಮತ್ತೆ..! “ಕನ್ನಡ”ದಲ್ಲೂ ನೋಡಬಹುದು ಇಬ್ಬರ “ಪ್ರೇಮ”ಕಥೆ..!

1254
0
SHARE

ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿಯ ಈ ಬೆಡಗಿ ಈಗ ತೆಲುಗು ನೆಲದಲ್ಲಿ ಸದ್ಯ ಸಖತ್ ಬ್ಯೂಸಿಯಾಗಿದ್ದಾರೆ.. ಗೀತಾ ಗೋವಿಂದಂ ಚಿತ್ರದ ಸೂಪರ್ ಹಿಟ್ ಸಕ್ಸಸ್ ಬಳಿಕ ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಬುಕ್ ಆಗಿರುವ ರಶ್ಮಿಕಾ. ಸ

ದ್ಯ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ಸಪ್ರೈಸ್ ನೀಡಿದ್ದಾರೆ. ಗಾಂಧೀನಗರದ ಕೆಲಮಂದಿ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.ಯಸ್.. ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಮಾಡಿ, ಬ್ರೇಕ್ ಅಪ್ ಅಂತ ಹೇಳಿ ಪಕ್ಕದ ರಾಜ್ಯದ ವಿಜಯ್ ಜೊತೆಗೆ ಲಿಪ್‌ಲಾಕ್ ಮಾಡಿದ್ದ ಚಷ್ಮಾ ಬೆಡಗಿ, ಸದ್ಯ ವಿಜಯ್ ದೇವರಕೊಂಡ ಪಕ್ಕದಲ್ಲಿ ನಿಂತು ನಸು ನಗ್ತಿದ್ದಾರೆ. ನಗುವಿನ ಮೂಲಕವೇ ಕಿಚ್ಚು ಹೆಚ್ಚಾಗುವಂತೆ ಮಾಡಿದ್ದಾರೆ.

ಅರೇ.. ಏನಪ್ಪಾ ಹೊಸ ಕಥೆ ಅನ್ಕೊಬೇಡಿ. ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ರಶ್ಮಿಕಾ ಡಿಯರ್ ಕಾಮ್ರೇಡ್ ಚಿತ್ರದ ನಯಾ ಪೋಸ್ಟರ್‌ನ ಅಸಲಿ ಕಥೆ. ಹೌದು, ಪೋಸ್ಟರ್ ಮೂಲಕವೇ ವಿಜಯ್ ಮತ್ತು ರಶ್ಮಿಕಾ ಫ್ಯಾನ್ಸ್‌ಗಳ ಎದೆಬಡಿತ ಜೋರಾಗಿಸಿದ್ದಾರೆ. ಹೌದು… ವಿಜಯ್ & ರಶ್ಮಿಕಾ ಗೀತಾಗೋವಿಂದಂ ಚಿತ್ರದ ಸೂಪರ್ ಹಿಟ್ ಬಳಿಕ, ಇಬ್ಬರನ್ನು ಒಂದೇ ಸಿನಿಮಾದಲ್ಲಿ ಒಟ್ಟಾಗಿ ನೋಡಲು ಅಭಿಮಾನಿಗಳು ಕಾದುಕುಳಿತ್ತಿದ್ರು.

ಇದೀಗ ಅವರ ಆಸೆಯಂತೆ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಒಂದಾಗಿದ್ದು. ಟೀಸರ್ ಬಿಡುಗಡೆಯ ದಿನಾಂಕವನ್ನು ತಿಳಿಸಲು ಪ್ರೋಸ್ಟರ್‌ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸದ್ಯ ಪೋಸ್ಟರ್ ಅಭಿಮಾನಿಗಳ ಕಾಯುವಿಕೆ ಹೆಚ್ಚಿಸಿದೆ. ಸಿಕ್ಕಾಪಟ್ಟೆ ವೈರಲ್ ಕೂಡಾ ಆಗ್ತಿದೆ.ಚಿತ್ರಕ್ಕೆ ಭರತ್ ಕಮ್ಮ ಆಕ್ಷನ್ ಕಟ್ ಹೇಳಿದ್ದು. ಪೋಸ್ಟರ್‌ನಲ್ಲಿ ಮೂಲಕ ಕಮಾಲ್ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕ ವಿಜಯ್ ದೇವರಕೊಂಡರನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದು.

ಗೀತಾ ಗೋವಿಂದಂನಲ್ಲಿ ಮಾಡಿದ್ದ ಜಾದುವನ್ನು ಈ ಜೋಡಿ ಈ ಚಿತ್ರದಲ್ಲೂ ಮಾಡುತ್ತಾ ಎಂಬ ಕುತೂಹಲ ಮೂಡುವಂತೆ ಮಾಡ್ತಿದೆ.ಗೀತಾಗೋವಿಂದಂ ಭರ್ಜರಿ ಗೆಲುವು ಹಾಗೂ ಟ್ಯಾಕ್ಸಿವಾಲಾದ ಸಾಧಾರಣ ಯಶಸ್ಸಿನ ಬಳಿಕ ವಿಜಯ್ ದೇವರಕೊಂಡ ಮತ್ತೆ ಗೀತಾಳ ಜೊತೆಯಾಗಿ ಪ್ರೇಕ್ಷಕರ ಮನ ಗೆಲ್ಲಲು ಬರುತ್ತಿದ್ದಾರೆ. ಕೆಲವೇ ಚಿತ್ರಗಳ ಮೂಲಕ ಸೌಥ್ ಇಂಡಿಯಾದಲ್ಲಿ ಸೆನ್ನೇಷನ್ ಮೂಡಿಸಿರುವ ವಿಜಯ್ ದೇವರಕೊಂಡ ಅವರ ಸದ್ಯದ ಮಾರ್ಕೆಟ್ ಅನ್ನು ಬಳಸಿಕೊಳ್ಳುಲು ಪ್ಲಾನ್ ಮಾಡಿರುವ ಡಿಯರ್ ಕಾಮ್ರೇಡ್ ತಂಡ ಈ ಚಿತ್ರದ ಟೀಸರ್‌ಅನ್ನು ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಹಾಗಾಗಿನೇ ಡಿಯರ್ ಕಾಮ್ರೇಡ್ ಚಿತ್ರದ ಟೀಸರ್‌ರನ್ನು ಮಾರ್ಚ್ ೧೭ರಂದು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಿದೆ. ಹೌದು, ಡಿಯರ್ ಕಾಮ್ರೇಡ್, ತಮಿಳು, ತೆಲುಗು, ಮಲಯಾಳಂ ಜೊತೆಗೆ ಕನ್ನಡದಲ್ಲೂ ಬಿಡುಗಡೆಯಾಗ್ತಿದೆ. ಅದು, ಡಬ್ ರೂಪದಲ್ಲಿ. ನಿಮಗೆ ಗೊತ್ತಿರಲಿ ರಶ್ಮಿಕಾ ಹೇಳಿ ಕೇಳಿ ಕನ್ನಡದ ಕುವರಿ. ಇನ್ನೂ ರಶ್ಮಿಕಾ ಅಭಿಮಾನಿ ಬಳಗನೂ ದೊಡ್ಡದಿದೆ. ಹಾಗಾಗೇ, ಕರ್ನಾಟಕದಲ್ಲಿ ರಶ್ಮಿಕಾ ಮಾರ್ಕೆಟ್ ವ್ಯಾಲ್ಯೂ ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗಿರುವ ಚಿತ್ರತಂಡ, ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದೆ.

ಅದು, ಏಕಕಾಲದಲ್ಲಿ. ಇನ್ನು ಟಾಲಿವುಡ್‌ನಲ್ಲಿ ಸುದ್ದಿಯಲ್ಲಿರೋ ಚಷ್ಮಾ ಸುಂದರಿ ತೆಲುಗಿನಲ್ಲಿ ತೀರಾ ಬ್ಯೂಸಿ.. ಎಷ್ಟರ ಮಟ್ಟಿಗೆ ಅಂದ್ರೆ ರಶ್ಮಿಕಾ ಇನ್ಮುಂದೆ ಕನ್ನಡದಲ್ಲಿ ಸಿನಿಮಾ ಮಾಡಲ್ವಂತೆ ಅನ್ನೋ ಸುದ್ದಿ ಸಹ ಜೋರಾಗೆ ಕೇಳಿಬಂದಿತ್ತು. ಈ ಸುದ್ದಿಗೆ ಪುಷ್ಠಿ ನೀಡುವಂತೆ ರಶ್ಮಿಕಾ ಕೈಯಲ್ಲಿ ಯಾವುದೇ ಕನ್ನಡ ಚಿತ್ರಗಳು ಸಹ ಇರಲಿಲ್ಲ. ಹೀಗೀರುವಾಗ್ಲೇ ರಶ್ಮಿಕಾ ಡಿಯರ್ ಕಾಮ್ರೆಡ್ ಸಿನಿಮಾ ಮೂಲಕ ಚಂದನವನಕ್ಕೆ ಬಲಗಾಲಿಟ್ಟಿ ಬರ್ತಿದ್ದು. ಅದು ಡಬ್ಬಿಂಗ್ ಚಿತ್ರದ ಮೂಲಕ ಅನ್ನೋದು ಅಚ್ಚರಿಯನ್ನು ಮೂಡುವಂತೆ ಮಾಡ್ತಿದೆ.

ಒಟ್ಟಾರೆ, ಇನ್ಮೇಲೇನಿದ್ರು ರ ಶ್ಮಿಕಾ ಅಬ್ಬರ ಪಕ್ಕದ ಮನೆಯಲ್ಲಿ ಮಾತ್ರ ಅಂದುಕೊಂಡಿದ್ದವರಿಗೆ, ಕರ್ನಾಟಕದ ಕ್ರಶ್ ಚಸ್ಮಾ ಚೋಕರಿ ರಶ್ಮಿಕಾ ಡಿ ಕಾಮ್ರೆಡ್ ಚಿತ್ರದ ಮೂಲಕ ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ತಮ್ಮ ಹವಾ ತೋರಿಸಲು ಸಜ್ಜಾಗಿದ್ದು. ಸದ್ಯ ಪೋಸ್ಟರ್‌ನಲ್ಲೇ ತಮ್ಮ ಕೆಮಿಸ್ಟ್ರಿ ಮೂಲಕ ಕಿಕ್ ಏರಿಸಿರುವ ರಶ್ಮಿಕಾ ಮತ್ತು ವಿಜಯ್ ಕಾಂಬಿನೇಷನ್ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನುವದ್ರ ಸುಳಿವು ಬಿಡುಗಡೆಯಾಗಲಿರುವ ಟ್ರೇಲರ್‌ನಲ್ಲಿ ಸಿಗಲಿದೆ. ಅಂದ್ರೆ ಮಾರ್ಚ್ ೧೭ಕ್ಕೆ ಅಲ್ಲಿವರೆಗೂ ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here