Home Latest ದೇವಲೋಕದಲ್ಲಿ ಇಂದಿನ ಬ್ಯಾಂಕಿನಂತೆ ನಡೆಯುತ್ತಿತ್ತು ವ್ಯವಹಾರ ! ದೇವರುಗಳಿಗೂ ಸಾಲವನ್ನು ಇಂದಿಗೂ ನೀಡುತ್ತಿದ್ದಾನಂತೆ ಆ ಕುಬೇರ!

ದೇವಲೋಕದಲ್ಲಿ ಇಂದಿನ ಬ್ಯಾಂಕಿನಂತೆ ನಡೆಯುತ್ತಿತ್ತು ವ್ಯವಹಾರ ! ದೇವರುಗಳಿಗೂ ಸಾಲವನ್ನು ಇಂದಿಗೂ ನೀಡುತ್ತಿದ್ದಾನಂತೆ ಆ ಕುಬೇರ!

5505
0
SHARE

ಹೌದು!  ಇದು  ಈವರೆಗೂ  ಯಾರಿಗೂ  ತಿಳಿಯದಿದ್ದ ತ್ರೇತಾಯುಗದ  ಮಹಾ ರಹಸ್ಯ.  ಇಂತಹ ರಸಹ್ಯಕ್ಕೆ ಸಾಕ್ಷಿಯಾದ್ದಾರೆ ದೇವರ ದೇವ ಮಹಾದೇವ ಶಿವ  ಮತ್ತು ತಿರುಪತಿ ಬಾಲಾಜಿ.  ಈ ರಹಸ್ಯ ಮತ್ತೊಬ್ಬರಿಗೂ ಸಂಬಂಧಿಸಿದೆ , ಆತನೇ  ಕುಬೇರ. ಕುಬೇರನಿಂದ ತ್ರೇತಾಯುಗದಲ್ಲಿಯೇ ವಾಣಿಜ್ಯ ವ್ಯವಸ್ಥೆ ಪ್ರಾರಂಭವಾಗಿದೆ ಎನ್ನಬಹುದಷ್ಟೇ. ಈ ಕಥೆ ಆರಂಭವಾಗೋದು ತ್ರೇತಾಯುಗದಿಂದ.  ಕುಬೇರ.  ಧನ- ಕನಕದ  ಒಡೆಯ.

ಈತ  ರಾವಣನ ಹಿರಿಯ ಸಹೋದರನಾಗಿದ್ದನು. ರಾವಣನ  ಮಲತಾಯಿ ಪುತ್ರನಾಗಿದ್ದ ಕುಬೇರ ವಯಸ್ಸಿನಲ್ಲಿ ಹಿರಿಯ.  ಹೀಗಾಗಿ  ವಂಶ ಪಾರಂಪರ್ಯವಾಗಿ  ಬರುವ  ಅಂತಸ್ತು ಆಸ್ತಿ ಕುಬೇರನ ತೆಕ್ಕೆಗೆ ಹೋಯ್ತು. ಇದನ್ನ ರಾವಣ ಸಹಿಸಲಿಲ್ಲ . ಈ ಎಲ್ಲ ಸಿರಿ-ಸಂಪತ್ತನ್ನು  ರಾವಣ ಕುಬೇರನ ಹತ್ತಿರ  ಕುತಂತ್ರದಿಂದ  ಕಸಿದುಕೊಂಡ ಎನ್ನುವ  ಉಲ್ಲೇಖ  ಪುರಾಣ ಗ್ರಂಥಗಳಲ್ಲಿ ಮತ್ತು ತಾಳಿಗೇರಿಯಲ್ಲಿ ನಮೂದಿತವಾಗಿದೆ.ರಾವಣ ತನ್ನ   ದುಷ್ಟ ಬುದ್ದಿಯಿಂದ ಕುಬೇರನಿಗೆ ಬಂದಂತಹ ಆಸ್ತಿ- ಸಂಪತ್ತನ್ನ ಕುಬೇರನಿಂದ ಕಸಿದುಕೊಂಡನು.

ಇದರಿಂದ ಖಿನ್ನತೆಗೆ ಒಳಗಾದ ಕುಬೇರನು ರಾವಣನಲ್ಲಿ  ಈ ಬಗ್ಗೆ ಹೇಳಲಾರದೇ,  ಯಾರಲ್ಲೂ ತನ್ನ ಅಳಲನ್ನು ತೋಡಿಕೊಳ್ಳಲಾರದೇ ಅನೇಕ ವರ್ಷಗಳ ಕಾಲ ದೇವರ ದೇವ ಮಹಾದೇವನ ತಪಸ್ಸನ್ನು ಮಾಡ್ತಾನೆ. ಈತನ ತಪಸ್ಸಿಗೆ ಮೆಚ್ಚಿ ಭೋಲೆನಾಥ ಶಂಕರ…  ಮೂರು ಲೋಕಗಳಿಗೂ  ಮೀರಿದ  ಸಂಪತ್ತನ್ನು    ನೀಡಿದ ಎನ್ನುವ  ಐತಿಹ್ಯವೂ  ಇದೆ.ಹಾಗೇ  ನೋಡಿದ್ರೆ,  ಕೈಲಾಸ ಪರ್ವತದಲ್ಲಿರುವ ಶಂಕರ ಯಾವುದೇ ಸಿರಿ-ಸಂಪತ್ತಿಗೆ ಆಸೆ ಪಟ್ಟವನಲ್ಲ. ಆದ್ರೆ ಭೋಲೆನಾಥನಿಂದ ಕುಬೇರ ಸಂಪತ್ತು ಹೇಗೆ ಪಡೆದನು, ಶಿವ ಹೇಗೆ  ಕರುಣಿಸಿದ  ಈ  ಬಗ್ಗೆಯೂ  ಜಿಜ್ಞಾಸೆ  ಇದೆ.

ಅದೇನೇ  ಇದ್ದರೂ ಕೈಲಾಸನಾಥನಿಂದ ಸಂಪತ್ತಿನ ವರವನ್ನು ಪಡೆದ ಕುಬೇರನಿಗೆ ಸಾಕಷ್ಟು ಪ್ರಮಾಣದ ಸಿರಿ ಸಂಪತ್ತು ಸಿಕ್ಕಿತು. ಅದರ ಜೊತೆಗೆ ಸ್ವರ್ಗದಲ್ಲಿ ಇರುವಂತಹ ಸಿರಿ ದೌಲತ್ತಿನ ರಕ್ಷಕನಾಗುವಂತೆ ಶಿವ  ವರವನ್ನು ನೀಡಿದ. ಆದರೆ  ಆಗಲೂ  ರಾವಣನಿಂದ  ಕುಬೇರನಿಗೆ ತೊಂದರೆ  ಮಾತ್ರ  ತಪ್ಪಲಿಲ್ಲ. ಶಿವನಿಂದ ವರ ಪಡೆದ  ಕುಬೇರನ  ಬಳಿ  ಸ್ವರ್ಗದ ಸಂಪತ್ತಿನ ಕೀಲಿಕೈಯಿದೆ  ಎನ್ನುವ  ಸಂಗತಿ ರಾವಣ ಕಿವಿಗೆ ಬಿದ್ದಿತು. ಅದಕ್ಕಾಗಿ ಕುಬೇರನನ್ನ ರಾವಣ ಎಲ್ಲೆಡೆಯೂ ಹುಡುಕಲು ಆರಂಭ ಮಾಡಿದನು. ರಾವಣನಿಂದ  ರಕ್ಷಿಸಿಕೊಳ್ಳಲು ಕುಬೇರ ಮತ್ತೊಮ್ಮೆ ಶಿವನಲ್ಲಿ   ಶರಣು  ಹೋದ.

ಅಣ್ಣ- ತಮ್ಮಂದಿರ  ಜಗಳದಲ್ಲಿ  ಗೊಂದಲಕ್ಕೆ  ಸಿಲುಕಿದ್ದು ಮಾತ್ರ  ಪರಮಶಿವ. ಯಾಕೆಂದರೆ  ರಾವಣನೂ ಶಂಕರ ಪರಮಾತ್ಮ ಪರಮಭಕ್ತನಾಗಿದ್ದ. ಕುಬೇರನೂ ಕೂಡ ಶಿವನ ಭಕ್ತನಾಗಿದ್ದ . ಅದಕ್ಕಾಗಿ ಇಬ್ಬರ ಜಗಳದಲ್ಲಿ ಸಾಕ್ಷ್ಯಾತ ಜಟಾಧಾರಿಯೇ  ಸಂಕಷ್ಟದಲ್ಲಿ ಸಿಲುಕಿಕೊಂಡ.“ನೀವಿಬ್ಬರೂ ನನ್ನ ಪರಮ ಭಕ್ತರಾಗಿದ್ದೀರಿ, ನಾನು  ಒಬ್ಬರ  ಪರ ವಹಿಸಿದ್ರೆ ಮತ್ತೊಬ್ಬರಿಗೆ  ನೋವಾಗುವುದು ಖಚಿತ.  ಹೀಗಾಗಿ  ಕುಬೇರ ನೀನು,ಈ  ಕ್ಷಣವೇ  ತಾಯಿ ಜಗದಂಬೆಯಲ್ಲಿ  ಶರಣಾಗುವುದು  ಸೂಕ್ತ”

ಶ್ರೀನಿವಾಸ  ಕಲ್ಯಾಣ. ಪುರಾಣದಲ್ಲಿ  ಉಲ್ಲೇಖಗೊಂಡಿರುವ  ವಿಶೇಷ   ಕಲ್ಯಾಣ. ಭ್ರುಗು ಮಹರ್ಷಿಯಿಂದ ಅವಮಾನಿತನಾದನೆಂದು  ಕೋಪಿಸಿಕೊಂಡು , ಲಕ್ಷ್ಮೀ ದೇವಿ  ವೆಂಕಟನನ್ನು   ಬಿಟ್ಟು ,  ಭೂಲೋಕಕ್ಕೆ  ಬರುತ್ತಾಳೆ. ಶ್ರೀನಿವಾಸ ಕೂಡ ಲಕ್ಮ್ಮೀದೇವಿಯನ್ನು  ಹುಡುಕಿಕೊಂಡು ಭೂಲೋಕಕ್ಕೆ ಬರ್ತಾನೆ. ಹೀಗೆ ಭೂಲೋಕಕ್ಕೆ ಬರುವ ಶ್ರೀವಿಷ್ಟು… ತಾನು  ಯಾರೆನ್ನುವುದನ್ನೇ   ಮರೆತು ಸಾಮಾನ್ಯರಂತೆ ಜೀವಿಸುತ್ತಾನೆ. ಹೀಗೆ ಧರೆಗೆ ಬಂದಂತಹ ಶ್ರೀನಿವಾಸನಿಗೆ ಹಸಿವು, ದಾಹ ಎಲ್ಲವೂ ಆರಂಭವಾಗುತ್ತದೆ.  ಅಲ್ಲಿಯೇ  ರಾಣಿ  ಪದ್ಮಾವತಿಯ ಪರಿಚಯವಾಗಿ ಆಕೆಯೊಂದಿಗೆ  ಶ್ರೀನಿವಾಸ ಕಲ್ಯಾಣ ಪದ್ಮಾವತಿಯೊಂದಿಗೆ ನಡೆಯಿತು … ಪದ್ಮಾವತಿ  .. ಹಿಂದಿನ ಜನ್ಮದಲ್ಲಿ  ವೇದಾವತಿಯಾಗಿರುತ್ತಾಳೆ… ಇದು  ಶ್ರೀನಿವಾಸ  ಕಲ್ಯಾಣದ   ಪ್ರಮುಖ  ಸಂಗತಿ. ಕುಬೇರನ ಉಲ್ಲೇಖ ಕೂಡ  ಇಲ್ಲಿಯೇ  ಬರುತ್ತದೆ.

ಹೌದು!  ವಿಷ್ಣು ಭೂಲೋಕದಲ್ಲಿ ಶ್ರೀನಿವಾಸನಾಗಿ ಪದ್ಮಾವತಿಯನ್ನ ವಿವಾಹವಾಗಬೇಕಾದ್ರೆ, ಸಿರಿ-ಸಂಪತ್ತು ಬೇಕಾಗಿತ್ತು . ರಾಣಿ ಪದ್ಮಾವತಿ  ಆಕಾಶ ರಾಜನ ಮಗಳಾಗಿದ್ದಳು. ಅದಕ್ಕಾಗಿ ರಾಣಿಯನ್ನು ವರಿಸಲು ಅತ್ಯಂತ ವಿಜೃಂಭಣೆಯಿಂದ ರಾಜನ ಸಿರಿವಂತಿಕೆಗೆ ಯಾವುದೇ ರೀತಿಯ ಧಕ್ಕೆ ಬರದಂತೆ ವಿವಾಹ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು ಅ. ದೇ ಕಾರಣಕ್ಕೆ ತಿರುಪತಿ ಬಾಲಾಜಿಗೂ ಲೋನ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು.ಇನ್ನು  ಕುಬೇರ ಆ ಸಮಯದಲ್ಲಿ   ನೀಡಿದ  ಸಾಲವನ್ನು  ಶ್ರೀನಿವಾಸನಿಂದ ಈವರೆಗೂ  ತೀರಿಸಲಾಗಿಲ್ಲ.  ಅದಕ್ಕಾಗಿ ಭಕ್ತಾಧಿಗಳು ಮುಡಿನೀಡುವ ಕಾರ್ಯಮಾತ್ರ ಇನ್ನೂ  ಕೂಡ ಮುಗ್ತೀಲ್ಲ. ಅದಕ್ಕಾಗಿ ತ್ರೇತಾಯುಗದಲ್ಲಿ ಪಡೆದಂತಹ ಲೋನ್  ಅನ್ನು  ಕಲಿಯುಗದಲ್ಲೂ ಬಾಲಾಜಿ ಭಕ್ತರು  ಮುಡಿ  ನೀಡುವ ತೀರಿಸುತ್ತಿದ್ದಾರೆ ಎನ್ನುವ  ನಂಬಿಕೆಯೂ  ಇದೆ.  ಇನ್ನು  ಕುಬೇರನ ಬಗ್ಗೆ ಇಷ್ಟು ಸವಿಸ್ತಾರವಾಗಿ ಹೇಳಲು ಕಾರಣ, ಕುಬೇರನಿಗೆ  ಈ ಸ್ಥಳದಲ್ಲಿ   ನಡೆಯುವ  ಪೂಜೆ.

ಹೌದು! ಕುಬೇರನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ನಿಜವಾಗಿಯೂ ಕುಬೇರ ದ್ವಾಪರಯುದಲ್ಲಿ ಇದ್ದನಾ? ಅಥವಾ ತ್ರೇತಾಯುಗದಲ್ಲಿ ಇದ್ನಾ ಅನ್ನೋದು ಈಗಲೂ ಸಾಕಷ್ಟು ಗೊಂದಲುಗಳಿವೆ. ಒಂದು ಮೂಲದ ಪ್ರಕಾರ, ಕುಬೇರ ರಾವಣನ ಮಲತಾಯಿ ಮಗ ಕುಬೇರ, ರಾವಣ ಸಹೋದರ ಆಸ್ತಿಗಾಗಿ ಇಬ್ಬರಲ್ಲೂ  ಅನೇಕ ಜಟಾಪಟಿ ನಡೆಯಿತು ಎನ್ನಲಾಗುತ್ತದೆ.  ಹಾಗಾದ್ರೆ ನಿಜವಾಗಿಯೂ ಕುಬೇರ ಯಾರು ?ಮಹಾಭಾರತದ ಪ್ರಕಾರ:ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟುಹೋದನಂತೆ.

ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿಯಾಗಿದ್ದಳು ಅಂತಾನೂ ಹೇಳ್ತಾರೆ.ಒಟ್ಟಾರೆ  ವಡೋದರಾದಲ್ಲಿರುವ   ಕುಬೇರ ಸನ್ನಿಧಾನ  ಬಹಳಷ್ಟು  ವೈಶಿಷ್ಟ್ಯ  ಪೂರ್ಣ  ವಿಚಾರಗಳನ್ನು   ತನ್ನೊಳಗೆ  ಹುದುಗಿಸಿಕೊಂಡು, ತನ್ನನ್ನು  ನಂಬಿ ಬರುವವರ ಪಾಲಿಗೆ ಆಶಾಬಂಧುವಾಗಿರೋದಂತೂ ಸತ್ಯ.

ಕುಬೇರನ ಕುರಿತಂತೆ  ತಿಳಿಯುತ್ತಾ ಹೋದಂತೆ ಹತ್ತು-  ಹಲವು ವಿಸ್ಮಯ ವಿಚಾರಗಳು  ತಿಳಿದು ಬರುತ್ತವೆ.  ಹೀಗಾಗಿಯೇ ಕುಬೇರನಿಗೆ  ಅಗ್ರಸ್ಥಾನಕ್ಕೂ ಬಾಜನನಾಗಿದ್ದಾನೆ.ಆಂಕರ್-  ಕುಬೇರನಲ್ಲಿ   ಸಾಲ ಪಡೆಯದ   ದೇವರೇ ಇಲ್ಲ .. ಹಾಗೆಯೇ  ಈವರೆಗೂ ಆತನಿಂದ  ಪಡೆದ  ಸಾಲವನ್ನು  ವಾಪಾಸ್ಸು  ಕೂಡ  ಮಾಡಿಲ್ಲವಂತೆ .. ಆದರೂ  ಕುಬೇರ ಸಾಲ ನೀಡುವುದನ್ನು  ಬಿಟ್ಟಿಲ್ಲ.. ವಸೂಲಾತಿಗಾಗಿ  ಹಿಂದೆ  ಬೀಳುವುದನ್ನೂ  ಬಿಟ್ಟಿಲ್ಲ.

LEAVE A REPLY

Please enter your comment!
Please enter your name here