Home District ದೇವಸ್ಥಾನವೊಂದರಲ್ಲಿ ಅರಿಶಿಣ ದಾರ ಕಟ್ಟಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದ, ಪೋಲೀಸರ ಮುಂದೆ ಪ್ರೇಮಿಗೆ ಕೈ ಕೊಟ್ಟ...

ದೇವಸ್ಥಾನವೊಂದರಲ್ಲಿ ಅರಿಶಿಣ ದಾರ ಕಟ್ಟಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದ, ಪೋಲೀಸರ ಮುಂದೆ ಪ್ರೇಮಿಗೆ ಕೈ ಕೊಟ್ಟ ಪ್ರಿಯತಮೆ, ಭಗ್ನ ಪ್ರೇಮಿ ಆತ್ಮಹತ್ಯೆ ಯತ್ನ..

1564
0
SHARE

ಪ್ರೀತಿಸಿ ಮದುವೆಯಾದ ಹುಡುಗಿ ಕೈಗೆ ಸಿಗಲಿಲ್ಲ ವೆಂದು ಭಗ್ನ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆದಾವಣಗೆರೆಯಲ್ಲಿ ನಡೆದಿದೆ. ರಾಜೇಂದ್ರ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ. ದಾವಣಗೆರೆ ಮೂಲದ ಕಾವ್ಯ ಎಂಬಾಕೆಯನ್ನು ರಾಜೇಂದ್ರ ಸಿಂಗ್ ಪ್ರೀತಿಸುತ್ತಿದ್ದರು…ಮದುವೆಗೆ ಕಾವ್ಯ ಮನೆಯರವ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಮೂಲದ ರಾಜೇಂದ್ರ ಸಿಂಗ್ ಬಳ್ಳಾರಿಯಲ್ಲೇ ದೇವಸ್ಥಾನವೊಂದರಲ್ಲಿ ಮದುವೆಯೂ ಆಗಿದ್ದರು. ಇದಕ್ಕೆ ಕಾವ್ಯ ಮನೆಯವರು, ಮಗಳು ಮನೆ ಬಿಟ್ಟು ಹೋಗಿದ್ದಾರೆಂದು ಹದಡಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು… ಹದಡಿ ಪೊಲೀಸರು ಪ್ರೇಮಿಗಳನ್ನು ಬಳ್ಳಾರಿಯಿಂದ ಕರೆತಂದು ವಿಚಾರಣೆ ಮಾಡಿದಾಗ. ಕಾವ್ಯ ರಾಜೇಂದ್ರ ಸಿಂಗ್ ಒತ್ತಾಯಕ್ಕೆ ಮದುವೆಯಾಗಿದ್ದೇವೆ. ನೀನು ಬರದಿದ್ರೆ ಕೊಲೆ ಬೆದರಿಕೆ ಹಾಕಿದ್ದ, ಹೀಗಾಗಿ ನಾನು ಆತನೊಂದಿಗೆ ಹೋಗಿದ್ದೇ ಎಂದು ಹೇಳಿಕೆ ನೀಡಿದ್ದಾಳೆ… ಕಾವ್ಯ ಹೇಳಿಕೆಯಿಂದ ಮನನೊಂದ ರಾಜೇಂದ್ರ ಸಿಂಗ್ ಸೆಲ್ಫಿ ವಿಡಿಯೋ ಮಾಡಿಕೊಂಡು ಪೋಲೀಸರೇ ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ಆದಕ್ಕೆ ನಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಹೇಳಿ, ವಿಷ ಸೇವಿಸಿದ್ದಾರೆ…ವಿಡಿಯೋ ನೋಡಿದ ಪೋಷಕರು, ರಾಜೇಂದ್ರನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಈಗ ವೈರಲ್ ಆಗಿದೆ…

LEAVE A REPLY

Please enter your comment!
Please enter your name here